ಸ್ಯಾಮ್‌ಸಂಗ್ ಕಂಪೆನಿಯಿಂದ ಗ್ಯಾಲಕ್ಸಿ ಟ್ಯಾಬ್ A (2020)LTE ಬಿಡುಗಡೆ!

|

ಟೆಕ್‌ ದಿಗ್ಗಜ ಸ್ಯಾಮ್‌ಸಂಗ್‌ ಕಂಪೆನಿ ಜನಪ್ರಿಯ ಸ್ಮಾರ್ಟ್‌ಫೋನ್‌ ಸರಣಿಗಳ ನಡುವೆ ಹಲವು ವೈವಿಧ್ಯಮಯ ಟ್ಯಾಬ್‌ಗಳನ್ನು ಸಹ ಪರಿಚಯಿಸಿದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಸ್ಮಾರ್ಟ್‌ ಟ್ಯಾಬ್‌ಗಳಿಗೂ ಸಹ ಉತ್ತಮ ಬೇಡಿಕೆ ಇದ್ದು, ಈ ವಲಯದಲ್ಲಿ ಸ್ಯಾಮ್‌ಸಂಗ್‌ ಈಗಾಗ್ಲೆ ತನ್ನ ಪ್ರಾಬಲ್ಯವನ್ನ ಸಾಧಿಸಿದೆ. ಇನ್ನು ಹೊಸ ಮಾದರಿಯ ಸ್ಮಾರ್ಟ್‌ಟ್ಯಾಬ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಹಿಡಿತ ಹೊಂದಿರುವ ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಸರಣಿಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ ಟ್ಯಾಬ್‌ ಅನ್ನು ಪರಿಚಯಿಸಿದೆ.

ಹೌದು

ಹೌದು, ದಕ್ಷಿಣ ಕೋರಿಯಾದ ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಗ್ಯಾಲಕ್ಸಿ ಟ್ಯಾಬ್ A ಸರಣಿಯಲ್ಲಿ ಮಧ್ಯಮ ಶ್ರೇಣಿಯ ಆಂಡ್ರಾಯ್ಡ್ ಟ್ಯಾಬ್ಲೆಟ್‌ ಗ್ಯಾಲಕ್ಸಿ ಟ್ಯಾಬ್ A(2020) LTE ಅನ್ನು ಬಿಡುಗಡೆ ಮಾಡಿದೆ. ಇದು ಸ್ಯಾಮ್‌ಸಂಗ್‌ ಕಂಪೆನಿಯ ಮಧ್ಯಮ ಶ್ರೇಣೀಯ ಆಂಡ್ರಾಯ್ಡ್‌ ಮಾದರಿಯ ಟ್ಯಾಬ್‌ಗಳ ಸಾಲಿಗೆ ಸೇರಿದ್ದು, ಯುಎಸ್ ಮಾರುಕಟ್ಟೆಯಲ್ಲಿ ಸಾಧನವನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ ಟ್ಯಾಬ್‌ 8.4-ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಆಕ್ಟಾ-ಕೋರ್ ಪ್ರೊಸೆಸರ್ ವೇಗವನ್ನ ಪಡೆದುಕೊಂಡಿದೆ. ಇನ್ನು ಈ ಟ್ಯಾಬ್‌ನ ವಿನ್ಯಾಸ ಹಾಗೂ ವಿಶೇಷತೆಯ ಬಗ್ಗೆ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಸ್ಮಾರ್ಟ್‌ಟ್ಯಾಬ್‌

ಇನ್ನು ಈ ಸ್ಮಾರ್ಟ್‌ಟ್ಯಾಬ್‌ ಉತ್ತಮ ವಿನ್ಯಾಸವನ್ನ ಒಳಗೊಂಡಿದ್ದು, ಮಧ್ಯಮ ಶ್ರೇಣಿಯ ಟ್ಯಾಬ್‌ ಪ್ರಿಯರಿಗೆ ಉತ್ತಮ ಆಯ್ಕೆಯಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಸದ್ಯ ಈ ಟ್ಯಾಬ್‌ 1,200x1,920 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 8.4 ಇಂಚಿನ ಡಿಸ್‌ಪ್ಲೆ ಹೊಂದಿದ್ದು, ಸಿಂಗಲ್ ರಿಯರ್ ಕ್ಯಾಮೆರಾ ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಸಿಂಗಲ್‌ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಅಲ್ಲದೆ ಸ್ಯಾಮ್‌ಸಂಗ್ ಆಂಡ್ರಾಯ್ಡ್ ಆವೃತ್ತಿಯನ್ನು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, ಇದು TFT ಡಿಸ್‌ಪ್ಲೇಯನ್ನು ಹೊಂದಿದೆ.

ಅಲ್ಲದೆ

ಅಲ್ಲದೆ CNET ಎಕ್ಸಿನೋಸ್ 7904 ಪ್ರೊಸೆಸರ್‌ ಹೊಂದಿದ್ದು, 3GB RAM ಮತ್ತು 32GB ಇಂಟರ್‌ ಸ್ಟೋರೆಜ್‌ ಸಾಮರ್ಥ್ಯದ ಆಯ್ಕೆಯನ್ನ ಒಳಗೊಂಡಿದೆ. ಇನ್ನು ಇದರ ರಿಯರ್‌ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು, ಜೊತೆಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಈ ಸಿಂಗಲ್ ಸಿಮ್ ಟ್ಯಾಬ್ಲೆಟ್ ಆಂಡ್ರಾಯ್ಡ್ 9 ಅನ್ನು ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಮೆಮೊರಿ ಕಾರ್ಡ್‌ ಮೂಲ 512GB ವರೆಗೆ ಶೇಖರಣಾ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಟ್ಯಾಬ್‌

ಈ ಸ್ಮಾರ್ಟ್‌ ಟ್ಯಾಬ್‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE , ವೈ-ಫೈ 2.4GHz ಮತ್ತು 5GHz ಬ್ಯಾಂಡ್‌ಗಳಿಗೆ ಬೆಂಬಲ ನೀಡಲಿದೆ. ಇದಲ್ಲದೆ ಬ್ಲೂಟೂತ್ ವಿ 5.0, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್‌ ಸಂಪರ್ಕವನ್ನು ಬೆಂಬಲಿಸುತ್ತದೆ. ಇನ್ನು ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A(2020) ನ ಬೆಲೆ $279.99 (ಸರಿಸುಮಾರು 21,200 ರೂ.) ಆಗಿದ್ದು, ಪ್ರಸ್ತುತ ಯುಎಸ್‌ನಲ್ಲಿ ಮಾರ್ಚ್ 27 ರಿಂದ ಖರೀದಿಗೆ ಲಬ್ಯವಾಗಲಿದೆ.

Best Mobiles in India

English summary
Samsung Galaxy Tab A (2020) will be offered in a single 3GB + 32GB variant, but the storage is expandable via a microSD card slot.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X