ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸರಣಿ ಬಿಡುಗಡೆ! ಆಕರ್ಷಕ ಫೀಚರ್ಸ್‌!

|

ದಕ್ಷಿಣ ಕೋರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ಯಾಲಕ್ಸಿ ಅನ್‌ಪ್ಯಾಕ್ಡ್‌ 2022 ಈವೆಂಟ್‌ ಅನ್ನು ನಡೆಸಿದೆ. ಈ ಈವೆಂಟ್‌ನಲ್ಲಿ ತನ್ನ ಹಲವು ಡಿವೈಸ್‌ಗಳನ್ನು ಜಾಗತಿಕ ಮತ್ತು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇದರಲ್ಲಿ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ತನ್ನ ನಲ್ಲಿ ಹೊಸ ಗ್ಯಾಲಕ್ಸಿ ವಾಚ್‌ 5 ಸರಣಿಯನ್ನು ಕೂಡ ಅನಾವರಣಗೊಳಿಸಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ವಾಚ್‌ಗಳು ಸಾಕಷ್ಟು ಅಪ್ಡೇಟ್‌ ಟೆಕ್ನಾಲಜಿಯನ್ನು ಒಳಗೊಂಡಿದ್ದು, ಎರಡು ಗಾತ್ರದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಹೊಸ ಗ್ಯಾಲಕ್ಸಿ ವಾಚ್‌ 5 ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಗ್ಯಾಲಕ್ಸಿ ವಾಚ್ 5 ಮತ್ತು ಗ್ಯಾಲಕ್ಸಿ ವಾಚ್ 5 ಪ್ರೊ ಒಳಗೊಂಡಿದೆ. ಇನ್ನು ಗ್ಯಾಲಕ್ಸಿ ವಾಚ್‌ 5 ಹಾರ್ಟ್‌ಬೀಟ್‌, SpO2 ಮತ್ತು ಒತ್ತಡದ ಮಟ್ಟವನ್ನು ಅಳೆಯುವ BioActive ಸೆನ್ಸಾರ್‌ ಅನ್ನು ಹೊಂದಿದೆ. ಇದು ಇಸಿಜಿ ಮತ್ತು ರಕ್ತದೊತ್ತಡ ಮಾನಿಟರಿಂಗ್ ಅನ್ನು ಕೂಡ ಮಾಡಲಿದೆ. ಅಲ್ಲದೆ 8 ನಿಮಿಷಗಳ ಚಾರ್ಜಿಂಗ್ ಜೊತೆಗೆ 8 ಗಂಟೆಗಳ ಸ್ಲೀಪ್ ಟ್ರ್ಯಾಕಿಂಗ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗಾದ್ರೆ ಗ್ಯಾಲಕ್ಸಿ ವಾಚ್ 5 ವಿಶೇಷತೆ ಏನು ಅನ್ನದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸ್ಮಾರ್ಟ್‌ವಾಚ್‌ನ 44mm ರೂಪಾಂತರವು 1.4-ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 450x450 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದರ 40mm ರೂಪಾಂತರದ ಆಯ್ಕೆಯು 1.2 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 396x396 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಎರಡೂ ರೂಪಾಂತರಗಳು ಕೂಡ ಆನ್‌ ಡಿಸ್‌ಪ್ಲೇ ಫೀಚರ್ಸ್‌ ಅನ್ನು ಹೊಂದಿವೆ.

ಸ್ಮಾರ್ಟ್‌ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ ಡ್ಯುಯಲ್-ಕೋರ್ ಎಕ್ಸಿನೋಸ್‌ W920 SoC ಪ್ರೊಸೆಸರ್‌ ಹೊಂದಿದೆ. ಇದಕ್ಕೆ ಪೂರಕವಾಗಿ WearOS 3.5-ಆಧಾರಿತ One UI ವಾಚ್ 4.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 1.5GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಬಲವನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್‌ ಹೊಸ ಸ್ಯಾಮ್‌ಸಂಗ್‌ ಬಯೋ ಆಕ್ಟಿವ್‌ ಸೆನ್ಸಾರ್‌ ಅನ್ನು ಹೊಂದಿದೆ. ಈ ಸೇನ್ಸಾರ್‌ ಆಪ್ಟಿಕಲ್ ಹಾರ್ಟ್‌ಬೀಟ್‌ ಸೆನ್ಸಾರ್‌, ಎಲೆಕ್ಟ್ರಿಕಲ್ ಹಾರ್ಟ್ ಸಿಗ್ನಲ್ ಮತ್ತು ಬಯೋ ಎಲೆಕ್ಟ್ರಿಕಲ್ ಇಂಪೆಡಾನ್ಸ ಅನಾಲಿಸಿಸ್ ಅನ್ನು ಸಂಯೋಜಿಸಲಿದೆ.

