Subscribe to Gizbot

ಇಂದಿನಿಂದ ಸ್ಯಾಮ್ಸಂಗ್ ಗ್ಯಾಲಕ್ಸಿ A8(2018) ಮಾರಾಟ ಪ್ರಾರಂಭ!..ಪ್ರಿ-ಆರ್ಡರ್ ಮಾಡಿ!!

Posted By: Tejaswini P G

ಕಳೆದ ತಿಂಗಳು ಸ್ಯಾಮ್ಸಂಗ್ ಕಂಪೆನಿಯು ಗ್ಯಾಲಕ್ಸಿ A8(2018) ಮತ್ತು ಗ್ಯಾಲಕ್ಸಿ A8+ (2018) ಮೊಬೈಲ್ಗಳ ಲಾಂಚ್ ಅನ್ನು ಘೋಷಿಸಿತ್ತು. ಈ ಸ್ಮಾರ್ಟ್ಫೋನ್ಗಳ ಅನಾವರಣದ ಸಮಯದಲ್ಲಿ ಈ ಸ್ಮಾರ್ಟ್ಫೋನ್ಗಳ ಮಾರಾಟ ಜನವರಿ 2018 ರಲ್ಲಿ ಆರಂಭವಾಗಲಿದೆ ಎಂದು ಸ್ಯಾಮ್ಸಂಗ್ ತಿಳಿಸಿತ್ತು.

ಇಂದಿನಿಂದ ಸ್ಯಾಮ್ಸಂಗ್ ಗ್ಯಾಲಕ್ಸಿ A8(2018) ಮಾರಾಟ ಪ್ರಾರಂಭ!!

ನಾವು ಹೊಸ ವರ್ಷಕ್ಕೆ ಕಾಲಿರಿಸುತ್ತಿರುವಂತೆಯೇ ಕೋರಿಯಾ ಹೆರಾಲ್ಡ್ ನ ವರದಿಯೊಂದು ಬಂದಿದ್ದು, ಈ ವರದಿಯ ಅನುಸಾರ ಸ್ಯಾಮ್ಸಂಗ್ ನೂತನ ಗ್ಯಾಲಕ್ಸಿ A8(2018) ನ ಮಾರಾಟವನ್ನು ದಕ್ಷಿಣ ಕೋರಿಯಾದಲ್ಲಿ KT ಕಾರ್ಪ್ ಮೂಲಕ ಈ ವಾರದಿಂದ ಪ್ರಾರಂಭಿಸಲಿದೆ. ಅಲ್ಲದೆ ಈ ಗ್ಯಾಲಕ್ಸಿ A8(2018) ಈಗಾಗಲೇ ಪ್ರಿ-ಆರ್ಡರ್ ಗೆ ಲಭ್ಯವಿದ್ದು ಜನವರಿ 5, ಶುಕ್ರವಾರದಿಂದ ಇದರ ಮಾರಾಟ ಪ್ರಾರಂಭವಾಗಲಿದೆ. ಗ್ಯಾಲಕ್ಸಿ A8 (2018) ನ ಬೆಲೆ 599,500 ವಾನ್( ಅಂದಾಜು ರೂ 36,000) ಇರಲಿದೆ ಎನ್ನುತ್ತದೆ ಲಭ್ಯವಿರುವ ವರದಿಗಳು.

ಈ ವರದಿಗಳು ಗ್ಯಾಲಕ್ಸಿ A8 (2018) ನ ಫೀಚರ್ಗಳ ಮೇಲೂ ಬೆಳಕು ಹರಿಸಿದೆ. ಆದರೆ ಇದರ ದೊಡ್ಡ ಆವೃತ್ತಿಯಾದ ಗ್ಯಾಲಕ್ಸಿ A8+(2018) ನ ಕುರಿತು ಯಾವುದೇ ಮಾಹಿತಿ ಈ ವರದಿಗಳಲ್ಲಿ ಲಭ್ಯವಿಲ್ಲ. ಅಲ್ಲದೆ ಸ್ಯಾಮ್ಸಂಗ್ ಗ್ಯಾಲಕ್ಸಿ A8(2018) ದಕ್ಷಿಣ ಕೊರಿಯಾ ದ ಹೊರತು ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ.

ಈ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ A8 ಸ್ಮಾರ್ಟ್ಫೋನ್ಗಳ ಕುರಿತು ಹೇಳುವುದಾದರೆ, ಈ ಸ್ಮಾರ್ಟ್ಫೋನ್ಗಳು ಇನ್ಫಿನಿಟಿ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿದ್ದು ಗ್ಯಾಲಕ್ಸಿ S8 ಫ್ಲ್ಯಾಗ್ಶಿಪ್ ಮೊಬೈಲ್ಗಳನ್ನೇ ಹೋಲುತ್ತದೆ. ಎರಡೂ ಸಾಧನಗಳು ಗೇರ್ VR ಮತ್ತು ಕಾಂಟ್ಯಾಕ್ಟ್ಲೆಸ್ ಮೊಬೈಲ್ ಪಾವತಿ ಸೇವೆಯಾದ ಸ್ಯಾಮ್ಸಂಗ್ ಪೇ ಸಾಮರ್ಥ್ಯವನ್ನು ಹೊಂದಿದೆ.

ಬೆಂಗಳೂರಿನ ಮಹಿಳೆಯರಿಗೆ ಇನ್ನು ಭಯವಿಲ್ಲ..! ಬಂದಿದೆ ಸುರಕ್ಷ ಆಪ್‌..!

ಮತ್ತೊಂದು ವಿಶೇಷವೆಂದರೆ ಗ್ಯಾಲಕ್ಸಿ A8(2018) ಮತ್ತು ಗ್ಯಾಲಕ್ಸಿ A8+(2018) ಡ್ಯುಯಲ್ ಸೆಲ್ಫೀ ಕ್ಯಾಮೆರಾ ಹೊಂದಿರುವ ಮೊದಲ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳಾಗಿವೆ.

How to Sharing a Mobile Data Connection with Your PC (KANNADA)
ಇನ್ನು ಗ್ಯಾಲಕ್ಸಿ A8(2018) ನ ಫೀಚರ್ಗಳ ಕುರಿತು ಹೇಳುವುದಾದರೆ ಇದರಲ್ಲಿದೆ 5.6 ಇಂಚ್ FHD+ ಇನ್ಫಿನಿಟಿ ಡಿಸ್ಪ್ಲೇ 18.5:9 ಆಸ್ಪೆಕ್ಟ್ ಅನುಪಾತದೊಂದಿಗೆ. ಇನ್ನು ಎಕ್ಸಿನೋಸ್ 7885 SoC ಹೊಂದಿರುವ ಗ್ಯಾಲಕ್ಸಿ A8(2018) 4GB RAM ಹೊಂದಿದ್ದು, 32GB ಮತ್ತು 64GB ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.

ಇದರ ಪ್ರೈಮರಿ ಕ್ಯಾಮೆರಾ 16MP ಸೆನ್ಸರ್, f/1.7 ಅಪರ್ಚರ್ ಮತ್ತು ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್ ಸಾಮರ್ಥ್ಯ ಹೊಂದಿದೆ. ಇನ್ನು ಇದರ ಡ್ಯುಯಲ್ ಸೆಲ್ಫೀ ಕ್ಯಾಮೆರಾ 16MP ಮತ್ತು 8MP ಸೆನ್ಸರ್ಗಳನ್ನು ಹೊಂದಿದ್ದು f/1.9 ಅಪರ್ಚರ್ ಮತ್ತು ಬೋಕೇ ಮೊಡ್ ಗೆ ಲೈವ್ ಫೋಕಸ್ ಸಪೋರ್ಟ್ ಕೂಡ ಹೊಂದಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ A8(2018) ಆಂಡ್ರಾಯ್ಡ್ 7.1 ನುಗಾಟ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. 4G VoLTE, USB ಟೈಪ್-ಸಿ ಪೋರ್ಟ್ ಮತ್ತು ಇತರ ಕನೆಕ್ಟಿವಿಟಿ ಆಯ್ಕೆಗಳು ಇದರಲ್ಲಿದೆ. ಧೂಳು ಮತ್ತು ನೀರಿನ ವಿರುದ್ಧ ಹೊಂದಿರುವ ರೆಸಿಸ್ಟೆನ್ಸ್ ಅಥವಾ ಪ್ರತಿರೋಧಕ್ಕೆ IP68 ರೇಟಿಂಗ್ ಪಡೆದಿದ್ದು, ಫೋನ್ ನ ಹಿಂಬದಿಯಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದೆ. ಅಲ್ಲದೆ ಸ್ಯಾಮ್ಸಂಗ್ ಗ್ಯಾಲಕ್ಸಿ A8(2018)ನಲ್ಲಿದೆ 3000mAh ಸಾಮರ್ಥ್ಯದ ಬ್ಯಾಟರಿ.

English summary
Samsung announced the launch of the Galaxy A8 (2018) and Galaxy A8+ (2018) smartphones in December 2017. Back then, the company had announced that these smartphones will go on sale from January 2018. Now, the Galaxy A8 (2018) is said to go on sale from January 5 in South Korea and the preorders have debuted.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot