ಸ್ಯಾಮ್‌ಸಂಗ್‌ನಿಂದ ಬರಲಿದೆ 5G ಬೆಂಬಲಿಸುವ ಗ್ಯಾಲಕ್ಸಿ ಟ್ಯಾಬ್‌ S6!

|

ಸ್ಮಾರ್ಟ್‌ಫೋನ್‌ ದಿಗ್ಗಜ ಕಂಪೆನಿ ಸ್ಯಾಮ್‌ಸಂಗ್‌ ಈಗಾಗ್ಲೆ ಹಲವು ಮಾದರಿಯ ಲ್ಯಾಪ್‌ಟಾಪ್‌ ಟ್ಯಾಬ್‌ಗಳನ್ನ ಟೆಕ್‌ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ 5G ನೆಟ್‌ವರ್ಕ್ ಅನ್ನ ಬೆಂಬಲಿಸುವ ಟ್ಯಾಬ್‌ ಅನ್ನ ಲಾಂಚ್‌ ಮಾಡಲು ವೇದಿಕೆ ಸಿದ್ದ ಮಾಡ್ತಿದೆ. ಸದ್ಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ S6 ನ ಆವೃತ್ತಿಯಾಗಿದ್ದು ದಕ್ಷಿಣ ಕೋರಿಯಾದಲ್ಲಿ ಮೊದಲಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗ್ತಿದೆ.

ಹೌದು

ಹೌದು, ಸ್ಯಾಮ್‌ಸಂಗ್‌ ಕಂಪೆನಿಯ ಹಲವು ಲ್ಯಾಪ್‌ಟಾಪ್‌ಗಳು ಟ್ಯಾಬ್‌ಗಳು ಮಾರುಕಟ್ಟೆಯಲ್ಲಿ ಬಳಕೆದಾರರ ಗಮನಸೆಳೆದಿದೆ. ಈಗಾಗ್ಲೆ ಹಲವು ರೀತಿಯಲ್ಲಿ ಗ್ರಾಹಕರ ಮನಗೆದ್ದಿರುವ ಸ್ಯಾಮ್‌ಸಂಗ್‌ ತನ್ನ ಹೊಸ ಆವೃತ್ತಿಯ ಗ್ಯಾಲಕ್ಸಿ ಟ್ಯಾಬ್‌ ಎಸ್‌ಬಿಡುಗಡೆಗೆ ಸಿದ್ದವಾಗಿದ್ದು ಇದು 5G ನೆಟ್‌ವರ್ಕ್‌ ಬೆಂಬಲಿಸಲಿದೆ. ಅಲ್ಲದೆ ಈ ಟ್ಯಾಬ್‌ 1,600 ಎಕ್ಸ್ 2,560 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 10.5 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿರಲಿದೆ.

ಸದ್ಯ

ಸದ್ಯ ಗ್ಯಾಲಕ್ಸಿ ಟ್ಯಾಬ್‌ S6 5G ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಮೊದಲ 5g ಸಾಮರ್ಥ್ಯದ ಟ್ಯಾಬ್ಲೆಟ್ ಆಗಲಿದೆ ಎಂದು ಸ್ಯಾಮ್‌ಸಂಗ್ ಈಗಾಗ್ಲೆ ದೃಡಪಡಿಸಿದೆ. ಪ್ರಸ್ತುತ ಗ್ಯಾಲಕ್ಸಿ ಟ್ಯಾಬ್ ಎಸ್ 6 ಸ್ಆಪ್‌ಡ್ರಾಗನ್‌ 855 SoC ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್ 9 ಪೈನಲ್ಲಿ ಒನ್ ಯುಐ 1.5 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 6GB RAM ಮತ್ತು 128GB ಶೇಖರಣಾ ಸಾಮರ್ಥ್ಯ ಹಾಗೂ 8GB RAM ಮತ್ತು 256 GB ಸಂಗ್ರಹ ಸಾಮರ್ಥ್ಯವನ್ನ ಹೊಂದುವ ಮೂಲಕ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಇನ್ನು

ಇನ್ನು ಈ ಟ್ಯಾಬ್‌ 1,600 ಎಕ್ಸ್ 2,560 ಪಿಕ್ಸೆಲ್ ರೆಸಲ್ಯೂಶನ್‌ ಹೊಂದಿರುವ 10.5 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದ್ದು ವಿಡಿಯೋ ವಿಕ್ಷಣೆಗೆ ಉತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಬಾಡಿ ಟು ರೇಶಿಯೋ 16:10 ಹೊಂದಿದೆ. ಅಲ್ಲದೆ ಗ್ಯಾಲಕ್ಸಿ ಟ್ಯಾಬ್ ಎಸ್ 6 ಡಿಸ್‌ಪ್ಲೇ ಮುಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನ ಹೊಂದಿರಲಿದೆ. ಟ್ಯಾಬ್ ಎಸ್ 6 7,040MAH ಬ್ಯಾಟರಿ ಪ್ಯಾಕಪ್‌ ಅನ್ನ ಹೊಂದಿದ್ದು 15W ವೇಗದ ಚಾರ್ಜಿಂಗ್‌ ಬೆಂಬಲವನ್ನು ನೀಡಲಿದೆ.

ಅಲ್ಲದೆ

ಅಲ್ಲದೆ ಈ ಟ್ಯಾಬ್‌ ಎಕ್ಸ್ 50 5G ಮೋಡೆಮ್ ಅನ್ನು ಒಳಗೊಂಡಿರಲಿದೆ. ಜೊತೆಗೆ ಟ್ಯಾಬ್ಲೆಟ್ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದ್ದು, F/ 2.0 ಲೆನ್ಸ್‌ ಅನ್ನ ಒಳಗೊಂಡಿದೆ. ಇನ್ನು ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಜೊತೆಗೆ F/ 2.2 ಲೆನ್ಸ್‌ ಅನ್ನ ಒಳಗೊಂಡಿದೆ ಹಾಗೂ 123 ಡಿಗ್ರಿ ವೀಕ್ಷಣೆಯ ಕ್ಷೇತ್ರವನ್ನು ಹೊಂದಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇರಲಿದೆ.

Best Mobiles in India

English summary
Samsung seems to be working on a new 5G-capable tablet for the first half of the year. According to a new report, the company is planning to launch a 5G variant of its Samsung Galaxy Tab S6. Samsung has confirmed that it is planning to launch the upcoming tablet in the first quarter of the year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X