ಸ್ಯಾಮ್‌ಸಂಗ್‌ನ ಬಹು ನಿರೀಕ್ಷಿತ ಟ್ಯಾಬ್ಲೆಟ್‌ಗಳು ಭಾರತದಲ್ಲೂ

Posted By:

ಸ್ಯಾಮ್‌ಸಂಗ್ ಇಂದು ಗ್ಯಾಲಕ್ಸಿ ಎಸ್ ಟ್ಯಾಬ್ ಶ್ರೇಣಿಯನ್ನು ಭಾರತದಲ್ಲಿ ಪ್ರಸ್ತುತಪಡಿಸಿದ್ದು, ಈಗಾಗಲೇ ಇದು ನ್ಯೂಯಾರ್ಕ್‌ನಲ್ಲಿ ಘೋಷಣೆಯಾಗಿತ್ತು. ಈ ಶ್ರೇಣಿಯು ನ್ಯೂ ಗ್ಯಾಲಕ್ಸಿ ಟ್ಯಾಬ್ ಎಸ್ 10.5 ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 8.4 ಅನ್ನು ಒಳಗೊಂಡಿದೆ. ಈ ಟ್ಯಾಬ್‌ಗಳು ಜುಲೈ ಮಧ್ಯಭಾಗದಿಂದ ರೂ 44,800 ಮತ್ತು ರೂ 37,800 ಕ್ಕೆ ದೊರೆಯುತ್ತಿದೆ.

ಸೌತ್ ಕೊರಿಯಾದ ಕಂಪೆನಿಯಾಗಿರುವ ಸ್ಯಾಮ್‌ಸಂಗ್ ಎರಡು ಬಣ್ಣಗಳಲ್ಲಿ ಅಂದರೆ ಟೈಟಾನಿಯಮ್ ಬ್ರೋನ್ಜ್ ಮತ್ತು ಬಿಳಿ ಬಣ್ಣದಲ್ಲಿ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಲಾಂಚ್‌ ಮಾಡುತ್ತಿದ್ದು ಸ್ಯಾಮ್‌ಸಂಗ್ ಆಯ್ಕೆಮಾಡಿರುವ ಸ್ಟೋರ್‌ಗಳಲ್ಲಿ ಈ ಟ್ಯಾಬ್ ಜುಲೈ 11 ರವರೆಗೆ ಬುಕ್ ಮಾಡಬಹುದಾಗಿದೆ.

ಗ್ಯಾಲಕ್ಸಿ ಟ್ಯಾಬ್ ಎಸ್ 10.5 ಸೂಪರ್ AMOLED ಡಿಸ್‌ಪ್ಲೇಯೊಂದಿಗೆ 2560 x 1600 ಪಿಕ್ಸೆಲ್‌ಗಳಲ್ಲಿ ಬರಲಿದೆ ಇದರಲ್ಲಿ ಓಕ್ಟಾ ಕೋರ್ Exynos 5 (A15 1.9 GHz + A7 1.3 GHz) ಸಿಪಿಯು ಇದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಓಎಸ್‌ ಚಾಲನೆಯಾಗುತ್ತಿದೆ. 3ಜಿಬಿ RAM ಮತ್ತು 16ಜಿಬಿ/32ಜಿಬಿ ಆಂತರಿಕ ಮೆಮೊರಿ ಇದರಲ್ಲಿದ್ದು, ಇದನ್ನು 128ಜಿಬಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಬಳಸಿ ವಿಸ್ತರಿಸಬಹುದಾಗಿದೆ. 8ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಇದರಲ್ಲಿದ್ದು ಎಲ್‌ಇಡಿ ಫ್ಲ್ಯಾಶ್, 2ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಶೂಟರ್, ವೈಫೈ, 4ಜಿ LTE/3ಜಿ, ಬ್ಲೂಟೂತ್, ವೈಫೈ ಡೈರೆಕ್ಟ್, GPS, GLONASS, Beidou, ಮತ್ತು 7,900mAh ಬ್ಯಾಟರಿ ಇದರಲ್ಲಿದೆ.

ಅದೇ ರೀತಿ ಗ್ಯಾಲಕ್ಸಿ ಟ್ಯಾಬ್ S 8.4 ಇದು 8.4 ಇಂಚಿನ ಸೂಪರ್ AMOLED ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ರೆಸಲ್ಯೂಶನ್ 2560 x 1600 ಪಿಕ್ಸೆಲ್‌ಗಳಾಗಿವೆ. ಇದರ ತಯಾರಕರು ಇದರಲ್ಲಿ 4900mAh ಬ್ಯಾಟರಿಯನ್ನು ಸೇರ್ಪಡೆಮಾಡಿದ್ದು ಉಳಿದ ವಿಶೇಷಣಗಳು ಗ್ಯಾಲಕ್ಸಿ ಟ್ಯಾಬ್ ಎಸ್ 10.5 ನಂತಿದೆ.

ಈ ಟ್ಯಾಬ್ಲೆಟ್‌ಗಳ ಕುರಿತ ಇನ್ನಷ್ಟು ಮಾಹಿತಿಗಳು ಕೆಳಗಿನ ಸ್ಲೈಡ್‌ಗಳಲ್ಲಿ ಗಮನಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ಯಾಲಕ್ಸಿ ಟ್ಯಾಬ್ ಎಸ್: ಡಿಸ್‌ಪ್ಲೇ

#1

ಇದು ಅತ್ಯುನ್ನತ ಮೊಬೈಲ್ ಡಿಸ್‌ಪ್ಲೇ ತಂತ್ರಜ್ಞಾನದೊಂದಿಗೆ ಬಂದಿದ್ದು, ಹೆಚ್ಚಿನ ಮಟ್ಟದ ಮತ್ತು ಶ್ರೀಮಂತ ಬಣ್ಣವನ್ನು ಟ್ಯಾಬ್‌ಗೆ ನೀಡಿದೆ. ಇದರಲ್ಲಿರುವ ಸೂಪರ್ AMOLED ಡಿಸ್‌ಪ್ಲೇ 90% ದಷ್ಟು ಅಡೋಬ್ ಆರ್‌ಜಿಬಿ ಬಣ್ಣವನ್ನು ನೀಡುತ್ತದೆ ಮತ್ತು ಇದು ಹೆಚ್ಚಿನ ಬಣ್ಣಗಳನ್ನು ಡಿಸ್‌ಪ್ಲೇಗೆ ನೀಡುತ್ತದೆ.

ಗ್ಯಾಲಕ್ಸಿ ಟ್ಯಾಬ್ ಎಸ್: ವಿಷಯ ಇಕೋ ಸಿಸ್ಟಮ್

#2

ಈ ಟ್ಯಾಬ್ ಅನ್ನು ಮನರಂಜನೆಗಾಗಿ ತಯಾರಿಸಲಾಗಿದ್ದು ಹಲವಾರು ವಿಷಯಗಳನ್ನು ಇದರಲ್ಲಿ ಸೇರ್ಪಡೆಗೊಳಿಸಲಾಗಿದೆ. ಸ್ಯಾಮ್‌ಸಂಗ್‌ನ ನಿತಕಾಲಿಕೆ ಸೇವೆಯಾದ "ಪೇಪರ್‌ಗಾರ್ಡನ್" ನಲ್ಲಿ ಬಳಕೆದಾರರು ಅಸಂಖ್ಯ ಸಂಖ್ಯೆಯ ನಿಯತಕಾಲಿಕೆಗಳನ್ನು ವೀಕ್ಷಿಸಬಹುದಾಗಿದೆ. ಇಷ್ಟಲ್ಲದೆ ಸ್ಯಾಮ್‌ಸಂಗ್ ಇತರ ಮನರಂಜನಾ ಕಂಪೆನಿಗಳಾದ ಮಾರ್ವೆಲ್, ಕಿಂಡಲ್ ಮತ್ತು ಗೂಗಲ್ ಪ್ಲೇಯೊಂದಿಗೆ ವಿಲೀನಗೊಂಡಿದ್ದು ಬಳಕೆದಾರರಿಗೆ ಇಪ್ಪತ್ತನಾಲ್ಕು ಗಂಟೆಗಳ ಕಾಲ ಮನರಂಜನೆಯನ್ನು ಒದಗಿಸಲಿದೆ.

