Subscribe to Gizbot

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೈಮ್ ಮತ್ತು ಗ್ಯಾಲೆಕ್ಸಿ J7 ನೆಕ್ಸ್ಟ್ ಬೆಲೆಯಲ್ಲಿ ಭಾರೀ ಕಡಿತ

Written By: Lekhaka

ಸ್ಯಾಮ್ ಸಂಗ್ ಕಂಪನಿಯ ಸದ್ಯದ ಬಹು ಬೇಡಿಕೆಯ ಸ್ಯಾಮ್ ಸಂಗ್ ಗ್ಯಾಲೆಕ್ಸಿ J ಸರಣಿಯ ಗ್ಯಾಲೆಕ್ಸಿ J7 ಪ್ರೈಮ್ ಮತ್ತು ಗ್ಯಾಲೆಕ್ಸಿ J7 ನೆಕ್ಸ್ಟ್ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಕಾಣಬಹುದಾಗಿದೆ. ಈಗಾಗಲೇ ಬೇಡಿಕೆಯಲ್ಲಿರುವ ಈ ಸ್ಮಾರ್ಟ್ ಫೋನ್ ಮಾರಾಟವನ್ನು ಇನಷ್ಟು ಹೆಚ್ಚಿಸಲು ಸ್ಯಾಮ್ ಸಂಗ್ ಈ ಕಡಿತಕ್ಕೆ ಮುಂದಾಗಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೈಮ್ ಬೆಲೆಯಲ್ಲಿ ಭಾರೀ ಕಡಿತ

ಗ್ಯಾಲೆಕ್ಸಿ J7 ಪ್ರೈಮ್ ಸ್ಮಾರ್ಟ್ ಫೋನ್ ಬೆಲೆಯಲ್ಲಿ ರೂ.3,000 ಕಡಿತ ಗೊಂಡಿದ್ದು, ರೂ. 13,900ಕ್ಕೆ ಮಾರಾಟವಾಗುತ್ತಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ J7 ನೆಕ್ಸ್ಟ್ ಸ್ಮಾರ್ಟ್ ಫೋನ್ ಬೆಲೆಯಲ್ಲಿ ರೂ.1000 ಕಡಿತವಾಗಿದ್ದು, ರೂ. 10,490ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

ಆದರೆ ಈ ಬೆಲೆಯಲ್ಲಿ ಕಡಿತ ಮಾಡಿರುವ ಬಗ್ಗೆ ಸ್ಯಾಮ್ ಸಂಗ್ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಬದಲಾಗಿ ಕೆಲವು ಟೆಲಿಕಾಂ ವೆಬ್ ಗಳು ಈ ಬಗ್ಗೆ ಮಾಹಿತಿಯನ್ನು ನೀಡಿವೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೆ ನಡೆಯುತ್ತಿರುವ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಐಫೋನ್‌ಗಳಲ್ಲಿ ಸ್ಕ್ರೀನ್ ರೇಕಾರ್ಡ್‌ ಮಾಡುವುದು ಹೇಗೆ?..ಸಿಂಪಲ್ ಸ್ಟೆಪ್ಸ್!!

'ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೈಮ್ ಸ್ಮಾರ್ಟ್ ಫೋನ್ 32GB ಇಂಟರ್ನಲ್ ಮೊಮೆರಿಯನ್ನು ಹೊಂದಿದ್ದು, 5.5 ಇಂಚಿನ ಡಿಸ್ ಪ್ಲೇ. FHD ಗುಣಮಟ್ಟದಾಗಿದ್ದು, ಗೊರಿಲ್ಲ ಗ್ಲಾಸ್ ಸುರಕ್ಷನ್ನು ಹೊಂದಿದೆ. ಅಲ್ಲದೇ 3GB RAM ಅನ್ನು ಕಾಣಬಹುದಾಗಿದ್ದು, ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶ ನೀಡಿದೆ.

ಗ್ಯಾಲೆಕ್ಸಿ J7 ನೆಕ್ಸ್ಟ್ ಸ್ಮಾರ್ಟ್ ಫೋನ್ ನಲ್ಲಿ 5.5 ಇಂಚಿನ HD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ 2GB RAM-16GB ಇಂಟರ್ನಲ್ ಮೊಮೊರಿ ನೀಡಲಾಗಿದ್ದು, ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಸಾಧ್ಯತೆ ಈ ಫೋನಿನಲ್ಲಿದೆ.

English summary
The Samsung Galaxy J7 Prime 32GB and Galaxy J7 Nxt have received a price cut of Rs. 3,000 and Rs. 1,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot