ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S6 ಲೈಟ್ ಫೀಚರ್ಸ್‌ ಲೀಕ್‌!

|

ದಕ್ಷಿಣ ಕೋರಿಯಾ ಮೂಲದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ಯಾಲಕ್ಸಿ ಟ್ಯಾಬ್‌ S6 ಲೈಟ್‌ ಅನ್ನು ಬಿಡುಗಡೆ ಮಾಡಲಿದೆ ಎಂದು ಈ ಹಿಂದಿನ ಲೇಖನದಲ್ಲಿ ತಿಳಿಸಲಾಗಿತ್ತು. ಅಲ್ಲದೆ ಈ ಹೊಸ ಟ್ಯಾಬ್‌ನ ಫೀಚರ್ಸ್‌ ಹೇಗಿರಲಿದೆ ಅನ್ನುವುದರ ಸೂಚನೆಯನ್ನ ಸಹ ನೀಡಲಾಗಿತ್ತು. ಅದರಂತೆ ಇದೀಗ ಈ ಹೊಸ ಟ್ಯಾಬ್‌ ಯಾವ ಮಾದರಿಯಲ್ಲಿರಲಿದೆ ಅನ್ನುವುದರ ಫೀಚರ್ಸ್‌ ಲೀಕ್‌ ಆಗಿದೆ. ಅಷ್ಟಕ್ಕೂ ಲೀಕ್‌ ಮಾಹಿತಿ ಪ್ರಕಾರ ಗ್ಯಾಲಕ್ಸಿ ಟ್ಯಾಬ್‌ S6 ಲೈಟ್‌ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೋದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಒದಿ.

ಹೌದು

ಹೌದು, ಸ್ಮಾರ್ಟ್‌ಫೋನ್‌ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ತನ್ನ ಹೊಸ ಟ್ಯಾಬ್‌ S6 ಲೈಟ್‌ ಮೂಲಕ ಹೊಸ ವಿನ್ಯಾಸದ ಟ್ಯಾಬ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಟ್ಯಾಬ್‌ ಮಾರುಕ್ಟೆಯಲ್ಲಿ ತನ್ನ ಜನಪ್ರಿಯತೆಯನ್ನ ಇನ್ನಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಅಷ್ಟೇ ಅಲ್ಲ ಟ್ಯಾಬ್‌ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿರುವ ಕಂಪೆನಿಗಳಿಗೆ ಸ್ಫರ್ದೆ ಒಡ್ಡಲು ಮುಂದಾಗಿದೆ. ಅಷ್ಟಕ್ಕೂ ಲೀಕ್‌ ಆದ ಫೀಚರ್ಸ್ನ ಮಾಹಿತಿ ಪ್ರಕಾರ ಇ ಟ್ಯಾಬ್‌ ಹೇಗಿರಲಿದೆ ಅನ್ನೊದನ್ನ ತಿಳಿದುಕೊಳ್ಳೋಣ ಬನ್ನಿ

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S6 ಲೈಟ್ ಕಳೆದ ವರ್ಷವಷ್ಟೇ ಬಿಡುಗಡೆ ಆಗಿದ್ದ ಗ್ಯಾಲಕ್ಸಿ ಟ್ಯಾಬ್ S6 ನ ಮುಂದುವರೆದ ಆವೃತ್ತಿಯಾಗಿದೆ. ಅಲ್ಲದೆ ಈ ಟ್ಯಾಬ್‌ ಹೊಸ ವಿನ್ಯಾಸವನ್ನ ಹೊಂದಿರುವ ಬಜೆಟ್ ಸ್ನೇಹಿ ಆವೃತ್ತಿಯೆಂದು ನಿರೀಕ್ಷಿಸಲಾಗಿದೆ. ಅಲ್ಲದೆ ಈ ಟ್ಯಾಬ್ಲೆಟ್ 10.4 ಇಂಚಿನ ಡಿಸ್ಪ್ಲೇ ಮತ್ತು S ಪೆನ್ ಹೊಂದಾಣಿಕೆಯನ್ನು ಹೊಂದಿದೆ ಎಂದು ಹೇಳಲಾಗಿದೆ. ಸದ್ಯ ಲಭ್ಯ ಮಾಹಿತಿಯ ಪ್ರಕಾರ 1,200x2,000 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 10.4-ಇಂಚಿನ LCD ಪ್ಯಾನೆಲ್‌ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇಯು ಅಲ್ಯೂಮಿನಿಯಂ ಕವಚವನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

ಇದಲ್ಲದೆ

ಇದಲ್ಲದೆ ಲೀಕ್‌ ಆದ ಇಮೇಜ್‌ಗಳ ಪ್ರಕಾರ ಈ ಟ್ಯಾಬ್‌ ಕೂಡ ಗ್ಯಾಲಕ್ಸಿ ಟ್ಯಾಬ್ S6 ನಂತೆಯೇ ಟ್ಯಾಬ್‌ನ ಅಂಚುಗಳಲ್ಲಿ ಬೆಜೆಲ್‌ಗಳನ್ನು ಹೊಂದಿರುತ್ತದೆ. ಇನ್ನು ಈ ಟ್ಯಾಬ್‌ ಆಕ್ಟಾ-ಕೋರ್ ಎಕ್ಸಿನೋಸ್ 9611 SoC ಪ್ರೊಸೆಸರ್‌ ಹೊಂದಿದೆ. ಅಲ್ಲದೆ ಇದು ನಾಲ್ಕು ಕೋರ್‌ಗಳನ್ನು 1.7GHz ಮತ್ತು 2.3GHz ಅನ್ನು ಒಳಗೊಂಡಿದೆ. ಹಾಗೇಯೇ ಈ ಟ್ಯಾಬ್ಲೆಟ್ 4GB RAM ಮತ್ತು 64GB ಹಾಗೂ 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿರುವ ವೇರಿಯೆಂಟ್‌ ಆಯ್ಕೆಯನ್ನು ಹೊಂದಿದೆ. ಜೊತೆಗೆ ಮೆಮೊರಿ ಕಾರ್ಡ್‌ ಮೂಲಕ ಸ್ಟೋರೆಜ್‌ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದೆ.

ರಿಯರ್‌

ಜೊತೆಗೆ ಈ ಟ್ಯಾಬ್‌ನಲ್ಲಿ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ನೀಡಲಾಗಿದ್ದು, ರಿಯರ್‌ ಕ್ಯಾಮೆರಾ 8 ಮೆಗಾಪಿಕ್ಸೆಲ್ ಶೂಟರ್ ಸೆನ್ಸಾರ್‌ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ ಟ್ಯಾಬ್‌ 7,040 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಕನೆಕಟ್ಇವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್‌ ಸಿಯನ್ನು ಬೆಂಬಲಿಸಲಿದೆ. ಅಲ್ಲದೆ ಬ್ಲುಟೂತ್‌, ಅನ್ನು ಸಹ ಬೆಂಬಲಿಸಿದೆ ಎಂದು ಹೇಳಲಾಗಿದೆ.

Best Mobiles in India

English summary
Samsung Galaxy Tab S6 Lite Specifications Leaked, Tipped to Come With 10.4-Inch Display, S Pen Support.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X