ಗ್ಯಾಲಕ್ಸಿ ಟ್ಯಾಬ್ ಎಸ್: ವಿವಿಧತೆ ಮತ್ತು ಪರಿಕರಗಳು

#3

ಗ್ಯಾಲಕ್ಸಿ ಟ್ಯಾಬ್ ಎಸ್‌ನ ಎರಡೂ ಮಾಡೆಲ್‌ಗಳು 6.6 ಎಮ್‌ಎಮ್ ಪ್ರೊಫೈಲ್ ಅನ್ನು ಹೊಂದಿದ್ದು ತೂಕ 465g (10.5-inch) and 294g (8.4-inch) ಆಗಿದೆ. ಇದಲ್ಲದೆ ಸ್ಯಾಮ್‌ಸಂಗ್ ಹೆಚ್ಚಿನ ಫ್ಯಾಶನ್ ಆಗುಳ್ಳ ಮತ್ತು ನಿರ್ದಿಷ್ಟವಾಗಿ ವಿನ್ಯಾಸ ಪಡಿಸಿರುವ ಗ್ರಾಹಕ ಉಪಕರಣಗಳನ್ನು ಕೂಡ ನೀಡುತ್ತಿದೆ. ಬುಕ್ ಕವರ್‌ನಂತಿರುವ ಪರಿಕರಗಳು ವೀಡಿಯೋವನ್ನು ವೀಕ್ಷಿಸಲು ಓದಲು ಮತ್ತು ಟೈಪ್ ಮಾಡಲು ಬಹಳ ಆರಾಮದಾಯಕವಾಗಿದೆ.

ಗ್ಯಾಲಕ್ಸಿ ಟ್ಯಾಬ್ ಎಸ್: ಉತ್ಪಾದಕತೆ ವೈಶಿಷ್ಟ್ಯಗಳು

#4

ಗ್ಯಾಲಕ್ಸಿ ಟ್ಯಾಬ್ ಎಸ್ ತೀವ್ರವಾದ ಬಹುಕಾರ್ಯ ವೈಶಿಷ್ಟ್ಯವುಳ್ಳ ಸಾಮರ್ಥ್ಯದೊಂದಿಗೆ ಬಂದಿದೆ. ಬಳಕೆದಾರರು ತಮ್ಮ ಫೋನ್‌ನಿಂದ ಗ್ಯಾಲಕ್ಸಿ ಟ್ಯಾಬ್‌ ಎಸ್‌ಗೆ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು.

ಗ್ಯಾಲಕ್ಸಿ ಟ್ಯಾಬ್ ಎಸ್: ಬೆರಳಚ್ಚು ಸೆನ್ಸಾರ್, ಕಿಡ್ಸ್' ಮೋಡ್ ಇತರ ವೈಶಿಷ್ಟ್ಯಗಳು

#5

ಇದು ಒಂದು ಉಪಯುಕ್ತ ವೈಶಿಷ್ಟ್ಯವಾದ 'ಮಲ್ಟಿ ಯೂಸರ್ ಮೋಡ್' ಅನ್ನು ಹೊಂದಿದ್ದು ಇದು ಬಳಕೆದಾರರಿಗೆ ತಮ್ಮದೇ ಆದ ವೈಯಕ್ತಿಕ ಪ್ರೊಫೈಲ್ ಅನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಬೆರಳಚ್ಚು ಸೆನ್ಸಾರ್ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಲಾದ 'ಕಿಡ್ಸ್ ಮೋಡ್' ಇದ್ದು ಮಕ್ಕಳಿಗೆ ಪ್ರಿಯವಾದ ಅಪ್ಲಿಕೇಶನ್‌ಗಳನ್ನು ಇದರ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ. ಇದು ಹೆಚ್ಚುವರಿ ಪವರ್ ಉಳಿತಾಯ ಮೋಡ್, ಗ್ರೂಪ್ ಪ್ಲೇ, ಎಸ್-ನೋಟ್, ಎಸ್ ಟ್ರಾನ್ಸಲೇಟರ್, ಸ್ಯಾಮ್‌ಸಂಗ್ ಲಿಂಕ್, ಸ್ಕ್ರಾಪ್‌ಬುಕ್, ಸ್ಟೋರಿ ಆಲ್ಬಮ್, ಕ್ವಿಕ್ ಕನೆಕ್ಟ್ ಮತ್ತು ಪ್ಲೇತೋರಾ ಮೊದಲಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

#6

ಗ್ಯಾಲಕ್ಸಿ ಟ್ಯಾಬ್ ಎಸ್ ಹೆಚ್ಚಿನ ಮಾಹಿತಿ ವೀಡಿಯೋದಲ್ಲೂ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot