Samsung Galaxy Fold 2: ಗ್ಯಾಲಕ್ಸಿ ಫೋಲ್ಡ್‌2 ಫೋನ್‌ನ ಫೀಚರ್ಸ್‌ ಬಹಿರಂಗ!

|

ಟೆಕ್‌ಲೋಕದ ದಿಗ್ಗಜ ಎನಿಸಿಕೊಂಡಿರುವ ದಕ್ಷಿಣ ಕೋರಿಯಾದ ಸ್ಯಾಮ್‌ಸಂಗ್‌ ಕಂಪನಿ ತನ್ನ ಹೊಸ ಆವೃತ್ತಿಯ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಈಗಾಗ್ಲೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ಈ ಹೊಸ ಆವೃತ್ತಿಯಲ್ಲಿ ಇನ್ನಷ್ಟು ವೈವಿಧ್ಯ ಬಗೆಯ ಫೀಚರ್ಸ್‌ಗಳನ್ನ ಪರಿಚಯಿಸಲಿದೆ ಎಂದು ಹೇಳಲಾಗ್ತಿದ್ದು, ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ಗಳೇನು ಅನ್ನೊ ಮಾಹಿತಿ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ.

ಹೌದು

ಹೌದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ದಿಗ್ಗಜ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಗ್ಯಾಲಕ್ಸಿ ಫೋಲ್ಡ್‌ 2 ಸ್ಮಾರ್ಟ್‌ಫೋನ್‌ ಪರಿಚಯಿಸಲು ವೇದಿಕೆ ಸಿದ್ದ ಪಡಿಸಿದ್ದು, 2020ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದ್ದು, ಈಗಾಗ್ಲೆ ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಸದ್ಯ ಮಾರುಕಟ್ಟೆಯಲ್ಲಿ ನಿರೀಕ್ಷೆಯನ್ನ ಹುಟ್ಟುಹಾಕಿರುವ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಲೀಕ್‌ ಆಗಿದ್ದು, ಲೀಕ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋಲ್ಡ್‌ 2 ಸ್ಮಾರ್ಟ್‌ಫೋನ್‌ ಅಲ್ಟ್ರಾ-ಥಿನ್‌ ಗ್ಲಾಸ್‌ ಹೊಂದಿರುವ ಸ್ಕ್ರೀನ್‌ ಹೊಂದಿರಲಿದ್ದು, 8 ಇಂಚಿನ ಡ್ಯುರೆಬಲ್‌ ಡಿಸ್‌ಪ್ಲೇಯನ್ನ ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಇದಾಗಿರುವುದರಿಂದ ಡಿಸ್‌ಪ್ಲೇ ಬಿಗ್‌ ಸ್ಕ್ರೀನ್‌ ಹೊಂದಿರಲಿದ್ದು, ಉತ್ತಮ ರೆಸಲ್ಯೂಶನ್‌ ರೆಶಿಯೋ ಹೊಂದಿರಲಿದೆ, ಅಲ್ಲದೆ ವೀಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರೊಸೆಸರ್‌ ‌

ಪ್ರೊಸೆಸರ್‌ ‌

ಈ ಹೊಸ ಸ್ಮಾರ್ಟ್‌ಫೋನ್‌ 5G ವೇಗದ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಸ್ನಾಪ್ಡ್ರಾಗನ್ 865 ಪ್ರೊಸೆಸರ್ ಹೊಂದಿದೆ ಎಂದು ಹೇಳಲಾಗ್ತಿದ್ದು, 12 GB RAM ಮತ್ತು 512GB ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸುವ ಅವಕಾಶವನ್ನ ನೀಡಲಾಗಿಲ್ಲ ಎಂದು ಸಹ ಹೇಳಲಾಗಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಸ್ಯಾಮ್‌ಸಂಗ್‌ ನ ಈ ಹೊಸ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ ಎಂದು ಅಂದಾಜಿಸಲಾಗಿದ್ದು, ಡ್ಯಯೆಲ್‌ ಸೆಲ್ಪಿ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಡ್ಯುಯೆಲ್‌ ಸ್ಕ್ರೀನ್‌ ಹೊಂದಿರುವುದರಿಂದ ಎರಡು ಕಡೆಯೊ ಒಂದೊಂದು ಸೆಲ್ಪಿ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೆ ರಿಯರ್‌ ಕ್ಯಾಮೆರಾ ಸೆಟಪ್‌ನಲ್ಲಿ ಪ್ರೈಮರಿ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ ಎನ್ನಲಾಗ್ತಿದೆ. ಜೊತೆಗೆ ಈ ಕ್ಯಾಮೆರಾದಲ್ಲಿ ಪೇಸ್‌ ಡಿಟೆಕ್ಷನ್‌ ಆಟೋ ಫೋಕಸ್‌, ಎಲ್‌ಇಡಿ ಪ್ಲಾಶ್‌ ಲೈಟ್‌ ಅನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಸದ್ಯ ಈ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಪ್ಯಾಕ್‌ಆಪ್‌ ಎಷ್ಟಿರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೂ ಟೆಕ್‌ ಲೋಕದ ನಿರೀಕ್ಷೆಯಂತೆ ಈ ಸ್ಮಾರ್ಟ್‌ಫೋನ್‌ 4500Mah ಬ್ಯಾಟರಿ ಪ್ಯಾಕಪ್‌ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌ 5.0, ವೈಫೈ, ಹಾಟ್‌ಸ್ಪಾಟ್‌, ಜಿಪಿಎಸ್‌ ಗಳನ್ನ ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
The new Samsung Galaxy Fold is tipped off to launch in the second quarter of the year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X