CES 2018 ರಲ್ಲಿ ಅನಾವರಣಗೊಳ್ಳಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S9 ಮತ್ತು LG G7

By Tejaswini P G
|

ಇನ್ನೇನು ಈ ವರ್ಷ ಮುಗಿಯುತ್ತಾ ಬರುತ್ತಿದ್ದಂತೆ ಮುಂದಿನ ವರ್ಷ ಬಿಡುಗಡೆಯಾಗಲಿರುವ ನೂತನ ಫ್ಲ್ಯಾಗ್ಶಿಪ್ ಮೊಬೈಲ್ಗಳ ಕುರಿತು ಹಲವು ಮಾಹಿತಿಗಳು ಸೋರಿಕೆಯಾಗುತ್ತಿದ್ದು ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಡುತ್ತಿದೆ.

CES 2018 ರಲ್ಲಿ ಅನಾವರಣಗೊಳ್ಳಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S9 ಮತ್ತು LG G7


ಸ್ಯಾಮ್ಸಂಗ್ ಈಗಾಗಲೇ ಗ್ಯಾಲಕ್ಸಿ S9 ಮತ್ತು ಗ್ಯಾಲಕ್ಸಿ S9+ ನ ಮೇಲೆ ಕೆಲಸಮಾಡುತ್ತಿರುವುದು ತಿಳಿದೇ ಇದೆ. ಹಾಗೆಯೇ LG ಕೂಡ ಕಳೆದ ವರ್ಷ ಬಿಡುಗಡೆಯಾಗಿದ್ದ G6 ನ ಉತ್ತರಾಧಿಕಾರಿಯಾದ G7 ನ ತಯಾರಿಯಲ್ಲಿ ತೊಡಗಿದೆ. ಕಳೆದ ವರ್ಷಗಳ ಮಾದರಿಯನ್ನು ಗಮನಿಸಿದರೆ ಸ್ಯಾಮ್ಸಂಗ್ ಮತ್ತು LG ಕಂಪೆನಿಗಳೆರಡೂ ಸಾಮಾನ್ಯವಾಗಿ ತಮ್ಮ ಫ್ಲ್ಯಾಗ್ಶಿಪ್ ಮೊಬೈಲ್ಗಳನ್ನು ಮೊದಲ ಕ್ವಾರ್ಟರ್ ನ ಕೊನೆಯಲ್ಲಿ ಅಥವಾ ಎರಡನೇ ಕ್ವಾರ್ಟರ್ ನ ಆರಂಭದಲ್ಲಿ ಲಾಂಚ್ ಮಾಡುತ್ತದೆ.

ಆದರೆ ಈ ವರ್ಷ ಎರಡೂ ಸಂಸ್ಥೆಗಳು ತಮ್ಮ ಮುಂದಿನ ಫ್ಲ್ಯಾಗ್ಶಿಪ್ ಮೊಬೈಲ್ಗಳನ್ನು ತಮ್ಮ ಎಂದಿನ ವೇಳಾಪಟ್ಟಿಗಿಂತ ಮುಂಚಿತವಾಗಿಯೇ ಬಿಡುಗಡೆಮಾಡಲು ಮುಂದಾದಂತೆ ತೋರುತ್ತಿದೆ.

ಉದ್ಯಮದ ಮೂಲಗಳ ಆಧಾರದ ಮೇಲೆ ಬಂದಿರುವ BusinessKorea ದ ವರದಿಯೊಂದರ ಅನುಸಾರ ಸ್ಯಾಮ್ಸಂಗ್ ಮತ್ತು LGಗಳೆರಡೂ ತಮ್ಮ ಗ್ಯಾಲಕ್ಸಿ S9, ಗ್ಯಾಲಕ್ಸಿ S9+ ಮತ್ತು G7 ಗಳನ್ನು ಮುಂದಿನ ವರ್ಷದ ಜನವರಿಯಲ್ಲೇ ಲಾಂಚ್ ಮಾಡಿ ಮಾರಾಟವನ್ನೂ ಪ್ರಾರಂಭಿಸಲಿದೆ.

ಇಲ್ಲಿಯವರೆಗೆ ಸ್ಯಾಮ್ಸಂಗ್ ತಮ್ಮ ಫ್ಲ್ಯಾಗ್ಶಿಪ್ ಮೊಬೈಲ್ಗಳ ಅನಾವರಣಕ್ಕೆಂದೇ US ಮತ್ತು UK ಗಳಲ್ಲಿ ಸಮಾರಂಭಗಳನ್ನು ಆಯೋಜಿಸಿತ್ತು. ಆದರೆ ಈಗ ಬರುತ್ತಿರುವ ವರದಿಗಳ ಅನುಸಾರ ಗ್ಯಾಲಕ್ಸಿ S9 ಸರಣಿಯು ಜನವರಿಯಲ್ಲಿ ಲಾಸ್ ವೇಗಸ್ ನಲ್ಲಿ ನಡೆಯಲಿರುವ CES 2018 ಟೆಕ್ ಸಮಾರಂಭದಲ್ಲಿ ಅನಾವರಣಗೊಳ್ಳಲಿದೆ. ಹಾಗೆಯೇ LG ಕೂಡ ತನ್ನ G7 ನ ಲಾಂಚ್ ಅನ್ನು ಫೆಬ್ರವರಿವರಿಯ ಬದಲಿಗೆ ಜನವರಿಯಲ್ಲೆಯೇ ನಡೆಸಲಿದೆ.

ಕರ್ನಾಟಕದಲ್ಲಿ 4G VoLET ಸೇವೆ ಆರಂಭಿಸಿದ ಏರ್‌ಟೆಲ್: ಆರಂಭಿಕ ಕೊಡುಗೆ ..?ಕರ್ನಾಟಕದಲ್ಲಿ 4G VoLET ಸೇವೆ ಆರಂಭಿಸಿದ ಏರ್‌ಟೆಲ್: ಆರಂಭಿಕ ಕೊಡುಗೆ ..?

ಈ ಮೊದಲು ಕೇಳಿಬಂದಿರುವ ಮಾಹಿತಿಗಳ ಅನುಸಾರ ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ S9 ಸರಣಿಯಲ್ಲಿ ವಿನ್ಯಾಸದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತರಲಿದೆ. ಗ್ಯಾಲಕ್ಸಿ S9 18.5:9 ಅನುಪಾತದ ಇನ್ಫೈನೈಟ್ ಡಿಸ್ಪ್ಲೇ ಹೊಂದಿರಲಿದ್ದು, ಗ್ಯಾಲಕ್ಸಿ S8 ಡ್ಯುಯೋ ನಂತೆ QHD+ ರೆಸೊಲ್ಯೂಶನ್ ಹೊಂದಿರಲಿದೆ.

ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 845 SoC ಹೊಂದಿರುವ ಗ್ಯಾಲಕ್ಸಿ S9 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯ ಹೊಂದಿರಲಿದೆ. ಗ್ಯಾಲಕ್ಸಿ S9 ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದ್ದು ಆಂಟಿ-ಗ್ಲೇರ್ BBAR ಲೇಯರ್ ಘೋಸ್ಟ್ ತಂತ್ರಜ್ಷಾನದೊಂದಿಗೆ ಬರಲಿದೆ. ಈ ಮೊದಲು ಊಹಿಸಿದಂತೆ ಅಂಡರ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಬದಲಿಗೆ ರೇರ್ ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರಲಿದೆ.

ಇನ್ನು LG G7 ಕುರಿತು ಹೇಳುವುದಾದರೆ ಇದರಲ್ಲಿರಲಿದೆ ಅದರದ್ದೇ ಸ್ವಂತ ಕೃತಕಬುದ್ಧಿಮತ್ತೆ ಆಧಾರಿತ ಡಿಜಿಟಲ್ ಅಸಿಸ್ಟೆಂಟ್. LG G7 ನ ಇತರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ವರ್ಷ ಬಿಡುಗಡೆಯಾದ G6 ಸ್ನ್ಯಾಪ್ಡ್ರಾಗನ್ 835 ಬದಲಿಗೆ ಅದರ ಕಳೆದ ವರ್ಷ ಬಿಡುಗಡೆಯಾಗಿದ್ದ ಸ್ನ್ಯಾಪ್ಡ್ರಾಗನ್ 821 ಬಳಸಿತ್ತು. ಅಂತೆಯೇ ಮುಂದಿನ ವರ್ಷ ಬರಲಿರುವ LG G7 ಸ್ನ್ಯಾಪ್ಡ್ರಾಗನ್ 845 ಮತ್ತು ಸ್ನ್ಯಾಪ್ಡ್ರಾಗನ್ 835 ಚಿಪ್ಸೆಟ್ಗಳ ಪೈಕಿ ಯಾವುದನ್ನು ಬಳಸಲಿದೆ ಎಂದು ಕಾದುನೋಡಬೇಕು.

Best Mobiles in India

Read more about:
English summary
Samsung Galaxy S9 and LG G7 might be unveiled earlier at the CES 2018 tech show in January next year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X