Subscribe to Gizbot

ಆಂಡ್ರಾಯ್ಡ್ ಒರಿಯೋ ಆಪ್ ಡೇಟ್ ಸ್ವೀಕರಿಸಲಿದೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8

Posted By: Precilla Dias

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಿದ್ದ ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಒರಿಯೋ ಆಪ್ ಡೇಟ್ ಅನ್ನು ಪಡೆದುಕೊಳ್ಳಲು ಶುರು ಮಾಡಿದೆ. ಭಾರತದ ಬಳಕೆದಾರರು ಒರಿಯೋ ಆಪ್ ಡೇಟ್ ಸ್ವೀಕರಿಸುತ್ತಿದ್ದಾರೆ. ಇದರೊಂದಿಗೆ ಆಂಡ್ರಾಯ್ಡ್ ಸೆಕ್ಯೂರಿಟಿ ಪ್ಯಾಚ್ ವಾಲ್ ಅನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಆಂಡ್ರಾಯ್ಡ್ ಒರಿಯೋ ಆಪ್ ಡೇಟ್ ಸ್ವೀಕರಿಸಲಿದೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಮತ್ತು ಗ್ಯಾಲೆಕ್ಸಿ S8+ ಸ್ಮಾರ್ಟ್ ಫೋನ್ ಗಳು ಒರಿಯೋ ಆಪ್ ಡೇಟ್ ಸ್ವೀಕರಿಸಲು ಶುರು ಮಾಡಿದ್ದು, ಇನ್ನು 2 ರಿಂದ 3 ವಾರಗಳಲ್ಲಿ ಎಲ್ಲಾ ಬಳಕೆದಾರರು ಆಪ್ ಡೇಟ್ ಸ್ವೀಕರಿಸಲಿದ್ದಾರೆ. ನೀವು ಸಹ ಇದೇ ಸ್ಮಾರ್ಟ್ ಫೋನ್ ಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ದು, ಇನ್ನು ಆಪ್ ಡೇಟ್ ಸ್ವೀಕರಿಸಿಲ್ಲವೇ? ಹಾಗಿದ್ದರೇ ಹೀಗೆ ಮಾಡಿ.

ನಿಮ್ಮ ಸ್ಮಾರ್ಟ್ ಫೋನ್ ಸೆಟ್ಟಿಂಗ್ಸ್ ನಲ್ಲಿ ಅಬೋಟ್ ಫೋನ್ ಆಯ್ಕೆಯಲ್ಲಿ ಸಿಸ್ಟಮ್ ಆಪ್ ಡೇಟ್ ಗೆ ಹೋಗಿ ಪರೀಕ್ಷಿಸಿ ನೋಡಿ. ಯಾವುದಾರು ಹೊಸ ಆಪ್ ಡೇಟ್ ಇದ್ದರೇ ಅಲ್ಲಿ ತೋರಿಸಲಿದೆ. ಹೊಸ ಓಎಸ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳುವ ಮುಂಚೆ ನಿಮ್ಮ ಡೇಟಾವನ್ನು ಬ್ಯಾಕ್ ಆಪ್ ಮಾಡಿಕೊಳ್ಳಿ.

ಈ ಹೊಸ ಆಪ್ ಡೇಟ್ ಸೈಜ್ ಒಟ್ಟು 1.47GBಯಷ್ಟು ದೊಡ್ಡದಾಗಿದೆ ಎನ್ನಲಾಗಿದೆ. ಈ ಆಪ್ ಡೇಟ್ ಅನ್ನು ಸ್ವೀಕರಿಸಲು ನಿಮ್ಮ ಸ್ಮಾರ್ಟ್ ಫೋನಿನಲ್ಲಿ 50% ಗಿಂತಲೂ ಹೆಚ್ಚು ಬ್ಯಾಟರಿ ಇರುವುದನ್ನು ಖಚಿತ ಪಡಿಸಿಕೊಳ್ಳಿ. ಅಲ್ಲದೇ ಮೊಬೈಲ್ ಡೇಟಾದಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ಬದಲು ವೇಗ ವೈಫೈ ಡೇಟಾ ಮೂಲಕ ಡೌನ್ ಲೋಡ್ ಮಾಡಿಕೊಳ್ಳುವುದು ಉತ್ತಮವಾದ ಆಯ್ಕೆಯಾಗಿದೆ.

ಬೇರೆಯವರಿಗೆ ತಿಳಿಯದಂತೆ ವಾಟ್ಸ್‌ಆಪ್ ಮೇಸೆಜ್ ಓದುವುದು ಹೇಗೆ..!

ಈ ಹೊಸ ಆಪ್ ಡೇಟ್ ನಲ್ಲಿ ಬಳಕೆದಾರರಿಗೆ ಹೊಸ ಮಾದರಿಯ ಬಳಕೆಗೆ ಆಯ್ಕೆಗಳು ದೊರೆಯಲಿದೆ ಎನ್ನಲಾಗಿದ್ದು, ಸಂಪೂರ್ಣವಾಗಿ ನಿಮ್ಮ ಸ್ಮಾರ್ಟ್ ಫೋನ್ ಬದಲಾಗಲಿದೆ ಎನ್ನಲಾಗಿದೆ. ಹೊಸ ಸ್ಮಾರ್ಟ್ ಫೋನ್ ಮಾದರಿಯಲ್ಲಿ ನಿಮ್ಮ ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದೆ.

English summary
Samsung has started rolling out the Android 8.0 Oreo update to Galaxy Note 8 users in India. All Samsung Galaxy Note 8 devices are expected to get the Oreo update within the coming 2-3 weeks. Carrying the firmware version N950FXXU3CRC1, the update also includes the Android security patch for March. The update has a size of about 1.47GB.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot