ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2 ಆಲ್ಫಾ ಲ್ಯಾಪ್‌ಟಾಪ್ ಬಿಡುಗಡೆ!
ಟೆಕ್ ದೈತ್ಯ ಸ್ಯಾಮ್‌ಸಗ್ ಸಂಸ್ಥೆ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಲ್ಯಾಪ್‌ಟಾಪ್ ವಲಯದಲ್ಲೂ ಸೈ ಎನಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2 ಆಲ್ಫಾ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಅನ್‌ಪ್ಯಾಕ್ ಮಾಡಲಾದ ಈವೆಂಟ್‌ನಲ್ಲಿ ಗ್ಯಾಲಕ್ಸಿ ಬುಕ್, ಗ್ಯಾಲಕ್ಸಿ ಬುಕ್ ಪ್ರೊ, ಗ್ಯಾಲಕ್ಸಿ ಬುಕ್ ಪ್ರೊ 360 ಮತ್ತು ಗ್ಯಾಲಕ್ಸಿ ಬುಕ್ ಒಡಿಸ್ಸಿಯನ್ನು ಪರಿಚಯಿಸಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2 ಆಲ್ಫಾ ಲ್ಯಾಪ್‌ಟಾಪ್ ಯುಎಸ್‌ನಲ್ಲಿ ಬಿಡುಗಡೆ ಆಗಿದೆ. ಇದು ಕಳೆದ ವರ್ಷದ ಗ್ಯಾಲಕ್ಸಿ ಬುಕ್ ಫ್ಲೆಕ್ಸ್ ಆಲ್ಫಾದ ಉತ್ತರಾಧಿಕಾರಿಯಾಗಿದೆ. ಇನ್ನು ಈ ಲ್ಯಾಪ್‌ಟಾಪ್ 2-ಇನ್ -1 ಕನ್ವರ್ಟಿಬಲ್ ವಿನ್ಯಾಸವನ್ನು ನೀಡುತ್ತದೆ. ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2 ಆಲ್ಫಾ 11 ನೇ ತಲೆಮಾರಿನ ಇಂಟೆಲ್ ಕೋರ್ ಐ5/ ಕೋರ್ ಐ 7 ಪ್ರೊಸೆಸರ್ ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2 ಆಲ್ಫಾ ಲ್ಯಾಪ್‌ಟಾಪ್ 1,920x1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 13.3-ಇಂಚಿನ ಕ್ಯೂಎಲ್‌ಇಡಿ ಫುಲ್-ಹೆಚ್‌ಡಿ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಒಳಾಂಗಣದಲ್ಲಿ 400 ನಿಟ್ಸ್ ಬ್ರೈಟ್‌ನೆಸ್ ಮತ್ತು ಹೊರಾಂಗಣ ಮೋಡ್‌ನಲ್ಲಿ 600 ನಿಟ್ಸ್‌ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ 2-ಇನ್-1 ಕನ್ವರ್ಟಿಬಲ್ ವಿನ್ಯಾಸವನ್ನು ನೀಡುತ್ತದೆ.

ಈ ಲ್ಯಾಪ್‌ಟಾಪ್ 11 ನೇ ತಲೆಮಾರಿನ ಇಂಟೆಲ್ ಕೋರ್ ಐ5/ ಕೋರ್ ಐ7 ಪ್ರೊಸೆಸರ್ ಹೊಂದಿದೆ. ಇಂಟೆಲ್ ಕೋರ್ ಐ 5 ಪ್ರೊಸೆಸರ್ ಹೊಂದಿರುವ ಲ್ಯಾಪ್‌ಟಾಪ್ 8GB RAM ಮತ್ತು 256GB ಸ್ಟೋರೇಜ್ ಅನ್ನು ಹೊಂದಿದೆ. ಇನ್ನು ಇಂಟೆಲ್ ಕೋರ್ ಐ 7 ಸಿಪಿಯು ಹೊಂದಿರುವ ಲ್ಯಾಪ್‌ಟಾಪ್ 16GB RAM ಮತ್ತು 512GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಅಲ್ಯೂಮಿನಿಯಂ ಬಿಲ್ಡ್, ಬ್ಯಾಕ್‌ಲಿಟ್ ಕೀಬೋರ್ಡ್ ಮತ್ತು ದೊಡ್ಡ ಗ್ಲಾಸ್ ಟ್ರ್ಯಾಕ್‌ಪ್ಯಾಡ್ ಅನ್ನು ಹೊಂದಿದೆ. ಗ್ರಾಹಕರು 720p ವೆಬ್‌ಕ್ಯಾಮ್, ಡ್ಯುಯಲ್-ಅರೇ ಮೈಕ್ರೊಫೋನ್ ಮತ್ತು ಡಾಲ್ಬಿ ಅಟ್ಮೋಸ್ ಆಡಿಯೊದೊಂದಿಗೆ ಎರಡು 1.5W ಸ್ಟೀರಿಯೋ ಸ್ಪೀಕರ್‌ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಇದಲ್ಲದೆ ಈ ಲ್ಯಾಪ್‌ಟಾಪ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ. ಇದು ವಿಂಡೋಸ್ 10 ಹೋಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ
ವೈ-ಫೈ 6 ಮತ್ತು ಬ್ಲೂಟೂತ್ ವಿ 5.1 ಅನ್ನು ಬೆಂಬಲಿಸಲಿದೆ. ಅಲ್ಲದೆ ಎರಡು ಯುಎಸ್‌ಬಿ 3.2 ಟೈಪ್-ಎ ಪೋರ್ಟ್‌ಗಳು, ಒಂದು ಯುಎಸ್‌ಬಿ ಟೈಪ್-ಸಿ ಪೋರ್ಟ್, ಎಚ್‌ಡಿಎಂಐ ಪೋರ್ಟ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಫ್ಲೆಕ್ಸ್ 2 ಆಲ್ಫಾ ಲ್ಯಾಪ್‌ಟಾಪ್ ಕಂಪನಿಯ ವೆಬ್‌ಸೈಟ್‌ನಲ್ಲಿ ಯುಎಸ್‌ನಲ್ಲಿ ಪ್ರೀ ಬುಕಿಂಗ್‌ಗಾಗಿ ಲಭ್ಯವಿದೆ. ಇಂಟೆಲ್ ಕೋರ್ ಐ 5 ಪ್ರೊಸೆಸರ್ ಹೊಂದಿರುವ ಲ್ಯಾಪ್‌ಟಾಪ್ $ 849 (ಸುಮಾರು 63,000ರೂ.)ಬೆಲೆಯನ್ನು ಹೊಂದಿದೆ. ಇಂಟೆಲ್ ಕೋರ್ ಐ 7 ಪ್ರೊಸೆಸರ್ ಹೊಂದಿರುವ ಒಂದನ್ನು ಕಪ್ಪು ಮತ್ತು ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ $1,049 (ಸುಮಾರು 77,700 ರೂ.) ಬೆಲೆಯಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








