ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಮತ್ತು Z ಫ್ಲಿಪ್‌ 4 ಪ್ರಿ ಬುಕ್ಕಿಂಗ್‌ ಶುರು! ಏನೆಲ್ಲಾ ಆಫರ್‌!

|

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ಇತ್ತೀಚಿಗೆ ಹೊಸ ಗ್ಯಾಲಕ್ಸಿ Z ಫೋಲ್ಡ್‌ 4 ಸರಣಿಯನ್ನು ಪರಿಚಯಿಸಿತ್ತು. ಈ ಸರಣಿಯ ಗ್ಯಾಲಕ್ಸಿ Z ಫೋಲ್ಡ್‌ 4 ಮತ್ತು ಗ್ಯಾಲಕ್ಸಿ Z ಫ್ಲಿಪ್‌ 4 ತಮ್ಮ ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳೆದಿವೆ. ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ನೀಡಿದ್ದ ಈ ಸರಣಿಯ ಫೋನ್‌ಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿವೆ. ಸದ್ಯ ಇದೀಗ ಈ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ಇಂದಿನಿಂದ ಭಾರತದಲ್ಲಿ ಪ್ರಿ ಬುಕ್ಕಿಂಗ್‌ಗೆ ಲಭ್ಯವಾಗಲಿವೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿಯ ಹೊಸ ಗ್ಯಾಲಕ್ಸಿ Z ಫೋಲ್ಡ್‌ 4 ಸರಣಿಯ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಪ್ರಿ ಬುಕ್ಕಿಂಗ್‌ ಮಾಡುವುದಕ್ಕೆ ಅವಕಾಶವಿದೆ. ಗ್ಯಾಲಕ್ಸಿ Z ಫೋಲ್ಡ್‌ 4 ಸರಣಿಯ ಫೊಲ್ಡಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಮುಂಗಡವಾಗಿ ಬುಕ್ ಮಾಡುವ ಜನರಿಗೆ ಹಲವಾರು ಆಫರ್‌ಗಳು ಲಭ್ಯವಾಗಲಿವೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ಗಳ ನಿಗದಿತ ಬೆಲೆ ಎಷ್ಟು ಎಂಬುದು ಇನ್ನು ಬಹಿರಂಗವಾಗಿಲ್ಲ. ಆದರೆ ಪ್ರಿ ಬುಕ್ಕಿಂಗ್‌ ಮಾಡುವ ಮೊತ್ತವನ್ನು ನಿಗದಿಪಡಿಸಲಾಗಿದೆ. ಹಾಗಾದ್ರೆ ಭಾರತದಲ್ಲಿ Z ಫೋಲ್ಡ್‌ 4 ಸರಣಿಯನ್ನು ಪ್ರಿ ಬುಕ್ಕಿಂಗ್‌ ಮಾಡುವುದು ಹೇಗೆ? ಪ್ರಿ ಬುಕ್ಕಿಂಗ್‌ ಮಾಡಿದವರಿಗೆ ಏನೆಲ್ಲಾ ಆಪರ್‌ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗ್ಯಾಲಕ್ಸಿ Z ಫೋಲ್ಡ್‌ 4 ಮತ್ತು Z ಫ್ಲಿಪ್‌ 4 ಅನ್ನು ಪ್ರಿ ಬುಕ್ಕಿಂಗ್‌ ಮಾಡುವುದು ಹೇಗೆ?

ಗ್ಯಾಲಕ್ಸಿ Z ಫೋಲ್ಡ್‌ 4 ಮತ್ತು Z ಫ್ಲಿಪ್‌ 4 ಅನ್ನು ಪ್ರಿ ಬುಕ್ಕಿಂಗ್‌ ಮಾಡುವುದು ಹೇಗೆ?

ಗ್ಯಾಲಕ್ಸಿ Z ಫೋಲ್ಡ್‌ 4 ಮತ್ತು Z ಫ್ಲಿಪ್‌ 4 ಸ್ಮಾರ್ಟ್‌ಫೋನ್‌ಗಳನ್ನು ಪ್ರಿ ಬುಕ್ಕಿಂಗ್‌ ಮಾಡುವವರು ಮೊದಲಿಗೆ ಸ್ಯಾಮ್‌ಸಂಗ್‌ ಇಂಡಿಯಾ ವೆಬ್‌ಸೈಟ್‌ಗೆ ಬೇಟಿ ನೀಡಬೇಕಾಗುತ್ತದೆ. ಇದರಲ್ಲಿ ನಿಮಗೆ ಪ್ರಿ ಬುಕ್ಕಿಂಗ್‌ ಮಾಹಿತಿಯನ್ನು ಹೊಂದಿರುವ ಬ್ಯಾನರ್ ಕಾಣಲಿದೆ. ಪ್ರಿ ಬುಕ್ಕಿಂಗ್‌ ಇಂದು (ಆಗಸ್ಟ್ 16) ಮಧ್ಯಾಹ್ನ ಪ್ರಾರಂಭವಾಗಲಿದ್ದು, ಆಗಸ್ಟ್ 17 ರ ಮಧ್ಯರಾತ್ರಿಯವರೆಗೆ ನಡೆಯುತ್ತದೆ. ಆಗ ಬ್ಯಾನರ್ ಪ್ರಿ-ಬುಕಿಂಗ್‌ಗೆ ಸಕ್ರಿಯವಾಗುತ್ತದೆ. ಇನ್ನು ನೀವು ಫೋನ್ ಅನ್ನು ಪ್ರಿ ಬುಕ್ಕಿಂಗ್‌ ಮಾಡುವುದಕ್ಕೆ 1,999ರೂ.ಗಳನ್ನು ಪಾವತಿಸಬೇಕಾಗುತ್ತದೆ. ನೀವು ಫೋನ್‌ ಖರೀದಿಸುವಾಗ ಈ ಹಣವನ್ನು ಫೋನ್‌ ಬೆಲೆಗೆ ಸರಿಹೊಂದಿಸಲಾಗುತ್ತದೆ.

ಪ್ರಿ ಬುಕ್ಕಿಂಗ್‌ ಮಾಡುವುದರಿಂದ ನಿಮಗೆ ಲಭ್ಯವಾಗುವ ಆಫರ್‌ಗಳು?

ಪ್ರಿ ಬುಕ್ಕಿಂಗ್‌ ಮಾಡುವುದರಿಂದ ನಿಮಗೆ ಲಭ್ಯವಾಗುವ ಆಫರ್‌ಗಳು?

ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್ ಪ್ರಕಾರ, ನೀವು ಗ್ಯಾಲಕ್ಸಿ Z ಫೋಲ್ಡ್‌ 4 ಸರಣಿ ಫೋನ್‌ಗಳನ್ನು ಪ್ರಿ ಬುಕ್ಕಿಂಗ್‌ ಮಾಡಿ ನಂತರ ಖರೀದಿಸಿದರೆ, ನಿಮಗೆ 40,000 ರೂ.ಗಿಂತ ಹೆಚ್ಚಿನ "ಎಕ್ಸಕ್ಲೂಸಿವ್ ಆಫರ್" ಪಡೆದುಕೊಳ್ಳಬಹುದಾಗಿದೆ. ಆದರೆ ಈ ಆಫರ್‌ಗಳು ಏನು ಎಂಬುದರ ಬಗ್ಗೆ ಸ್ಯಾಮ್‌ಸಂಗ್‌ ಕಂಪೆನಿ ನಿಖರವಾಗಿ ತಿಳಿಸಿಲ್ಲ. ಇನ್ನು ಈ ಆಫರ್‌ಗಳ ಜೊತೆಗೆ ಸ್ಯಾಮ್ ಸಂಗ್ ನಿಮಗೆ 5,199ರೂ ಮೌಲ್ಯದ ಹೆಚ್ಚುವರಿ ಆಫರ್‌ ಅನ್ನು ಕೂಡ ನೀಡಲಿದೆ. ಅಂದರೆ ನೀವು ಗ್ಯಾಲಕ್ಸಿ Z ಫ್ಲಿಪ್‌ 4 ನ ಬೆಸ್ಪೋಕ್ ಆವೃತ್ತಿಯನ್ನು ಪ್ರಿ ಬುಕ್ಕಿಂಗ್‌ ಮಾಡಿದರೆ ನೀವು 2,000ರೂ. ರೂಪಾಯಿ ಮೌಲ್ಯದ ಸ್ಲಿಮ್ ಕವರ್ ಅನ್ನು ಉಚಿತವಾಗಿ ಪಡೆದುಕೊಳ್ಳುವುದಕ್ಕೆ ಅವಕಾಶ ಸಿಗಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಫೀಚರ್ಸ್‌ ಹೇಗಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಫೀಚರ್ಸ್‌ ಹೇಗಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಸ್ಮಾರ್ಟ್‌ಫೋನ್‌ 7.6 ಇಂಚಿನ ಡೈನಾಮಿಕ್ ಅಮೋಲೆಡ್‌ 2X ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ 6.2 ಇಂಚಿನ HD+ ಡೈನಾಮಿಕ್ ಅಮೋಲೆಡ್‌ 2X ಕವರ್‌ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮೇನ್‌ ಡಿಸ್‌ಪ್ಲೇಯಲ್ಲಿ 4 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಹಾಗೂ ಕವರ್ ಡಿಸ್‌ಪ್ಲೇಯಲ್ಲಿ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಸ್ಮಾರ್ಟ್‌ಫೋನ್‌ 4,400mAh ಸಾಮರ್ಥ್ಯದ ಡ್ಯುಯಲ್ ಬ್ಯಾಟರಿಯನ್ನು ಹೊಂದಿದೆ. ಇದು 25W ಚಾರ್ಜರ್‌ ಬೆಂಬಲಿಸಲಿದ್ದು, ಸುಮಾರು 30 ನಿಮಿಷಗಳಲ್ಲಿ 50% ಚಾರ್ಜಿಂಗ್‌ ಮಾಡಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 4 ಫೀಚರ್ಸ್‌ ಹೇಗಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 4 ಫೀಚರ್ಸ್‌ ಹೇಗಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 4 ಸ್ಮಾರ್ಟ್‌ಫೋನ್‌ ಮೇನ್‌ ಡಿಸ್‌ಪ್ಲೇ 6.7 ಇಂಚಿನ ಫಿಲ್‌ HD+ ಡೈನಾಮಿಕ್ ಅಮೋಲೆಡ್‌ ಡಿಸ್‌ಪ್ಲೇ ಆಗಿದೆ. ಇದು ಆಕ್ಟಾ-ಕೋರ್ 4nm ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 12 ನಲ್ಲಿ OneUI 4.1.1 ಮೂಲಕ ರನ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್‌ ಅನ್ನು ಹೊಂದಿದೆ. ಜೊತೆಗೆ 3,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 25W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

Best Mobiles in India

English summary
Samsung Galaxy Z Fold 4 and Galaxy Z Flip 4 will be up for pre-booking in India from today

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X