ವೇರಿಯೇಬಲ್ ಕ್ಷೇತ್ರದಲ್ಲೇ ಅದ್ಭುತವಾಗಿರುವ ಗೇರ್ ಫಿಟ್

By Shwetha
|

ಕಂಪ್ಯೂಟರ್ ಮತ್ತು ಆಧುನಿಕ ತಂತ್ರಜ್ಞಾನದ ಈ ಜಗತ್ತಿನಲ್ಲಿ ವೇರಿಯೇಬಲ್‌ಗಳು (ಸ್ಮಾರ್ಟ್‌ವಾಚ್‌ಗಳು) ತಂತ್ರಜ್ಞಾನಕ್ಕಿರುವ ಇತ್ತೀಚಿನ ಸಾಮರ್ಥ್ಯ ಮತ್ತು ಅನ್ವೇಷಣೆಯ ಹೊಸ ಪ್ರಸ್ತುತಿಯಾಗಿ ಮಾರುಕಟ್ಟೆಗೆ ಬಂದಿದೆ. ಅದರಲ್ಲೂ ಸ್ಯಾಮ್‌ಸಂಗ್‌ನ ಗೇರ್ ಫಿಟ್ ವೇರಿಯೇಬಲ್ ಸಾಧನವು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಓಡುವ ಕುದುರೆಯಾಗಿ ತನ್ನ ಪ್ರಭಾವ ಬೀರಿರುವ ಡಿವೈಸ್ ಆಗಿದೆ.

ಗೇರ್ 2 ಮತ್ತು ಗೇರ್ 2 ನಿಯೋದ ಆಗಮನದ ನಂತರ ಬಂದಿರುವ ಗೇರ್ ಫಿಟ್ ತನ್ನ ವಿಶಿಷ್ಟ ಸೊಬಗಿನಿಂದ ಮನಸೆಳೆಯುವಂತಿದೆ. ಕಡಿಮೆ ಕಾರ್ಯವೈಖರಿಯನ್ನು ಹೊಂದಿರುವ ವೇರಿಯೇಬಲ್ ಇದಾಗಿದ್ದರೂ ಅಂದರೆ ಇದರಲ್ಲಿ ಕ್ಯಾಮೆರಾ, ರಿಮೋಟ್ ಫಂಕ್ಷನಾಲಿಟಿ, ಹಾಗೂ ಸಂಗ್ರಹಣೆ ಆಯ್ಕೆಗಳಿಲ್ಲ ಆದರೂ ತನ್ನ ಸ್ಟೈಲ್ ಹಾಗೂ ಸೊಬಗಿನಿಂದ ಗ್ರಾಹಕರ ಮನಸೆಳೆಯುವಂತೆ ಮಾಡುವ ಶಕ್ತಿಯನ್ನು ಹೊಂದಿದೆ.

ಈ ವೇರಿಯೇಬಲ್ ಕುರಿತ ಇನ್ನಷ್ಟು ಮಾಹಿತಿಗಳನ್ನು ನಾವು ಸ್ಲೈಡ್‌ಗಳಲ್ಲಿ ನಿಮಗೆ ನೀಡುತ್ತಿದ್ದು ಇದರ ಸಂಪೂರ್ಣ ವಿವರವನ್ನು ನೀವಿಲ್ಲಿ ತಿಳಿದುಕೊಳ್ಳಬಹುದಾಗಿದೆ.

#1

#1

ಗೇರ್ ಫಿಟ್‌ಗೆ ಸ್ಯಾಮ್‌ಸಂಗ್ ವಿನ್ಯಾಸಪಡಿಸಿರುವ ಆಕರ್ಷಕ ಡಿಸೈನ್ ವೇರಿಯೇಬಲ್ ಕ್ಷೇತ್ರದಲ್ಲೇ ಒಂದ ಮೈಲಿಗಲ್ಲು ಎಂದು ಹೇಳಬಹುದು. ಈ ವಾಚ್ ಅನ್ನು ಬಳಸಲು ನೀವು ಇದಕ್ಕೆ ಸಂಯೋಜನೆಯಾಗುವ ಸ್ಯಾಮ್‌ಸಂಗ್ ಡಿವೈಸ್ ಅನ್ನು ಬಳಸುವುದು ಅತೀ ಅಗತ್ಯವಾಗಿದೆ. ಹೆಚ್ಚು ತಲೆಕಡೆಸಿಕೊಳ್ಳಬೇಡಿ ಏಕೆಂದರೆ ಈಗಾಗಲೇ ಹದಿನೆಂಟು ವಿವಿಧ ಸ್ಯಾಮ್‌ಸಂಗ್ ಡಿವೈಸ್‌ಗಳು ವಾಚ್ ಅನ್ನು ಬೆಂಬಲಿಸುತ್ತವೆ.

