ಸ್ಯಾಮ್‌ಸಂಗ್ ಮತ್ತು ಜಿಯೋ ನೀಡಿದ ಬಂಪರ್ ಆಫರ್‌ಗೆ ಗ್ರಾಹಕರು ಫಿದಾ!!

|

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ಕಾಣುತ್ತಿರುವ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಂ' ಸರಣಿ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಇದೀಗ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಜಿಯೋ ತನ್ನ ಗ್ರಾಹಕರಿಗಾಗಿ ಸ್ಯಾಮ್‌ಸಂಗ್‌ನ ಹೊಸ ಸ್ಮಾರ್ಟ್‌ಫೋನುಗಳಾದ ಗ್ಯಾಲಾಕ್ಸಿ ಎಂ20 ಹಾಗೂ ಗ್ಯಾಲಾಕ್ಸಿ ಎಂ10 ಮಾದರಿಗಳ ವಿಶೇಷ ಮಾರಾಟ ವ್ಯವಸ್ಥೆಯನ್ನು ಘೋಷಿಸುವ ಮೂಲಕ ಡಿಜಿಟಲ್ ಜೀವನಶೈಲಿಯ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದೆ.

ಹೌದು, ಗ್ಯಾಲಾಕ್ಸಿ ಎಂ ಸೀರೀಸ್ ಸಾಧನಗಳಲ್ಲಿ ಜಿಯೋ ಸಂಪರ್ಕ ಬಳಸುವ ಗ್ರಾಹಕರಿಗೆ ವಿಶೇಷ ಡಬಲ್ ಡೇಟಾ ಕೊಡುಗೆಯನ್ನೂ ಜಿಯೋ ಪರಿಚಯಿಸಿದ್ದು, ಉಳಿತಾಯದ ಜೊತೆಗೆ ಅಪರಿಮಿತ ವೀಡಿಯೋ, ಸಂಗೀತ, ಕ್ರಿಕೆಟ್ ಹಾಗೂ ಇನ್ನೂ ಅನೇಕ ಸೌಲಭ್ಯಗಳನ್ನು ಆನಂದಿಸುವ ಅವಕಾಶ ಒದಗಿಸುತ್ತಿದೆ. Samsung.com ಜಾಲತಾಣದಲ್ಲಿನ ಪ್ರತ್ಯೇಕ ಕಿಟಕಿಯ ಮೂಲಕ ಹೊಚ್ಚಹೊಸ ಎಂ ಸೀರೀಸ್ ಸಾಧನಗಳನ್ನು ಇತರರಿಗಿಂತ ಮೊದಲು ಖರೀದಿಸುವ ಅವಕಾಶವನ್ನು ಈ ಮಾರಾಟ ವ್ಯವಸ್ಥೆ ಜಿಯೋ ಗ್ರಾಹಕರಿಗೆ ನೀಡಿದೆ.

ಸ್ಯಾಮ್‌ಸಂಗ್ ಮತ್ತು ಜಿಯೋ ನೀಡಿದ ಬಂಪರ್ ಆಫರ್‌ಗೆ ಗ್ರಾಹಕರು ಫಿದಾ!!

ಸಾಟಿಯಿಲ್ಲದ ಡಿಜಿಟಲ್ ಜೀವನಶೈಲಿಯನ್ನು ಅನುಭವಿಸಲು ಬಯಸುವ ಟೆಕ್ ಆಸಕ್ತ ಯುವ ಜನತೆಯನ್ನು ಜಿಯೋ ಗೆಲಾಕ್ಸಿ ಎಂ ಸರಣಿಯ ಈ ಡಿಜಿಟಲ್ ಜೀವನಶೈಲಿ ಪ್ರಸ್ತಾಪ ತನ್ನತ್ತ ಸೆಳೆಯುವುದು ಇದೀಗ ಖಾತ್ರಿಯಾಗಿದ್ದು, ಹಾಗಾದರೆ, ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಂ' ಸರಣಿ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಜಿಯೋ ನೀಡಿರುವ ಬಂಪರ್ ಆಫರ್ ಯಾವುದು?, 'ಗ್ಯಾಲಾಕ್ಸಿ ಎಂ' ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ ಏನೆಲ್ಲಾ ಲಾಭ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಜಿಯೋ ಡಬಲ್ ಡೇಟಾ ಕೊಡುಗೆ

ಜಿಯೋ ಡಬಲ್ ಡೇಟಾ ಕೊಡುಗೆ

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಂ ಸರಣಿ ಫೋನ್‌ಗಳ ಮೇಲೆ ಜಿಯೋವಿನಿಂದ ಡಬಲ್ ಡೇಟಾ ಕೊಡುಗೆಯನ್ನು ನೀಡಲಾಗಿದೆ. 2019ರ ಫೆಬ್ರುವರಿ 5ರಂದು ಅಥವಾ ಆನಂತರ ಸ್ಯಾಮ್‌ಸಂಗ್ ಗೆಲಾಕ್ಸಿ ಎಂ20 ಅಥವಾ ಎಂ10 ಖರೀದಿಸುವ ಜಿಯೋ ಸೇವೆಗಳ ಸಕ್ರಿಯ ಪ್ರಿಪೇಡ್ ಚಂದಾದಾರರು ರೂ. 3,110 ವರೆಗಿನ ಮೌಲ್ಯದ ಉಳಿತಾಯ ಕೊಡುಗೆಯನ್ನು ಪಡೆಯಬಹುದಾಗಿದೆ.

ಮೇ 5ರ ವರೆಗೆ ಆಫರ್ ಲಭ್ಯ!

ಮೇ 5ರ ವರೆಗೆ ಆಫರ್ ಲಭ್ಯ!

ಈ ಕೊಡುಗೆಯನ್ನು ಪಡೆಯಲು ಗ್ಯಾಲಾಕ್ಸಿ ಎಂ ಸರಣಿಯ ಬಳಕೆದಾರರು ಮೇ 5ರವರೆಗೆ ಮಾತ್ರ ಪಡೆಯಬಹುದಾಗಿದೆ. ಗ್ಯಾಲಾಕ್ಸಿ ಎಂ ಫೋನ್‌ಗಳಿಗೆ ಜಿಯೋವಿನ ರೂ. 198 ಅಥವಾ ರೂ. 299 ಮೌಲ್ಯದ ರೀಚಾರ್ಜ್ ಮಾಡಿಸಿದರೆ, ಡಬಲ್ ಡೇಟಾವನ್ನು 10 ಡಬಲ್ ಡಾಟಾ ವೋಚರ್‌ಗಳ ರೂಪದಲ್ಲಿ ಅರ್ಹ ಬಳಕೆದಾರರಿಗೆ ನೀಡಲಾಗುವುದು ಎಂದು ಹೇಳಲಾಗಿದೆ.

ಗರಿಷ್ಠ 10 ರೀಚಾರ್ಜುಗಳಿಗೆ ವೋಚರ್ ಲಭ್ಯ!

ಗರಿಷ್ಠ 10 ರೀಚಾರ್ಜುಗಳಿಗೆ ವೋಚರ್ ಲಭ್ಯ!

ಮೇ 5ರವರೆಗೆ ಲಭ್ಯವಿರಲಿರುವ ಈ ಆಫರ್‌ನಲ್ಲಿ ನೀಡಲಿರುವ ವೋಚರ್‌ಗಳನ್ನು ಫೆಬ್ರವರಿ 5 ಮತ್ತು 2020ರ ಜೂನ್ 30ನಡುವೆ ಬಳಸಿಕೊಳ್ಳಬಹುದು. ಪ್ರತಿ ರೀಚಾರ್ಜ್‌ಗೆ ಒಂದು ಡಬಲ್ ಡೇಟಾ ವೋಚರಿನಂತೆ ನಿಗದಿತ ಅವಧಿಯಲ್ಲಿ ಗರಿಷ್ಠ 10 ರೀಚಾರ್ಜುಗಳಿಗೆ ಬಳಕೆದಾರರು ಈ ಜಿಯೋ ಡಬಲ್ ಡೇಟಾ ವೋಚರುಗಳನ್ನು ಬಳಸಬಹುದು ಎಂದು ಜಿಯೋ ಕಂಪೆನಿ ತಿಳಿಸಿದೆ.

ಮಾರಾಟದಲ್ಲಿ ಪಾಲ್ಗೊಳ್ಳುವುದು ಹೇಗೆ?

ಮಾರಾಟದಲ್ಲಿ ಪಾಲ್ಗೊಳ್ಳುವುದು ಹೇಗೆ?

