110 ಇಂಚಿನ ಮೈಕ್ರೊಲೆಡ್‌ ಟಿವಿ ಪರಿಚಯಿಸಿದ ಸ್ಯಾಮ್‌ಸಂಗ್‌ ಸಂಸ್ಥೆ!

|

ದಕ್ಷಿಣ ಕೋರಿಯಾದ ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಟಿವಿ ವಲಯದಲ್ಲೂ ತನ್ನ ಪ್ರಾಬಲ್ಯವನ್ನು ಗುರುತಿಸಿಕೊಂಡಿದೆ. ಸದ್ಯ ಇದೀಗ ಫ್ಯೂಚರಿಸ್ಟಿಕ್ ಟಿವಿ, ದಿ ವಾಲ್ ನಿಂದ ಸ್ಫೂರ್ತಿ ಪಡೆದ ಸ್ಯಾಮ್‌ಸಂಗ್‌ ತನ್ನ ಮೈಕ್ರೊಲೆಡ್ ತಂತ್ರಜ್ಞಾನವನ್ನು ಬಳಸುವ 110 ಇಂಚಿನ ಸ್ಕ್ರೀನ್ ಟಿವಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಸ್ಯಾಮ್‌ಸಂಗ್ ಟಿವಿ ಈಗಾಗಲೇ ಕೊರಿಯಾದಲ್ಲಿ ಪ್ರೀ-ಸೇಲ್‌ಗೆ ಸಿದ್ಧವಾಗಿದೆ. 110 ಇಂಚಿನ ಡಿಸ್‌ಪ್ಲೇ ಹೊಂದಿರುವ ಸ್ಯಾಮ್‌ಸಂಗ್ ಟಿವಿ 2021 ರ ಮೊದಲ ತ್ರೈಮಾಸಿಕದಲ್ಲಿ ಇತರ ಮಾರುಕಟ್ಟೆಗಳಿಗೆ ಬರಲಿದೆ ಎಂದು ಕಂಪನಿ ಖಚಿತಪಡಿಸಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ತಂತ್ರಜ್ಞಾನಗಳನ್ನು ಹೊಂದಿರುವ ದೂರದರ್ಶನವನ್ನು ಜಗತ್ತಿಗೆ ತರಲು ಸ್ಯಾಮ್‌ಸಂಗ್ ಶ್ರಮಿಸುತ್ತಿದೆ. ಇದು 11 ಇಂಚಿನ ಮೈಕ್ರೊಲೆಡ್ ಟಿವಿ ಗುರಿಯ ಒಂದು ಭಾಗವಾಗಿದೆ. ಮೈಕ್ರೊಲೆಡ್ ತಂತ್ರಜ್ಞಾನವು ಅತ್ಯುತ್ತಮವಾದ ಒಎಲ್ಇಡಿ ಪರದೆಗಳನ್ನು ಬಳಸುತ್ತದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್

