ಸ್ಯಾಮ್‌ಸಂಗ್ ಧಮಾಕಾ ಗ್ಯಾಲಕ್ಸಿ ಕೋರ್ ಪ್ರೈಮ್

Written By:

ಸ್ಯಾಮ್‌ಸಂಗ್ ತನ್ನ ಹೊಸ ಬಜೆಟ್ ಗ್ಯಾಲಕ್ಸಿ ಕೋರ್ ಪ್ರೈಮ್ ಸ್ಮಾರ್ಟ್‌ಫೋನ್ ಅನ್ನು ಕಂಪೆನಿಯ ಇ ಸ್ಟೋರ್‌ನಲ್ಲಿ ರೂ 9,700 ಕ್ಕೆ ಮಾರಾಟ ಮಾಡುತ್ತಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಆಧಾರಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಪ್ರೈಮ್ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಬಂದಿದ್ದು ಇದು 4.5 WVGA (480x800 ಪಿಕ್ಸೆಲ್‌ಗಳು) ಪಿಎಲ್‌ಎಸ್, ಟಿಎಫ್‌ಟಿ ಡಿಸ್‌ಪ್ಲೇ ಮತ್ತು 1.2GHZ ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ 1ಜಿಬಿ RAM ನೊಂದಿಗೆ ಬಂದಿದೆ.

ಇದನ್ನೂ ಓದಿ: ಮೋಟೋ ಜಿ ಸಮಸ್ಯೆಗಳು ಮತ್ತು ಪರಿಹಾರಗಳು

ಗ್ಯಾಲಕ್ಸಿ ಕೋರ್ ಪ್ರೈಮ್ ರೂ 9,700 ಕ್ಕೆ

ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8ಜಿಬಿಯೊಂದಿಗೆ ಬಂದಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದಾಗಿದೆ. ಇದು 5 ಮೆಗಾಪಿಕ್ಸೆಲ್ ಆಟೋಫೋಕಸ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು, 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಫೋನ್‌ನಲ್ಲಿದೆ. ಫೋನ್ 2000mAh ಬ್ಯಾಟರಿಯನ್ನು ಹೊಂದಿದ್ದು ಫೋನ್‌ನ ಸಂಪರ್ಕ ವಿಶೇಷತೆಗಳೆಂದರೆ ವೈಫೈ, ವೈಫೈ ಡೈರೆಕ್ಟ್, ಬ್ಲ್ಯೂಟೂತ್, ಜಿಪಿಎಸ್ ಮತ್ತು 3ಜಿಯಾಗಿದೆ.

ಇದು ಮೆಟಲ್ ಬಾಡಿಯೊಂದಿಗೆ ಬಂದಿದ್ದು ನಿಮಗಿದು ಮೂರು ಬಣ್ಣಗಳಲ್ಲಿ ಲಭ್ಯವಿದೆ ಅಂದರೆ ಕ್ಯಾರಕೋಲ್ ಗ್ರೇ, ಬಿಳಿ ಮತ್ತು ಸಿಲ್ವರ್‌ಗಳಲ್ಲಿ ದೊರೆಯುತ್ತಿದೆ. ಕಂಪೆನಿಯ ಚೀನಾ ವೆಬ್‌ಸೈಟ್‌ನಲ್ಲಿ ಸ್ಯಾಮ್‌ಸಂಗ್‌ನ ಡ್ಯುಯಲ್ ಸಿಮ್ ಆವೃತ್ತಿ ಗ್ಯಾಲಕ್ಸಿ ಎ5 ಅನ್ನು ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ನ್ಯಾನೋ ಸಿಮ್ ಬೆಂಬಲದೊಂದಿಗೆ ಬಂದಿದ್ದು, ಸಿಂಗಲ್ ಸಿಮ್ ಗ್ಯಾಲಕ್ಸಿ e5 ನಂತೆ ಅದೇ ವಿಶೇಷತೆಗಳನ್ನು ಒಳಗೊಂಡು ಬಂದಿದೆ.

English summary
This article tells about Samsung has quietly listed its new budget Galaxy Core Prime smartphone on the company's India e-store, at a price of Rs. 9,700.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot