ಅಗಸ್ಟ್ 24 ರಿಂದ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಮಾರಾಟ ಆರಂಭ

By GizBot Bureau
|

ಸ್ಯಾಮ್ ಸಂಗ್ ನ ಮತ್ತೊಂದು ಫೋನ್ ಬಿಡುಗಡೆಗೆ ಸಜ್ಜಾಗುತ್ತಿದೆ. ಅದುವೇ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9,. ಸ್ಯಾಮ್ ಸಂಗ್ ನ ಮುಂಬರುವ ಫ್ಯಾಬ್ಲೆಟ್ ನ ಆವೃತ್ತಿ ಇದಾಗಿದ್ದು , ಮಾಹಿತಿಯ ಪ್ರಕಾರ ಅಗಸ್ಟ್ 24 ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.

ಎಲ್ಲರಿಗೂ ತಿಳಿದಿರುವಂತೆ ಅಗಸ್ಟ್ 9 ರಂದು ನಡೆಯುವ ಗ್ಯಾಲಕ್ಸಿ ಅನ್ ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಸ್ಯಾಮ್ ಸಂಗ್ ನ ಬಹುನಿರೀಕ್ಷಿತ ಫ್ಲ್ಯಾಗ್ ಶಿಪ್ ನ್ನು ಬಿಡುಗಡೆಗೊಳಿಸುವ ಬಗ್ಗೆ ತಯಾರಿ ನಡೆದಿದೆ ಮತ್ತು ಈಗಾಗಲೇ ಅಂತರ್ಜಾಲದಲ್ಲಿ ಸಾಕಷ್ಟು ಗಾಸಿಪ್ ಗಳಿಗೆ ಕಾರಣವಾಗಿರುವ ಕೆಲವು ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳ ಬಗ್ಗೆ ಸಂಪೂರ್ಣ ಚಿತ್ರಣ ಸಿಗುವ ಸಾಧ್ಯತೆ ಇದೆ.

ಅಗಸ್ಟ್ 24 ರಿಂದ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಮಾರಾಟ ಆರಂಭ


ಕಳೆದ ವರ್ಷ ಬಿಡುಗಡೆಗೊಂಡಿರುವ ಗ್ಯಾಲಕ್ಸಿ ನೋಟ್ 8 ನ ಮುಂದುವರಿದ ಆವೃತ್ತಿಯಾಗಿರುವ ಗ್ಯಾಲಕ್ಸಿ ನೋಟ್ 9 ನ್ನು ಸೌತ್ ಕೊರಿಯನ್ ಮೂಲದ ತಂತ್ರಜ್ಞಾನ ಸಂಸ್ಥೆ ಸ್ಯಾಮ್ ಸಂಗ್ ಬಿಡುಗಡೆಗೊಳಿಸಲು ಸನ್ನದ್ಧವಾಗಿದೆ. ಆದರೆ ಹಾರ್ಡೇವೇರ್ ನಲ್ಲಿ ಯಾವುದಾದರೂ ಪ್ರಮುಖ ಬದಲಾವಣೆಗಳು ಇದರಲ್ಲಿ ಇರಲಿದೆಯಾ ಎಂಬ ಬಗ್ಗೆ ಸರಿಯಾದ ಮಾಹಿತಿ ದೊರೆತಿಲ್ಲ.

. ಆಪಲ್ ಐಫೋನ್ ಬಿಡುಗಡೆಗೂ ಮುನ್ನ ಸ್ಯಾಮ್ ಸಂಗ್ ಫೋನ್ ಬಿಡುಗಡೆ

ಸೌತ್ ಕೊರಿಯನ್ ಪಬ್ಲಿಕೇಷನ್ ಇಟಿನ್ಯೂಸ್ ನೀಡಿರುವ ವರದಿಯ ಅನ್ವಯ ಸ್ಯಾಮ್ ಸಂಗ್ ನ ಎಸ್-ಪೆನ್ ಹೊಂದಿರುವ ನೂತನ ಆಂಡ್ರಾಯ್ಡ್ ಚಾಲಿತ ಫ್ಯಾಬ್ಲೆಟ್ ಅಂದುಕೊಂಡಿದ್ದಕ್ಕಿಂತ ಮುನ್ನವೇ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಅಗಸ್ಟ್ 24 ಕ್ಕೆ ದಿನಾಂಕವನ್ನು ನಿಗದಿಸಲಾಗಿದೆ. ಕಳೆದ ವರ್ಷ ಅಗಸ್ಟ್ 23 ಕ್ಕೆ ಗ್ಯಾಲಕ್ಸಿ ನೋಟ್ 8 ನ್ನು ಬಿಡುಗಡೆಗೊಳಿಸಲಾಗಿತ್ತು ಮತ್ತು ಸೆಪ್ಟೆಂಬರ್ 15 ರಿಂದ ಮಾರಾಟ ಪ್ರಾರಂಭಿಸಲಾಗಿತ್ತು. ಆದರೆ ಈ ವರ್ಷದ ಆವೃತ್ತಿಯನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಬೇಗನೆ ಆರಂಭಿಸಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಆಪಲ್ ಐಫೋನ್ ಬಿಡುಗಡೆಗೊಳ್ಳುವ ಮುನ್ನ ಸ್ಯಾಮ್ ಸಂಗ್ ಸಂಸ್ಥೆ ತನ್ನ ಫೋನನ್ನು ಬಿಡುಗಡೆಗೊಳಿಸಲು ಯತ್ನಿಸುತ್ತಿದೆಯಂತೆ. ಜೊತೆಗೆ ಸ್ಯಾಮ್ ಸಂಗ್ ನ ಹಿಂದಿನ ಸರಣಿಯ ನಿಧಾನಗತಿಯ ಕಾರ್ಯಕ್ಷಮತೆಯೂ ಕೂಡ ಸ್ಯಾಮ್ ಸಂಗ್ ಗೆ ಹೊಡೆತ ನೀಡುತ್ತಿರುವ ಹಿನ್ನೆಲೆಯಲ್ಲಿ ಅಪ್ ಡೇಟ್ ವರ್ಷನ್ ಬಿಡುಗಡೆಗೆ ಸ್ಯಾಮ್ ಸಂಗ್ ಉತ್ಸುಕವಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಲವು ತಿಂಗಳುಗಳಿಂದ ಗೆಜೆಟ್ ಮಾರುಕಟ್ಟೆಯಲ್ಲಿ ಗ್ಯಾಲಕ್ಸಿ ನೋಟ್ 9 ಬಗ್ಗೆ ಚರ್ಚೆಗಳು, ಟಾಕ್ ಗಳು ನಡೆಯುತ್ತಲೇ ಇದ್ದವು. ಈ ಚರ್ಚೆಯ ಅನುಸಾರವೇ ಹೇಳುವುದಾದರೆ ಇದರಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಅಥವಾ ಸ್ಯಾಮ್ ಸಂಗ್ Exynos 9810 ಸಾಕೆಟ್ ಇರಲಿದೆ. 6.4-ಇಂಚಿನ QHD+ ಸೂಪರ್AMOLED ಇನ್ಫಿನಿಟಿ ಡಿಸ್ಪ್ಲೆಯನ್ನು 18.5:9 ಅನುಪಾತದಲ್ಲಿ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

8ವರೆಗಿನ ಮೆಮೊರಿ ಮತ್ತು 512ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಇರುವ ಬಗ್ಗೆ ಗಾಸಿಪ್ ಇದೆ. ಕೆಲವು ವರದಿಗಳ ಅನುಸಾರ ಇದರಲ್ಲಿ ಒಂದು ಹೆಚ್ಚಿನ ಬಟನ್ ಇರುವ ನಿರೀಕ್ಷೆ ಇದ್ದು ಇದು ಕ್ಯಾಮರಾ ಆಫ್ ಮಾಡಲು ನೆರವು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳಲು ಇನ್ನು ಕೆಲವು ದಿನಗಳು ಬಾಕಿ ಇದೆ. ಅಲ್ಲಿವರೆಗೂ ಕಾದು ನೋಡೋಣ ಅಲ್ಲವೇ?

Most Read Articles
Best Mobiles in India

English summary
Samsung Galaxy Note 9 Sales Said to Begin From August 24. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X