ಗ್ಯಾಲಾಕ್ಸಿ ಎಂ ಸರಣಿಯ ಸಾಧನಗಳ ಎಲ್ಲ ಭಾರತೀಯ ಆವೃತ್ತಿಗಳ ಮೇಲೆ ಈ ಕೊಡುಗೆ ಲಭ್ಯವಿದ್ದು, ಫೋನ್‌ಗಳ ಮಾರಾಟದ ದಿನದಂದು, ಜಿಯೋ ಗ್ರಾಹಕರು Jio.com ಹಾಗೂ ಮೈಜಿಯೋ ಆಪ್‌ನಲ್ಲಿರುವ ಸೇಲ್ ಬ್ಯಾನರ್ ಮೇಲೆ ಕ್ಲಿಕ್ ಮಾಡಬೇಕು. ಅವರ ಜಿಯೋ ಸಂಖ್ಯೆಯನ್ನು ದೃಢೀಕರಿಸಿದ ನಂತರ, ಅವರು ಈ ಮಾರಾಟದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಯಾವೆಲ್ಲಾ ಬೆಲೆಗಳಲ್ಲಿ ಲಭ್ಯ?

ಯಾವೆಲ್ಲಾ ಬೆಲೆಗಳಲ್ಲಿ ಲಭ್ಯ?

ಹೊಸದಾಗಿ ಪರಿಚಯಿಸಲಾದ ಗ್ಯಾಲಾಕ್ಸಿ ಎಂ20 ಹಾಗೂ ಎಂ10 ಮಾದರಿಗಳು ಈ ಮಾರಾಟ ಮೇಳದಲ್ಲಿ ದೊರಕಲಿವೆ. ಗ್ಯಾಲಾಕ್ಸಿ ಎಂ 20ರ ಬೆಲೆ 4GB+64GB ಮಾದರಿಗೆ ರೂ. 12,990 ಹಾಗೂ 3GB+32GB ಮಾದರಿಗೆ ರೂ. 10,990 ಇರಲಿದೆ. ಗ್ಯಾಲಾಕ್ಸಿ ಎಂ10ರ ಬೆಲೆ 3GB+32GB ಮಾದರಿಗೆ ರೂ. 8,990 ಹಾಗೂ 2GB+16GB ಮಾದರಿಗೆ 7,990 ರೂಪಾಯಿಗಳು ಇದೆ.

'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳ ಬಿಡುಗಡೆ!!

'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳ ಬಿಡುಗಡೆ!!

ಈ ಮೊದಲೇ ಸ್ಯಾಮ್‌ಸಂಗ್ ಕಂಪೆನಿ ಮಾಹಿತಿ ನೀಡಿದಂತೆ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳು ಕಳೆದ ವಾರ ನಡೆದ ರಾತ್ರಿ ನಡೆದ ಅದ್ದೂರಿ ಸಮಾರಂಭದಲ್ಲಿ ದೇಶದಲ್ಲಿ ಬಿಡುಗಡೆಯಾಗಿವೆ. ಭಾರತದ ಮೊಬೈಲ್ ಮಾರುಕಟ್ಟೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸ್ಯಾಮ್‌ಸಂಗ್ ತಯಾರಿಸಿರುವ ನೂತನ ಸರಣಿಯ ಸ್ಮಾರ್ಟ್‌ಪೋನ್‌ಗಳು ಇವಾಗಿದ್ದು, ಚೀನಾ ಮೊಬೈಲ್ ಕಂಪೆನಿಗಳು ಸಹ ಬೆಚ್ಚಿಬೀಳುವಂತಹ ಬೆಲೆ ಮತ್ತು ಫೀಚರ್ಸ್‌ಗಳನ್ನು ಹೊತ್ತು ಮಾರುಕಟ್ಟೆಗೆ ಬಿಡುಗಡೆಯಾಗಿವೆ.

ಬೆಲೆ ಕೇವಲ 7,990 ರೂ.ಗಳಿಂದ ಆರಂಭ!

ಬೆಲೆ ಕೇವಲ 7,990 ರೂ.ಗಳಿಂದ ಆರಂಭ!

ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಂ ಸರಣಿ ಸ್ಮಾರ್ಟ್‌ಪೋನ್‌ ಬೆಲೆಗಳು ಕೇವಲ 7,990 ರೂ.ಗಳಿಂದ ಆರಂಭವಾಗಿವೆ. ಬೇಸಿಕ್ ಮಾದರಿಯ 2 ಜಿಬಿ RAM / 16 ಜಿಬಿ ಮಾದರಿಯ ''ಗ್ಯಾಲಾಕ್ಸಿ ಎಂ 10'' ಸ್ಮಾರ್ಟ್‌ಪೋನ್ ಬೆಲೆ 7,990 ರೂ.ಗಳಾದರೆ, 3 ಜಿಬಿ RAM / 32 ಜಿಬಿ ಮಾದರಿಯ 'ಗ್ಯಾಲಾಕ್ಸಿ ಎಂ 10 ಬೆಲೆ ಕೇವಲ 8,990ರೂ.ಗಳಾಗಿವೆ. ಇನ್ನು 3 ಜಿಬಿ RAM / 32 ಜಿಬಿ ಮಾದರಿಯ ಗ್ಯಾಲಾಕ್ಸಿ ಎಂ 20 ಸ್ಮಾರ್ಟ್‌ಫೋನ್ ಬೆಲೆ 10,990 ರೂ.ಗಳಾದರೆ, 4 ಜಿಬಿ RAM / 64 ಜಿಬಿ ಮೆಮೊರಿಯ ಎಂ20 ಫೋನ್ ಬೆಲೆ ಕೇವಲ 12,990.ರೂ.ಗಳಾಗಿವೆ.

ಬೆಲೆಗೆ ಊಹಿಸಲಾಗದ ಫೀಚರ್ಸ್!

ಬೆಲೆಗೆ ಊಹಿಸಲಾಗದ ಫೀಚರ್ಸ್!

ಸ್ಯಾಮ್‌ಸಂಗ್ ಕಂಪೆನಿಯ ಇತಿಹಾಸದಲ್ಲೇ ಅತ್ಯಂತ ಕಡಿಮೆ ಬೆಲೆ ಹೆಚ್ಚು ಫೀಚರ್ಸ್ ಹೊತ್ತಿರುವ ಸ್ಮಾರ್ಟ್‌ಫೋನ್‌ಗಳಾಗಿ ಗ್ಯಾಲಾಕ್ಸಿ ಎಂ ಸರಣಿ ಸ್ಮಾರ್ಟ್‌ಪೋನ್‌ಗಳು ಕಾಣಿಸಿಕೊಂಡಿವೆ. ಚೀನಾ ಮೊಬೈಲ್ ಕಂಪೆನಿಗಳಿಗಿಂತಲೂ ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ಹೆಚ್ಚು ಫೀಚರ್ಸ್ ನೀಡಿದ ಕೀರ್ತಿಗೆ ಸ್ಯಾಮ್ಸಂಗ್ ಇದೀಗ ಪಾತ್ರವಾಗಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿರುವ ಈ ಫೋನ್‌ಗಳು ಇನ್ಫಿನಿಟಿ ಡಿಸ್ಪ್ಲೇ, ಡ್ಯುಯಲ್ ಕ್ಯಾಮೆರಾ, 5,000 mAh ಬ್ಯಾಟರಿ ಮತ್ತು ಫೇಸ್‌ ಅನ್‌ಲಾಕ್‌ ಫೀಚರ್ಸ್ ಅನ್ನು ಹೊತ್ತು ಆಶ್ಚರ್ಯ ಮೂಡಿಸಿವೆ.

ಹೇಗಿದೆ ಗ್ಯಾಲಾಕ್ಸಿ M20?

ಹೇಗಿದೆ ಗ್ಯಾಲಾಕ್ಸಿ M20?

ಚೀನಾ ಮೊಬೈಲ್ ಕಂಪೆನಿಗಳು ಬೆಚ್ಚಿಬಿಳುವಂತೆ ಮಾಡಿರುವ ಸ್ಯಾಮ್‌ಸಂಗ್‌ನ ಗ್ಯಾಲಾಕ್ಸಿ M20 ಸ್ಮಾರ್ಟ್‌ಫೋನ್‌ ಇಂದು ಮೊಬೈಲ್ ಮಾರುಕಟ್ಟೆಯ ಹಾಟ್‌ಫೇವರೇಟ್ ಆಗುವ ಲಕ್ಷಣಗಳನ್ನು ಹೊಂದಿದೆ. ಗ್ಯಾಲಾಕ್ಸಿ ಎಂ 20 ಸ್ಮಾರ್ಟ್‌ಫೋನ್ ಬೆಲೆ ಕೇವಲ 10,990 ರೂ.ಗಳಿಂದ ಆರಂಭವಾಗಿದ್ದರೆ, ಅದರ ಫೀಚರ್ಸ್ ಮಾತ್ರ 25 ಸಾವಿರ ರೂ.ಗಳಿಂತ ಹೆಚ್ಚು ಬೆಲೆಯ ಸ್ಯಾಮ್‌ಸಂಗ್ ಫೋನ್‌ಗಳನ್ನು ಹೋಲುತ್ತಿವೆ. ನೋಚ್ ವಿನ್ಯಾಸದ 6.3 ಇಂಚ್ ಡಿಸ್‌ಪ್ಲೇ, 5,000mAh ಬ್ಯಾಟರಿಯಂತಹ ಫೀಚರ್ಸ್ ಮೊಬೈಲ್ ಮಾರುಕಟ್ಟೆಗೆ ಶಾಕ್ ನೀಡಿವೆ.

ಗ್ಯಾಲಾಕ್ಸಿ M20 ಡಿಸ್‌ಪ್ಲೇ!

ಗ್ಯಾಲಾಕ್ಸಿ M20 ಡಿಸ್‌ಪ್ಲೇ!

19.5: 9 ಆಕಾರ ಅನುಪಾತದೊಂದಿಗೆ 6.3 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಗ್ಯಾಲಾಕ್ಸಿ M20 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. 1080x2340 ಪಿಕ್ಸೆಲ್ ಸಾಮರ್ಥ್ಯದ ಇನ್ಫಿನಿಟಿ-ವಿ ಪ್ರದರ್ಶನದ ಈ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿಮಾಡಿಸಿದಂತೆ ಇರಲಿದೆ. ಅದಕ್ಕಿಂತಲೂ ಇದು ಹೆಚ್ಚು ಗಟ್ಟಿಮುಟ್ಟಾದ ಡಿಸ್‌ಪ್ಲೇಯಾಗಿದೆ. ಇನ್ನು ಡಿಸ್‌ಪ್ಲೇ ನೋಚ್ ವಿನ್ಯಾಸದೊಂದಿಗೆ ಹಿಂಬಾಗದಲ್ಲಿ ಎರಡು ಕ್ಯಾಮೆರಾಗಳು ಮತ್ತು ಫಿಂಗರ್‌ಪ್ರಿಂಟ್ ಫೀಚರ್ ಇರುವುದನ್ನು ನೋಡಬಹುದಾಗಿದೆ.

ಗ್ಯಾಲಾಕ್ಸಿ M20 ಫೀಚರ್ಸ್!

ಗ್ಯಾಲಾಕ್ಸಿ M20 ಫೀಚರ್ಸ್!

3 ಜಿಬಿ ಮತ್ತು 4 ಜಿಬಿ RAM ಮಾದರಿಗಳಲ್ಲಿ ಎಕ್ಸನೋಸ್ಸ್ 7904 Soc ಪ್ರೊಸೆಸರ್ ಮತ್ತು ಮಾಲಿ-ಜಿ 71 ಜಿಪಿಯು ಹೊತ್ತು ಗ್ಯಾಲಾಕ್ಸಿ M20 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಸ್ಯಾಮ್ಸಂಗ್ ಎಕ್ಸ್ಪೀರಿಯನ್ಸ್ 9.5 ಯುಎಕ್ಸ್ ಆಧರಿಸಿ ಆಂಡ್ರಾಯ್ಡ್ 8.1 ಓರಿಯೊದಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯನ್ನು ನೀಡಲಿದೆ. 32 ಜಿಬಿ ಮತ್ತು 64 ಜಿಬಿ ಮೆಮೊರಿ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ. ಮೈಕ್ರೊ ಎಸ್‌ಡಿ ಕಾರ್ಡಿನ ಮೂಲಕ 512 ಜಿಬಿ ವರೆಗೆ ಮೆಮೊರಿಯನ್ನು ವಿಸ್ತರಿಸಬ ಆಯ್ಕೆಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಗ್ಯಾಲಾಕ್ಸಿ M20 ಕ್ಯಾಮೆರಾ!

ಗ್ಯಾಲಾಕ್ಸಿ M20 ಕ್ಯಾಮೆರಾ!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ M20 ಸ್ಮಾರ್ಟ್‌ಪೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 13-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಜೊತೆಗೆ ಎಫ್ / 1.9 ಅಪಾರ್ಚರ್‌ನಲ್ಲಿ 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸಂವೇದಕಗಳು ಹಿಂಬಾಗದ ಕ್ಯಾಮೆರಾದ ಶಕ್ತಿಯಾಗಿವೆ. ಇನ್ನು F/ 2.0 ಅಪಾರ್ಚರ್‌ನೊಂದಿಗೆ 8-ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇರುವುದು ಸೆಲ್ಫೀ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಈ ಸೆಲ್ಫಿ ಕ್ಯಾಮೆರಾವು ಫೇಸ್‌ ಅನ್‌ಲಾಕ್‌ಗೂ ಸಹಾಯಕವಾಗಿದೆ.

ಗ್ಯಾಲಾಕ್ಸಿ M20 ಇತರೆ ಫೀಚರ್ಸ್!

ಗ್ಯಾಲಾಕ್ಸಿ M20 ಇತರೆ ಫೀಚರ್ಸ್!

ಯುಎಸ್‌ಬಿ ಟೈಪ್ ಸಿ ಚಾರ್ಜರ್ ಮೂಲಕ ವೇಗದ ಚಾರ್ಜಿಂಗ್ ಬೆಂಬಲಿಸುವ 5,000 ಎಮ್ಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಸಪೋರ್ಟ್, 512 ಜಿಬಿ ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ, ಇನ್ಫಿನಿಟಿ-ವಿ ಡಿಸ್‌ಪ್ಲೇಯಂತಹ ಅತ್ಯುತ್ತಮ ಫೀಚರ್ಸ್ ಅನ್ನು ಹೊಂದಿದೆ. ಇದು ಬಜೆಟ್ ಸ್ಮಾರ್ಟ್‌ಫೋನ್ ಆದರೂ, " 14nm, 4x ಕಾರ್ಟೆಕ್ಸ್- A73 @ 1.8GHz ಮತ್ತು 4x ಕಾರ್ಟೆಕ್ಸ್- A53 @ 1.8GHz ಪ್ರೊಸೆಸರ್ ಅನ್ನು ಹೊಂದುವ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆಯಲು ತುದಿಗಾಲಿನಲ್ಲಿ ನಿಂತಿದೆ.

ಹೇಗಿದೆ ಗ್ಯಾಲಾಕ್ಸಿ M10?

ಹೇಗಿದೆ ಗ್ಯಾಲಾಕ್ಸಿ M10?

ಬಿಡುಗಡೆಯಾದ ಮೊದಲ ದಿನವೇ ಭಾರತದ ಮೊಬೈಲ್ ಮಾರುಕಟ್ಟೆಯನ್ನು ನಡಿಗಿಸಿರುವ ಸ್ಯಾಮ್‌ಸಂಗ್ ಕಂಪೆನಿಯ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್ ಆಗಿ 'ಗ್ಯಾಲಾಕ್ಸಿ M10' ಹೊರಹೊಮ್ಮಿದೆ. ಮೊಬೈಲ್ ಪ್ರಿಯರು ಊಹಿಸಲಾಗದಷ್ಟು ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ 19: 9 ಆಕಾರ ಅನುಪಾತದೊಂದಿಗೆ 6.2 ಇಂಚಿನ ಹೆಚ್‌ಡಿ ಪ್ಲಸ್ ಬಿಗ್ ಡಿಸ್‌ಪ್ಲೇ, ಆಂಡ್ರಾಯ್ಡ್ 8.1 ಓರಿಯೊ, 3,400mAh ಬ್ಯಾಟರಿ ಪ್ಯಾಕ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 7,990 ರೂ.ಗಳಿಂದ ಆರಂಭವಾಗಿದೆ.

ಗ್ಯಾಲಾಕ್ಸಿ M10 ಡಿಸ್‌ಪ್ಲೇ!

ಗ್ಯಾಲಾಕ್ಸಿ M10 ಡಿಸ್‌ಪ್ಲೇ!

