ಅಪಘಾತಕ್ಕೆ ಅಂತ್ಯ ಹಾಡುವ ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

Written By:

ನಾವು ಇರುವಂತಹ ವಿಶ್ವ ಇಂದು ಹೆಜ್ಜೆ ಹೆಜ್ಜೆಯಲ್ಲಿ ಪ್ರಗತಿಯನ್ನು ಕಾಣುತ್ತಿದ. ಆವಿಷ್ಕಾರಗಳನ್ನು ಚಕಚಕನೇ ನಡೆಯಿಸುವ ಸಾಮರ್ಥ್ಯ ಇಂದಿನ ಆಧುನಿಕ ಲೋಕಕ್ಕಿದೆ. ಇನ್ನು ಈ ಯುಗದಲ್ಲಿ ಬಾಳುತ್ತಿರುವ ನಾವು ಕೂಡ ಪ್ರಗತಿಯ ಬೆನ್ನೇರುತ್ತಾ ನಮ್ಮನ್ನು ನಾವು ಅಪ್‌ಡೇಟ್ ಮಾಡಿಕೊಳ್ಳುತ್ತಿದ್ದೇವೆ.

ಓದಿರಿ: ಸ್ಮಾರ್ಟ್‌ಫೋನ್ ಎಂಬ ಸ್ಲೋಪಾಯಿಸನ್‌ನ ಕರಾಳ ಮುಖ

ಇನ್ನು ಅನ್ವೇಷಣೆಯ ಜಗತ್ತಿನೆಡೆಗೆ ನಾವು ಪ್ರಯಾಣಿಸುತ್ತಿದ್ದೇವೆ ಎಂದಾದಲ್ಲಿ ಸ್ಯಾಮ್‌ಸಂಗ್ ಹೆಸರು ಬಂದೇ ಬರುತ್ತದೆ. ಪೈಪೋಟಿಗಳ ನಡುವೆಯೂ ಈ ಅತ್ಯುನ್ನತ ಕಂಪೆನಿ ಬಳಕೆದಾರರನ್ನು ತನ್ನತ್ತ ಸೆಳೆದಿಟ್ಟಿದೆ. ಈಗ ಹೊಚ್ಚ ಹೊಸ ಅನ್ವೇಷಣೆ ಎಂಬಂತೆ ಸ್ಯಾಮ್‌ಸಂಗ್ ಟೆಲಿವಿಶನ್ ಅದೂ ಟ್ರಕ್‌ನ ಹಿಂಭಾಗದಲ್ಲಿ ಮೋಡಿ ಮಾಡುವಂತೆ ಬಳಕೆದಾರರ ಗಮನವನ್ನು ಸೆಳೆಯುತ್ತಿದೆ. ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಿವಿಯುಳ್ಳ ಟ್ರಕ್

ಟಿವಿಯುಳ್ಳ ಟ್ರಕ್

ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ಇದೊಂದು ಮಾಮೂಲಿ ಟ್ರಕ್ ಆಗಿರದೇ ಟಿವಿಯುಳ್ಳ ಟ್ರಕ್ ಆಗಿದೆ. ನೀವು ಪ್ರಯಾಣಿಸುತ್ತಿರುವಾಗ ನಿಮ್ಮ ದಾರಿಯಲ್ಲಿ ಕಂಡುಬರುವ ಟ್ರಾಫಿಕ್ ಅನ್ನು ಇದು ಎತ್ತಿ ತೋರಿಸುತ್ತದೆ.

ರಸ್ತೆ ಸುಗಮ

ರಸ್ತೆ ಸುಗಮ

ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ನೀವು ತೆರೆದ ಹೆದ್ದಾರಿಯಲ್ಲಿ ಸಂಚಾರಿಸುತ್ತಿದ್ದೀರಿ ಎಂದಾದಲ್ಲಿ, ಟ್ರಕ್‌ನ ಹಿಂಭಾಗದಲ್ಲಿ ನೀವು ಪ್ರಯಾಣಿಸುತ್ತಿರುವ ರಸ್ತೆ ಸುಗಮವಾಗಿರುವುದನ್ನು ಕಾಣಬಹುದು.

