ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಆಗಸ್ಟ್ ನಲ್ಲಿ ಲಾಂಚ್

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಆಗಸ್ಟ್ ನಲ್ಲಿ ಬಿಡುಗಡೆಗೊಳಿಸಿ ಸೆಪ್ಟೆಂಬರ್ ನಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರ ಕೈ ಸೇರುವಂತೆ ಮಾಡಲಾಗುವುದು ಎಂದು ಸ್ಯಾಮ್ಸಂಗ್ ಸಿಇಒ ಡಿಜೆ ಕೊಹ್ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

By Prathap T
|

ಸ್ಯಾಮ್ಸಂಗ್ ತನ್ನ ಪ್ರಮುಖ ಫ್ಯಾಬ್ಲೆಟ್ ಅನಾವರಣಗೊಳಿಸಲಿದೆ ಎಂಬ ಮಾತು ಚಾಲ್ತಿಯಲ್ಲಿತ್ತು. ಇದೀಗ ಆ ಮಾತು ಧೃಡಪಟ್ಟಿದ್ದು, ತನ್ನ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಫ್ಯಾಬ್ಲೆಟ್ ಅನ್ನು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲು ಸಜ್ಜುಗೊಂಡಿದೆ. ಸೆಪ್ಟೆಂಬರ್ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಸ್ಯಾಮ್ಸಂಗ್ ಸಿಇಒ ಡಿಜೆ ಕೊಹ್ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಆಗಸ್ಟ್ ನಲ್ಲಿ ಲಾಂಚ್

ವಾರಂತ್ಯದಲ್ಲಿ ತೈವಾನಿನಲ್ಲಿ ದಿ ಇನ್ವೆಸ್ಟರ್ ನಡೆಸಿದ ಸಂದರ್ಶನದ ವರದಿ ಪ್ರಕಾರ, ಆಗಸ್ಟ್ ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಬಿಡುಗಡೆಗೆ ಸಿದ್ಧತೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಎರಡು ಹಂತದಲ್ಲಿ ಮಾರುಕಟ್ಟೆಗೆ ನೀಡಲು ಸನ್ನದ್ಧಗೊಳ್ಳುತ್ತಿದೆ. ಸೆಪ್ಟೆಂಬರ್ ನಲ್ಲಿ ಕೋರಿಯನ್, ಯುಎಸ್ ಹಾಗೂ ಯುಕೆ ರಾಷ್ಟ್ರಗಳಲ್ಲಿ ಮಾರುಕಟ್ಟೆಗೆ ನೀಡಿ, ಅಕ್ಟೋಬರ್ನಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ಮಾರಾಟಕ್ಕೆ ಅನುವು ಮಾಡಲು ನಿರ್ಧರಿಸಿದೆ.

ಸದ್ಯದ ವರದಿ ಪ್ರಕಾರ, ಮೊದಲ ಹಂತದಲ್ಲೇ 9 ಮಿಲಿಯನ್ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಮಾರಾಟ ಮಾಡುವ ಗುರಿ ಹೊಂದಿದೆ ಎನ್ನಲಾಗಿದೆ. ಆಗಸ್ಟ್ 23ರಂದು ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಬಿಡುಗಡೆಯಾಗುವ ಸುಳಿವು ದೊರೆತಿದ್ದು, ಆದರೆ ಅಧಿಕೃತಗೊಂಡಿಲ್ಲ.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ವಿಶ್ವದ ಕೆಲವೆಡೆ ಬ್ಯಾಟರಿ ಸ್ಫೋಟಗೊಂಡ ಹಿನ್ನಲೆಯಲ್ಲಿ ಬಿಡುಗಡೆಯಾದ ಕೆಲ ದಿನಗಳಲ್ಲೇ ಹಿಂಪಡೆದುಕೊಂಡಿದ್ದ ಸ್ಯಾಮ್ಸಂಗ್ ಇದೀಗ ಅದಕ್ಕೆ ಪ್ರತಿಯಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಹೊರತರುವ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಲು ಮುಂದಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಬಗ್ಗೆ ಹೆಚ್ಚಿನ ನಿರೀಕ್ಷೆಯೇ ಇದೆ. ಹಿಂದಿನ ನೋಟ್ 7 ನಂತೆ ಸಮಸ್ಯೆ ತಂದೊಡ್ಡುವುದಿಲ್ಲ ಎಂಬ ಭರವಸೆ ಮೂಡಿದೆ. ಸದ್ಯ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಹಲವು ವೈಶಿಷ್ಠತೆಗಳನ್ನು ಹೊಂದಿದೆ ಎನ್ನಲಾಗಿದೆ. 6.3 ಇಂಚಿನ ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ 18.5:9ರ ಅನುಪಾತದೊಂದಿಗೆ ಸ್ನಾಪ್ಡ್ರಾಗನ್ 836 ಎಸ್ಒಸಿ 64GB/128GB ಸಂಗ್ರಹ ಸಾಮರ್ಥ್ಯ ಹೊಂದಿದೆ ಎಂದ ಹೇಳಲಾಗುತ್ತಿದೆ.

ಇದು ಡ್ಯುಯಲ್ ಲೆನ್ಸ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿರುವ ಮೊದಲ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಎಂದು ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಲ್ಲದೆ, ಹಿಂಬದಿಯಲ್ಲಿ ಫಿಂಗರ್ಪ್ರಿಂಟ್ ಸಂವೇದಕ ಮತ್ತು ಬೋರ್ಡ್ನಲ್ಲಿ 3.5ಮಿಮೀ ಆಡಿಯೊ ಜ್ಯಾಕ್ ಒಳಗೊಂಡಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.

Best Mobiles in India

English summary
Samsung Galaxy Note 8 is confirmed to arrive in August and release in two phases starting from September.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X