ಸ್ಯಾಮ್ಸಂಗ್ ಗ್ಯಾಲಕ್ಸಿ ಎ6 , ಎ6+ ನಲ್ಲಿರಲಿದೆ ಇನ್ಫಿನಿಟಿ ಡಿಸ್ಪ್ಲೇ ಮತ್ತು ಆಂಡ್ರಾಯ್ಡ್ ಓರಿಯೋ
ಸ್ಯಾಮ್ಸಂಗ್ ಗ್ಯಾಲಕ್ಸಿ ಎ6 ಮತ್ತು ಗ್ಯಾಲಕ್ಸಿ ಎ6+ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಗೀಕ್ಬೆಂಚ್, FCC, ವೈ-ಫೈ ಎಲಯೆನ್ಸ್ ಮೊದಲಾದ ವೆಬ್ಸೈಟ್ಗಳಲ್ಲಿ ಕಂಡುಬಂದ ಈ ಸ್ಮಾರ್ಟ್ಫೋನ್ಗಳು ಸ್ಯಾಮ್ಸಂಗ್ ಪೋಲ್ಯಾಂಡ್ ನ ವೆಬ್ಸೈಟ್ನಲ್ಲಿ ಕೆಲಕಾಲ ಕಂಡುಬಂದಿತ್ತು. ಫೋನ್ ನ ಮಾಡೆಲ್ ನಂಬರ್ ಬಿಟ್ಟು ಇನ್ಯಾವ ಮಾಹಿತಿಯನ್ನೂ ಅಲ್ಲಿ ಬಹಿರಂಗಪಡಿಸಿರಲಿಲ್ಲ. ವದಂತಿಗಳ ಅನುಸಾರ ಈ ಸ್ಮಾರ್ಟ್ಫೋನ್ಗಳು ರಶ್ಯಾ, ಯುರೋಪ್, ಮಿಡಲ್ ಈಸ್ಟ್ ಮೊದಲಾದ ಆಯ್ದ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ6 ಮತ್ತು ಎ6+ ಮೊಬೈಲ್ಗಳು ಕಳೆದ ವರ್ಷ ಬಿಡುಗಡೆಯಾದ ಗ್ಯಾಲಕ್ಸಿ ಎ8 ಮತ್ತು ಗ್ಯಾಲಕ್ಸಿ ಎ8+ ಮೊಬೈಲ್ಗಳ ಸ್ವಲ್ಪ ಕೆಳಮಟ್ಟದ ಆವೃತ್ತಿಗಳಾಗಿದೆ ಎಂದು ಹೇಳಲಾಗುತ್ತಿದೆ. ಈ ಮೊಬೈಲ್ಗಳು ಯಾವಾಗ ಲಾಂಚ್ ಆಗಲಿದೆ ಎಂಬ ಖಚಿತ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲವಾದರೂ ಗ್ಯಾಲಕ್ಸಿ ಎ6 ಮತ್ತು ಎ6+ ಗಳ ಪ್ರಮುಖ ಫೀಚರ್ಗಳು ಟ್ವಿಟ್ಟರ್ ನಲ್ಲಿ ಸೋರಿಕೆಯಾಗಿದೆ.
ಮೊದಲಿಗೆ ಗ್ಯಾಲಕ್ಸಿ ಎ6 ಕುರಿತು ಹೇಳುವುದಾದರೆ, ಇದರಲ್ಲಿದೆ 5.6ಇಂಚ್ ಇನ್ಫಿನಿಟಿ ಡಿಸ್ಪ್ಲೇ. ಈ ಡಿಸ್ಪ್ಲೇ 2280X1080 ಪಿಕ್ಸೆಲ್ಗಳ ಫುಲ್ HD+ ರೆಸೊಲ್ಯೂಶನ್ ಹೊಂದಿದೆ. ಎಕ್ಸಿನೋಸ್ 7870 ಪ್ರಾಸೆಸರ್ ಜೊತೆಗೆ 3GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ ಗ್ಯಾಲಕ್ಸಿ ಎ6.
ಇನ್ನು ಗ್ಯಾಲಕ್ಸಿ ಎ6+ ಹಿರಿದಾದ 6-ಇಂಚ್ ಇನ್ಫಿನಿಟಿ ಡಿಸ್ಪ್ಲೇ ಹೊಂದಿದ್ದು 2280X1080 ಪಿಕ್ಸೆಲ್ಗಳ ಫುಲ್ HD+ ರೆಸೊಲ್ಯೂಶನ್ ಹೊಂದಿದೆ. ಸೋರಿಕೆಯಾದ ಮಾಹಿತಿಗಳ ಅನುಸಾರ ಇದರಲ್ಲಿರಲಿದೆ ಸ್ನ್ಯಾಪ್ಡ್ರಾಗನ್ 625 ಪ್ರಾಸೆಸರ್. ಈ ಸಾಧನ ಸ್ನ್ಯಾಪ್ಡ್ರಾಗನ್ 450 ಪ್ರಾಸೆಸರ್ ಹೊಂದಿರುವ ಸಾಧ್ಯತೆಗಳೂ ಇದೆ. ಇದರ ಮೆಮೋರಿ ಕುರಿತು ಹೇಳುವುದಾದರೆ ಸ್ಯಾಮ್ಸಂಗ್ ಎ6+ ನಲ್ಲಿ 4GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯ ಇರಲಿದೆ.
ಈ ಎರಡೂ ಸ್ಮಾರ್ಟ್ಫೋನ್ಗಳು ಆಂಡ್ರಾಯ್ಡ್ 8.0 ಓರಿಯೋ ಓಎಸ್ ಹೊಂದಿರಲಿದ್ದು ಜೊತೆಗೆ ಸ್ಯಾಮ್ಸಂಗ್ ಎಕ್ಸ್ಪೀರಿಯನ್ಸ್ ಯುಐ 9.0 ಹೊಂದಿರಲಿದೆ. ಸಧ್ಯಕ್ಕೆ ಈ ಎರಡು ಫೋನ್ಗಳ ಬ್ಯಾಟರಿ ಸಾಮರ್ಥ್ಯ ಮತ್ತು ಕ್ಯಾಮೆರಾ ಗಳ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

ಈಗಾಗಲೇ ಹೇಳಿರುವಂತೆ ಗ್ಯಾಲಕ್ಸಿ ಎ6 ಮತ್ತು ಎ6+ ನಲ್ಲಿ ಸ್ಯಾಮ್ಸಂಗ್ ನ ಟ್ರೇಡ್ಮಾರ್ಕ್ ಆದ ಇನ್ಫಿನಿಟಿ ಡಿಸ್ಪ್ಲೇ ಇರಲಿದೆ. ಈ ಹಿಂದೆ ಸ್ಯಾಮ್ಸಂಗ್ ನ ಫ್ಲ್ಯಾಗ್ಶಿಪ್ ಸಾಧನಗಳಲ್ಲಿ ಮಾತ್ರ ಇನ್ಫಿನಿಟಿ ಡಿಸ್ಪ್ಲೇ ಫೀಚರ್ ಇರುತ್ತಿತ್ತು, ಈ ಇನ್ಫಿನಿಟಿ ಡಿಸ್ಪ್ಲೇ ಯನ್ನು ಹೊಂದಿದ ಮೊದಲ ಮಧ್ಯಮ ಶ್ರೇಣಿಯ ಮೊಬೈಲ್ಗಳು ಗ್ಯಾಲಕ್ಸಿ ಎ8 ಮತ್ತು ಎ8+ ಪ್ಲಸ್ ಎಂದು ಹೇಳಲಾಗುತ್ತಿದೆ. ಈಗ ದಕ್ಷಿಣ ಕೋರಿಯಾದ ಟೆಕ್ ದಿಗ್ಗಜ ಇನ್ಫಿನಿಟಿ ಡಿಸ್ಪ್ಲೇ ಫೀಚರ್ ಅನ್ನು ಮತ್ತಷ್ಟು ಮೊಬೈಲ್ಗಳಲ್ಲಿ ನೀಡಹೊರಟಿರವಂತೆ ತೋರುತ್ತಿದೆ.


Click it and Unblock the Notifications








