Subscribe to Gizbot

ಭಾರತದಲ್ಲಿ ಲಾಂಚ್ ಆಗಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S8 ನ ಬರ್ಗ್ಯಾಂಡಿ ರೆಡ್ ಆವೃತ್ತಿ

Posted By: Tejaswini P G

ಸ್ಯಾಮ್ಸಂಗ್ ತನ್ನ 2017 ರ ಫ್ಲ್ಯಾಗ್ಶಿಪ್ ಮೊಬೈಲ್ ಆದ ಗ್ಯಾಲಕ್ಸಿ S8 ನ ಹೊಸ ಬಣ್ಣದ ಆವೃತ್ತಿಯೊಂದನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿ ಬರ್ಗ್ಯಾಂಡಿ ರೆಡ್ ಬಣ್ಣದ್ದಾಗಿದ್ದು ಇದು ಎಲ್ಲಾ ರಿಟೈಲ್ ಮಳಿಗೆಗಳಲ್ಲಿ ದೊರೆಯಲಿದೆ. ಗ್ಯಾಲಕ್ಸಿ S8 ಭಾರತದಲ್ಲಿ ರೂ 57,990 ಕ್ಕೆ ಲಾಂಚ್ ಆಗಿತ್ತಾದರೂ, ಇತ್ತೀಚಿನ ದರ ಕಡಿತದಿಂದಾಗಿ ರೂ 49,990 ಕ್ಕೆ ಖರೀದಿಸಬಹುದಾಗಿದೆ.

ಭಾರತದಲ್ಲಿ ಲಾಂಚ್ ಆಗಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S8 ನ ಬರ್ಗ್ಯಾಂಡಿ ರೆಡ್ ಆವೃತ್ತ

"ಲಾಂಚ್ ಆಗಿ 1 ವರ್ಷ ಕಳೆದರೂ ಗ್ಯಾಲಕ್ಸಿ S8 ಈಗಲೂ ಬೆಸ್ಟ್ ಸೆಲ್ಲರ್ ಎನಿಸಿದೆ. ಗ್ಯಾಲಕ್ಸಿ S8 ನ ಈ ಸೀಮಿತ ಬರ್ಗ್ಯಾಂಡಿ ರೆಡ್ ಆವೃತ್ತಿ ಗ್ರಾಹಕರನ್ನು ಇತರರಿಂದ ವಿಭಿನ್ನವಾಗಿಸುತ್ತದೆ. ಗ್ಯಾಲಕ್ಸಿ S8 ನ ಬರ್ಗ್ಯಾಂಡಿ ರೆಡ್ ಆವೃತ್ತಿ ಜನರ ಮನಸೆಳೆಯುವಲ್ಲಿ ಯಶಸ್ವಿಯಾಗುವುದು ಖಂಡಿತ. ಈ ಮೂಲಕ ಅವರು ತಮ್ಮದೇ ಸ್ವಂತ ಸ್ಟೈಲ್ ಅನ್ನು ಅಭಿವ್ಯಕ್ತಿಪಡಿಸಬಹುದು." ಎಂದು ಸ್ಯಾಮ್ಸಂಗ್ ಇಂಡಿಯಾದ ಜನರಲ್ ಮ್ಯಾನೇಜರ್ ಆಗಿರುವ ಆದಿತ್ಯ ಬಬ್ಬರ್ ಅವರು ಲಾಂಚ್ ಸಂದರ್ಭದಲ್ಲಿ ಹೇಳಿದರು.

ಈ ಹೊಸ ಆವೃತ್ತಿಯ ಲಾಂಚ್ ನೊಂದಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ S8 ಈಗ ಭಾರತದಲ್ಲಿ ಮಿಡ್ನೈಟ್ ಬ್ಲ್ಯಾಕ್, ಮೇಪಲ್ ಗೋಲ್ಡ್, ಆರ್ಕಿಡ್ ಗ್ರೇ ಮತ್ತು ಬರ್ಗ್ಯಾಂಡಿ ರೆಡ್ ಬಣ್ಣಗಳಲ್ಲಿ ಲಭ್ಯವಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ S8 ನ ಸ್ಪೆಸಿಫಿಕೇಶನ್ ಕುರಿತು ಹೇಳುವುದಾದರೆ ಇದರಲ್ಲಿದೆ 5.8 ಇಂಚ್ ಸೂಪರ್ AMOLED ಡಿಸ್ಪ್ಲೇ 1440X2960 ಪಿಕ್ಸೆಲ್ಗಳ QHD+ ರೆಸೊಲ್ಯೂಶನ್ ನೊಂದಿಗೆ. ಒಕ್ಟಾಕೋರ್ ಎಕ್ಸಿನೋಸ್ 8895 ಪ್ರಾಸೆಸರ್ ಹೊಂದಿರುವ ಗ್ಯಾಲಕ್ಸಿ S8 ಜೊತೆಗೆ 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಮೈಕ್ರೋSD ಕಾರ್ಡ್ ಬಳಸಿ ಇದರ ಸ್ಟೋರೇಜ್ ಸಾಮರ್ಥ್ಯ ವನ್ನು 256GB ಯಷ್ಟು ವಿಸ್ತರಿಸಬಹುದಾಗಿದೆ.

