ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಮೊಬೈಲ್ ಹಿಂಭಾಗದಲ್ಲಿರಲಿದೆ ಮೂರು ಕ್ಯಾಮರಾಗಳು

By GizBot Bureau
|

ಈಗೆಲ್ಲ ಹೆಚ್ಚಿನವರು ಮೊಬೈಲ್ ನ ಕ್ಯಾಮರಾ ಹೇಗಿದೆ ಎಂದು ನೋಡಿಯೇ ಮೊಬೈಲ್ ಖರೀದಿಸುತ್ತಾರೆ. ಮೊಬೈಲ್ ನಲ್ಲಿ ಕ್ಯಾಮರಾ ಅಧ್ಬುತವಾಗಿದ್ದರೆ, ಅದಕ್ಕೆ ಬೇಡಿಕೆಯೂ ಹೆಚ್ಚಿರುವ ಕಾಲ ಇದು. ಆ ನಿಟ್ಟಿನಲ್ಲಿ ಸ್ಯಾಮ್ ಸಂಗ್ ಫೋನುಗಳು ಹೊಸ ಮೈಲಿಗಟ್ಟು ಬರೆಯಲು ಸಿದ್ಧಗೊಂಡಿವೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9 ಮತ್ತು ಗ್ಯಾಲಕ್ಸಿ ಎಸ್ 9 ಪ್ಲಬ್ ಬಿಡುಗಡೆಗೊಂಡು ಈಗಾಗಲೇ ಮೂರು ತಿಂಗಳು ಕಳೆಯುತ್ತಾ ಬಂದಿದೆ.ಈಗ ಅವುಗಳ ನಂತರ ಮತ್ತೊಂದು ಫೋನಿನ ಬಗ್ಗೆ ನಾವು ಕಾಯುವ ಸಮಯ ಬಂದಾಯ್ತು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಮೊಬೈಲ್ ಹಿಂಭಾಗದಲ್ಲಿರಲಿದೆ ಮೂರು ಕ್ಯಾಮರಾಗಳು

ಹೌದು ಅದುವೇ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಅಥವಾ ಗ್ಯಾಲಕ್ಸಿ X... ಈಗಾಗಲೇ ಗಾಸಿಪ್ ಸುದ್ದಿಯೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, 2019 ರ ಆರಂಭದಲ್ಲಿ ಈ ಫೋನ್ ಮಾರುಕಟ್ಟೆಗೆ ಬರಲಿದ್ಯಂತೆ.. ಈಗಾಗಲೇ ಹಲವು ಗಾಸಿಪ್ ಗಳು ಈ ಫೋನಿನ ಬಗ್ಗೆ ಅಂತರ್ಜಾಲದಲ್ಲಿ ನಡೆಯುತ್ತಿದೆ. ಅದರಲ್ಲಿ ಪ್ರಮುಖವಾದ ಮತ್ತು ಇತ್ತೀಚೆಗಿನ ಗಾಸಿಪ್ ಏನೆಂದರೆ ಗ್ಯಾಲಕ್ಸಿ ಎಸ್ 10 ನಲ್ಲಿ ಮೂರು ಹಿಂಭಾಗದ ಕ್ಯಾಮರಾಗಳಿರಲಿವೆಯಂತೆ. ಅದು ಹುವಾಯಿ ಪಿ20 ಪ್ರೋ ನಲ್ಲಿ ಇರುವಂತೆಯೇ ಇದೆ ಎಂದು ಹೇಳಲಾಗುತ್ತಿದೆ.

ಕೆಬಿ ಸೆಕ್ಯುರಿಯ ಅನಲಿಸ್ಟ್ ಆಗಿರುವ ಕಿಂಗ್ ಕಾಂಗ್ ವಾನ್ ಹೇಳುವಂತೆ, ಗ್ಯಾಲಕ್ಸಿ ಎಸ್ 9 ನಿರೀಕ್ಷಿತ ಯಶಸ್ಸು ಗಳಿಸದ ಹಿನ್ನೆಲೆಯಲ್ಲಿ ಮುಂದಿನ ವರ್ಷನ್ ನಲ್ಲಿ ಸ್ಯಾಮ್ ಸಂಗ್ ಅಂದರೆ ಗ್ಯಾಲಕ್ಸಿ ಎಸ್ 10 ನಲ್ಲಿ ಟ್ರಿಬಲ್ ಕ್ಯಾಮರಾ ಸೆಟ್ ಅಪ್ ಇರಲಿದೆ ಮತ್ತು 3ಡಿ ಸೆನ್ಸರ್ ನ್ನೂ ಕೂಡ ಒಳಗೊಂಡಿದ್ದು, ಅದು ಫೋನಿನ ಮುಂಭಾಗದಲ್ಲಿದ್ದು, ಫೇಸ್ ಅನ್ ಲಾಕ್ ಸಿಸ್ಟಮ್ ನ್ನು ಇನ್ನಷ್ಟು ಸೂಕ್ಷ್ಮವಾಗಿ ಗ್ರಹಿಸುವ ತಾಕತ್ತನ್ನು ಇದು ಹೊಂದಿರಲಿದೆಯಂತೆ.. ಟ್ರಿಪಲ್ ಕ್ಯಾಪರಾ ಸೆಟ್ ಅಪ್ ಕೇವಲ ಕ್ಲಿಯರ್ ಆಗಿರುವ ಮತ್ತು ಕ್ಲೀನ್ ಆಗಿರುವ ಚಿತ್ರಗಳನ್ನು ತೆಗೆಯಲು ಮಾತ್ರವಲ್ಲದೆ ಸ್ಮಾರ್ಟ್ ಫೋನಿನ AR ಟೆಕ್ನಾಲಜಿಗಳಿಗೂ ಅಸಿಸ್ಟ್ ಮಾಡುವಂತೆ ಇರುತ್ತದೆಯಂತೆ.

ಗ್ಯಾಲಕ್ಸಿ ಎಸ್ 9 ರ ಬೇಸರದ ಪ್ರದರ್ಶನದ ನಂತರ , ತಮ್ಮ ಸ್ಮಾರ್ಟ್ ಫೋನ್ ಬ್ಯುಸಿನೆಸ್ ನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೊರಿಯನ್ ಎಲೆಕ್ಟ್ರಾನಿಕ್ ಸಂಸ್ಥೆ ಸ್ಯಾಮ್ ಸಂಗ್ ಗೆ ಹೆಚ್ಚು ವೈಶಿಷ್ಟ್ಯಗಳು ಸೇರಿಕೊಳ್ಳುತ್ತಿದೆ ಎಂಬ ಅಭಿಪ್ರಾಯವನ್ನು ಮೊಬೈಲ್ ಹೂಡಿಕೆದಾರರೊಬ್ಬರು ವ್ಯಕ್ತಪಡಿಸಿದ್ದಾರೆ.

ಇದನ್ನು ಹೊರತು ಪಡಿಸಿ, ಸ್ಯಾಮ್ ಸಂಗ್, ಫಿಂಗರ್ ಪ್ರಿಂಟ್ ಡಿಸ್ಪ್ಲೇಯನ್ನು ಮುಂದಿನ ಡಿವೈಸ್ ನಲ್ಲಿ ಅಳವಡಿಸುವ ಸಾಧ್ಯತೆ ಇದೆ. ತಮ್ಮದೇ ಸ್ವಂತ ಇನ್ ಬಿಲ್ಟ್ ಫ್ರಿಂಗರ್ ಪ್ರಿಂಟ್ ಟೆಕ್ನಾಲಜಿಯನ್ನು ಅಲ್ಟ್ರಾಸಾನಿಕ್ ಸೆನ್ಸರ್ ಗಳ ಮುಖಾಂತರ ತಮ್ಮ ಡಿವೈಸ್ ನಲ್ಲಿ ಅಳವಡಿಸಲು ಸ್ಯಾಮ್ ಸಂಗ್ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ವಿಚಾರದಲ್ಲಿ ಸ್ಯಾಮ್ ಸಂಗ್ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಿತ್ತು ಹಾಗಾಗಿ ತಮ್ಮದೇ ಸ್ವಂತ ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಅದು ಗ್ಯಾಲಕ್ಸಿ 10 ರಲ್ಲಿ ಅಳವಡಿಕೆಯಾಗಿರುವ ನಿರೀಕ್ಷೆ ಇದೆ.

How to Send Message to Multiple Contacts on WhatsApp - GIZBOT KANNADA

ಕೊರಿಯನ್ ಮಾಧ್ಯಮಗಳ ಮಾಹಿತಿಯ ಪ್ರಕಾರ ಸ್ಮಾರ್ಟ್ ಫೋನ್ ನಲ್ಲಿ ತ್ರಿಪಲ್ ಕ್ಯಾಮರಾ ಅಳವಡಿಕೆಗೆ ಪ್ರಯತ್ನಿಸುತ್ತಿರುವ ಸಂಸ್ಥೆಗಳಲ್ಲಿ ಸ್ಯಾಮ್ ಸಂಗ್ ಸಂಸ್ಥೆ ಮಾತ್ರವಲ್ಲ, ಮತ್ತೊಂದು ಕಂಪೆನಿಯೂ ತನ್ನ ಫೋನ್ ಗಳಲ್ಲಿ ತ್ರಿಪಲ್ ಕ್ಯಾಮರಾ ಅಳವಡಿಕೆಗೆ ಶ್ರಮಿಸುತ್ತಿದೆ. ಅದುವೇ ಆಪಲ್ ಸಂಸ್ಥೆ. ಐಫೋನ್ ಎಕ್ಸ್ ಪ್ಲಸ್ ನಲ್ಲಿ ಇಂತಹದ್ದೇ ವೈಶಿಷ್ಟ್ಯವನ್ನು ಕ್ಯೂಪರ್ಟೀನೋ ಮೂಲದ ಸಂಸ್ಥೆ ಆಪಲ್ ಅಳವಡಿಸಿರುವ ನಿರೀಕ್ಷೆಯನ್ನು ಹೊಂದಲಾಗಿದೆ,

ಈ ಶಾಕಿಂಗ್ ಫೇಸ್‌ಬುಕ್ 'ರಹಸ್ಯಗಳ' ಬಗ್ಗೆ ಖಂಡಿತ ನೀವು ತಿಳಿದಿಲ್ಲ.!!ಈ ಶಾಕಿಂಗ್ ಫೇಸ್‌ಬುಕ್ 'ರಹಸ್ಯಗಳ' ಬಗ್ಗೆ ಖಂಡಿತ ನೀವು ತಿಳಿದಿಲ್ಲ.!!

ತ್ರಿಪಲ್ ಕ್ಯಾಮರಾ ಅಳವಡಿಕೆಯ ಮೂಲಕ ಕಂಪೆನಿಯು ಸ್ಮಾರ್ಟ್ ಫೋನ್ ಬ್ಯೂಸಿನೆಸ್ ನಿಂದ ತಮ್ಮ ಜೇಬಿಗೆ ಹೆಚ್ಚಿನ ಲಾಭ ಗಳಿಸುವ ನಿರೀಕ್ಷೆಯನ್ನು ಹೊಂದಿದೆಯಂತೆ. ಆದ್ರೆ ಬಳಕೆದಾರ ಪ್ರಭು ಯಾವ ರೀತಿ ಇದಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾನೆ ಎಂಬುದನ್ನು ಕಾದುನೋಡಬೇಕಿದೆ.

Best Mobiles in India

Read more about:
English summary
samsung Galaxy S10 may come with three rear cameras

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X