ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಲಾಂಚ್‌! 200 MP ಕ್ಯಾಮೆರಾ ವಿಶೇಷ!

|

ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ಯಾಲಕ್ಸಿ S23 ಸರಣಿಯನ್ನು ಪರಿಚಯಿಸಿದೆ. ಈ ಸರಣಿಯ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ ಸಾಕಷ್ಟು ವಿಶೇಷತೆಗಳಿಂದ ಗಮನಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಸ್ಟೈಲಸ್‌ ಪೆನ್‌ ಅನ್ನು ಬೆಂಬಲಿಸಲಿದ್ದು, ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವುದು ಮೇನ್‌ ಹೈಲೈಟ್‌ ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಲಾಂಚ್‌! 200 MP ಕ್ಯಾಮೆರಾ ವಿಶೇಷ!

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಫೋನ್‌ ತನ್ನ ಕ್ಯಾಮೆರಾ ಸೆಟ್‌ಅಪ್‌ ಹಾಗೂ ಡಿಸೈನ್‌ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಸ್ಮಾರ್ಟ್‌ಫೋನ್‌ ಪ್ರಿಯರ ನಿರೀಕ್ಷೆಗೆ ತಕ್ಕಂತ ಫೀಚರ್ಸ್‌ಗಳನ್ನು ಹೊತ್ತು ತಂದಿದ್ದು, ಸಿಕ್ಕಾಪಟ್ಟೆ ಟ್ರೆಂಡ್‌ ಕ್ರಿಯೆಟ್‌ ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಈ ಫೋನ್‌ನ ಫೀಚರ್ಸ್‌ ಹೇಗಿದೆ? ಯಾಕೆ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಡಿಸ್‌ಪ್ಲೇ ಡಿಸೈನ್‌ ಹೇಗಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ ಎಡ್ಜ್ QHD+ ಡೈನಾಮಿಕ್ ಅಮೋಲೆಡ್‌ 2X ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಡೈನಾಮಿಕ್ ರಿಫ್ರೆಶ್ ರೇಟ್ 1-120Hz ಬೆಂಬಲಿಸಲಿದೆ. ಅಲ್ಲದೆ ಗೇಮ್ ಮೋಡ್‌ನಲ್ಲಿ 240Hz ಟಚ್ ಸ್ಯಾಂಪ್ಲಿಂಗ್ ರೇಟಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್‌ ಹಾಗೂ ವಿಷನ್ ಬೂಸ್ಟರ್ ಅನ್ನು ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಲಾಂಚ್‌! 200 MP ಕ್ಯಾಮೆರಾ ವಿಶೇಷ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಪ್ರೊಸೆಸರ್‌ ಕಾರ್ಯವೈಖರಿ ಹೇಗಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ನ ಕಸ್ಟಮ್ ಆವೃತ್ತಿಯನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 One UI 5.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಬೆಂಬಲಿಸುವ ಬಗ್ಗೆ ಮಾಹಿತಿಯಿಲ್ಲ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಕ್ಯಾಮೆರಾ ಸೆಟ್‌ಅಪ್‌ ಯಾವುದು?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದ್ದು, 85 ಡಿಗ್ರಿ ಫೀಲ್ಡ್ ಆಫ್ ವ್ಯೂ ಅನ್ನು ನೀಡಲಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ , ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಹಾಗೂ ನಾಲ್ಕನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದರೊಂದಿಗೆ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಲಾಂಚ್‌! 200 MP ಕ್ಯಾಮೆರಾ ವಿಶೇಷ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಬ್ಯಾಟರಿ ಮತ್ತು ಇತರೆ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W ವೈರ್ಡ್ ಚಾರ್ಜಿಂಗ್ ಮತ್ತು ಫಾಸ್ಟ್ ವಾಯರ್‌ಲೆಸ್ ಚಾರ್ಜಿಂಗ್ 2.0 ಅನ್ನು ಬೆಂಬಲಿಸುತ್ತದೆ. ಇದರಿಂದ ಸ್ಮಾರ್ಟ್‌ಫೋನ್‌ ಅನ್ನು ಕೇವಲ 20 ನಿಮಿಷಗಳಲ್ಲಿ 65% ಚಾರ್ಜಿಂಗ್‌ ಮಾಡಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.3 ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಸ್ಯಾಮ್‌ಸಂಗ್ ಎಸ್ ಪೆನ್ ಸ್ಟೈಲಸ್ ಅನ್ನು ಸಹ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಬೆಲೆ ಮತ್ತು ಲಭ್ಯತೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ ಬೇಸ್ ಮಾಡೆಲ್‌ 8GB + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ $1199 (ಅಂದಾಜು 98,300ರೂ)ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಫ್ಯಾಂಟಮ್ ಬ್ಲಾಕ್, ಕ್ರೀಮ್, ಗ್ರೀನ್ ಮತ್ತು ಲ್ಯಾವೆಂಡರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇದೇ ಫೆಬ್ರವರಿ 17 ರಿಂದ ಸೇಲ್‌ ಆಗಲಿದೆ. ಇದು ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಅನ್ನೊದು ಇದೇ ಫೆಬ್ರವರಿ 2 ರಂದು ಬಹಿರಂಗವಾಗಲಿದೆ.

Best Mobiles in India

English summary
Samsung Galaxy S23 Ultra comes with a premium quad rear camera setup, led by a 200-megapixel primary wide camera with an f/1.8 lens and an 85-degree field of view. know more details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X