ಸ್ಮಾರ್ಟ್‌ಫೋನ್ ಎಂಬ ಸ್ಲೋಪಾಯಿಸನ್‌ನ ಕರಾಳ ಮುಖ

By Shwetha
|

ನಮ್ಮ ದೈನಂದಿನ ಜೀವನವನ್ನು ಇನ್ನಷ್ಟು ಸರಳ ಮತ್ತು ಸುಸೂತ್ರವಾಗಿಸಲು ತಂತ್ರಜ್ಞಾನ ಬಹಳಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಆದರೆ ಈ ತಂತ್ರಜ್ಞಾನದ ಅಡ್ಡಪರಿಣಾಮಕ್ಕೆ ತುತ್ತಾಗುವುದು ನಿಮ್ಮ ಎಳೆಯ ಮಕ್ಕಳು ಎಂಬುದನ್ನು ನೀವು ಮನಗಂಡಿದ್ದೀರಾ? ಹೌದು ಉದಾಹರಣೆಗೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ನಿಮ್ಮೊಂದಿಗೆ ನಿಮ್ಮ ಮಕ್ಕಳು ಕೂಡ ಬಹುವಾಗಿ ಬಳಸುತ್ತಾರೆ. ಅವರಿಗೆ ಅದರಿಂದ ಹೊರಬರುವ ಬೆಳಕು, ಧ್ವನಿ, ಇನ್ನಿತರ ಮೋಜಿನ ಆಟಗಳು ಹೆಚ್ಚು ಇಷ್ಟವಾಗಿರಬಹುದು ಆದರೆ ಇವುಗಳಿಂದ ನಿಮ್ಮ ಮಕ್ಕಳು ಆರೋಗ್ಯದ ವಿಷಯದಲ್ಲಿ ಬಳಲುತ್ತಾರೆ ಎಂಬುದು ನಿಮಗೆ ಗೊತ್ತೇ?

ಓದಿರಿ: ಆನ್‌ಲೈನ್‌ನಲ್ಲಿ ಉಪ್ಪಿ 2 ವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ!!!

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇವುಗಳ ಹಾವಳಿ ನಿಮ್ಮ ಮಕ್ಕಳ ವಿಕಸನದ ಮೇಲೆ ಹೇಗೆ ಅಡ್ಡ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಕಂದಕ

ಹೆತ್ತವರ ಮತ್ತು ಮಕ್ಕಳ ಸಂಬಂಧದ ನಡುವೆ ಗೋಡೆ

ಸ್ಮಾರ್ಟ್‌ಫೋನ್‌ಗಳು ನಿಮಗೆ ಹೆಚ್ಚು ಅನುಕೂಲಕರವಾಗಿರಬಹುದು ಆದರೆ ಅದು ನಿಮ್ಮ ಮತ್ತು ಮಕ್ಕಳ ನಡುವೆ ಕಂದಕವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಅವರಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತೀರಿ ಮತ್ತು ಅವರನ್ನು ಸಂಶಯಿಸುತ್ತೀರಿ ಎಂಬುದು ಅವರ ಮನದಲ್ಲಿ ಮೂಡಬಹುದು.

ಮನಸ್ಸು ಕಿರಿದುಗೊಳ್ಳುತ್ತದೆ

ಕ್ರಿಯಾತ್ಮಕತೆಗೆ ತಡೆ

ಸ್ಮಾರ್ಟ್‌ಫೋನ್‌ಗಳನ್ನು ಬಳಸುವಾಗ ಅವರಲ್ಲಿ ಸುಪ್ತವಾಗಿರುವ ಕ್ರಿಯಾತ್ಮಕ ಮನಸ್ಸು ಕಿರಿದುಗೊಳ್ಳುತ್ತದೆ. ಬರೇ ಫೋನ್ ಹಿಡಿದುಕೊಂಡೇ ತಮ್ಮ ಎಂದಿನ ಚಟುವಟಿಕೆಗಳನ್ನು ಅವರು ಮರೆಯುತ್ತಾರೆ.

ಸಮಯದ ಪರಿವೆಯೇ ಇರುವುದಿಲ್ಲ

ಕಡಿಮೆ ನಿದ್ದೆ

ಸ್ಮಾರ್ಟ್‌ಫೋನ್ ಹಿಡಿದುಕೊಂಡು ಅವರು ಆಟವಾಡುವಾಗ ಸಮಯದ ಪರಿವೆಯೇ ಇರುವುದಿಲ್ಲ. ನಿದ್ದೆ ಮಾಡಬೇಕೆಂಬ ಮನಸ್ಸು ಅವರಿಗೆ ಉಂಟಾಗುವುದಿಲ್ಲ. ಫೋನ್‌ನಲ್ಲಿ ಇನ್ನಷ್ಟು ಸಮಯ ಕಳೆಯಬೇಕೆಂಬ ತುಡಿತ ಅವರಲ್ಲಿ ಉಂಟಾಗುತ್ತದೆ.

ಪ್ರತಿಭೆ ಮಸುಕಾಗುತ್ತದೆ

ಪ್ರತಿಭೆ ಕುಗ್ಗುತ್ತದೆ

ಹೌದು ನಿಮ್ಮ ಮಕ್ಕಳು ಅಧಿಕವಾಗಿ ಸ್ಮಾರ್ಟ್‌ಫೋನ್ ಬಳಸುವುದರಿಂದ ಅವರಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಮಸುಕಾಗುತ್ತದೆ. ಯಾವುದೋ ಅವ್ಯಕ್ತ ಲೋಕದಲ್ಲಿ ಅವರು ಪ್ರಯಾಣಿಸುತ್ತಿರುತ್ತಾರೆ. ಮಂಕಾಗುತ್ತಾರೆ

ತಡೆ

ಕಲಿಯುವ ಆಸಕ್ತಿ ಇರುವುದಿಲ್ಲ

ಇನ್ನಷ್ಟು ಕಲಿಯಬೇಕೆಂಬ ತುಡಿತ ಅವರಲ್ಲಿ ಉಂಟಾಗುವುದಿಲ್ಲ. ಅವರ ಬೌದ್ಧಿಕ ಮತ್ತು ಸಾಮಾಜಿಕ ಜ್ಞಾನದ ಮೇಲೆ ಅಧಿಕ ಸ್ಮಾರ್ಟ್‌ಫೋನ್ ಬಳಕೆ ತಡೆಯನ್ನೊಡ್ಡುತ್ತದೆ.

ಬದುಕಲಾರರು

ವ್ಯಸನ

ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಅವರಲ್ಲಿ ವ್ಯಸನವನ್ನುಂಟು ಮಾಡುತ್ತದೆ. ಸ್ಮಾರ್ಟ್‌ಫೋನ್ ಇಲ್ಲದೆ ಬದುಕಲಾರರು ಎಂಬಂತಹ ಸ್ಥಿತಿಗೆ ಅವರನ್ನು ತಳ್ಳುತ್ತದೆ.

ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ಖಂಡಿತವಾಗಿಯೂ ಸ್ಮಾರ್ಟ್‌ಫೋನ್ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಸ್ಮಾರ್ಟ್‌ಫೋನ್‌ನ ಅಧಿಕ ಬಳಕೆ ಮತ್ತು ಇಂಟರ್ನೆಟ್ ಸಂಪರ್ಕ ಒತ್ತಡ ಮತ್ತು ಖಿನ್ನತೆಯನ್ನು ಮಕ್ಕಳಲ್ಲಿ ಬೆಳೆಸುತ್ತದೆ.

ತೂಕ ಏರಿಕೆ

ಬೊಜ್ಜು

ಹೆಚ್ಚಿನ ಫೋನ್ ಬಳಕೆ ಅವರಲ್ಲಿ ಬೊಜ್ಜನ್ನು ಉಂಟುಮಾಡುತ್ತದೆ. ತೂಕ ಏರಿಕೆಯಲ್ಲಿ ವ್ಯತ್ಯಯವನ್ನುಂಟು ಮಾಡಿ ಹೆಚ್ಚುವರಿ ತೂಕಕ್ಕೆ ಕಾರಣವಾಗುತ್ತದೆ.

ಏಕಾಗ್ರತೆ ಸಮಸ್ಯೆ

ನಡವಳಿಕೆ ಸಮಸ್ಯೆಗಳು

ಸ್ಮಾರ್ಟ್‌ಫೋನ್‌ನಲ್ಲಿ ದಿನಕ್ಕೆ ಎರಡು ಗಂಟೆಗಿಂತ ಹೆಚ್ಚು ಸಮಯ ವ್ಯಯಿಸುವುದು ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಏಕಾಗ್ರತೆ ಸಮಸ್ಯೆಯನ್ನು ಅವರಲ್ಲಿ ಉಂಟುಮಾಡುತ್ತದೆ.

ಹಿಂಸೆಯ ಪ್ರವೃತ್ತಿ

ಮಕ್ಕಳಲ್ಲಿ ಹಿಂಸೆ

ಹೆಚ್ಚುವರಿ ಫೋನ್ ಬಳಕೆ ಅವರಲ್ಲಿ ಹಿಂಸೆಯ ಪ್ರವೃತ್ತಿಯನ್ನುಂಟು ಮಾಡುವಲ್ಲಿ ಕಾರಣವಾಗುತ್ತದೆ.

Most Read Articles
Best Mobiles in India

English summary
Technology has done a lot to make our lives easier and more efficient. Yet as a parent, you ought to be concerned about the impact that devices such as smartphones can have on your child.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more