ಭಾರತೀಯ ಮಾರುಕಟ್ಟೆಗೆ ಅ.1ಕ್ಕೆ ಕಾಲಿಡಲಿದೆ ಗ್ಯಾಲಕ್ಸಿ ಪೋಲ್ಡ್‌..!

By Gizbot Bureau
|

ಕೊನೆಗೂ ಸ್ಯಾಮ್‌ಸಂಗ್ ಕಂಪನಿ ತನ್ನ ಬಹು ನಿರೀಕ್ಷಿತ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಷಿ ಫೋಲ್ಡ್‌ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿದ್ದ ಗ್ಯಾಲಕ್ಷಿ ಪೋಲ್ಡ್‌ ಒಂದು ತಿಂಗಳ ನಂತರ, ಅಂದರೆ ಅಕ್ಟೋಬರ್ 1 ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಕಂಪನಿಯ ಅಧಿಕೃತ ಮೂಲಗಳು ಖಚಿತಪಡಿಸಿದ್ದು, ಅಕ್ಟೋಬರ್ 1ಕ್ಕೆ ಗ್ಯಾಲಕ್ಷಿ ಪೋಲ್ಡ್‌ ಪಕ್ಕಾ ಎನ್ನಲಾಗುತ್ತಿದೆ.

ಸ್ಮಾರ್ಟ್‌ಫೋನ್‌ ಕಂ ಟ್ಯಾಬ್ಲೆಟ್‌

ಸ್ಮಾರ್ಟ್‌ಫೋನ್‌ ಕಂ ಟ್ಯಾಬ್ಲೆಟ್‌

ಗ್ಯಾಲಕ್ಷಿ ಫೋಲ್ಡ್‌ ಸ್ಮಾರ್ಟ್‌ಫೋನ್-ಕಮ್-ಟ್ಯಾಬ್ಲೆಟ್ ಆಗಿದ್ದು, ಭಾರತದಲ್ಲಿ 1.5 ಲಕ್ಷ ರೂ. ನಿಂದ 1.75 ಲಕ್ಷ ರೂ. ಬೆಲೆ ಹೊಂದಿರಲಿದೆ. ಹೊಸ ಸ್ಮಾರ್ಟ್‌ಫೋನ್‌ ಆಯ್ದ ರಿಟೇಲ್ ಮಾರಾಟ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುವುದು. ಮತ್ತು ಪ್ರೀ ಬುಕ್ಕಿಂಗ್‌ ಕೂಡ ಲಭ್ಯವಿದೆ.

ಎಕ್ಸ್‌ಕ್ಲೂಸಿವ್‌ ಗ್ರಾಹಕ ಸೇವಾ ಕೇಂದ್ರ

ಎಕ್ಸ್‌ಕ್ಲೂಸಿವ್‌ ಗ್ರಾಹಕ ಸೇವಾ ಕೇಂದ್ರ

ಗ್ಯಾಲಕ್ಷಿ ಫೋಲ್ಡ್‌ ಎಕ್ಸ್‌ಕ್ಲೂಸಿವ್‌ ಗ್ರಾಹಕ ಸೇವೆಯೊಂದಿಗೆ ಲಭ್ಯವಿದೆ. ಸ್ಯಾಮ್‌ಸಂಗ್ ತಜ್ಞರಿಗೆ ಒನ್‌ ಆನ್‌ ಒನ್‌ ಪ್ರವೇಶ, ಆನ್‌ಲೈನ್ ಅಥವಾ ಫೋನ್ ಮೂಲಕ 24/7 ಬೆಂಬಲ ಕೇಂದ್ರ ಹೊಂದಿದೆ. ಸ್ಮಾರ್ಟ್‌ಫೋನ್‌ನ್ನು ಮೂಲತಃ ಏಪ್ರಿಲ್ 26 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಕಾಣಿಸಿಕೊಂಡ ಡಿಸ್‌ಪ್ಲೇ ಸಮಸ್ಯೆಗಳನ್ನು ಸರಿಪಡಿಸಲು ವಿಳಂಬವಾಯಿತು.

ಇನ್ಫಿನಿಟಿ ಫ್ಲೆಕ್ಸ್‌ ಡಿಸ್‌ಪ್ಲೇ

ಇನ್ಫಿನಿಟಿ ಫ್ಲೆಕ್ಸ್‌ ಡಿಸ್‌ಪ್ಲೇ

ಗ್ಯಾಲಕ್ಷಿ ಫೋಲ್ಡ್‌ ಸ್ಮಾರ್ಟ್‌ಫೋನ್‌7.3 ಇಂಚಿನ ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇ ಮತ್ತು ಆರು ಕ್ಯಾಮೆರಾಗಳೊಂದಿಗೆ ಬರುತ್ತಿದೆ. ಫೋನ್‌ ಮುಂಭಾಗದಲ್ಲಿ ಸೆಕೆಂಡರಿ 4.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 7.3 ಇಂಚಿನ ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇನೊಂದಿಗೆ ಒಪನ್‌ ಆಗುತ್ತದೆ. ಮತ್ತು ಮುಚ್ಚಿದಾಗ 12: 9 ಅನುಪಾತದೊಂದಿಗೆ 4.6 ಇಂಚಿನ ಡಿಸ್‌ಪ್ಲೇ ಆಗುತ್ತದೆ.

ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌

ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌

ಹೊಸ ಪ್ರೀಮಿಯಂ ಸ್ಮಾರ್ಟ್‌ಫೋನ್ 7nm ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 855 ಆಕ್ಟಾಕೋರ್ SoC ಪ್ರೊಸೆಸರ್‌ ಹೊಂದಿದ್ದು, 12GB RAM ಮತ್ತು 512GB ಮೆಮೊರಿಯೊಂದಿಗೆ ಬರುತ್ತಿದೆ. ಗ್ಯಾಲಕ್ಷಿ ಪೋಲ್ಡ್‌ ಗ್ರಾಹಕರಿಗೆ ಹೊಸ ರೀತಿಯ ಅನುಭವ ನೀಡಲು ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ವೈಶಿಷ್ಟ್ಯಗಳನ್ನು ಸಂಯೋಜಿಸುತ್ತದೆ. ಹೊಸ ಫಾರ್ಮ್ ಫ್ಯಾಕ್ಟರ್ ವಸ್ತುಗಳು ಹಾಗೂ ವಿಶಿಷ್ಟ ಮಡಚಬಹುದಾದ ಯುಎಕ್ಸ್, ಬಹುಮುಖ ಕ್ಯಾಮೆರಾ ಮತ್ತು ಪ್ರೀಮಿಯಂ ಕಾರ್ಯಕ್ಷಮತೆ ಗ್ರಾಹಕರನ್ನು ಆಕರ್ಷಿಸುತ್ತದೆ.

ದೊಡ್ಡ ಡಿಸ್‌ಪ್ಲೇ

ದೊಡ್ಡ ಡಿಸ್‌ಪ್ಲೇ

ಗ್ರಾಹಕರು ದೊಡ್ಡ ಡಿಸ್‌‌ಪ್ಲೇಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಮತ್ತು ಗ್ಯಾಲಕ್ಷಿ ಫೋಲ್ಡ್‌ನ ಕ್ರಾಂತಿಕಾರಿ ರೂಪವೆಂದರೆ ಪೋರ್ಟಬಿಲಿಟಿಯನ್ನು ಕಳೆದುಕೊಳ್ಳದೆ ದೊಡ್ಡ, ಹೆಚ್ಚು ಇಮ್ಮೇನ್ಸಿವ್‌ ಡಿಸ್‌ಪ್ಲೇಯನ್ನು ನೀಡುತ್ತಿರುವುದು. ಇದನ್ನೇ ನಾವು ಹೊಸ ಮೊಬೈಲ್ ಅನುಭವದ ಆವಿಷ್ಕಾರ ಎಂದು ಕರೆಯುತ್ತೇವೆ ಎಂದು ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ನ ಐಟಿ ಹಾಗೂ ಮೊಬೈಲ್‌ ಸಂವಹನ ವಿಭಾಗದ ಕಾರ್ಯನಿರ್ವಹಣಾ ಅಧಿಕಾರಿ ಡಿ.ಜೆ.ಕೊಹ್ ಹೇಳಿದ್ದಾರೆ.

ನಾಲ್ಕನೇ 5G ಸ್ಮಾರ್ಟ್‌ಫೋನ್‌

ನಾಲ್ಕನೇ 5G ಸ್ಮಾರ್ಟ್‌ಫೋನ್‌

ಗ್ಯಾಲಕ್ಷಿ ಫೋಲ್ಡ್‌ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ ಕಂಪನಿಯ 4ನೇ 5G ಸ್ಮಾರ್ಟ್‌ಫೋನ್‌ ಆಗಿದೆ. ಗ್ಯಾಲಕ್ಷಿ ಎಸ್ 10, ನೋಟ್ 10 ಮತ್ತು ಎ90 ಗಳ ನಂತರ ಗ್ಯಾಲಕ್ಷಿ ಫೋಲ್ಡ್‌ 5G ನೆಟ್‌ವರ್ಕ್‌ ಹೊಂದಿದೆ. ಇದು ಅಲ್ಟ್ರಾ-ಫಾಸ್ಟ್ ನೆಟ್‌ವರ್ಕ್‌ಗಾಗಿ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊವನ್ನು ಬಲಪಡಿಸಿದೆ.

Best Mobiles in India

English summary
Samsung Galaxy Fold To Unfold On October 1st In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X