19:9 ಆಕಾರ ಅನುಪಾತದೊಂದಿಗೆ 6.2-ಇಂಚಿನ ಹೆಚ್‌ಡಿ ಪ್ಲಸ್ ಇನ್ಫಿನಿಟಿ- V ಡಿಸ್‌ಪ್ಲೇಯನ್ನು ಗ್ಯಾಲಾಕ್ಸಿ M10 ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ. ಆದರೆ, ಎಂ20ಗೆ ಹೋಲಿಸಿದರೆ ಈ M10 ಸ್ಮಾರ್ಟ್‌ಪೋನ್ ಸ್ಕ್ರೀನ್ ರೆಸಲ್ಯೂಷನ್ ಕಡಿಮೆಇದೆ. M10 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ 720x1520 ಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದ್ದರೂ ಸಹ ಹೆಚ್‌ಡಿ ಪ್ಲಸ್ ವಿಡಿಯೋಗಳ ವೀಕ್ಷಣಗೆ ಅಡ್ಡಿಯಿಲ್ಲ. ಇನ್ನು ಈ ಫೋನ್ ಕೂಡ ಡಿಸ್ಪ್ಲೇ ನೋಚ್ ವಿನ್ಯಾಸವನ್ನು ಹೊಂದಿರುವುದು ವಿಶೇಷ ಎನ್ನಬಹುದು.

ಗ್ಯಾಲಾಕ್ಸಿ M10 ಫೀಚರ್ಸ್!

ಗ್ಯಾಲಾಕ್ಸಿ M10 ಫೀಚರ್ಸ್!

2 ಜಿಬಿ ಮತ್ತು 3 ಜಿಬಿ RAM ಮಾದರಿಗಳಲ್ಲಿ ಎಕ್ಸನೋಸ್ಸ್ 7904 Soc ಪ್ರೊಸೆಸರ್ ಮತ್ತು ಮಾಲಿ-ಜಿ 71 ಜಿಪಿಯು ಹೊತ್ತು ಗ್ಯಾಲಾಕ್ಸಿ M10 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಈ ಫೋನ್ ಕೂಡ ಸ್ಯಾಮ್ಸಂಗ್ ಎಕ್ಸ್ಪೀರಿಯನ್ಸ್ 9.5 ಯುಎಕ್ಸ್ ಆಧರಿಸಿ ಆಂಡ್ರಾಯ್ಡ್ 8.1 ಓರಿಯೊದಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯನ್ನು ನೀಡಲಿದೆ. 16 ಜಿಬಿ ಮತ್ತು 32 ಜಿಬಿ ಮೆಮೊರಿ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ. ಮೈಕ್ರೊ ಎಸ್‌ಡಿ ಕಾರ್ಡಿನ ಮೂಲಕ 512 ಜಿಬಿ ವರೆಗೆ ಮೆಮೊರಿಯನ್ನು ವಿಸ್ತರಿಸಬ ಆಯ್ಕೆಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಗ್ಯಾಲಾಕ್ಸಿ M10 ಕ್ಯಾಮೆರಾ!

ಗ್ಯಾಲಾಕ್ಸಿ M10 ಕ್ಯಾಮೆರಾ!

ಗ್ಯಾಲಾಕ್ಸಿ M10 ಸ್ಮಾರ್ಟ್‌ಪೋನ್ ಕೂಡ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 13-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಜೊತೆಗೆ ಎಫ್ / 1.9 ಅಪಾರ್ಚರ್‌ನಲ್ಲಿ 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸಂವೇದಕಗಳು ಹಿಂಬಾಗದ ಕ್ಯಾಮೆರಾದ ಶಕ್ತಿಯಾಗಿವೆ. ಇನ್ನು F/ 2.0 ಅಪಾರ್ಚರ್‌ನೊಂದಿಗೆ 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇರುವುದು ಸೆಲ್ಫೀ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಈ ಸೆಲ್ಫಿ ಕ್ಯಾಮೆರಾವು ಫೇಸ್‌ ಅನ್‌ಲಾಕ್‌ಗೂ ಸಹಾಯಕವಾಗಿದೆ.

Best Mobiles in India

English summary
Samsung Galaxy M20, M10 Sale Exclusively for Jio Users with Double Data Offer, Here’s How to Buy. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X