ಸ್ಯಾಮ್‌ಸಂಗ್‌ನ ಹೊಸ ಗ್ಯಾಲ್ಯಾಕ್ಸಿ ಟ್ಯಾಬ್‌ S5e ಮತ್ತು ಟ್ಯಾಬ್‌ A 10.1' ಲಾಂಚ್!

|

ಸ್ಯಾಮ್‌ಸಂಗ್‌ ಕಂಪನಿಯು ಇತ್ತೀಚಿಗೆ ಭಾರತೀಯ ಮಾರುಕಟ್ಟೆಗೆ ಹೊಸದಾಗಿ 'ಗ್ಯಾಲ್ಯಾಕ್ಸಿ ಟ್ಯಾಬ್‌ S5e' ಮತ್ತು 'ಗ್ಯಾಲ್ಯಾಕ್ಸಿ ಟ್ಯಾಬ್‌ A 10.1' ಹೆಸರಿನ ಎರಡು ಟ್ಯಾಬ್‌ ಡಿವೈಸ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಟ್ಯಾಬ್‌ ಡಿವೈಸ್‌ಗಳು ತೆಳ್ಳನೆಯ ಮತ್ತು ಹಗುರವಾದ ಡಿಸೈನ್‌ ರಚನೆಯನ್ನು ಹೊಂದಿದ್ದು, ಎಡ್ಜ್‌ ಟು ಎಡ್ಜ್‌ ಡಿಸ್‌ಪ್ಲೇ ವಿಶೇಷತೆಯನ್ನು ಪಡೆದುಕೊಂಡಿವೆ. ಅತ್ಯುತ್ತಮ ಕಾರ್ಯವೈಖರಿಯನ್ನು ಸಹ ಒಳಗೊಂಡಿವೆ.

ಸ್ಯಾಮ್‌ಸಂಗ್‌ನ ಹೊಸ ಗ್ಯಾಲ್ಯಾಕ್ಸಿ ಟ್ಯಾಬ್‌ S5e ಮತ್ತು ಟ್ಯಾಬ್‌ A 10.1' ಲಾಂಚ್

ಹೌದು, ಸ್ಯಾಮ್‌ಸಂಗ ಹೊಸದಾಗಿ ಬಿಡುಗಡೆ ಮಾಡಿರುವ 'ಗ್ಯಾಲ್ಯಾಕ್ಸಿ ಟ್ಯಾಬ್‌ S5e' ಮತ್ತು 'ಗ್ಯಾಲ್ಯಾಕ್ಸಿ ಟ್ಯಾಬ್‌ A 10.1' ಟ್ಯಾಬ್‌ಗಳಲ್ಲಿ, 'ಗ್ಯಾಲ್ಯಾಕ್ಸಿ ಟ್ಯಾಬ್‌ S5e' ಮೀಡ್‌ರೇಂಜ್‌ ಪ್ರೀಮಿಯಂ ಮಾದರಿಯಲ್ಲಿದೆ. ಹಾಗೆಯೇ 'ಗ್ಯಾಲ್ಯಾಕ್ಸಿ ಟ್ಯಾಬ್‌ A 10.1' ಟ್ಯಾಬ್‌ ಬಜೆಟ್‌ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ. ತೆಳುವಾಗ ಫ್ರೇಮ್, ಸೂಪರ್‌ AMOLED ಡಿಸ್‌ಪ್ಲೇ ಮತ್ತು ಕ್ವಾಡ್‌ ಸ್ಪೀಕರ್ಸ್‌ ಫೀಚರ್ಸ್‌ಗಳಿಂದ ಆಕರ್ಷಿಸುತ್ತಿವೆ.

ಸ್ಯಾಮ್‌ಸಂಗ್‌ನ ಹೊಸ ಗ್ಯಾಲ್ಯಾಕ್ಸಿ ಟ್ಯಾಬ್‌ S5e ಮತ್ತು ಟ್ಯಾಬ್‌ A 10.1' ಲಾಂಚ್

ಈ ಎರಡು ಹೊಸ ಟ್ಯಾಬ್‌ಗಳು ಸಿಲ್ವರ್, ಬ್ಲ್ಯಾಕ್ ಮತ್ತು ಗೋಲ್ಡ್‌ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. DeX ಬೆಂಬಲ ಪಡೆದಿರುವುದರಿಂದ ಟ್ಯಾಬ್‌ಗಳನ್ನು ಪಿಸಿಗಳಂತೆ ಉಪಯೋಗಿಸಬಹುದಾಗಿದೆ. ಹಾಗಾದರೇ ಸ್ಯಾಮ್‌ಸಂಗ್‌ 'ಗ್ಯಾಲ್ಯಾಕ್ಸಿ ಟ್ಯಾಬ್‌ S5e' ಮತ್ತು 'ಗ್ಯಾಲ್ಯಾಕ್ಸಿ ಟ್ಯಾಬ್‌ A 10.1' ಟ್ಯಾಬ್‌ಗಳ ಇತರೆ ಯಾವೆಲ್ಲಾ ವಿಶೇಷ ಫಿಚರ್ಸ್‌ಗಳನ್ನು ಒಳಗೊಂಡಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!ಓದಿರಿ : ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!

ಗ್ಯಾಲ್ಯಾಕ್ಸಿ ಟ್ಯಾಬ್‌ S5e ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಟ್ಯಾಬ್‌ S5e ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಟ್ಯಾಬ್‌ S5e ಟ್ಯಾಬ್‌ 10.5 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಅನುಪಾತವು 16:10ರಷ್ಟು ಆಗಿದೆ. ಈ ಡಿವೈಸ್‌ ಹಗುರಾವಾದ ಮತ್ತು ತೆಳ್ಳನೆಯ ರಚನೆಯನ್ನು ಪಡೆದಿರುವ ಈ ಡಿವೈಸ್‌ನ ತೂಕವು 400ಗ್ರಾಂ ಆಗಿದ್ದು, ಥೀಕ್ನೆಸ್‌ 5.5mm ರಚನೆಯನ್ನು ಹೊಂದಿದೆ. ಪಿಸಿಯ ಅನುಭವ ನೀಡಲಿದೆ.

ಗ್ಯಾಲ್ಯಾಕ್ಸಿ ಟ್ಯಾಬ್‌ S5e ಪ್ರೊಸೆಸರ್‌

ಗ್ಯಾಲ್ಯಾಕ್ಸಿ ಟ್ಯಾಬ್‌ S5e ಪ್ರೊಸೆಸರ್‌

ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 670 ಪ್ರೊಸೆಸರ್‌ ಶಕ್ತಿಯನ್ನು ಒಳಗೊಂಡಿದ್ದು, 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ 512GB ವರೆಗೂ ಬಾಹ್ಯ ಮೆಮೊರಿಯನ್ನು ವಿಸ್ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. DeX ಮೋಡ್‌ ಆಯ್ಕೆ ಇದ್ದು, ಇದು ಪಿಸಿಯಂತೆ ಕಾರ್ಯನಿರ್ವಹಿಸಲು ನೆರವಾಗಲಿದೆ.

ಓದಿರಿ : ಬಜೆಟ್‌ ಬೆಲೆಯ 'ಎಲ್‌ಜಿ W10' ಫೋನಿನ ಸ್ಪೆಷಲ್ ಫೀಚರ್ಸ್‌ ಏನು ಗೊತ್ತಾ?ಓದಿರಿ : ಬಜೆಟ್‌ ಬೆಲೆಯ 'ಎಲ್‌ಜಿ W10' ಫೋನಿನ ಸ್ಪೆಷಲ್ ಫೀಚರ್ಸ್‌ ಏನು ಗೊತ್ತಾ?

ಗ್ಯಾಲ್ಯಾಕ್ಸಿ ಟ್ಯಾಬ್‌ S5e ಬ್ಯಾಟರಿ

ಗ್ಯಾಲ್ಯಾಕ್ಸಿ ಟ್ಯಾಬ್‌ S5e ಬ್ಯಾಟರಿ

ಗ್ಯಾಲ್ಯಾಕ್ಸಿ ಟ್ಯಾಬ್‌ S5e ಬ್ಯಾಟರಿ 7,040mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದಿದ್ದು, ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯಕ್ಕಾಗಿ 15Wನ ಚಾರ್ಜರ್‌ ನೀಡಲಾಗಿದೆ. ಹಾಗೆಯೇ POGO ಕೀಬೋರ್ಡ್‌, ಡಾಲ್ಬಿ ಆಟೋಮ್‌ ಸೌಂಡ್‌, ಸಿಸ್ಟಮ್‌-ವೈಡ್ ನೈಟ್‌ ಮೋಡ್‌ ಸೇರಿದಂತೆ ವಿಶೇಷ ಆಯ್ಕೆಗಳನ್ನು ಸಹ ಒಳಗೊಂಡಿದೆ.

ಗ್ಯಾಲ್ಯಾಕ್ಸಿ ಟ್ಯಾಬ್‌ A 10.1 ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಟ್ಯಾಬ್‌ A 10.1 ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಟ್ಯಾಬ್‌ A 10.1 ಟ್ಯಾಬ್‌ 10.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇ ಸುತ್ತಲೂ ನ್ಯಾರೋ ಬೆಜಲ್ ರಚನೆಯನ್ನು ಒಳಗೊಂಡಿದೆ. ಈ ಡಿವೈಸ್‌ ಸಹ ಹಗುರಾವಾದ ಮತ್ತು ತೆಳ್ಳನೆಯ ರಚನೆಯನ್ನು ಪಡೆದಿರುವ ಈ ಡಿವೈಸ್‌ನ ತೂಕವು 470 ಗ್ರಾಂ ಆಗಿದ್ದು, ಥೀಕ್ನೆಸ್‌ 7.5mm ರಚನೆಯನ್ನು ಹೊಂದಿದೆ. ಪಿಸಿಯ ಅನುಭವ ನೀಡಲಿದೆ.

ಓದಿರಿ : 'ಬಿಗ್‌ ಬ್ಯಾಟರಿ ಲೈಫ್' ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಆಫರ್‌! ಓದಿರಿ : 'ಬಿಗ್‌ ಬ್ಯಾಟರಿ ಲೈಫ್' ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಆಫರ್‌!

ಗ್ಯಾಲ್ಯಾಕ್ಸಿ ಟ್ಯಾಬ್‌ A 10.1 ಪ್ರೊಸೆಸರ್‌

ಗ್ಯಾಲ್ಯಾಕ್ಸಿ ಟ್ಯಾಬ್‌ A 10.1 ಪ್ರೊಸೆಸರ್‌

ಆಕ್ಟಾಕೋರ್‌ Exynos 7904A ಪ್ರೊಸೆಸರ್‌ ಶಕ್ತಿಯನ್ನು ಒಳಗೊಂಡಿದ್ದು, 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು ವಿಸ್ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಕಿಡ್ಸ್‌ ಹೋಮ್‌ ಮೋಡ್‌ ಆಯ್ಕೆ ಇದ್ದು, ಪಾಲಕರು ಟ್ಯಾಬ್‌ನಲ್ಲಿ ಮಕ್ಕಳನ್ನು ಎಷ್ಟು ಸಮಯ ಕಳೆದಿದ್ದಾರೆ ತಿಳಿಯಬಹುದು.

ಗ್ಯಾಲ್ಯಾಕ್ಸಿ ಟ್ಯಾಬ್‌ A 10.1 ಬ್ಯಾಟರಿ

ಗ್ಯಾಲ್ಯಾಕ್ಸಿ ಟ್ಯಾಬ್‌ A 10.1 ಬ್ಯಾಟರಿ

ಗ್ಯಾಲ್ಯಾಕ್ಸಿ ಟ್ಯಾಬ್‌ A 10.1 ಬ್ಯಾಟರಿ 6,150mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದಿದ್ದು, ಇದರೊಂದಿಗೆ ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ಸಹ ನೀಡಲಾಗಿದೆ. ಹಾಗೆಯೇ ಕಿಡ್ಸ್‌ ಹೋಮ್ ಮೋಡ್‌, ಡ್ಯುಯಲ್‌ ಸ್ಪೀಕರ್ಸ್‌ ಡಾಲ್ಬಿ ಆಟೋಮ್‌ ಸೌಂಡ್‌, ಆಂಡ್ರಾಯ್ಡ್‌ ಪೈ ಆಧಾರಿತ ಓಎಸ್‌ ಸಹ ಇದೆ ಹಾಗೂ ಇನ್ನಿತರೆ ಆಯ್ಕೆಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್‌ನ ಈ ಎರಡು ಟ್ಯಾಬ್‌ ಡಿವೈಸ್‌ಗಳು ಖರೀದಿಗೆ ಲಭ್ಯ ಇವೆ. ಗ್ಯಾಲ್ಯಾಕ್ಸಿ ಟ್ಯಾಬ್‌ S5e ಟ್ಯಾಬ್‌ನ ಆರಂಭಿಕ ಬೆಲೆಯು 35,999ರೂ.ಗಳು ಆಗಿದೆ. ಗ್ಯಾಲ್ಯಾಕ್ಸಿ ಟ್ಯಾಬ್‌ A 10.1 ಆರಂಭಿಕ ಬೆಲೆಯು 14,999ರೂ.ಗಳು ಆಗಿದೆ. ಗ್ರಾಹಕರು ಅಮೆಜಾನ್‌, ಸ್ಯಾಮ್‌ಸಂಗ್ ಇ ಶಾಪ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಖರೀದಿಸಬಹುದಾಗಿದೆ.

ಓದಿರಿ :ವಾಟ್ಸಪ್‌ ಸ್ಟೇಟಸ್‌ನಲ್ಲಿ ಬದಲಾವಣೆ!..ಕಾಣಿಸಿಕೊಳ್ಳಲಿದೆ ಹೊಸ ಫೀಚರ್‌!ಓದಿರಿ :ವಾಟ್ಸಪ್‌ ಸ್ಟೇಟಸ್‌ನಲ್ಲಿ ಬದಲಾವಣೆ!..ಕಾಣಿಸಿಕೊಳ್ಳಲಿದೆ ಹೊಸ ಫೀಚರ್‌!

Best Mobiles in India

English summary
samsung has launched two new tablets for the Indian market. The Galaxy Tab S5e and Galaxy Tab A 10.1 have been launched in the country. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X