#2

#2

ಇದು ನಿಮ್ಮ ಮಣಿಗಂಟಿಗೆ ಪರ್ಫೆಕ್ಟ್ ಆಗಿ ಹೊಂದಿಕೆಯಾಗುವಂತಿದ್ದು ನಿಮಗೆ ಹಗುರವಾದ ಅನುಭವವನ್ನು ನೀಡುತ್ತದೆ ಹೆಚ್ಚು ಭಾರವಾಗಿಲ್ಲ. ಸ್ಯಾಮ್‌ಸಂಗ್‌ನೊಂದಿಗೆ ಹೊಂದಿಸಬಹುದಾದ ಹೈಪೋಲರ್ಜನಿಕ್‌ನೊಂದಿಗೆ ವೃಸ್ಟ್‌ಬಾಂಡ್ ಬಂದಿದ್ದು ಎಲ್ಲಾ ಮಣಿಗಂಟಿಗೂ ಇದು ಹೊಂದುವಂತಿದೆ.

#3

#3

ಇದು 1.85 ಇಂಚಿನ ಅಮೋಲೆಡ್ ಪರದೆಯೊಂದಿಗೆ ಬಂದಿದ್ದು, ನೋಡಲು ಅದ್ಭುತವಾಗಿದೆ. ಮಾರುಕಟ್ಟೆಯಲ್ಲಿರುವ ಬೇರೆಲ್ಲಾ ವೇರಿಯೇಬಲ್‌ಗೆ ಹೋಲಿಸಿದಾಗ ಇದು ಸ್ವಲ್ಪ ದೊಡ್ಡಾದಾಗಿದೆ ಮತ್ತು ಬಳಸಿರುವ ತಂತ್ರಜ್ಞಾನ ಕೂಡ ಅತ್ಯಾಕರ್ಷಕವಾಗಿದೆ. ಇದು ಜಪ ಪ್ರತಿರೋಧಕ ಗುಣವನ್ನು ಹೊಂದಿರುವುದರಿಂದ ಇದು ಮೂವತ್ತು ನಿಮಿಷಗಳ ಕಾಲ ನೀರಿನಲ್ಲಿ ಸುರಕ್ಷಿತವಾಗಿರುತ್ತದೆ. ಇದು ಬಕಲ್ ಅನ್ನು ಹೊಂದಿದ್ದು ನಿಮ್ಮ ಮಣಿಗಂಟಿನಲ್ಲಿ ಚೆನ್ನಾಗಿ ಕೂರುವಂತಿದೆ.

#4

#4

ಡಿವೈಸ್‌ನ ಮೇಲ್ಭಾಗದಲ್ಲಿ ಬಳಕೆದಾರರು ಸಿಂಗಲ್ ಬಟನ್ ಅನ್ನು ನೋಡಬಹುದಾಗಿದ್ದು, ಇದರಿಂದ ಪರದೆಯನ್ನು ನೀವು ಆನ್ ಮತ್ತು ಆಫ್ ಮಾಡಬಹುದಾಗಿದೆ. ತಮ್ಮ ಆಯ್ಕೆಯ ಫಂಕ್ಷನ್ ಅನ್ನು ಬಳಕೆದಾರರು ಇಲ್ಲಿ ಬಳಸಬಹುದಾಗಿದ್ದು ಡಿವೈಸ್ ಅನ್ನು ಎರಡು ಬಾರಿ ತಟ್ಟುವ ಮೂಲಕ ಸ್ಲೀಪ್ ಮೋಡ್‌ನಿಂದ ತೆರೆಯಬಹುದಾಗಿದೆ.

