ಶೀಘ್ರದಲ್ಲೇ ಸ್ಯಾಮ್‌ಸಂಗ್ ಗ್ಯಾಲಕ್ಸಿ M01, ಗ್ಯಾಲಕ್ಸಿ ವಾಚ್ 3 ಬಿಡುಗಡೆ!

|

ಇದು ಟೆಕ್ನಾಲಜಿ ಜಮಾನ. ದಿನಕಳೆದಂತೆ ಟೆಕ್ನಾಲಜಿ ಜಗತ್ತಿನಲ್ಲಿ ಭಾರಿ ಪೈಫೋಟಿ ಶುರುವಾಗಿದ್ದು, ಹೊಸ ಮಾದರಿಯ ಸ್ಮಾರ್ಟ್‌ಪ್ರಾಡಕ್ಟ್‌ಗಳಿಗೆ ಭಾರಿ ಬೇಡಿಕೆ ಹೆಚ್ಚಿದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ವಿವಿಧ ರೀತಿಯ ಸ್ಮಾರ್ಟ್‌ಪ್ರಾಡಕ್ಟ್‌ಗಳನ್ನ ಸಹ ಪರಿಚಯಿಸಿವೆ. ಇದರಲ್ಲಿ ಸ್ಯಾಮ್‌ಸಂಗ್ ಕಂಪೆನಿ ಕೂಡ ಒಂದಾಗಿದ್ದು, ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ಇತರೆ ಸ್ಮಾರ್ಟ್‌ ವೇರಿಯೆಬಲ್ಸ್‌ ಪ್ರಾಡಕ್ಟ್‌ಗಳನ್ನ ಸಹ ಬಿಡುಗಡೆ ಮಾಡಿದೆ. ಇದೀಗ ಸ್ಯಾಮ್‌ಸಂಗ್‌ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ತನ್ನ ಹೊಸ ವೆರಿಯೆಬಲ್ಸ್‌ ಪ್ರಾಡಕ್ಟ್‌ಗಳನ್ನ ಪರಿಚಯಿಸಲು ಸಿದ್ದತೆ ನಡೆಸಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ M01 ಮತ್ತು ಗ್ಯಾಲಕ್ಸಿ ವಾಚ್ 3 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇನ್ನು ಈ ಎರಡೂ ಡಿವೈಸ್‌ಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌ನಲ್ಲಿ ಗುರುತಿಸಲಾಗಿದೆ. ಸದ್ಯ ಇದು ಭಾರತದಲ್ಲಿ ಅತಿ ಶೀಘ್ರದಲ್ಲಿಯೇ ಬಿಡುಗಡೆ ಆಗುವ ಸುಳಿವನ್ನು ನೀಡಿದೆ. ಇನ್ನು ಸ್ಯಾಮ್‌ಸಂಗ್ ಸ್ಮಾರ್ಟ್‌ವಾಚ್ 41mm ಮತ್ತು 45mm ಸೇರಿದಂತೆ ಇತರೆ ಎರಡು ಗಾತ್ರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಸ್ಯಾಮ್‌ಸಂಗ್

ಸದ್ಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 3ಟಿಜೆನ್ OS, v5.5 ಜೊತೆಗೆ ಲಭ್ಯವಾಗಲಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ ತನ್ನ ಜನಪ್ರಿಯ ತಿರುಗುವ ಅಂಚನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಸ್ಲಿಮ್ ವಿನ್ಯಾಸ ಮತ್ತು ದೊಡ್ಡ ಪರದೆಯನ್ನು ಹೊಂದಿದೆ ಎನ್ನಲಾಗ್ತಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1GB RAM ಮತ್ತು 8GB ಇಂಟರ್‌ ಸ್ಟೊರೇಜ್‌ ಸಾಮರ್ಥ್ಯವನ್ನ ಹೊಂದಿರಲಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ ಫಿಟ್‌ನೆಸ್ ವಾಚ್ ಮಾದರಿಯಲ್ಲಿ ಸ್ಯಾಮ್‌ಸಂಗ್ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸ್ಯಾಮ್‌ಸಂಗ್

ಇನ್ನು ಈ ಹಿಂದಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಡಿವೈಸ್‌ಗಳಂತೆಯೇ, ಧೂಳು ಮತ್ತು ವಾಟರ್‌ ಪ್ರೂಪ್ ವ್ಯವಸ್ಥೆಯನ್ನ ಹೊಂದಿದ್ದು, ಇದಕ್ಕಾಗಿ IP68 ರೇಟಿಂಗ್ ಅನ್ನು ಸಹ ಹೊಂದಿರುತ್ತದೆ. ಅಲ್ಲದೆ ಇದು ಒರಟುತನ ಮತ್ತು ಬಾಳಿಕೆಗಾಗಿ MIL-STD-810G ಕಂಪ್ಲೈಂಟ್ ವಿನ್ಯಾಸವನ್ನ ಹೊಂದಿರಲಿದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M01 ಗಳನ್ನು ತೆಗೆದುಕೊಳ್ಳುವಾಗ, ಇತ್ತೀಚಿನ BIS ಪಟ್ಟಿಯು ಅದರ ಬಗ್ಗೆ ಯಾವುದೇ ಹೊಸ ಫೀಚರ್ಸ್‌ಗಳನ್ನು ಅಥವಾ ಇತರ ವಿವರಗಳನ್ನು ಬಹಿರಂಗಪಡಿಸಿಲ್ಲ.

ಸ್ಯಾಮ್‌ಸಂಗ್

ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ m01 ಸ್ಮಾರ್ಟ್‌ವಾಚ್‌ ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್ ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಇದು ಆಂಡ್ರಾಯ್ಡ್ 10 ರ ಬದಲು ಆಂಡ್ರಾಯ್ಡ್ 9 -ಟ್-ಆಫ್-ದಿ-ಬಾಕ್ಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗ್ತಿದೆ. ಅಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ m01, 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಇದನ್ನು ಸ್ನಾಪ್‌ಡ್ರಾಗನ್ 439 ಚಿಪ್‌ಸೆಟ್‌ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Samsung company is expected to launch Samsung Galaxy M01s and Galaxy Watch 3 wearable in India soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X