ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A8 ಲಾಂಚ್‌! ಬೆಲೆ ಎಷ್ಟು?

|

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಅನೇಕ ಗ್ಯಾಜೆಟ್ಸ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಈಗಾಗಲೇ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಟ್ಯಾಬ್‌ ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಗ್ಯಾಲಕ್ಸಿ ಟ್ಯಾಬ್‌ A8 ಅನ್ನು ಲಾಂಚ್‌ ಮಾಡಿದೆ. ಈ ಟ್ಯಾಬ್‌ 10.5 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಟ್ಯಾಬ್‌ ಯುನಿಸಾಕ್‌ ಟೈಗರ್‌ T618 ಚಿಪ್‌ಸೆಟ್‌ ಹೊಂದಿದ್ದು, ಕ್ವಾಡ್‌ ಸ್ಪೀಕರ್‌ ಸೆಟಪ್‌ ಅನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಹೊಸ ಗ್ಯಾಲಕ್ಸಿ ಟ್ಯಾಬ್‌ A8 ಅನ್ನು ಬಿಡುಗಡೆ ಮಾಡಿದೆ. ಈ ಟ್ಯಾಬ್‌ ಅಮೇಜಾನ್‌ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ ‌ಮತ್ತು ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ ಸೇಲ್‌ ಸಮಯದಲ್ಲಿ ಖರೀದಿಸಲು ಲಭ್ಯವಿರುತ್ತದೆ. ಈ ಎರಡು ಸೇಲ್‌ಗಳು ಇದೇ ಜನವರಿ 17 ರಂದು ಪ್ರಾರಂಭವಾಗಲಿವೆ. ಇನ್ನು ಈ ಟ್ಯಾಬ್‌ 3GB+32GB ಹಾಗೂ 4GB+ 64GB ಸ್ಟೋರೇಂಜ್‌ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ 17,999ರೂ. ಆಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ ಟ್ಯಾಬ್‌ ಏನೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿದೆ?

ಡಿಸ್‌ಪ್ಲೇ ಹೇಗಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A8 10.5 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,920 x 1,200 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 16:10 ರಚನೆಯ ಅನುಪಾತವನ್ನು ಹೊಂದಿದೆ. ಕಂಪನಿಯ ಪ್ರಕಾರ, ಈ ಹೊಸ ಟ್ಯಾಬ್ಲೆಟ್ ಹಿಂದಿನ ಗ್ಯಾಲಕ್ಸಿ ಟ್ಯಾಬ್‌ A7 ಮಾದರಿಯಲ್ಲಿಯೇ ನಾಲ್ಕು ಡಾಲ್ಬಿ ಅಟ್ಮಾಸ್-ಆಕ್ಟಿವ್‌ ಮಾಡಿರುವ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಪ್ರೊಸೆಸರ್‌ ಬಲವೇನು?

ಪ್ರೊಸೆಸರ್‌ ಬಲವೇನು?

ಈ ಸ್ಮಾರ್ಟ್‌ ಟ್ಯಾಬ್ ಯುನಿಸೊಕ್ ಟೈಗರ್ T618 ಚಿಪ್‌ಸೆಟ್‌ ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಸ್ಯಾಮ್‌ಸಂಗ್‌ ಕಂಪೆನಿ ಹೇಳಿರುವಂತೆ ಗ್ಯಾಲಕ್ಸಿ ಟ್ಯಾಬ್ A8 ನ ಸಿಪಿಯು ಮತ್ತು ಜಿಪಿಯು ಪ್ರತಿಯೊಂದನ್ನು 10% ರಷ್ಟು ಹೆಚ್ಚಿಸಲಾಗಿದ್ದು, ವೇಗವಾಗಿ, ಸುಗಮ ಕಾರ್ಯಕ್ಷಮತೆಯನ್ನು ನೀಡಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ವಿಶೇಷ ಏನು?

ಕ್ಯಾಮೆರಾ ವಿಶೇಷ ಏನು?

ಇದು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A8 7,040 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಆದಾಗ್ಯೂ, ಟ್ಯಾಬ್ಲೆಟ್ 7.5W ಚಾರ್ಜರ್‌ನೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB-C 2.0 ಪೋರ್ಟ್ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Tab A8 ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಇದರಲ್ಲಿ ಗ್ಯಾಲಕ್ಸಿ ಟ್ಯಾಬ್‌ A8 ವೈಫೈ ರೂಪಾಂತರವು 3GB+32GBಆಯ್ಕೆಗೆ 17,999ರೂ ಬೆಲೆಯನ್ನು ಹೊಂದಿದೆ. ಇದಲ್ಲದೆ 4GB+ 64GB ಆಯ್ಕೆಗೆ 19,999ರೂ.ಬೆಲೆ ಹೊಂದಿದೆ. ಇನ್ನು ಸೇಲ್‌ ಆಫರ್‌ನಲ್ಲಿ ಗ್ರಾಹಕರು ಐಸಿಐಸಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ 2,000ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ 4,499ರೂ ಮೌಲ್ಯದ ಬುಕ್ ಕವರ್ ಅನ್ನು ಕೇವಲ 999ರೂ.ಗಳಿಗೆ ಪಡೆಯಬಹುದು. ಗ್ಯಾಲಕ್ಸಿ ಟ್ಯಾಬ್‌ A8 ಭಾರತದಲ್ಲಿ ಜನವರಿ 17 ರಂದು ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್‌ನ ಆನ್‌ಲೈನ್ ಸ್ಟೋರ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಮಾರಾಟವಾಗಲಿದೆ.

Best Mobiles in India

English summary
Samsung India launched the Galaxy Tab A8 in India at a starting price of Rs 17,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X