ಆರೋಗ್ಯ ಹೆಚ್ಚಿಸಿಕೊಳ್ಳಲು ಬಿಡುಗಡೆಗೊಂಡಿವೆ ಗ್ಯಾಲಕ್ಸಿ ಫಿಟ್ನೆಸ್ ಟ್ರ್ಯಾಕರ್ ಗಳು

By Gizbot Bureau
|

ಸ್ಯಾಮ್ ಸಂಗ್ ಸಂಸ್ಥೆ ಗ್ಯಾಲಕ್ಸಿ ವಾಚ್ ಆಕ್ಟಿವ್ ಸ್ಮಾರ್ಟ್ ವಾಚ್ ಮತ್ತು ಗ್ಯಾಲಕ್ಸಿ ಫಿಟ್ ಮತ್ತು ಗ್ಯಾಲಕ್ಸಿ ಫಿಟ್ ಇ ಆಕ್ಟಿವಿಟಿ ಟ್ರ್ಯಾಕರನ್ನು ಗ್ಯಾಲಕ್ಸಿ ಅನ್ ಪ್ಯಾಕ್ಡ್ 2019 ಇವೆಂಟ್ ನಲ್ಲಿ ಬಿಡುಗಡೆಗೊಳಿಸಿದೆ. ಗ್ಯಾಲಕ್ಸಿ ಡಿವೈಸ್ ಗಳ ಗುಂಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಧರಿಸಬಹುದಾಗಿರುವ ಈ ಹೊಸ ಡಿವೈಸ್ ಕಡಿಮೆ ತೂಕದಾಗಿದ್ದು ಫಿಟ್ನೆಸ್ ಟ್ರ್ಯಾಕ್ ಮಾಡುವುದಕ್ಕೆ ಮತ್ತು ನಿಮ್ಮ ಆರೋಗ್ಯ ಸುಧಾರಿಸುವುದಕ್ಕೆ ಅನುಕೂಲ ಮಾಡಿಕೊಡುವ ಎಲ್ಲಾ ಫೀಚರ್ ಗಳನ್ನು ಹೊಂದಿದೆ.

ಆರೋಗ್ಯ ಹೆಚ್ಚಿಸಿಕೊಳ್ಳಲು ಬಿಡುಗಡೆಗೊಂಡಿವೆ ಗ್ಯಾಲಕ್ಸಿ ಫಿಟ್ನೆಸ್ ಟ್ರ್ಯಾಕರ್ ಗಳು

ಸ್ಯಾಮ್ ಸಂಗ್ ತಿಳಿಸುವಂತೆ ಗ್ಯಾಲಕ್ಸಿ ವಾಚ್ ಮುಂದಿನ ತಿಂಗಳಿನಿಂದ ಮಾರಾಟಕ್ಕೆ ಲಭ್ಯವಿರುತ್ತದೆ ಮತ್ತು ಗ್ಯಾಲಕ್ಸಿ ಫಿಟ್ ಮೇ ಅಂತ್ಯದಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಲು ಲಭ್ಯವಾಗುತ್ತದೆ. ಆದರೆ ಗ್ಯಾಲಕ್ಸಿ ಫಿಟ್ ಇ ಯಾವಾಗ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಲಾಗಿಲ್ಲ.

ಗ್ರಾಹಕರು ಇತ್ತೀಚೆಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಮತ್ತು ತಮ್ಮ ಜೀವನಶೈಲಿಯ ಸುಧಾರಣೆಗಾಗಿ ಧರಿಸಬಹುದಾದ ಗೆಡ್ಜೆಟ್ ಗಳನ್ನು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಆ ಮೂಲಕ ದಿನಪೂರ್ತಿ ಚಟುವಟಿಕೆಯಿಂದ ಮತ್ತು ಸಮತೋಲನದಲ್ಲಿ ಇರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ನ ಐಟಿ ಮತ್ತು ಮೊಬೈಲ್ ಕಮ್ಯುನಿಕೇಷನ್ ಡಿವಿಷನ್ ನ ಸಿಇಓ ಆಗಿರುವ ಡಿಜೆ ಕೋಹ್ ತಿಳಿಸಿದ್ದಾರೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಆಕ್ಟಿವ್ : ಬೆಲೆ ಮತ್ತು ವೈಶಿಷ್ಟ್ಯತೆಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಆಕ್ಟಿವ್ : ಬೆಲೆ ಮತ್ತು ವೈಶಿಷ್ಟ್ಯತೆಗಳು

ಸ್ಯಾಮ್ ಸಂಗ್ ತಿಳಿಸುವಂತೆ ಸ್ಯಾಮ್ ಸಂಗ್ ನ ಧರಿಸಬಹುದಾಗಿರುವ ಸ್ಮಾರ್ಟ್ ವಾಚ್ ಗ್ಯಾಲಕ್ಸಿ ವಾಚ್ ಆಕ್ಟೀವ್ ಕೇವಲ ಒಂದು ಧರಿಸಬಹುದಾಗಿರುವ ಫಿಟ್ನೆಸ್ ಟ್ರ್ಯಾಕಿಂಗ್ ಡಿವೈಸ್ ಮಾತ್ರವೇ ಅಲ್ಲ ಬದಲಾಗಿ ಅದರಲ್ಲಿ ಇನ್ನೂ ಹೆಚ್ಚಿನದ್ದಿದೆ. ಸ್ಮಾರ್ಟ್ ವಾಚ್ ನಲ್ಲಿ ಸಾಕಷ್ಟು ಫೀಚರ್ ಗಳಿವೆ. ವ್ಯಾಯಾಮದ ಟ್ರ್ಯಾಕಿಂಗ್, ನಿದ್ದೆಯ ಟ್ರ್ಯಾಕಿಂಗ್, ಒತ್ತಡದ ಟ್ರ್ಯಾಕಿಂಗ್ ಮತ್ತು ಆರೋಗ್ಯದ ಟ್ರ್ಯಾಕಿಂಗ್. ಯಾರೂ ಆರೋಗ್ಯಕರವಾಗಿರುವ ದೇಹ ಮತ್ತು ಮನಸ್ಸನ್ನು ಇಚ್ಛಿಸುತ್ತಾರೋ ಅವರಿಗೆ ಇದೊಂದು ಅಧ್ಬುತ ಡಿವೈಸ್ ಆಗಿರುತ್ತದೆ.

ರಕ್ತದೊತ್ತಡವನ್ನು ಮಾನಿಟರ್ ಮಾಡುವ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿರುವ ಮೊದಲ ಧರಿಸಬಹುದಾದ ಸ್ಯಾಮ್ ಸಂಗ್ ನ ಡಿವೈಸ್ ಇದಾಗಿದೆ. ಗ್ಯಾಲಕ್ಸಿ ವಾಚ್ ಆಕ್ಟೀವ್ ನ ಮಾಲೀಕರು MY BP Lab ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸ್ಯಾಮ್ ಸಂಗ್ ಇದನ್ನು ಡೆವಲಪ್ ಮಾಡಿದೆ. ಈ ಆಪ್ ನ ಮೂಲಕ ನಿಮ್ಮ ಬ್ಲಡ್ ಪ್ರಷರ್ ನ್ನು ಟ್ರ್ಯಾಕ್ ಮಾಡಬಹುದು. ಆದರೆ ಇದು ಕೇವಲ ಯುಎಸ್, ಕೆನಡಾ, ಸಿಂಗಾಪುರ, ಆಸ್ಟ್ರೇಲಿಯಾ, ಮತ್ತು ಜರ್ಮನಿ ಮಾರುಕಟ್ಟೆಗಳಿಗೆ ಮಾತ್ರವೇ ಸೀಮಿತವಾಗಿರುತ್ತದೆ.

ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಇದು ಕಂಪ್ಯಾಟಿಬಲ್ ಆಗಿದೆ. ಇದರಲ್ಲಿ ಬಿಕ್ಸ್ಬೈ ಇಂಟಿಗ್ರೇಷನ್ನಿನ ವಾಯ್ಸ್ ಆಕ್ಷನ್ ಇದೆ.

ಈ ಸ್ಮಾರ್ಟ್ ವಾಚ್ 1.1-ಇಂಚಿನ 360x360 ಪಿಕ್ಸಲ್ AMOLED ಸ್ಕ್ರೀನ್ ಜೊತೆಗೆ ಗೋರಿಲ್ಲಾ ಗ್ಲಾಸ್ 3 ಹೊಂದಿದೆ.ಇದು 230mAh ಬ್ಯಾಟರಿ ಮತ್ತು ಡುಯಲ್ ಕೋರ್ Exynos 9110 ಪ್ರೊಸೆಸರ್ ನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಟೈಝನ್ ಮೂಲದ ಧರಿಸಬಹುದಾದ OS 4.0 ದಲ್ಲಿ ರನ್ ಆಗುತ್ತದೆ ಮತ್ತು 768MB RAM ಮತ್ತು 4GB ಆನ್ ಬೋರ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಹೆಚ್ಚುವರಿಯಾದಿ ಸ್ಯಾಮ್ ವಾಚ್ ನಲ್ಲಿ IP68 ಮತ್ತು MIL-STD-810G ಸರ್ಟಿಫಿಕೇಟ್ ಜೊತೆಗ 5ATM ವಾಟರ್ ರೆಸಿಸ್ಟೆಂಟ್ ಆಗಿದೆ.

ಇದು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲಿಸುತ್ತದೆ ಮತ್ತು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 4.2, ವೈ-ಫೈ b/g/n, NFC, ಮತ್ತು A-GPS ಇದೆ.

ಗ್ಯಾಲಕ್ಸಿ ವಾಚ್ ಆಕ್ಟೀವ್ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯ- ಬೆಳ್ಳಿ, ರೋಸ್ ಗೋಲ್ಡ್, ಕಪ್ಪು, ಸೀ ಗ್ರೀನ್. ಪ್ರೀ ಆರ್ಡರ್ ಮಾಡಲು ಯುಎಸ್ ನಲ್ಲಿ ಫೆಬ್ರವರಿ 21 ರಿಂದ ಆರಂಭವಾಗುತ್ತದೆ ಮತ್ತು ಮಾರ್ಚ್ 8 ರಿಂದ ಶಿಪ್ಪಿಂಗ್ ನಡೆಯುತ್ತದೆ. ಯುಎಸ್ ನಲ್ಲಿ ಇದರ ಬೆಲೆ $199.99 (ಅಂದಾಜು Rs. 14,300). ಸದ್ಯಕ್ಕೆ ಭಾರತೀಯ ಮಾರುಕಟ್ಟೆ ಬೆಲೆಯನ್ನು ಪ್ರಕಟಿಸಲಾಗಿಲ್ಲ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಫಿಟ್, ಗ್ಯಾಲಕ್ಸಿ ಫಿಟ್ ಇ ಬೆಲೆ ಮತ್ತು ವೈಶಿಷ್ಟ್ಯತೆಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ಫಿಟ್, ಗ್ಯಾಲಕ್ಸಿ ಫಿಟ್ ಇ ಬೆಲೆ ಮತ್ತು ವೈಶಿಷ್ಟ್ಯತೆಗಳು

ಸ್ಯಾಮ್ ಸಂಗ್ ಹೊಸ ಆಕ್ಟಿವಿಟಿ ಟ್ರ್ಯಾಕರ್ ಗ್ಯಾಲಕ್ಸಿ ಫಿಟ್ ಮತ್ತು ಗ್ಯಾಲಕ್ಸಿ ಫಿಟ್ ಇ ಹೆಚ್ಚು ಟ್ರ್ಯಾಕಿಂಗ್ ಫೀಚರ್ ಗಳನ್ನು ಬಯಸದ ವಾಚ್ ನಂತಹ ಡಿವೈಸ್ ಅಗತ್ಯವಿಲ್ಲದ ಗ್ರಾಹಕರಿಗಾಗಿ ನಿರ್ಮಿಸಲಾಗಿದೆ.

ತೆಳುವಾದ ಮತ್ತು ಕಡಿಮೆ ತೂಕದ ಡಿಸೈನ್ ಹೊಂದಿರುವ ಗ್ಯಾಲಕ್ಸಿ ಫಿಟ್ ಮತ್ತು ಗ್ಯಾಲಕ್ಸಿ ಫಿಟ್ ಇ ನೀವು ಓಡುವಾಗ, ನಡೆಯುವಾಗ, ಬೈಕ್ ಅಥವಾ ಸಾಮಾನ್ಯ ವರ್ಕ್ ಔಟ್ ಮಾಡುವಾಗ ಅದರ ಟ್ರ್ಯಾಕಿಂಗ್ ನ್ನು ಸ್ವಯಂಚಾಲಿತವಾಗಿ ಇಟ್ಟುಕೊಳ್ಳುತ್ತದೆ. 90 ವಿಭಿನ್ನ ಆಕ್ಟಿವಿಟಿಯನ್ನು ಮ್ಯಾನುವಲ್ ಆಗಿ ಸೆಲೆಕ್ಟ್ ಮಾಡುವುದಕ್ಕೂ ಕೂಡ ಇದರಲ್ಲಿ ಅವಕಾಶವಿರುತ್ತದೆ.

ಸ್ಯಾಮ್ ಸಂಗ್ ತಿಳಿಸುವಂತೆ, ಗ್ಯಾಲಕ್ಸಿ ಫಿಟ್ 0.95-ಇಂಚಿನ 120x240 ಪಿಕ್ಸಲ್ AMOLED ಸ್ಕ್ರೀನ್ ಹೊಂದಿದ್ದರೆ ಗ್ಯಾಲಕ್ಸಿ ಫಿಟ್ ಇ 0.74-ಇಂಚಿನ 64x128 ಪಿಕ್ಸಲ್ PMOLED ಡಿಸ್ಪ್ಲೇ ಯನ್ನು ಹೊಂದಿದೆ.

ಎರಡೂ ಆಕ್ಟಿವಿಟಿ ಟ್ರ್ಯಾಕರ್ ಗಳು ರಿಯಲ್ ಟೈಮ್ OS ನಲ್ಲಿ ರನ್ ಆಗುತ್ತದೆ ಮತ್ತು 5ATM ವಾಟರ್ ರೆಸಿಸ್ಟೆಂಟ್ ಮತ್ತು ಹಾರ್ಟ್ ರೇಟ್ ಮಾನಿಟರ್ ನ್ನು ಹೊಂದಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಫಿಟ್ ಕಪ್ಪು ಮತ್ತು ಬೆಳ್ಳಿ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ ಗ್ಯಾಲಕ್ಸಿ ಇ ಕಪ್ಪು, ಬಿಳಿ ಮತ್ತು ಹಳದಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಫಿಟ್ ಬೆಲೆ

ಸ್ಯಾಮ್ ಸಂಗ್ ಗ್ಯಾಲಕ್ಸಿ ಫಿಟ್ ಬೆಲೆ

ಸ್ಯಾಮ್ ಸಂಗ್ ಗ್ಯಾಲಕ್ಸಿ ಫಿಟ್ $99 (ಅಂದಾಜು Rs. 7,000) ಬೆಲೆಯನ್ನು ಯುಸ್ ನಲ್ಲಿ ಹೊಂದಿದೆ ಮತ್ತು ಮೇ 31 ರಿಂದ ಮಾರಾಟ ಆರಂಭವಾಗುತ್ತದೆ. ಗ್ಯಾಲಕ್ಸಿ ಫಿಟ್ ಇ ಎಷ್ಟು ಬೆಲೆಗೆ ಸಿಗುತ್ತದೆ ಎಂಬುದನ್ನು ಇನ್ನೂ ತಿಳಿಸಿಲ್ಲ. ಎರಡೂ ಡಿವೈಸ್ ನ ಭಾರತೀಯ ಮಾರುಕಟ್ಟೆಯ ಬೆಲೆ ಕೂಡ ಇದುವರೆಗೂ ತಿಳಿದುಬಂದಿಲ್ಲ.

Most Read Articles
Best Mobiles in India

Read more about:
English summary
Samsung Galaxy Watch Active, Galaxy Fit, Galaxy Fit E Wearables Unveiled: All You Need to Know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X