ಟ್ರಾಫಿಕ್‌ನ ವಿರುದ್ಧ ದಿಕ್ಕಿನಲ್ಲಿ

ಟ್ರಾಫಿಕ್‌ನ ವಿರುದ್ಧ ದಿಕ್ಕಿನಲ್ಲಿ

ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ಈ ಸೇಫ್ಟಿ ಟ್ರಕ್ ಅನ್ನು ಟ್ರಾಫಿಕ್‌ನ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸುತ್ತಿರುವ ಒಂದೊಂದು ಲೇನ್ ಇರುವಂತಹ ಎರಡು - ಲೇನ್ ಹೆದ್ದಾರಿಯ ಸಂಚಾರಕ್ಕಾಗಿ ಬಳಸಲಾಗುತ್ತದೆ.

ಟ್ರಾಫಿಕ್‌ನ ಪೂರ್ಣ ವಿವರ

ಟ್ರಾಫಿಕ್‌ನ ಪೂರ್ಣ ವಿವರ

ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ಟ್ರಕ್‌ನ ಮುಂಭಾಗದಲ್ಲಿರುವ ರಸ್ತೆ ಚಿತ್ರಗಳು ಟಿವಿಯಲ್ಲಿ ಕಾಣುವುದರಿಂದ ಚಾಲಕರಿಗೆ ಮುಂದಿನ ವಾಹನ ಮತ್ತು ರಸ್ತೆಯ ಟ್ರಾಫಿಕ್‌ನ ಪೂರ್ಣ ವಿವರ ದೊರಕುತ್ತದೆ.

ಏಕಾಗ್ರತೆ

ಏಕಾಗ್ರತೆ

ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ತಮ್ಮ ಚಾಲನೆಯಲ್ಲಿ ಏಕಾಗ್ರತೆಯನ್ನು ಇರಿಸಿಕೊಳ್ಳಲು ಚಾಲಕರಿಗೆ ಇದು ಸಹಾಯ ಮಾಡುತ್ತದೆ.

ಸೂಕ್ತ ಮಾರ್ಗದರ್ಶನ

ಸೂಕ್ತ ಮಾರ್ಗದರ್ಶನ

ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ಟ್ರಕ್ ಅನ್ನು ದಾಟಿ ಮುಂದುವರಿಯಬಹುದು ಎಂಬ ಸೂಕ್ತ ಮಾರ್ಗದರ್ಶನವನ್ನು ಇದು ನೀಡುತ್ತದೆ

ಚಾಲನೆ ಪರಿಸ್ಥತಿ

ಚಾಲನೆ ಪರಿಸ್ಥತಿ

ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ಬೆಳಕಿರುವ ಅಂತೆಯೇ ಕತ್ತಲಿನ ಚಾಲನೆ ಪರಿಸ್ಥತಿಗಳಲ್ಲಿ ಪರದೆ ಸಂಪೂರ್ಣವಾಗಿ ಗೋಚರಿಸುತ್ತದೆ

ಜನರ ಪ್ರಾಣವನ್ನು ಉಳಿಸುತ್ತದೆ

ಜನರ ಪ್ರಾಣವನ್ನು ಉಳಿಸುತ್ತದೆ

ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ಈ ಸೇಫ್ಟಿ ಟ್ರಕ್ ಅನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಇದು ಜನರ ಪ್ರಾಣವನ್ನು ಉಳಿಸುತ್ತದೆ ಎಂದು ಸ್ಯಾಮ್‌ಸಂಗ್ ದೃಢೀಕರಿಸಿದೆ.

ಅತಿಸರಳ ಮತ್ತು ಪರಿಣಾಮಕಾರಿ

ಅತಿಸರಳ ಮತ್ತು ಪರಿಣಾಮಕಾರಿ

ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ಇನ್ನು ಇದಕ್ಕೆ ಬಳಸಿರುವ ತಂತ್ರಜ್ಞಾನ ಅತಿಸರಳ ಮತ್ತು ಪರಿಣಾಮಕಾರಿ ಎಂದೆನಿಸಿದೆ

ವೈರ್‌ಲೆಸ್ ಕ್ಯಾಮೆರಾ

ವೈರ್‌ಲೆಸ್ ಕ್ಯಾಮೆರಾ

ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ಟ್ರಕ್‌ನ ಮುಂಭಾಗದಲ್ಲಿ ವೈರ್‌ಲೆಸ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಇದು ಟ್ರಕ್‌ನ ಹಿಂಭಾಗದಲ್ಲಿ ಅಳವಡಿಸಿರುವ ಟಿವಿಗೆ ಮುಂಭಾಗದ ರಸ್ತೆ ಮಾಹಿತಿಯನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung’s newest television is the back wall of a truck. We’re not talking a stationary truck either. You don’t sit stagnant in your car and watch the back of the truck like you’re in a drive-in movie.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot