ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A 8.4 ಫೀಚರ್ಸ್‌ ಬಹಿರಂಗ!

|

ಇತ್ತೀಚಿನ ದಿನಗಳಲ್ಲಿ ಟ್ಯಾಬ್‌ ಮಾರುಕಟ್ಟೆ ಕೂಡ ತನ್ನ ಜನಪ್ರಿಯತೆಯನ್ನ ಹೆಚ್ಚಿಸಿಕೊಳ್ತಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲ ಟ್ಯಾಬ್‌ಗಳಿಗೂ ಕೂಡ ಬೇಡಿಕೆ ಇದ್ದು, ಈಗಾಗ್ಲೆ ಕೆಲ ಕಂಪೆನಿಗಳು ವೈವಿಧ್ಯಮಯ ಟ್ಯಾಬ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿವೆ. ಇದೀಗ ಸ್ಯಾಮ್‌ಸಂಗ್‌ ಕಂಪೆನಿ ಕೂಡ ಗ್ಯಾಲಕ್ಸಿ ಆವೃತ್ತಿಯಲ್ಲಿ ಹೊಸ ಟ್ಯಾಬ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಸದ್ಯ ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಅನ್ನು ಗೂಗಲ್ ಪ್ಲೇ ಕನ್ಸೋಲ್ ಪಟ್ಟಿಯಲ್ಲಿ ಗುರುತಿಸಲಾಗಿದ್ದು, ಹೊಸ ವಿನ್ಯಾಸದಲ್ಲಿ ಬರಲಿದೆ ಎಂದು ಹೇಳಲಾಗ್ತಿದೆ.

ಹೌದು

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಗ್ಯಾಲಕ್ಸಿ ಸರಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನ ಮಾತ್ರವಲ್ಲ ಟ್ಯಾಬ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಇದೀಗ ಸ್ಯಾಮ್‌ಸಂಗ್‌ ತನ್ನ ಹೊಸ ಗ್ಯಾಲಕ್ಸಿ ಟ್ಯಾಬ್ ಎ 8.4 ಅನ್ನು ಸದ್ಯದಲ್ಲೇ ಲಾಂಚ್‌ ಮಾಡಲಿದೆ ಎಂದು ಹೇಳಲಾಗ್ತಿದೆ. ಈಗಾಗ್ಲೆ ಗೂಗಲ್ ಪ್ಲೇ ಕನ್ಸೋಲ್ ಡಿವೈಸ್‌ ಕ್ಯಾಟಲಾಗ್‌ನಲ್ಲಿ ಗ್ಯಾಲಕ್ಸಿ ಟ್ಯಾಬ್ ಎ 8.4 ಫೀಚರ್ಸ್‌ ಲೀಕ್‌ ಆಗಿದೆ. ಸದ್ಯ ಲೀಕ್‌ ಮಾಹಿತಿ ಪ್ರಕಾರ ಗ್ಯಾಲಕ್ಸಿ ಟ್ಯಾಬ್ A 8.4 ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಟ್ಯಾಬ್‌ನ ವಿಶೇಷತೆ

ಟ್ಯಾಬ್‌ನ ವಿಶೇಷತೆ

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A 8.4, 1200 x 1920 ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 8.00 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ ಈ ಟ್ಯಾಬ್‌ ಎರಡು ಕಾರ್ಟೆಕ್ಸ್-A73 ಅನ್ನು 1.8GHz ನಲ್ಲಿ, ಮತ್ತು ಇತರ 6 ಕೋರ್‌ಗಳನ್ನು 1.6GHz ನಲ್ಲಿ ಹೊಂದಿದೆ.‌ ARM ಮಾಲಿ G 71GPU ಜೊತೆಗೆ ಎಕ್ಸಿನೋಸ್ 7904 ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಈ ಟ್ಯಾಬ್ಲೆಟ್ 3GB RAM ಅನ್ನು ಹೊಂದಿರುತ್ತದೆ ಎಂದು ಹೇಳಲಾಗ್ತಿದೆ.

ಗ್ಯಾಲಕ್ಸಿ ಟ್ಯಾಬ್ A 8.4 ವಿನ್ಯಾಸ

ಗ್ಯಾಲಕ್ಸಿ ಟ್ಯಾಬ್ A 8.4 ವಿನ್ಯಾಸ

ಈ ಟ್ಯಾಬ್‌ ಅನ್ನು ಪ್ರಸ್ತುತ ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಈ ಟ್ಯಾಬ್‌ನ ಸ್ಕ್ರೀನ್‌ ರೆಸಲ್ಯೂಶನ್‌ ಉತ್ತಮವಾಗಿದ್ದು, ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ. ಈ ಟ್ಯಾಬ್‌ನಲ್ಲಿ ಉತ್ತಮ ಕ್ಯಾಮೆರಾ ಸೆಟ್‌ಅಪ್‌ ನೀಡಲಾಗಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ ಎಂದು ಹೇಳಲಾಗ್ತಿದೆ. ಆದರೆ ಈ ಟ್ಯಾಬ್‌ನಲ್ಲಿರುವ ಕ್ಯಾಮೆರಾಗಳು, ಸ್ಟೋರೇಜ್‌ ಮತ್ತು ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಗ್ಯಾಲಕ್ಸಿ ಟ್ಯಾಬ್ A 8.4

ಗ್ಯಾಲಕ್ಸಿ ಟ್ಯಾಬ್ A 8.4

ಸದ್ಯ ಟೆಕ್‌ ಮಾರುಕಟ್ಟೆಯಲ್ಲಿ ಟ್ಯಾಬ್‌ಗಳ ಬೇಡಿಕೆ ದಿನೇ ದಿನೇ ಕುಸಿಯುತ್ತಿದ್ದು, ಈ ನಡುವೆ ಸ್ಯಾಮ್‌ಸಂಗ್‌ ಹೊಸದಾಗಿ ಪರಿಚಯಿಸಲಿರುವ ಟ್ಯಾಬ್‌ ಯಾವ ರೀತಿಯ ಕಮಾಲ್‌ ಮಾಡಲಿದೆ ಅನ್ನೊ ನಿರೀಕ್ಷೆ ಹುಟ್ಟುಹಾಕಿದೆ. ಇದಲ್ಲದೆ ಈಗಾಗ್ಲೆ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿ ಸೈ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ಹೊಸ ಟ್ಯಾಬ್‌ನಲ್ಲಿ ವಿನೂತನ ಫೀಚರ್ಸ್‌ಗಳನ್ನ ಪರಿಚಯಿಸಲಿದೆ ಎನ್ನಲಾಗ್ತಿದೆ. ಹಾಗೇ ನೋಡೋದಾದ್ರೆ ಸ್ಟ್ರಾಟಜಿ ಅನಾಲಿಟಿಕ್ಸ್ ಪ್ರಕಾರ, 2019 ರಲ್ಲಿ, ವಿಶ್ವದಾದ್ಯಂತ 160.2 ಮಿಲಿಯನ್ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡಲಾಗಿದ್ದು, 2018 ರಲ್ಲಿ, 173.1 ಮಿಲಿಯನ್ ಯೂನಿಟ್‌ಗಳು ಮಾರಾಟವಾಗಿವೆ. ಸದ್ಯದ ಮಾಹಿತಿ ಪ್ರಕಾರ ಟ್ಯಾಬ್ಲೆಟ್‌ಗಳ ಬೇಡಿಕೆಯು ಶೇಕಡಾ 7.5 ರಷ್ಟು ಕುಸಿದಿದೆ.

Best Mobiles in India

English summary
The Samsung Galaxy Tab A 8.4 seems to be powered by Samsung's in-house Exynos 7904 chipset.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X