ಸ್ಯಾಮ್‌ಸಂಗ್‌ನಿಂದ ಹೊಸ ಗೇಮಿಂಗ್‌ ಹಬ್‌ ಆನಾವರಣ! ಏನಿದರ ವಿಶೇಷತೆ?

|

ಸ್ಯಾಮ್‌ಸಂಗ್‌ ಕಂಪೆನಿ ಗೇಮಿಂಗ್‌ ಪ್ರಿಯರಿಗಾಗಿ ತನ್ನ ಸ್ಮಾರ್ಟ್‌ಟಿವಿಗಳಲ್ಲಿ ಗೇಮಿಂಗ್‌ ಹಬ್‌ ಅನ್ನು ಪರಿಚಯಿಸಿದೆ. ಇದರಿಂದ ಸ್ಯಾಮ್‌ಸಂಗ್‌ ಟಿವಿ ಬಳಕೆದಾರರು ವಿವಿಧ ಗೇಮ್‌ ಸ್ಟ್ರೀಮಿಂಗ್‌ ಸೇವೆಯನ್ನು ಪ್ರವೇಶಿಸಬಹುದಾಗಿದೆ. ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿಗಳಲ್ಲಿ ನೀವು ಗೇಮಿಂಗ್‌ ಅನುಭವವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಇನ್ನು ಈ ಹೊಸ ಗೇಮಿಂಗ್‌ ಹಬ್‌ ಮೂಲಕ ಗೇಮರ್‌ಗಳು ತಮ್ಮ ಆಯ್ಕೆಯ ಬಿಡಿಭಾಗಗಳನ್ನು ಕೂಡ ಬಳಸಬಹುದಾಗಿದೆ. ಅಂದರೆ ಬ್ಲೂಟೂತ್‌ ಹೆಡ್‌ಸೆಟ್‌ಗಳು, ಕಂಟ್ರೋಲರ್‌ಗಳನ್ನು ಬಳಸುವುದಕ್ಕೆ ಅವಕಾಶವಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಸ್ಮಾರ್ಟ್‌ಟಿವಿಗಳಿಗಾಗಿ ಹೊಸ ಸ್ಯಾಮ್‌ಸಂಗ್‌ ಗೇಮಿಂಗ್‌ ಹಬ್‌ ಅನ್ನು ಪರಿಚಯಿಸಿದೆ. ಇನ್ನು ಈ ಸ್ಯಾಮ್‌ಸಂಗ್‌ ಗೇಮಿಂಗ್ ಹಬ್ ಗೇಮಿಂಗ್ ಉತ್ಸಾಹಿಗಳಿಗಾಗಿ ಪರಿಚಯಿಸಲಾಗಿದೆ. ಇದರಿಂದ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ Xbox, ಎನ್‌ವಿಡಿಯಾ ಜಿಪೋರ್ಸ್‌ ನೌ, ಗೂಗಲ್‌ ಸ್ಟಾಡಿಯಾ, ಟ್ವಿಚ್‌ ಮತ್ತು Utomik ಸೇರಿದಂತೆ ವಿವಿಧ ಗೇಮ್ ಸ್ಟ್ರೀಮಿಂಗ್ ಸೇವೆಗೆ ಪ್ರವೇಶವನ್ನು ನೀಡುತ್ತದೆ. ಇದಲ್ಲದೆ ಶೀಘ್ರದಲ್ಲೇ ಅಮೆಜಾನ್ ಲೂನಾವನ್ನು ಕೂಡ ಬೆಂಬಲಿಸಲಿದೆ ಎಂದು ಹೇಳಲಾಗಿದೆ.

