Subscribe to Gizbot

ಸ್ಯಾಮ್ ಸಂಗ್ ನಿಂದ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಲಾಂಚ್ ಶೀಘ್ರವೇ..!

Written By: Lekhaka

ತೀವ್ರ ಕುತೂಹಲವನ್ನು ಕೆರಳಿಸಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಸ್ಮಾರ್ಟ್ ಫೋನ್ ಕುರಿತಂತೆ ಮಾಹಿತಿಯೊಂದು ಲಭ್ಯವಾಗಿದ್ದು, ಆಂಡ್ರಾಯ್ಡ್ ಟಾಪ್ ಎಂಡ್ ಫೋನ್ ಎನ್ನಿಸಿಕೊಳ್ಳುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಸ್ಯಾಮ್ ಸಂಗ್ ಗ್ಯಾಲೆಕ್ಸಿ S9+ ಸ್ಮಾರ್ಟ್ ಫೋನ್ ಮುಂದಿನ ತಿಂಗಳು ನಡೆಯಲಿರುವ ವರ್ಲ್ಡ್ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾರುಕಟ್ಟೆಗೆ ಪರಿಚಯವಾಗಲಿದೆ ಎನ್ನಲಾಗಿದೆ.

ಸ್ಯಾಮ್ ಸಂಗ್ ನಿಂದ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಲಾಂಚ್ ಶೀಘ್ರವೇ..!

ದಕ್ಷಿಣ ಕೋರಿಯಾ ಮೂಲದ ಸ್ಯಾಮ್ ಸಂಗ್ ಕಂಪನಿಯೂ ಈಗಾಗಲೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಸ್ಮಾರ್ಟ್ ಫೋನ್ ಗ್ಯಾಲೆಕ್ಸಿ S9 + ಲಾಂಚ್ ಮಾಡಲು ಭರದ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 + ಸ್ಮಾರ್ಟ್ ಫೋನ್ ಕೊಳ್ಳಲು ಈಗಾಗಲೇ ಅಭಿಮಾನಿಗಳು ತುದಿಗಾಲಿನಲ್ಲಿ ನಿಂದಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ:

ವಿನ್ಯಾಸ:

ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಸ್ಯಾಮ್ ಸಂಗ್ ಗ್ಯಾಲೆಕ್ಸಿ S9+ ಸ್ಮಾರ್ಟ್ ಫೋನಿನಲ್ಲಿ ಇನ್ಪಿನಿಟಿ ಡಿಸ್ ಪ್ಲೇ, ಬ್ರೆಜಿಲ್ ಲೈಸ್ ವಿನ್ಯಾಸ ಮತ್ತು ಡ್ಯಯಲ್ ಕ್ಯಾಮೆರಾ ಸೇರಿದಂತೆ ಎಲ್ಲಾ ಮಾದರಿಯ ವಿಶೇಷತೆಯನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್ ಪೋನ್ ಕುರಿತಂತೆ ಸಾಕಷ್ಟು ರೂಮರ್ ಕೇಳಿ ಬಂದಿದೆ.

ವಿಶೇಷತೆಗಳು:

ವಿಶೇಷತೆಗಳು:

ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಸ್ಯಾಮ್ ಸಂಗ್ ಗ್ಯಾಲೆಕ್ಸಿ S9+ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕಾಣಬಹುದಾಗಿದೆ. ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 ಇಲ್ಲವೇ ಎಕ್ಸ್ ನೋಸ್ 9810 ಪ್ರೋಸೆಸರ್ ಅನ್ನು ನೋಡಬಹುದಾಗಿದೆ. ಆಂಡ್ರಾಯ್ಡ್ 8.0ನಲ್ಲಿ ಕಾರ್ಯನಿರ್ವಹಿಸಲಿದೆ.

ಶೀಘ್ರವೇ ಮಾರುಕಟ್ಟೆಗೆ ಬರುತ್ತಿದೆ ''ಒನ್‌ಪ್ಲಸ್ 6''!!..ಮೊಬೈಲ್ ಪ್ರಪಂಚ ಆಳಲು ಇಷ್ಟು ಫೀಚರ್‌ಗಳು ಸಾಕೆ?

How to create two accounts in one Telegram app (KANNADA)
ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಇದಲ್ಲದೇ ಈ ಸ್ಮಾರ್ಟ್ ಫೋನ್ ನಲ್ಲಿ 6GB RAM ಮತ್ತು 512GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಸಹ ನೋಡಬಹುದಾಗಿದೆ. ಇದರೊಂದಿಗೆ ಇನ್ನು ಹಲವು ಹೊಸ ವಿಶೇಷತೆಗಳನ್ನು ನೋಡುವ ಸಾಧ್ಯತೆ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung's Mobile Communications Business President DJ Koh addressing a press conference at CES 2018 revealed that the first flagship smartphone of 2018 will be unveiled at MWC.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot