ಸ್ಯಾಮ್‌ಸಂಗ್‌ ಗ್ಯಾಲಕ್ಸಿ 21 ಸರಣಿಯ ಸ್ಮಾರ್ಟ್‌ಫೋನ್‌ ಲಾಂಚ್‌!..ಬೆಲೆ ಎಷ್ಟು?

|

ಬಹುನಿರೀಕ್ಷಿತ ಸ್ಯಾಮ್‌ಸಂಗ್‌ ಗ್ಯಾಲಕ್ಸಿ s21 ಸರಣಿ ಸ್ಮಾರ್ಟ್‌ಫೋನ್‌‌ ಅಧಿಕೃತವಾಗಿ ಬಿಡುಗಡೆ ಆಗಿದೆ. ಸದ್ಯ ಸ್ಯಾಮ್‌ಸಂಗ್‌ ಹೊಸ ಪ್ರಮುಖ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಅಂತಿಮವಾಗಿ ತನ್ನ ಗ್ಯಾಲಕ್ಸಿ ಅನ್ಪ್ಯಾಕ್ಡ್ 2021 ಈವೆಂಟ್‌ನಲ್ಲಿ ಬಿಡುಗಡೆ ಮಾಡಿದೆ. ಕಳೆದ ವರ್ಷ ಬಿಡುಗಡೆಯಾದ ಗ್ಯಾಲಕ್ಸಿ s20 ಸರಣಿಯಂತೆಯೇ ಹೊಸ ಸರಣಿಯು ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಮೂರು ವಿಭಿನ್ನ ಮಾದರಿಗಳನ್ನು ತರುವ ಕಂಪನಿಯ ಸಂಪ್ರದಾಯವನ್ನು ಮುಂದುವರೆಸಿದೆ. ಇನ್ನು ಈ ಸರಣಿಯಲ್ಲಿ ಗ್ಯಾಲಕ್ಸಿ s21 ಜೊತೆಗೆ ಗ್ಯಾಲಕ್ಸಿ s21 + ಮತ್ತು ಗ್ಯಾಲಕ್ಸಿ s21 ಅಲ್ಟ್ರಾವನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌

ಹೌದು, ದಕ್ಷಿಣ ಕೋರಿಯಾದ ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್‌ ಸಂಸ್ಥೆ ತನ್ನ ಗ್ಯಾಲಕ್ಸಿ s21 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಎಲ್ಲಾ ಮೂರು ಮಾದರಿಗಳು ಹೊಂದಾಣಿಕೆಯ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿವೆ. ಇನ್ನು ಸರಣಿಯಲ್ಲಿನ ಗ್ಯಾಲಕ್ಸಿ ಎಸ್ 21 ಮತ್ತು ಗ್ಯಾಲಕ್ಸಿ ಎಸ್ 21 + ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. ಆದರೆ ಗ್ಯಾಲಕ್ಸಿ ಎಸ್ 21 ಅಲ್ಟ್ರಾ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಹಾಗಾದ್ರೆ ಗ್ಯಾಲಕ್ಸಿ s21 ಮತ್ತು s21+ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ವಿಶೇಷತೆ ಹೊಂದಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 ಡಿಸ್‌ಪ್ಲೇ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 ಡಿಸ್‌ಪ್ಲೇ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.2-ಇಂಚಿನ ಫ್ಲಾಟ್ ಫುಲ್-ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 20: 9 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ 421 ಪಿಪಿ ಪಿಕ್ಸೆಲ್ ಸಾಂದ್ರತೆಯೊಂದಿಗೆ ಡೈನಾಮಿಕ್ ಅಮೋಲೆಡ್ 2X ಇನ್ಫಿನಿಟಿ-ಒ ಡಿಸ್ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ HDR10 + ಪ್ರಮಾಣೀಕರಣ, ಸ್ಯಾಮ್‌ಸಂಗ್‌ನ ಐ ಕಂಫರ್ಟ್ ಶೀಲ್ಡ್ ಮತ್ತು ಅಡಾಪ್ಟಿವ್ 120Hz ರಿಫ್ರೆಶ್ ರೇಟ್‌ ಅನ್ನು ಸಹ ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದು ಆಕ್ಟಾ-ಕೋರ್ ಎಕ್ಸಿನೋಸ್ 2100 SoC ಪ್ರೊಸೆಸರ್‌ ಅನ್ನು ಹೊಂದಿದ್ದು,ಆಂಡ್ರಾಯ್ಡ್ 11 ನಲ್ಲಿ ಒನ್ ಯುಐ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೆ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ s21 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 120 ಡಿಗ್ರಿಗಳಷ್ಟು ಫೀಲ್ಡ್-ಆಫ್-ವ್ಯೂ ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಪ್ರಾಥಮಿಕ ಡ್ಯುಯಲ್ ಪಿಕ್ಸೆಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ ಹೈಬ್ರಿಡ್ ಆಪ್ಟಿಕ್ 3 ಎಕ್ಸ್ ಜೂಮ್ ಮತ್ತು 76 ಡಿಗ್ರಿಗಳಷ್ಟು ಎಫ್‌ಒವಿ ಹೊಂದಿರುವ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ ಅನ್ನು ಸಹ ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 ನಲ್ಲಿ ನವೀಕರಿಸಿದ ಕ್ಯಾಮೆರಾ ಅಪ್ಲಿಕೇಶನ್ ಅನ್ನು ಒದಗಿಸಿದ್ದು ಅದು 8ಕೆ ಸ್ನ್ಯಾಪ್, ಡೈರೆಕ್ಟರ್ಸ್ ವ್ಯೂ, ಸೂಪರ್ ಸ್ಟೆಡಿ ವಿಡಿಯೋ, ಮತ್ತು ಸಿಂಗಲ್ ಟೇಕ್ ಸೇರಿದಂತೆ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇದು 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು USB PD 3.0 ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಅಲ್ಲದೆ 10W ನಲ್ಲಿ ಫಾಸ್ಟ್ ವೈರ್‌ಲೆಸ್ ಚಾರ್ಜಿಂಗ್ 2.0 ಹಾಗೂ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G , 4G LTE, ವೈ-ಫೈ, ಬ್ಲೂಟೂತ್, GPS, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 + ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 + ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 + ಸ್ಮಾರ್ಟ್‌ಫೋನ್‌ 6.7-ಇಂಚಿನ ಫ್ಲಾಟ್ ಫುಲ್-ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಹೆಚ್‌ಡಿಆರ್ 10 + ಬೆಂಬಲ ಮತ್ತು 120 Hz ಅಡಾಪ್ಟಿವ್ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇನ್ನು ಗ್ಯಾಲಕ್ಸಿ ಎಸ್ 21 + ಎಕ್ಸಿನೋಸ್ 2100SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 8GB RAM+128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 12 ಮೆಗಾಪಿಕ್ಸೆಲ್ ಡ್ಯುಯಲ್ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 64 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್‌ ಹೊಂದಿದೆ. ಜೊತೆಗೆ 10 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ ಕೂಡ ಇದೆ. ಈ ಸ್ಮಾರ್ಟ್‌ಫೋನ್‌ 4,800 ಎಮ್‌ಎಹೆಚ್ ಬ್ಯಾಟರಿಯನ್ನು ಒದಗಿಸಿದೆ, ಇದು ಗ್ಯಾಲಕ್ಸಿ ಎಸ್ 21 ರಂತೆ ವೇಗದ ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಬೆಲೆ ಬೇಸ್ 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ 69,999 ರೂ., 256GB ಸ್ಟೋರೇಜ್ ಆಯ್ಕೆಯ ಬೆಲೆಯು ರೂ. 73,999 ರೂ. ಆಗಿದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 + ಸ್ಮಾರ್ಟ್‌ಫೋನ್‌ ಬೇಸ್ 8GB RAM + 128 GB ಸ್ಟೋರೇಜ್ ಆಯ್ಕೆಗೆ 81,999 ರೂ. ಹಾಗೂ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ ರೂ. 85,999. ರೂ ಆಗಿದೆ. ಇನ್ನು ಇದೇ ಜನವರಿ 29 ರಿಂದ ಸ್ಯಾಮ್‌ಸಂಗ್.ಕಾಮ್, ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಇತರ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Samsung Galaxy S21 series finally been launched by the South Korean giant at its Galaxy Unpacked 2021 event.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X