ಸ್ಮಾರ್ಟ್‌ಟಿವಿ

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಪ್ರತಿ ಭಾರಿಯೂ ಹೊಸತನವನ್ನು ಬಯಸುವ ಸ್ಯಾಮ್‌ಸಂಗ್‌ ಕಂಪೆನಿ ಇದೀಗ ಗೇಮಿಂಗ್‌ ಹಬ್‌ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಸ್ಮಾರ್ಟ್‌ಟಿವಿಗಳಲ್ಲಿ ಗೇಮಿಂಗ್‌ ಅನುಭವವನ್ನು ನೀಡುವುದಕ್ಕೆ ಮುಂದಾಗಿದೆ. ಪ್ರಸ್ತುತ ಪರಿಚಯಿಸಿರುವ ಸ್ಯಾಮ್‌ಸಂಗ್‌ ಗೇಮಿಂಗ್‌ ಹಬ್‌ ಅನ್ನು ಈಗಾಗಲೇ ಅಂದರೆ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ (CES) 2022 ರಲ್ಲಿ ಘೋಷಿಸಲಾಗಿತ್ತು. ಇದೀಗ 2022ರ ಎಲ್ಲಾ ಸ್ಮಾರ್ಟ್‌ಟಿವಿಗಳಲ್ಲಿ ಲಭ್ಯವಾಗಲಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಕಂಪೆನಿಯ ಹೊಸ ಗೇಮಿಂಗ್‌ ಹಬ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಗೇಮಿಂಗ್‌ ಹಬ್‌ ಮೂಲಕ ನೀವು ಸ್ಮಾರ್ಟ್‌ಟಿವಿಗಳಲ್ಲಿ ಗೇಮಿಂಗ್‌ ಅನ್ನು ಅನುಭವಿಸಬಹುದು. ಜನಪ್ರಿಯ ಗೇಮ್‌ ಸ್ಟ್ರೀಮಿಂಗ್‌ ಸೇವೆಗಳಿಗೆ ಪ್ರವೇಶವನ್ನು ಪಡೆದುಕೊಳ್ಳಬಹುದು. ಅಲ್ಲದೆ ಸ್ಮಾರ್ಟ್ ಟಿವಿಗಳು ಮತ್ತು ಮಾನಿಟರ್‌ಗಳ ಮೂಲಕ ಸ್ಟ್ರೀಮಿಂಗ್ ಗೇಮ್‌ಗಳನ್ನು ಆಡುವುದಕ್ಕೆ ಸಾದ್ಯವಿದೆ. ಅಂದರೆ ಬಳಕೆದಾರರು ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಗಳಲ್ಲಿ ಗೇಮಿಂಗ್ ವಿಷಯ ಮತ್ತು ಅನುಭವಗಳನ್ನು ಏಕಕಾಲದಲ್ಲಿ ಆನಂದಿಸಬಹುದು. ಸ್ಮಾರ್ಟ್‌ಟಿವಿ ಮನರಂಜನೆ ಜೊತೆಗೆ ಗೇಮಿಂಗ್‌ ಅನುಭವವನ್ನು ಸಹ ನೀಡಲಿದೆ.

ಗೇಮಿಂಗ್‌

ಇನ್ನು ಈ ಗೇಮಿಂಗ್‌ ಹಬ್‌ ಗೇಮ್ ಸ್ಟ್ರೀಮಿಂಗ್ ಸೇವೆಗಳ ಜೊತೆಗೆ, ಯುಟ್ಯೂಬ್‌ ಮತ್ತು ಸ್ಪಾಟಿಫೈ ನಂತಹ ಮ್ಯೂಸಿಕ್‌ ಸ್ಟ್ರೀಮಿಂಗ್ ಸೇವೆಗಳನ್ನು ಸಹ ಒಳಗೊಂಡಿದೆ. ಇದರ ಮೂಲಕ ಬಳಕೆದಾರರು ತಮ್ಮ ನೆಚ್ಚಿನ ಮ್ಯೂಸಿಕ್‌ ಮತ್ತು ಪಾಡ್‌ಕಾಸ್ಟ್‌ಗಳನ್ನು ಪ್ಲೇ ಮಾಡಲು ಅವಕಾಶ ಸಿಗಲಿದೆ. ಇದಲ್ಲದೆ ಈ ಪ್ಲಾಟ್‌ಫಾರ್ಮ್‌ನಿಂದ ನೀವು ಟ್ರೇಲರ್‌ಗಳನ್ನು ಕೂಡ ವೀಕ್ಷಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಇನ್ನು ಈ ಗೇಮಿಂಗ್‌ ಹಬ್‌ನ ಮತ್ತೊಂದು ವಿಶೇಷತೆ ಎಂದರೆ Xbox TV ಅಪ್ಲಿಕೇಶನ್ ಒಳಗೊಂಡಿರುವುದು. ಇದು ಸ್ಯಾಮ್‌ಸಂಗ್‌ನ ಗೇಮಿಂಗ್ ಹಬ್‌ಗೆ ಪ್ರತ್ಯೇಕವಾಗಿದೆ.

ಸ್ಯಾಮ್‌ಸಂಗ್‌ ಗೇಮಿಂಗ್‌ ಹಬ್‌ ವಿಶೇಷ

ಸ್ಯಾಮ್‌ಸಂಗ್‌ ಗೇಮಿಂಗ್‌ ಹಬ್‌ ವಿಶೇಷ

ಇದು 2022ರ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಗಳಲ್ಲಿ ಮಾತ್ರ ಲಭ್ಯವಾಗಲಿದೆ. ಇದರಿಂದ ನಿಮ್ಮ ಸ್ಯಾಮ್‌ಸಂಗ್ ಟಿವಿಯಲ್ಲಿ ಅತ್ಯುತ್ತಮ ಗೇಮಿಂಗ್‌ಗಳು ಒಟ್ಟಿಗೆ ಲಭ್ಯವಾಗಲಿವೆ. ನಿಮಗೆ ಬೇಕು ಎನಿಸುವ ಗೇಮಿಂಗ್‌ ಅನ್ನು ನೀವು ಪ್ಲೇ ಮಾಡಬಹುದು. ಅಲ್ಲದೆ ಗೇಮರುಗಳು ತಮಗೆ ಬೇಕಾದ ಗೇಮ್‌ಗಳಿಗೆ ಚೇಂಜ್‌ ಮಾಡಿಕೊಳ್ಳುವುದಕ್ಕೆ ಇದು ಸುಲಭ ಅವಕಾಶ ನೀಡಲಿದೆ. ಏಕೆಂದರೆ ನಿಮ್ಮ ನೆಚ್ಚಿನ ಎಲ್ಲಾ ಗೇಮ್‌ಗಳು ಮತ್ತು ಗೇಮ್ ಸ್ಟ್ರೀಮಿಂಗ್ ಸೇವೆಗಳು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್‌

ಪ್ರಸ್ತುತ ಸ್ಯಾಮ್‌ಸಂಗ್‌ ಗೇಮಿಂಗ್ ಹಬ್‌ ಅನ್ನು ಬಳಸುವುದಕ್ಕೆ ಯಾವುದೇ ಶುಲ್ಕ ಪಾವತಿಸಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ಸ್ಯಾಮ್‌ಸಂಗ್‌ ಗೇಮಿಂಗ್‌ ಹಬ್‌ 100% ಉಚಿತವಾಗಿದೆ. ಸ್ಯಾಮ್‌ಸಂಗ್‌ ಗೇಮಿಂಗ್ ಹಬ್ ಅನ್ನು ಬಳಸಿಕೊಂಡು, ನೀವು ನೇರವಾಗಿ ಗೇಮ್-ಸ್ಟ್ರೀಮ್ ಪೂರೈಕೆದಾರರಿಗೆ ಚಂದಾದಾರರಾಗಬಹುದು. ಸದ್ಯ ನೀವು ಸ್ಯಾಮ್‌ಸಂಗ್‌ ಗೇಮಿಂಗ್‌ ಹಬ್‌ನಲ್ಲಿ ಜಿಪೋರ್ಸ್‌ ನೌ, ಗೂಗಲ್‌ ಸ್ಟಾಡಿಯಾ ಮತ್ತು Utomik ಲಭ್ಯವಾಗಲಿದೆ. ಈ ವರ್ಷದ ನಂತರ ಹೆಚ್ಚಿನ ಪಾಲುದಾರರನ್ನು ಘೋಷಿಸಲಾಗುವುದು, ಎಂದು ಸ್ಯಾಮ್‌ಸಂಗ್‌ ಕಂಪನಿ ಹೇಳಿಕೊಂಡಿದೆ.

ಸ್ಯಾಮ್‌ಸಂಗ್

ಇನ್ನು ಸ್ಯಾಮ್‌ಸಂಗ್ ಗೇಮಿಂಗ್ ಹಬ್ ಅನ್ನು ಬಳಸುವುದಕ್ಕೆ ನೀವು ಬ್ಲೂಟೂತ್‌ ಬೆಂಬಲಿಸುವ ಗೇಮಿಂಗ್‌ ಕಂಟ್ರೋಲರ್‌ ಬಳಸಬೇಕಾದ ಅನಿವಾರ್ಯತೆ ಇದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಗೇಮಿಂಗ್‌ ಕಂಟ್ರೋಲರ್‌ಗಳನ್ನು ನೀವು ಬಳಸಬಹುದಾಗಿದೆ. ಒಮ್ಮೆ ನೀವು ನಿಮ್ಮ ಸ್ಮಾರ್ಟ್‌ಟಿವಿ ಜೊತೆಗೆ ಬ್ಲೂಟೂತ್‌ ಕಂಟ್ರೋಲರ್‌ ಅನ್ನು ಸೆಟ್‌ ಮಾಡಿದ ನಂತರ ನೀವು ನಿಮ್ಮ ಕಂಟ್ರೋಲರ್‌ ಮೂಲಕ ಗೇಮಿಂಗ್‌ ಹಬ್ ಅನ್ನು ನ್ಯಾವಿಗೇಟ್ ಮಾಡಬಹುದು ಮತ್ತು ಗೇಮ್‌ಗಳನ್ನು ಆಡಬಹುದು. ಅಲ್ಲದೆ ನೀವು ಗೇಮಿಂಗ್‌ ಸಮಯದಲ್ಲಿ ಹೆಡ್‌ಸೆಟ್ ಅನ್ನು ಕೂಡ ಜೋಡಿಸಬಹುದು. ಅಲ್ಲದೆ ಟಿವಿ ರಿಮೋಟ್‌ ಮೂಲಕ ಕೂಡ ಬ್ರೌಸ್ ಮಾಡಬಹುದು.

ಪ್ಲಾಟ್‌ಫಾರ್ಮ್

ಈ ಸೇವೆಯು 2022ರಲ್ಲಿ ಬಿಡುಗಡೆಯಾದ ನಿಯೋ QLED 8K, ನಿಯೋ QLED 4K, QLED ಗಳು ಮತ್ತು 2022 ಸ್ಮಾರ್ಟ್ ಮಾನಿಟರ್ ಸರಣಿಗಳನ್ನು ಒಳಗೊಂಡಿದೆ. ಪ್ರಸ್ತುತ ಈ ಹೊಸ ಪ್ಲಾಟ್‌ಫಾರ್ಮ್ ಯುಎಸ್, ಕೆನಡಾ, ಯುಕೆ, ಜರ್ಮನಿ, ಫ್ರಾನ್ಸ್, ಸ್ಪೇನ್, ಇಟಲಿ, ಕೊರಿಯಾ ಮತ್ತು ಬ್ರೆಜಿಲ್‌ನಲ್ಲಿ ಮಾತ್ರ ಲಭ್ಯವಿದೆ. ಆದರೆ ಭಾರತದಲ್ಲಿನ ಬಳಕೆದಾರರಿಗೆ ಈ ಸೇವೆ ಇನ್ನು ಕೂಡ ಲಭ್ಯವಿಲ್ಲ. ಆದರೆ ಭಾರತವನ್ನು ಒಳಗೊಂಡಂತೆ ಇತರ ಪ್ರದೇಶಗಳು ಮತ್ತು ದೇಶಗಳಲ್ಲಿ ಗೇಮಿಂಗ್ ಹಬ್ ಅನ್ನು ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಸ್ಯಾಮ್‌ಸಂಗ್

ಆದರೆ ಸ್ಯಾಮ್‌ಸಂಗ್ ತನ್ನ ಗೇಮಿಂಗ್ ಹಬ್ ಪುಟದಲ್ಲಿನ FAQ ವಿಭಾಗದಲ್ಲಿ, ಸ್ಯಾಮ್‌ಸಂಗ್‌ ಗೇಮಿಂಗ್ ಹಬ್ ಅನ್ನು ಪ್ರವೇಶಿಸುವುದಕ್ಕೆ ಈ ವರ್ಷದ ನಂತರ ಸಾದ್ಯವಾಗಲಿದೆ ಎಂದು ಹೇಳಲಾಗಿದೆ. ಅಲ್ಲದೆ ಇದನ್ನು ನಿಮ್ಮ 2022ರ ಸ್ಯಾಮ್‌ಸಂಗ್‌ ಸ್ಮಾರ್ಟ್ ಟಿವಿಗಳಲ್ಲಿ ಸಂಯೋಜಿಸಲಾಗುವುದು ಎಂದು ಹೇಳಿದೆ. ಅಂದರೆ ಈ ಗೇಮಿಂಗ್‌ ಹಬ್‌ ಈ ವರ್ಷದ ನಂತರ ಜಗತ್ತಿನಾದ್ಯಂತ ಲಭ್ಯವಾಗಲಿದೆ ಎನ್ನಬಹುದಾಗಿದೆ. ಇದರಿಂದ ಸ್ಯಾಮ್‌ಸಂಗ್‌ ಗೇಮಿಂಗ್‌ ಹಬ್‌ ಮುಂದಿನ ವರ್ಷ ಭಾರತದಲ್ಲಿ ಲಭ್ಯವಾಗುವ ಸಾದ್ಯತೆಯಿದೆ.

Best Mobiles in India

English summary
Samsung Has launched its gaming hub on 2022 smart TVs

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X