2020ರ ಆರಂಭದಲ್ಲಿಯೇ ಲಾಂಚ್ ಆಗಲಿವೆ ಈ ಸ್ಮಾರ್ಟ್‌ಫೋನ್‌ಗಳು!

|

2019 ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರಸಕ್ತ ವರ್ಷವು ಸ್ಮಾರ್ಟ್‌ಫೋನ್‌ಗಳ ವಲಯದಲ್ಲಿ ಸಾಕಷ್ಟು ಹೊಸತನ ನೀಡಿದ್ದು, ಹಲವು ಅತ್ಯತ್ತಮ ಫೋನ್‌ಗಳು ಪರಿಚಿತವಾಗಿವೆ. ಇನ್ನು ಬರಲಿರುವ ಹೊಸ ವರ್ಷ 2020ರಲ್ಲಿಯೂ ಸಹ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ ಎನ್ನುವ ಮೂನ್ಸೂಚನೆಯನ್ನು ಈಗಾಗಲೇ ಮೊಬೈಲ್ ಕಂಪನಿಗಳು ಬಿಟ್ಟುಕೊಟ್ಟಿವೆ. 2020ರಲ್ಲಿ ಲಾಂಚ್ ಆಗುವ ಫೋನ್‌ಗಳ ಬಗ್ಗೆ ಗ್ರಾಹಕರಲ್ಲಿ ನಿರೀಕ್ಷೆಗಳು ದುಪ್ಪಟ್ಟಾಗಿದೆ.

 2020ರ ಹೊಸ ವರ್ಷವು

ಹೌದು, 2020ರ ಹೊಸ ವರ್ಷವು ಹಲವು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಹೊತ್ತು ಬರಲಿದೆ. ಸ್ಯಾಮ್‌ಸಂಗ್, ಶಿಯೋಮಿ, ಒನ್‌ಪ್ಲಸ್‌, ಐಫೋನ್‌ಗಳ ಬಗ್ಗೆ ಗ್ರಾಹಕರು ಭಾರಿ ನಿರೀಕ್ಷೆಗಳನ್ನು ಹೊಂದಿದ್ದಾರೆ. ಹೊಸ ಫೋನ್‌ಗಳು ಅತ್ಯುತ್ತಮ ಪ್ರೊಸೆಸರ್, ಹೈ ಎಂಡ್ ಕ್ಯಾಮೆರಾ, ಬಿಗ್ ಬ್ಯಾಟರಿ, ಹೊಸ ಡಿಸೈನ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿರಲಿವೆ ಎನ್ನುವ ಸೂಚನೆಗಳು ಬಹಿರಂಗವಾಗಿವೆ. ಹಾಗಾದರೇ 2020ರ ಆರಂಭದಲ್ಲಿ ಬಿಡುಗಡೆ ಆಗುವ ಟಾಪ್‌ ಫೋನ್‌ಗಳು ಯಾವುವು ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ಮಿ ನೋಟ್ 10

ಮಿ ನೋಟ್ 10

ಶಿಯೋಮಿಯ ಬಹುನಿರೀಕ್ಷಿತ ಮಿ ನೋಟ್ 10 ಸ್ಮಾರ್ಟ್‌ಫೋನ್ 108ಎಂಪಿ ಸೆನ್ಸಾರ್ ಕ್ಯಾಮೆರಾ ಹೊಂದಿರಲಿದೆ ಎನ್ನುವುದು ಮೇನ್ ಅಟ್ರ್ಯಾಕ್ಷನ್‌ ಆಗಿದೆ. ಉಳಿದಂತೆ 20ಎಂಪಿಯ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 12ಎಂಪಿ ಹಾಗೂ 5ಎಂಪಿಯ ಟೆಲಿಫೋಟೊ ಲೆನ್ಸ್‌ ಇರಲಿವೆ. ಜೊತೆಗೆ 10x ಹೈಬ್ರಿಡ್‌ ಜೂಮ್ ಸಪೋರ್ಟ್‌ ಪಡೆದಿದೆ. 6GB RAM ಮತ್ತು 128GB ಸ್ಟೋರೇಜ್ ಜೊತೆ 5,260mAh ಬ್ಯಾಟರಿ ಇರಲಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A51

ಸ್ಯಾಮ್‌ಸಂಗ್ ಗ್ಯಾಲಕ್ಸಿ A51

ಗ್ಯಾಲಕ್ಸಿ A51 ಸ್ಮಾರ್ಟ್‌ಫೋನ್ 6.5 ಇಂಚಿನ ಪೂರ್ಣ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಹೊಂದಿರಲಿದ್ದು, 6GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದಲ್ಲಿರಲಿದೆ. ಹಾಗೆಯೇ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಇರಲಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿರಲಿದೆ ಹಾಗೂ 32ಎಂಪಿ ಸೆಲ್ಫಿ ಕ್ಯಾಮೆರಾ ಸಹ ಇರಲಿದೆ. ಇನ್ನು 4,000mAh ಬ್ಯಾಟರಿ ಬಲವನ್ನು ಪಡೆದಿರಲಿದೆ.

ರೆಡ್ಮಿ ಕೆ30

ರೆಡ್ಮಿ ಕೆ30

ಈಗಾಗಲೇ ಚೀನಾದಲ್ಲಿ ಲಾಂಚ್ ಆಗಿರುವ ಈ ಫೋನ್ 2020ರಲ್ಲಿ ಭಾರತಕ್ಕೆ ಎಂಟ್ರಿ ಕೊಡಲಿದೆ. ಇನ್ನು ಈ ಫೋನ್ 6.67 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ. ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್‌ ಹೊಂದಿದೆ. ಹಾಗೆಯೇ ಕ್ವಾಡ್‌ ಕ್ಯಾಮೆರಾ ರಚನೆ ಇದ್ದು, ಅವುಗಳು 64ಎಂಪಿ+ 8ಎಂಪಿ+ 2ಎಂಪಿ+ 2ಎಂಪಿ ಸೆನ್ಸಾರ್ ಪಡೆದಿವೆ. 4,500mAh ಬ್ಯಾಟರಿ ಬಲವನ್ನು ಸಹ ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A71

ಸ್ಯಾಮ್‌ಸಂಗ್ ಗ್ಯಾಲಕ್ಸಿ A71

ಸ್ಯಾಮ್‌ಸಂಗ್ ಗ್ಯಾಲಕ್ಸಿ A71 ಸ್ಮಾರ್ಟ್‌ಫೋನ್ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಆಂಡ್ರಾಯ್ಡ್‌ 9 ಪೈ ಓಎಸ್‌ ಪಡೆದಿರಲಿದೆ. ಹಾಗೆಯೇ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಇರಲಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿರಲಿದೆ ಹಾಗೂ 32ಎಂಪಿ ಸೆಲ್ಫಿ ಕ್ಯಾಮೆರಾ ಸಹ ಇರಲಿದೆ. ಇನ್ನು 25W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಜೊತೆಗೆ 4,500mAh ಬ್ಯಾಟರಿ ಬಲವನ್ನು ಪಡೆದಿರಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S10 ಲೈಟ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S10 ಲೈಟ್

ಗ್ಯಾಲಕ್ಸಿ ಎಸ್‌10 ಸರಣಿ ಈಗಾಗಾಲೇ ಟ್ರೆಂಡ್‌ ಹುಟ್ಟುಹಾಕಿದ್ದು, ಅದೇ ಸರಣಿಯಲ್ಲಿ ಇದೀಘ ಗ್ಯಾಲಕ್ಸಿ ಎಸ್‌10 ಲೈಟ್‌ ಫೋನ್ ಬಿಡುಗಡೆಗೆ ಸಿದ್ದವಾಗಿದೆ. ಈ ಫೋನ್ 6.7 ಇಂಚಿನ ಫುರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಹೊಂದಿರಲಿದ್ದು, 8GB RAM ಮತ್ತು 128GB ಸ್ಟೋರೇಜ್ ಆಯ್ಕೆ ಇರಲಿದೆ. ಹಿಂಬದಿ ತ್ರಿವಳಿ ಕ್ಯಾಮೆರಾ ರಚನೆ ಇರಲಿದ್ದು, 4,500mAh ಬ್ಯಾಟರಿ ಲೈಫ್ ಪಡೆದಿರಲಿದೆ.

ರಿಯಲ್‌ ಮಿ ಎಕ್ಸ್‌50

ರಿಯಲ್‌ ಮಿ ಎಕ್ಸ್‌50

ಬಹುಬೇಗನೆ ದೇಶಿಯ ಮಾರುಕಟ್ಟೆಯಲ್ಲಿ ಸ್ಥಾನ ಕಂಡುಕೊಂಡ ರಿಯಲ್‌ ಮಿ ಇದೀಗ ರಿಯಲ್‌ ಮಿ ಎಕ್ಸ್‌50 ಫೋನ್ ಬಿಡುಗಡೆಗೆ ಸಜ್ಜಾಗಿದೆ. 2020 ಜನವರಿಗೆ ಈ ಫೋನ್ ಬಿಡುಗಡೆ ಆಗುವ ಸಾಧ್ಯತೆಗಳು ಇವೆ. ಇನ್ನು 6.55 ಇಂಚಿನ ಡಿಸ್‌ಪ್ಲೇ ಇರಲಿದ್ದು, ಸ್ನ್ಯಾಪ್‌ಡ್ರಾಗನ್ 765G ಪ್ರೊಸೆಸರ್ ಒಳಗೊಂಡಿರಲಿದೆ. ಫಾಸ್ಟ್‌ ಚಾರ್ಜಿಂಗ್ ಬೆಂಬಲಿತ 4,500mAh ಬ್ಯಾಟರಿ ಲೈಫ್ ಇರಲಿದೆ.

Best Mobiles in India

English summary
New year, new beginning. With 2019 done and dusted, OEMs will be starting afresh in their bid to conquer the smartphone world. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X