ಭಾರತಕ್ಕೆ ಎಂಟ್ರಿ ಕೊಟ್ಟ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G! ಬೆಲೆ ಎಷ್ಟು?

|

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಗ್ಯಾಲಕ್ಸಿ ಎಂ, ಗ್ಯಾಲಕ್ಸಿ ಎ, ಗ್ಯಾಲಕ್ಸಿ ಎಸ್‌ ಸರಣಿಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್‌ ಹೊಂದಿರುವ 6.7 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಬ್ಲೂ ಮತ್ತು ಗ್ರೀನ್‌ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್‌ 6.7-ಇಂಚಿನ ಫುಲ್‌ HD+ ಇನ್ಫಿನಿಟಿ ಒ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಪಡೆದಿದೆ. ಹಾಗೆಯೇ 85.3% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ One UI 4.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಫೋನ್‌ ಸ್ಯಾಮ್‌ಸಂಗ್‌ನ 'RAM ಪ್ಲಸ್' ಫೀಚರ್ಸ್‌ ಹೊಂದಿದ್ದು, 8GB ವರೆಗೆ ಬಳಕೆಯಾಗದ ಸ್ಟೋರೇಜ್‌ ಅನ್ನು ವರ್ಚುವಲ್ RAM ಆಗಿ ಬಳಸಿಕೊಳ್ಳುತ್ತದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಅಪರ್ಚರ್ ಲೆನ್ಸ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5.2, GPS/ A-GPS ಮತ್ತು ಯುಎಸ್‌ಬಿ ಟೈಪ್ C ಪೋರ್ಟ್ ಹೊಂದಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಜಿಯೋಮ್ಯಾಗ್ನೆಟಿಕ್ ಸೆನ್ಸಾರ್, ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್‌ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್‌ 6GB + 128GB ಸ್ಟೋರೇಜ್ ಮಾದರಿಗೆ 23,999ರೂ. ಬೆಲೆ ಹೊಂದಿದೆ. ಆದರೆ 8GB + 128GB ರೂಪಾಂತರದ ಬೆಲೆ 25,999ರೂ. ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಖರೀದಿಸುವವರು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳಿಗೆ 2,500 ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದು ನೀಲಿ ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಫೋನ್‌ ಏಪ್ರಿಲ್ 29 ರಂದು ಮಧ್ಯಾಹ್ನ 12 ಗಂಟೆಗೆ Amazon, Samsung ನ ಅಧಿಕೃತ ವೆಬ್‌ಸೈಟ್ ಮತ್ತು ಚಿಲ್ಲರೆ ಚಾನೆಲ್‌ಗಳ ಮೂಲಕ ಮಾರಾಟವಾಗಲಿದೆ.

Best Mobiles in India

English summary
Samsung Galaxy M53 5G price in India starts at Rs. 23,999 for the 6GB + 128GB storage model, while the 8GB + 128GB variant is priced at Rs. 25,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X