#5

#5

ಗೇರ್ ಫಿಟ್‌ನಲ್ಲಿ ಅಧಿಸೂಚನೆಗಳನ್ನು ಕಾಣಬಹುದಾಗಿದೆ. ಡಿವೈಸ್‌ನಲ್ಲಿ ಪ್ರಸ್ತುತಪಡಿಸಿರುವ ಎಸ್‌ಎಮ್‌ಎಸ್‌ಗಳು ಮತ್ತು ಇಮೇಲ್‌ಗಳು ಖಂಡಿತ ನಿಮ್ಮನ್ನು ಆಕರ್ಸಿಸುವಂತಿದೆ. ಏಕೆಂದರೆ ಈ ವೇರಿಯೇಬಲ್‌ನಿಂದಲೇ ಪೋನ್‌ನಲ್ಲಿ ನೀವು ನಿರ್ವಹಿಸುವ ಕೆಲಸಗಳನ್ನು ಮಾಡಬಹುದಾಗಿದೆ. ಇದರಿಂದ ನಿಮ್ಮ ಪಾಕೆಟ್‌ನಲ್ಲಿ ಫೋನ್ ಇದೆ ಎಂಬುದೇ ಮರೆತುಹೋಗುತ್ತದೆ. ಇದರಲ್ಲಿ "ತ್ವರಿತ ಪ್ರತ್ಯುತ್ತರ" ಎಂಬ ಫೀಚರ್ ಅನ್ನು ಅಳವಡಿಸಲಾಗಿದ್ದು ಇದರಿಂದ ನೀವು ತ್ವರಿತವಾಗಿ ಸಂದೇಶಗಳನ್ನು ವಾಚ್ ಮೂಲಕವೇ ಕಳುಹಿಸಬಹುದಾಗಿದೆ.

#6

#6

ನಿಮ್ಮ ಆಯ್ಕೆಗೆ ಬೇಕಾದ ಹಾಗೆ ಇದರ ಬ್ಯಾಕ್‌ಗ್ರೌಂಡ್ ಅನ್ನು ಬದಲಾಯಿಸುವ ಫೀಚರ್ ಇದರಲ್ಲಿದೆ. ಯಾವುದೇ ಹದಿನೆಂಟು ವೇರಿಯೇಬಲ್ ಅನ್ನು ಬೆಂಬಲಿಸುವ ಡಿವೈಸ್‌ನಿಂದ ಗೇರ್ ಫಿಟ್ ಮ್ಯಾನೇಜರ್ ಅನ್ನು ನೀವು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದರಿಂದ ಸ್ಯಾಮ್‌ಸಂಗ್‌ನ ಹೊಸ ಫಿಟ್‌ನೆಸ್ ಅಪ್ಲಿಕೇಶನ್, ಎಸ್ ಹೆಲ್ತ್, ನಿಮ್ಮ ತೂಕ ಎತ್ತರ ಮೊದಲಾದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

#7

#7

ಈ ಗೇರ್ ಫಿಟ್ ವೇರಿಯೇಬಲ್ ತನ್ನದೇ ಆದ ಉತ್ಪನ್ನಗಳಾದ ಸ್ಯಾಮ್‌ಸಂಗ್‌ನ ಗೇರ್ 2 ಮತ್ತು ಗೇರ್ 2 ನಿಯೋದಿಂದ ಭರ್ಜರಿ ಪೈಪೋಟಿಯನ್ನು ಪಡೆಯುವುದು ನಿಶ್ಚಯವಾಗಿದೆ. ಗ್ಯಾಲಕ್ಸಿ ಗೇರ್ ಫೀಟ್ ಅನ್ನು ಕೆಲವೊಂದು ವೈಶಿಷ್ಟ್ಯಗಳಿಗೆ ಅನುಸಾರವಾಗಿ ತಯಾರಿಸಲಾಗಿದ್ದು ಇದನ್ನು ಧರಿಸುವವರಿಗೆ ಪ್ರಯೋಜನಕಾರಿಯಾಗಿ ಇದು ಸಹಾಯ ನೀಡಲಿದೆ. ಇದು ಕೆಲವೊಂದು ಉಪಯೋಗಕಾರಿ ಆರೋಗ್ಯ ಅಂಶಗಳನ್ನು ಬಳಕೆದಾರರಿಗೆ ನೀಡಲಿದ್ದು, ಅಂದರೆ ಜಿಪಿಎಸ್ ಇಂಟಿಗ್ರೇಶನ್, ವ್ಯಾಯಾಮ ಹೀಗೆ ಡಿವೈಸ್‌ನಲ್ಲಿ ಇರಲೇಬೇಕಾದ ಪ್ರಮುಖ ಅಂಶಗಳನ್ನು ಹೊಂದಿದೆ.

<center><iframe width="100%" height="360" src="//www.youtube.com/embed/9N0dwoii1XM?feature=player_embedded" frameborder="0" allowfullscreen></iframe></center>

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X