ಸದ್ಯ ಸ್ಯಾಮ್‌ಸಂಗ್ ಕಂಪೆನಿ 110 ಇಂಚಿನ ಮೈಕ್ರೊಲೆಡ್ ಟಿವಿಯನ್ನು ಜಾಗತಿಕವಾಗಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇದು 99.99 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ ಎನ್ನಲಾಗಿದೆ. ಜೊತೆಗೆ ಸ್ಯಾಮ್‌ಸಂಗ್‌ ಕಂಪೆನಿ "ಎಂಬೆಡೆಡ್ ಮೆಜೆಸ್ಟಿಕ್ ಸೌಂಡ್ ಸಿಸ್ಟಮ್" ಅನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಇದು "ಬಾಹ್ಯ ಸ್ಪೀಕರ್ ಇಲ್ಲದ 5.1 ಚಾನೆಲ್ ಧ್ವನಿಯನ್ನು ನೀಡುತ್ತದೆ" ಎಂದು ಹೇಳಲಾಗಿದೆ. ಇನ್ನು ಚಿತ್ರದ ಗುಣಮಟ್ಟ ಹೆಚ್ಚಿಸುವುದಕ್ಕಾಗಿ 110 ಇಂಚಿನ ಮೈಕ್ರೊಲೆಡ್ ಟಿವಿಯಲ್ಲಿ ಬ್ಯಾಕ್‌ಲೈಟ್ ಮತ್ತು ಬಣ್ಣ ಫಿಲ್ಟರ್‌ಗಳನ್ನು ತೆಗೆದುಹಾಕಲು ಮೈಕ್ರೊಮೀಟರ್ ಗಾತ್ರದ ಎಲ್ಇಡಿ ದೀಪಗಳನ್ನು ಬಳಸಲಾಗಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಆಟೋಮ್ಯಾಟಿಕ್‌ ಬ್ರೈಟ್‌ನೆಶ್‌ ಅನ್ನು ಹೊಂದಿದೆ. ತನ್ನದೇ ಆದ ಪಿಕ್ಸೆಲ್ ರಚನೆಗಳಿಂದ ಬೆಳಕು ಮತ್ತು ಬಣ್ಣವನ್ನು ಇದು ಪ್ರೊಡಕ್ಷನ್‌ ಅನ್ನು ನೀಡಲಿದೆ. ಜೊತೆಗೆ ಇದು ಡಿಸಿಐ ​​ಮತ್ತು ಅಡೋಬ್ ಆರ್ಜಿಬಿ ಬಣ್ಣದ ಹರವುಗಳ 100 ಪ್ರತಿಶತವನ್ನು ವ್ಯಕ್ತಪಡಿಸುತ್ತದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ ಉನ್ನತ-ಮಟ್ಟದ ಡಿಎಸ್ಎಲ್ಆರ್ ಕ್ಯಾಮೆರಾಗಳೊಂದಿಗೆ ತೆಗೆದ ವಿಶಾಲ ಬಣ್ಣದ ಹರವು ಚಿತ್ರಗಳನ್ನು ನಿಖರವಾಗಿ ನೀಡುತ್ತದೆ. ಇದು 4K ರೆಸಲ್ಯೂಶನ್ ಮತ್ತು 8 ಮಿಲಿಯನ್ ಪಿಕ್ಸೆಲ್‌ಗಳಿಂದ ನಿಖರವಾದ ಬ್ರೈಟ್‌ನೆಶ್‌ ಅನ್ನು ನೀಡಲಿದೆ.

ಮೈಕ್ರೊಲೆಡ್ ಟಿವಿ

ಸದ್ಯ 110-ಇಂಚಿನ ಮೈಕ್ರೊಲೆಡ್ ಟಿವಿ ದುಬಾರಿಯಾಗಿದೆ ಎಂದು ತೋರುತ್ತಿದ್ದೆ, ಆದರೂ ಗ್ರಾಹಕರು ಭವಿಷ್ಯದಲ್ಲಿ ಅಗ್ಗದ ಮೈಕ್ರೊಲೆಡ್ ಟಿವಿಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಇನ್ನು ಮುಂದಿನ ತಿಂಗಳು, ಸಿಇಎಸ್ 2021 ವರ್ಚುವಲ್ ಈವೆಂಟ್‌ನಲ್ಲಿ, ಸ್ಯಾಮ್‌ಸಂಗ್ ಹೆಚ್ಚು ಮುಖ್ಯವಾಹಿನಿಯ ಗ್ರಾಹಕ ಕ್ಯೂಎಲ್‌ಇಡಿ 4 ಕೆ ಮತ್ತು 8 ಕೆ ಟಿವಿಗಳ ಹೊಸ ಶ್ರೇಣಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಇನ್ನು ಈ ಸ್ಮಾರ್ಟ್‌ಟಿವಿ ಭಾರತದಲ್ಲಿ ಯಾವಾಗ ಬಿಡುಗಡೆ ಆಗಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

Best Mobiles in India

English summary
Inspired by the futuristic TV, The Wall, Samsung has launched a 110-inche screen TV that uses MicroLED technology in its home market.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X