ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್ ಫೋನ್ ಶೀಘ್ರವೇ ಲಾಂಚ್: ಇಲ್ಲಿವೇ ಸಂಪೂರ್ಣ ಮಾಹಿತಿ

Written By: Lekhaka

ಆಗಸ್ಟ್ 28ಕ್ಕೆ ಲಾಂಚ್ ಆಗಲಿದೆ ಎನ್ನಲಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್ ಫೋನ್ ಕುರಿತ ಹಲವು ಮಾಹಿತಿಗಳು ಲೀಕ್ ಆಗಿದೆ. ಕೆಲ ಚಿತ್ರಗಳು ಕೂಡ ಲೀಕ್ ಆಗಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್ ಫೋನ್ ಶೀಘ್ರವೇ ಲಾಂಚ್

ಇದೊಂದು ಫ್ಯಾಬ್ಲೆಟ್ ಎನ್ನಲಾಗಿದ್ದು, ಒಟ್ಟು 8 ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ದೊರೆಯಲಿದೆ. ಮಿಡ್ ನೈಟ್ ಬ್ಲಾಕ್, ಸಿಲ್ವರ್, ಗ್ರೇ, ಬ್ಲೂ, ಡಾರ್ಕ್ ಬ್ಲೂ, ಸೀ ಬ್ಲೂ, ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.

ಈ 8 ಬಣ್ಣದಲ್ಲಿ ದೊರೆಯಲಿರುವ ಸ್ಮಾರ್ಟ್ ಫೋನ್ ನ ಮುಂಭಾಗ ಬ್ಲಾಕ್ ಬಣ್ಣದಲ್ಲಿರಲಿದೆ ಎನ್ನಲಾಗಿದೆ. ಇನ್ನು ಈ ಫೋನಿನೊಂದಿಗೆ S ಪೆನ್ ದೊರೆಯಲಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್ ಫೋನ್ ನೊಂದಿಗೆ ಟ್ರಾನ್ಪರೆಂಟ್ ಕೇಸ್ ದೊರೆಯಲಿದ್ದು, ಅದು ಉಚಿತವಾಗಿ ಎನ್ನಲಾಗಿದೆ. ಇದರ ಬೆಲೆಯೂ ರೂ. 1,100 ರಿಂದ 1,600 ಆಗಲಿದೆಯಂತೆ.

ಜಿಯೋದಿಂದ ಮತ್ತೊಂದು ದಾಖಲೆ: ಮೈಲಿಗಲ್ಲು ನಿರ್ಮಿಸಿದ 'ಮೈಜಿಯೋ ಆಪ್'

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್ ಫೋನಿನಲ್ಲಿ 6.3 ಇಂಚಿನ QHD ಡಿಸ್ ಪ್ಲೇ ಯನ್ನು ಕಾಣಬಹುದಾಗಿದೆ. ಇದರಲ್ಲಿ ಏಕ್ಸನೋಸ್ 8895 ಇಲ್ಲವೇ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಅನ್ನು ನೀಡಲಾಗಿದೆ.

ಈ ಫೋನಿನ ಹಿಂಭಾಗದಲ್ಲಿ 12 MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಒಂದು ವೈಡ್ ಆಂಗಲ್ ಲೆನ್ಸ್ ಆಗಿದ್ದು ಮತ್ತೊಂದು ಟೆಲಿ ಲೆನ್ಸ್ ಆಗಿದೆ. ಈ ಫೋನಿನಲ್ಲಿ 6GB RAM ಅನ್ನು ಕಾಣಬಹುದಾಗಿದೆ. 64 GB ಇಂಟರ್ನಲ್ ಮೆಮೊರಿ ಇದ್ದು, ಇದನ್ನು 256 GB ವರೆಗೂ ವಿಸ್ತರಿಸಿಕೊಳ್ಳಬಹುದು.

ಅಲ್ಲದೇ 3300 mAh ಬ್ಯಾಟರಿಯೂ ಇದರಲ್ಲಿದೆ, ವೈರ್ ಲೈಸ್ ಚಾರ್ಜರ್ ಸಹ ನೀಡಲಾಗಿದೆ, ಅಲ್ಲದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿ ನೀಡಲಾಗಿದೆ.

English summary
Samsung Galaxy Note 8 will come in eight color variants, suggests a newly leaked image that has been spotted online.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot