ಸ್ಯಾಮ್‌ಸಂಗ್‌ ಹೊಸ ಸ್ಮಾರ್ಟ್‌ಟ್ಯಾಬ್‌ ಅನಾವರಣ! 7600mAh ಬ್ಯಾಟರಿ ಬ್ಯಾಕ್‌ಅಪ್‌!

|

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ವೈವಿಧ್ಯಮಯ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಕೂಡ ಪರಿಚಯಿಸಿದೆ. ಇದಲ್ಲದೆ ನವೀನ ಮಾದರಿಯ ಸ್ಮಾರ್ಟ್‌ ಟ್ಯಾಬ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಟೆಕ್‌ ಮಾರುಕಟ್ಟೆಯಲ್ಲಿ ಹೊಸ ಗ್ಯಾಲಕ್ಸಿ ಟ್ಯಾಬ್‌ ಆಕ್ಟಿವ್‌ 4 ಪ್ರೊ ಟ್ಯಾಬ್ಲೆಟ್‌ ಅನ್ನು ಲಾಂಚ್‌ ಮಾಡಿದೆ. ಈ ಟ್ಯಾಬ್ಲೆಟ್‌ ಆಂಡ್ರಾಯ್ಡ್ ಟ್ಯಾಬ್ಲೆಟ್ ಆಗಿದ್ದು, ರಗಡ್‌ ಲುಕ್‌ ಹೊಂದಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಹೊಸ ಗ್ಯಾಲಕ್ಸಿ ಟ್ಯಾಬ್‌ ಆಕ್ಟಿವ್‌ 4 ಪ್ರೊ ಟ್ಯಾಬ್ಲೆಟ್‌ ಅನ್ನು ಪರಿಚಯಿಸಿದೆ. ಈ ಟ್ಯಾಬ್ಲೆಟ್‌ MIL-STD-810H ಹೊಂದಿದ್ದು, ಇದು ರಗಡ್‌ ಬಾಡಿ ವಿನ್ಯಾಸ ಹೊಂದಿರುವುದರಿಂದ ಎಂತಹದೇ ಪರಿಸ್ಥಿತಿಯಲ್ಲೂ ಬಳಸುವುದಕ್ಕೆ ಸೂಕ್ತವಾಗಿದೆ. ಇದು IP68 ರೇಟ್ ಅನ್ನು ಹೊಂದಿದ್ದು, ವಾಟರ್‌ ಮತ್ತು ಡಸ್ಟ್‌ ರೆಸಿಸ್ಟೆನ್ಸಿಯನ್ನು ಹೊಂದಿದೆ. ಇನ್ನುಳಿದಂತ ಈ ಟ್ಯಾಬ್ಲೆಟ್‌ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಆಕ್ಟಿವ್‌ 4 ಪ್ರೊ ಟ್ಯಾಬ್ಲೆಟ್‌ 10.1 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1920×1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ. ಇನ್ನು ಈ ಟ್ಯಾಬ್ಲೆಟ್‌ 6nm ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778G ಪ್ರೊಸೆಸರ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ಆಂಡ್ರಾಯ್ಡ್‌ 12.0 ಅನ್ನು ಸ್ಯಾಮ್‌ಸಂಗ್‌ ಒನ್‌ UI ಕಸ್ಟಮೈಸೇಶನ್‌ನೊಂದಿಗೆ ರನ್ ಮಾಡುತ್ತದೆ.

ಸ್ಮಾರ್ಟ್‌

ಇನ್ನು ಈ ಸ್ಮಾರ್ಟ್‌ ಟ್ಯಾಬ್ಲೆಟ್‌ 4GB RAM + 64GB ಮತ್ತು 6GB RAM + 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ ನೀವು ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಈ ಟ್ಯಾಬ್ಲೆಟ್ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಆಕ್ಟಿವ್‌ 4 ಪ್ರೊ 7600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಅಡಾಪ್ಟರ್ ಅನ್ನು ವಿದ್ಯುತ್ ಸರಬರಾಜಿಗೆ ಪ್ಲಗ್ ಮಾಡುವ ಮೂಲಕ ಬ್ಯಾಟರಿ ಇಲ್ಲದೆ ಟ್ಯಾಬ್ಲೆಟ್ ಅನ್ನು ಸಹ ಬಳಸಬಹುದು. ಟ್ಯಾಬ್ಲೆಟ್ ಎಸ್ ಪೆನ್ ಸ್ಟೈಲಸ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G LTE, GPS, ಬ್ಲೂಟೂತ್‌ 5.2, ವೈಫೈ, ವೈಫೈ 6, ಎನ್‌ಎಫ್‌ಸಿಯನ್ನು ಹೊಂದಿದೆ. ಇನ್ನು ಉತ್ತರ ಅಮೆರಿಕಾದಲ್ಲಿ ಮಾತ್ರ ಈ ಟ್ಯಾಬ್ಲೆಟ್‌ ಡ್ಯುಯಲ್‌ ಸಿಮ್‌ ಆಯ್ಕೆಯಲ್ಲಿ ಬರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್‌ ಆಕ್ಟಿವ್‌ 4 ಪ್ರೊ ಟ್ಯಾಬ್ಲೆಟ್‌ನ ನಿಖರವಾದ ಬೆಲೆ ವಿವರಗಳನ್ನು ಇನ್ನು ಬಹಿರಂಗಪಡಿಸಿಲ್ಲ. ಪ್ರಸ್ತುತ ಈ ಟ್ಯಾಬ್ಲೆಟ್‌ ಯುರೋಪ್, ಏಷ್ಯಾ, ಲ್ಯಾಟಿನ್ ಅಮೇರಿಕಾ, ಉತ್ತರ ಅಮೇರಿಕಾ ಮತ್ತು ಮಧ್ಯಪ್ರಾಚ್ಯದ ಭಾಗಗಳನ್ನು ಒಳಗೊಂಡಂತೆ ಹಲವಾರು ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ಆರಂಭಿಕ ಬಿಡುಗಡೆಯು ಆಯ್ದ ಯುರೋಪಿಯನ್ ಮಾರುಕಟ್ಟೆಗಳಲ್ಲಿ ನಡೆಯುತ್ತದೆ. ಆದರೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯತೆ ಮತ್ತು ಬೆಲೆ ವಿವರಗಳು ಇನ್ನು ತಿಳಿದು ಬಂದಿಲ್ಲ.

ಸ್ಯಾಮ್‌ಸಂಗ್‌

ಇನ್ನು ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಇತ್ತೀಚಿಗೆ ಗ್ಯಾಲಕ್ಸಿ Z ಫೋಲ್ಡ್‌ 4 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಸ್ಮಾರ್ಟ್‌ಫೋನ್‌ 7.6 ಇಂಚಿನ ಡೈನಾಮಿಕ್ ಅಮೋಲೆಡ್‌ 2X ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ ಕವರ್‌ ಸ್ಕ್ರೀನ್ 6.2 ಇಂಚಿನ HD+ ಡೈನಾಮಿಕ್ ಅಮೋಲೆಡ್‌ 2X ಕವರ್‌ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ತ್ರಿಪಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ.

Best Mobiles in India

Read more about:
English summary
Samsung Galaxy Tab Active 4 Pro 5G tablet launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X