ಗ್ಯಾಲಕ್ಸಿ

ಇದಲ್ಲದೆ ಗ್ಯಾಲಕ್ಸಿ ವಾಚ್ 5 ಗೆ ಗೂಗಲ್ ಮ್ಯಾಪ್ಸ್ ಅಪ್ಲಿಕೇಶನ್ ಶೀಘ್ರದಲ್ಲೇ ಬರಲಿದೆ ಎಂದು ಸ್ಯಾಮ್‌ಸಂಗ್ ಹೇಳಿದೆ. ಇನ್ನು ಗ್ಯಾಲಕ್ಸಿ ವಾಚ್‌ 5 ಧೂಳು ಮತ್ತು ನೀರು ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಗ್ಯಾಲಕ್ಸಿ ವಾಚ್‌ 5 44mm ರೂಪಾಂತರವು 410mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆದರೆ 40mm ರೂಪಾಂತರವು 284mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಈ ರೂಪಾಂತರಗಳು WPC ಆಧಾರಿತ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ v5.2, NFC ಮತ್ತು GPS ಬೆಂಬಲಿಸಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಪ್ರೊ ಸ್ಮಾರ್ಟ್‌ವಾಚ್‌ 1.4 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 450x450 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ WearOS 3.5-ಆಧಾರಿತ One UI ವಾಚ್ 4.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಡಿ-ಬಕಲ್ ಸ್ಪೋರ್ಟ್ ಬ್ಯಾಂಡ್‌ನೊಂದಿಗೆ ಟೈಟಾನಿಯಂ ಕೇಸ್ ಅನ್ನು ಒಳಗೊಂಡಿದೆ. ಹಾಗೆಯೇ 1.5GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಬಲವನ್ನು ಪಡೆದಿದೆ.

ವಾಚ್‌

ಗ್ಯಾಲಕ್ಸಿ ವಾಚ್‌ 5 ಪ್ರೊ ಸ್ಮಾರ್ಟ್‌ವಾಚ್‌ ಟ್ರ್ಯಾಕ್ ಬ್ಯಾಕ್ ಫೀಚರ್ಸ್‌ ಅನ್ನು ನೀಡಲಿದೆ. ಇದು ಪಾದಯಾತ್ರಿಕರು, ಮೌಂಟೆನ್‌ ಬೈಕರ್‌ಗಳು ಬಳಸುವುದಕ್ಕೆ ಸೂಕ್ತವಾಗಲಿದೆ. ಏಕೆಂದರೆ ಈ ವಾಚ್‌ನಲ್ಲಿ ಹೈಕಿಂಗ್ ಮತ್ತು ಸೈಕ್ಲಿಂಗ್ ಮಾರ್ಗಗಳನ್ನು ಡೌನ್‌ಲೋಡ್ ಮಾಡಬಹುದು. ಇನ್ನು ಈ ಸ್ಮಾರ್ಟ್‌ವಾಚ್‌ ಕೂಡ ಸ್ಯಾಮ್‌ಸಂಗ್‌ನ ಬಯೋಆಕ್ಟಿವ್ ಸೆನ್ಸಾರ್‌ , ಅಕ್ಸಿಲೆರೊಮೀಟರ್, ಬಾರೋಮೀಟರ್, ಗೈರೊಸ್ಕೋಪ್, ದಿಕ್ಸೂಚಿ ಮತ್ತು ಲೈಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 40mm ಬ್ಲೂಟೂತ್ ರೂಪಾಂತರದ ಬೆಲೆ $279 (ಅಂದಾಜು 22,100ರೂ)ಆಗಿದೆ. ಮತ್ತು ಇದರ LTE ರೂಪಾಂತರದ ಆಯ್ಕೆಯ ಬೆಲೆ $329 (ಸುಮಾರು 26,100ರೂ) ನಿಂದ ಪ್ರಾರಂಭವಾಗುತ್ತದೆ. ಆದರೆ ಗ್ಯಾಲಕ್ಸಿ ವಾಚ್‌ 5 (44mm) ಬ್ಲೂಟೂತ್ ಮತ್ತು LTE ರೂಪಾಂತರಗಳ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ.
ಇನ್ನು ಗ್ಯಾಲಕ್ಸಿ ವಾಚ್‌ 5 ಪ್ರೊ ಬ್ಲೂಟೂತ್ ರೂಪಾಂತರದ ಆಯ್ಕೆಯ ಬೆಲೆ $449 (ಅಂದಾಜು 35,600ರೂ) ಮತ್ತು LTE ರೂಪಾಂತರಕ್ಕೆ $499 (ಅಂದಾಜು 39,600ರೂ) ಬೆಲೆಯನ್ನು ಹೊಂದಿದೆ.

Best Mobiles in India

Read more about:
English summary
Galaxy Watch 5 features a BioActive sensor that measures heart rate, SpO2 and stress levels.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X