ಇದರ ಕ್ಯಾಮೆರಾ ಕುರಿತು ಹೇಳುವುದಾದರೆ ಇದರಲ್ಲಿದೆ ಡ್ಯುಯಲ್ ಪಿಕ್ಸೆಲ್ 12MP AF ಕ್ಯಾಮೆರಾ OIS, f/1.7 ಅಪರ್ಚರ್,8X ನಷ್ಟು ಮ್ಯಾಕ್ಸ್ ಝೂಮ್ , ಪ್ರೋ ಮೋಡ್, ಪನೋರಮಾ, ಸ್ಲೋ ಮೋಶನ್ , ಹೈಪರ್ ಲ್ಯಾಪ್ಸ್, ಫುಡ್ ಮೋಡ್ ಮೊದಲಾದ ಮೋಡ್ಗಳು ಮತ್ತು ಫೋಟೋಗಳನ್ನು ರಾ ಫೈಲ್ಗಳನ್ನಾಗಿ ಸೇವ್ ಮಾಡುವ ಆಯ್ಕೆ ಜೊತೆಗೆ. ಇನ್ನು ಫೋನ್ ನ ಮುಂಭಾಗದಲ್ಲಿ 8MP ಸೆಲ್ಫೀ ಕ್ಯಾಮೆರಾ ಇದ್ದು, f/1.7 ಅಪರ್ಚರ್ ಮತ್ತು ವೈಡ್ ಆಂಗಲ್ ಲೆನ್ಸ್ ಹೊಂದಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಗ್ಯಾಲಕ್ಸಿ S8 3000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು,ಇದು ಫಾಸ್ಟ್ ಚಾರ್ಜಿಂಗ್ ಮತ್ತು ವೈರ್ಲೆಸ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಈ ಮೊಬೈಲ್ ಅನ್ನು ಆಂಡ್ರಾಯ್ಡ್ ನುಗಾಟ್ ಓಎಸ್ ನೊಂದಿಗೆ ಲಾಂಚ್ ಮಾಡಲಾಗಿತ್ತಾದರೂ ಈಗ ಇದು ಆಂಡ್ರಾಯ್ಡ್ ಓರಿಯೋ ಓಎಸ್ ಪಡೆದಿದೆ.

ಅಮೆಜಾನ್‌ನಲ್ಲಿ ಮೊಟೊ ಹಬ್ಬ: ಮೊಟೊ ಸ್ಮಾರ್ಟ್‌ಫೋನ್‌ ಖರೀದಿಗೆ ಸುಸಮಯ..!

ಅಷ್ಟೇ ಅಲ್ಲದೆ 4G LTE(ಕ್ಯಾಟ್ 16), ವೈಫೈ 802.11 ac(2.4GHz,5GHz) ಬ್ಲೂಟೂತ್ v5.0, USB ಟೈಪ್-C, NFC, ಜಿಪಿಎಸ್ ಮೊದಲಾದ ಕನೆಕ್ಟಿವಿಟ್ ಫೀಚರ್ಗಳು ಈ ಫ್ಲ್ಯಾಗ್ಶಿಪ್ ಮೊಬೈಲ್ನಲ್ಲಿದೆ. ಇದರೊಂದಿಗೆ ಸ್ಯಾಮ್ಸಂಗ್ ಪೇ, ಬಿಕ್ಸ್ಬೀ ವರ್ಚ್ಯುವಲ್ ಅಸಿಸ್ಟೆಂಟ್ ಮೊದಲಾದ ಆಯ್ಕೆಗಳೂ ಇದರಲ್ಲಿದೆ.

English summary
Samsung has launched a Burgundy Red color variant of its 2017 flagship Galaxy S8, which will be available across all retail channels. While the Galaxy S8 was launched in India at Rs. 57, 990, the smartphone can be purchased at Rs. 49,990 thanks to the recent price cut.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot