TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ M' ಫೋನ್‌ಗಳ ಬಿಡುಗಡೆಗೆ ಕ್ಷಣಗಣನೆ!..ಬೆಚ್ಚಿವೆ ಚೀನಾ ಕಂಪೆನಿಗಳು!!
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್ ಕಂಪೆನಿಗಳ ಪರಾಕ್ರಮವನ್ನು ತಡೆಯಲು ಜನಪ್ರಿಯ ಮೊಬೈಲ್ ಕಂಪೆನಿ ಸ್ಯಾಮ್‌ಸಂಗ್ ಇಂದು ಭಾರತೀಯರಿಗೆ ಭಾರೀ ಸಿಹಿಸುದ್ದಿ ನೀಡಲು ತಯಾರಾಗಿದೆ. ಜನವರಿ 28ಕ್ಕೆ ಅಂದರೆ ಇಂದು ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೊಂದು ಸುತ್ತಿನ ಮೆಗಾಫೈಟ್ ಶುರುವಾಗಲು ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಂ ಸೀರಿಸ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ.
ಭಾರತೀಯರಿಗಾಗಿಯೇ ವಿಶೇಷ ಸೀರಿಸ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡುವುದಾಗಿ ಈಗಾಗಲೇ ತಿಳಿಸಿದ್ದ ಸ್ಯಾಮ್‌ಸಂಗ್, ಇದೇ ಜನವರಿ 28ಕ್ಕೆ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರತಕ್ಕಾಗಿಯೇ ವಿಶೇಷ 'ಗ್ಯಾಲಾಕ್ಸಿ M' ಸರಣಿ ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿತ್ತು. ಅದರಂತೆ, ಇಂದು 'ಗ್ಯಾಲಾಕ್ಸಿ M' ಸರಣಿ ಸ್ಮಾರ್ಟ್‌ಫೋನ್‌ಗಳು ಕೇವಲ 9,500 ರೂ.ಗಳಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಈಗಾಗಲೇ ಈ ಬಗ್ಗೆ ಕೆಲವು ವಿಶೇಷ ಮಾಹಿತಿಗಳನ್ನು ಬಿಟ್ಟುಕೊಟ್ಟಿರುವ ಸ್ಯಾಮ್‌ಸಂಗ್, ತನ್ನ ನೂತನ ಸರಣಿ 'ಗ್ಯಾಲಾಕ್ಸಿ M' ಸರಣಿ ಫೋನ್‌ಗಳ ಮೂಲಕ ಹವಾ ಎಬ್ಬಿಸಲು ತಯಾರಾಗಿದೆ. ಹಾಗಾದರೆ, ಭಾರತಕ್ಕೆ ಎಂಟ್ರಿ ನೀಡುತ್ತಿರುವ ನೂತನ 'ಗ್ಯಾಲಾಕ್ಸಿ M' ಸರಣಿಫೋನ್‌ಗಳು ಹೇಗಿವೆ?, ಈ ಸುದ್ದಿಗೆ ಚೀನಾ ಮೊಬೈಲ್ ಕಂಪೆನಿಗಳು ಬೆಚ್ಚಿಬಿದ್ದದ್ದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.
ಭಾರತೀಯರಿಗೆ 'ಗ್ಯಾಲಾಕ್ಸಿ M' ಸೀರಿಸ್!
ಸ್ಯಾಮ್‌ಸಂಗ್ ಕಂಪೆನಿ ಇದೇ ಮೊದಲ ಬಾರಿಗೆ ದೇಶದಲ್ಲಿ ತನ್ನ ಹೊಸ ಸೀರಿಸ್ ಸ್ಮಾರ್ಟ್‌ಫೋನ್‌ಗಳನ್ನು ಇಂದು ಲಾಂಚ್ ಮಾಡುತ್ತಿದೆ. ಗ್ಯಾಲಾಕ್ಸಿ M' ಎಂದು ಕರೆಯಲಾಗಿರುವ ಈ ಸ್ಮಾರ್ಟ್‌ಪೋನ್‌ಗಳು ಭಾರತೀಯ ಮೊಬೈಲ್ ಮಾರುಕಟ್ಟೆಯ ದೃಷ್ಟಿಯಲ್ಲಿಟ್ಟುಕೊಂಡು ಜಾಗತಿಕವಾಗಿ ಬಿಡುಗಡೆಯಾಗುತ್ತಿವೆ ಎಂಬುದನ್ನು ಸ್ಯಾಮ್‌ಸಂಗ್ ಕಂಪೆನಿ ತಿಳಿಸಿದೆ.
ಎರಡು ಸ್ಮಾರ್ಟ್‌ಫೋನ್‌ಗಳು!
ಸ್ಯಾಮ್‌ಸಂಗ್ ಕಂಪೆನಿ ಹೊಸ 'ಗ್ಯಾಲಾಕ್ಸಿ M' ಸರಣಿಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕಂಪೆನಿಯ ಮೂಲಗಳೇ ನೀಡಿರುವ ಖಚಿತ ಮಾಹಿತಿಯಂತೆ, ಗ್ಯಾಲಾಕ್ಸಿ M10' ಮತ್ತು ಗ್ಯಾಲಾಕ್ಸಿ M20 ಎಂಬ ಎರಡು ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 9,500 ಮತ್ತು 15,000 ರೂ.ಬೆಲೆಗಳನ್ನು ಹೊಂದಿರಲಿವೆ ಎನ್ನಲಾಗಿದೆ.
5000mAH ಬ್ಯಾಟರಿ!
ಇದೇ ಮೊದಲ ಬಾರಿಗೆ ಸ್ಯಾಮ್‌ಸಂಗ್ ಕಂಪೆನಿ 5000mAH ಬ್ಯಾಟರಿ ಸಾಮರ್ಥ್ಯದ ಬಜೆಟ್ ಫೋನ್ ಅನ್ನು ಪರಿಚಯಿಸುತ್ತಿದೆ. ಗ್ಯಾಲಾಕ್ಸಿ M20 3,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದರೆ, ಗ್ಯಾಲಾಕ್ಸಿ M30 5000 ಎಂಎಎಚ್ ಬ್ಯಾಟರಿ ಹೊಂದಿರಲಿವೆ. ಇದು ಹೆಚ್ಚು ಭಾರತೀಯರನ್ನು ಸೆಳೆಯಲು ಸಹಾಯವಾಗುತ್ತದೆ ಎಂಬುದು ಸ್ಯಾಮ್‌ಸಂಗ್ ಕಂಪೆನಿಯ ಉದ್ದೇಶವಾಗಿದೆ.
ಕ್ಯಾಮೆರಾಗಳೇ ವಿಶೇಷ!
ಕ್ಯಾಮೆರಾ ಪ್ರಿಯ ಭಾರತೀಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಗ್ಯಾಲಾಕ್ಸಿ M20 ಹಾಗೂ M30 ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. ಗ್ಯಾಲಕ್ಸಿ M20 ಯಲ್ಲಿ 13MP + 5MP ಪಿಕ್ಸೆಲ್ ಸಾಮರ್ಥ್ಯದ ಎರಡು ರಿಯರ್ ಕ್ಯಾಮೆರಾಗಳು ಹಾಗೂ ಗ್ಯಾಲಾಕ್ಸಿ M30 ಫೋನಿನಲ್ಲಿ 5MP + 5MP + 5MP ಸಾಮರ್ಥ್ಯದ ಮೂರು ರಿಯರ್ ಕ್ಯಾಮೆರಾಗಳನ್ನು ಹೊಂದಿವೆ ಎನ್ನಲಾಗಿದೆ.
16ಎಂಪಿ ಸೆಲ್ಫಿ ಕ್ಯಾಮೆರಾ
ಡ್ಯುಯಲ್ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ಎರಡೂ ಸ್ಮಾರ್ಟ್‌ಫೋನ್‌ಗಳು 16ಎಂಪಿ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರಲಿವೆ ಎಂದು ಹೇಳಲಾಗಿದೆ. 9,500 ರೂ.ಗಳಿಂದ 15,000 ರೂ.ಬೆಲೆಯಲ್ಲಿ 16ಎಂಪಿ ಸೆಲ್ಫಿ ಕ್ಯಾಮೆರಾಗಳನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ಸೆಲ್ಫೀ ಆಧಾರಿತ ಮಾರುಕಟ್ಟೆಯನ್ನು ಸಹ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮುಂದಾಗಿದೆ.
ಇತರೆ ಏನೆಲ್ಲಾ ಫೀಚರ್ಸ್?
'ಗ್ಯಾಲಾಕ್ಸಿ M' ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸ್ಯಾಮ್‌ಸಂಗ್ ಕಂಪೆನಿಯ ಮೂಲಗಳು ಅಷ್ಟೇನು ಮಾಹಿತಿಯನ್ನು ಹೊರಹಾಕಿಲ್ಲ. ಬ್ಯಾಟರಿ ಮತ್ತು ಕ್ಯಾಮೆರಾ ವಿಶೇಷತೆಗಳ ಜೊತೆಗೆ ಬೆಲೆಗಳು ಹೊರಬಿದ್ದಿವೆ. ಜನವರಿ 28 ರಂದು ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ M' ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುವುದನ್ನು ಸ್ಯಾಮ್‌ಸಂಗ್ ಕಂಪೆನಿ ಸ್ಪಷ್ಟಪಡಿಸಿದೆ.
ಚೀನೀ ಕಂಪೆನಿಗಳಿಗೆ ಆಘಾತ!
ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ M' ಸರಣಿಯನ್ನು ಪರಿಚಯಿಸುತ್ತಿರುವುದು ಈಗಾಗಲೇ ಚೀನಾದ ಮೊಬೈಲ್ ಕಂಪೆನಿಗಳಿಗೆ ತಿಳಿದಿತ್ತು. ಆದರೆ, 'ಗ್ಯಾಲಾಕ್ಸಿ M'ಸರಣಿಯ ಫೋನ್‌ಗಳ ಬೆಲೆ ಕೇವಲ 9,500 ರೂ.ಗಳಿಂದ ಆರಂಭವಾಗಲಿದೆ ಎಂದು ಕಂಪೆನಿ ಮೂಲಗಳು ಹೇಳಿರುವುದು ಈಗ ಚೀನೀ ಕಂಪೆನಿಗಳಿಗೆ ಆಘಾತ ತಂದಿದೆ.