ಸ್ಯಾಮ್‌ಸಂಗ್ ಕಂಪೆನಿಯಿಂದ 1000 ಇಂಜಿನಿಯರ್‌ಗಳಿಗೆ ಉದ್ಯೋಗದ ಆಫರ್!!

Written By:

ವಿಶ್ವದ ಮೊಬೈಲ್ ದಿಗ್ಗಜ ಕಂಪೆನಿಗಳಲ್ಲಿ ಒಂದಾದ ದಕ್ಷಿಣ ಕೊರಿಯಾ ಮೂಲದ ತಂತ್ರಜ್ಞಾನ ಸಂಸ್ಥೆ ಸ್ಯಾಮ್‌ಸಂಗ್ ಭಾರತದಲ್ಲಿ 1000 ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ.! ಭಾರತದಲ್ಲಿರುವ ತನ್ನು ಮೂರು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಕೇಂದ್ರಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ತಿಳಿಸಿದೆ.!!

ಭಾರತದಲ್ಲಿನ ಮೂರು ಆರ್ ಅಂಡ್ ಡಿ ಕೇಂದ್ರಗಳು ಹಲವಾವು ಅತ್ಯಾಧುನಿಕ ತಂತ್ರಜ್ಞಾನಗಳ ಸಂಬಂಧ ಕೆಲಸ ಮಾಡುತ್ತಿವೆ. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಸಂಕೇತ ಸಂಸ್ಕರಣೆ, ಕಂಪ್ಯೂಟರ್ ವಿಷನ್, ಮೊಬೈಲ್ ಭದ್ರತೆ ವಿಭಾಗಗಳಲ್ಲಿ ಪ್ರತಿಭೆಗೆ ಸಾಕಷ್ಟು ಅವಕಾಶವಿದೆ ಎಂದು ಸ್ಯಾಮ್ ಸಂಗ್ ಜಾಗತಿಕ ಹಿರಿಯ ಉಪಾಧ್ಯಕ್ಷ ದೀಪೇಶ್ ಶಾ ತಿಳಿಸಿದ್ದಾರೆ.

ಸ್ಯಾಮ್‌ಸಂಗ್ ಕಂಪೆನಿಯಿಂದ 1000 ಇಂಜಿನಿಯರ್‌ಗಳಿಗೆ ಉದ್ಯೋಗದ ಆಫರ್!!

ಸುಮಾರು 22 ವರ್ಷಗಳಿಂದ ಭಾರತದಲ್ಲಿ ಸ್ಯಾಮ್‌ಸಂಗ್ ಆರ್ ಅಂಡ್ ಡಿ ವಲಯದಲ್ಲಿ ಅತ್ಯಂತ ಬಲಿಷ್ಠವಾಗಿದ್ದು, ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳ ಸಂಬಂಧ ಕೆಲಸ ನಡೆಯುತ್ತಿದೆ. ಹಾಗಾಗಿ, ಈ ವರ್ಷ ಭಾರತ ಇಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 1,000 ಇಂಜಿನಿಯರ್‌ಗಳನ್ನು ನಾವು ನೇಮಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. 

ಸ್ಯಾಮ್‌ಸಂಗ್ ಕಂಪೆನಿಯಿಂದ 1000 ಇಂಜಿನಿಯರ್‌ಗಳಿಗೆ ಉದ್ಯೋಗದ ಆಫರ್!!

ಕಳೆದ ವರ್ಷ ಕೂಡ ಸ್ಯಾಮ್‌ಸಂಗ್ ತನ್ನ ಆರ್ಅಂಡ್ ಡಿ ಕೇಂದ್ರಗಳಿಗೆ 800 ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡಿತ್ತು ಅದರಲ್ಲಿ 300 ಮಂದಿ ಐಐಟಿಗಳಿಂದ ಬಂದವರಾಗಿದ್ದರು.! ಈ ವರ್ಷ ಸಹ ಐಐಟಿಗಳಿಂದ ಇಷ್ಟೇ ಸಂಖ್ಯೆಯ ಪದವೀಧರರನ್ನು ನೇಮಿಸಿಕೊಳ್ಳುವ ಸಾಧ್ಯತೆ ಇದ್ದು, ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್, ಬಿಐಟಿಎಸ್ ಪಿಲಾನಿ, ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಐಐಐಟಿ ವಿಧ್ಯಾರ್ಥಿಗಳಿಗೆ ಇದು ಸಿಹಿಸುದ್ದಿಯಾಗಿದೆ.!!

How to view all photos, pages, comments and posts you liked on Facebook (KANNADA)

ಓದಿರಿ: ಜಿಯೋಗಾಗಿ ಪೋರ್ಟ್ ಬೆಲೆ ಕಡಿಮೆ ಮಾಡಿತು ಟ್ರಾಯ್!?..ಟೆಲಿಕಾಂ ಕಂಪೆನಿಗಳ ಆಕ್ಷೇಪ!!

English summary
South Korean tech giant Samsung today said it would be hiring 1000 engineers from top institutes for its three research and development (R&D) facilities in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot