Samsung Galaxy Z Flip : ಬರಲಿದೆ ಗ್ಯಾಲಕ್ಸಿ Z ಫ್ಲಿಪ್‌ ಸ್ಮಾರ್ಟ್‌ಫೋನ್‌!

|

ಸ್ಮಾರ್ಟ್‌ಫೋನ್‌ ದಿಗ್ಗಜ ಸ್ಯಾಮ್‌ಸಂಗ್‌ ಫೆಬ್ರವರಿ 11 ರಂದು 2020 ರ ತನ್ನ ಮೊದಲ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅದರಲ್ಲೂ ಈ ವರ್ಷದ ಪ್ರಾರಂಭದಲ್ಲಿ ಗ್ಯಾಲಕ್ಸಿ ಎಸ್ 20, ಗ್ಯಾಲಕ್ಸಿ ಎಸ್ 20 + ಮತ್ತು ಗ್ಯಾಲಕ್ಸಿ ಎಸ್ 20 ಅಲ್ಟ್ರಾ. ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ ಎನ್ನಲಾಗ್ತಿದೆ. ಈ ನಡುವೆ ಸ್ಮಾರ್ಟ್‌ಫೋನ್‌ ಪ್ರಿಯರ ಪ್ರಮುಖ ಆಕರ್ಷಣೆಗೆ ಕಾರಣವಾಗಿರುವ ಫ್ಲಿಪ್ ಮಾದರಿಯ ಸ್ಮಾರ್ಟ್‌ಫೋನ್‌ ಅನ್ನ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದ ಎಂಬ ಸುದ್ದಿ ಟೆಕ್‌ ವಲಯದಲ್ಲಿ ಕೇಳಿ ಬರುತ್ತಿದೆ.

ಸ್ಯಾಮ್‌ಸಂಗ್‌

ಹೌದು ಸ್ಯಾಮ್‌ಸಂಗ್‌ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದತೆ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಗ್ಯಾಲಕ್ಸಿ Z ಫ್ಲಿಪ್ ಆಗಿರಲಿದೆ ಎಂದು ಹೇಳಲಾಗ್ತಿದ್ದು, ಈ ಸ್ಮಾರ್ಟ್‌ಫೋನ್ ಮಡಚಬಹುದಾದ ಪರದೆಯನ್ನು ಹೊಂದಿರಲಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯ ಬಗ್ಗೆ ಕಂಪೆನಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ನ ವಿನ್ಯಾಸ ಹಾಗೂ ಫೀಚರ್ಸ್‌ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ. ಲೀಕ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ

ಡಿಸ್‌ಪ್ಲೇ

ಡಿಸ್‌ಪ್ಲೇ

ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್‌ 6.7-ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇ ಎತ್ತರ 22: 9 ಆಸ್ಪೆಕ್ಟ್‌ ರೇಶಿಯೋ ಹೊಂದಿದ್ದು, ಇದು ಫುಲ್‌ ಎಚ್ಡಿ + ರೆಸಲ್ಯೂಶನ್ ಅನ್ನು ಬೆಂಬಲಿಸಲಿದೆ. ಈ ಡಿಸ್‌ಪ್ಲೇಯು ಪಂಚ್ ಹೋಲ್‌ ಸೆಲ್ಫಿ ಹೊಂದಿದ್ದು, ಸ್ಮಾರ್ಟ್‌ಫೋನ್‌ ಅನ್ನು 70 ರಿಂದ 110 ಡಿಗ್ರಿಗಳ ನಡುವೆ ಸರಿಹೊಂದಿಸಲಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ 300 x 116 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಹೊಂದಿರುವ 1.06-ಇಂಚಿನ ಎಕ್ಸಾಟರ್ನಲ್‌ ಡಿಸ್‌ಪ್ಲೇ ಯನ್ನ ಡ್ಯುಯಲ್ ಕ್ಯಾಮೆರಾ ಸೆಟಪ್ ಪಕ್ಕದಲ್ಲಿಯೇ ಅಳವಡಿಸಲಾಗಿದ್ದು ಇದು ಯಾವಾಗಲೂ ಆನ್ ಡಿಸ್‌ಪ್ಲೇ ಮೋಡ್ ಅನ್ನು ಬೆಂಬಲಿಸುತ್ತದೆ ಎಂದು ಅಂದಾಜಿಸಲಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855+ ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 256GB ಶೇಖರಣಾ ಸಾಮರ್ಥ್ಯವನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.

ಕ್ಯಾಮೆರಾ

ಕ್ಯಾಮೆರಾ

ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮೊದಲನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು F/ 1.8 ಅಪರ್ಚರ್ ಹೊಂದಿದೆ, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಸೆನ್ಸಾರ್‌ ಅನ್ನ ಒಳಗೊಂಡಿದೆ. ಇನ್ನು ಸೆಲ್ಫಿ ಕ್ಯಾಮೆರಾ 10 ಮೆಗಾಪಿಕ್ಸೆಲ್ ಸೆನ್ಸಾರ್‌ನ ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್ ಮತ್ತು ಎಫ್ / 2.4 ಅಪರ್ಚರ್ ಹೊಂದಿರಲಿದೆ ಎಂದು ಹೇಳಲಾಗುತ್ತದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇದು ಮಡಚಬಹುದಾದ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ ಆಗಿರುವುದರಿಂದ ಎರಡು ಭಾಗಗಳಿಗೂ ಸೇರಿ 3,300mAh ಬ್ಯಾಟರಿ ಪ್ಯಾಕ್‌ಆಪ್‌ ಅನ್ನ ನೀಡಲಾಗಿದ್ದು. 15W ವೇಗದ ಚಾರ್ಜ್ ಬೆಂಬಲವನ್ನು ಹೊಂದಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಒನ್ ಯುಐ 2.0 ಹೊಂದಿರಲಿದೆ. ಇದರ ಬೆಲೆ ಸುಮಾರು $1 400 (ಸುಮಾರು 99,700 ರೂ.) ಆಗಿದ್ದು, ಫೆಬ್ರವರಿ 14 ರಿಂದ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Samsung Galaxy Z Flip will feature a clamshell design and is tipped to come in black and purple colors.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X