ಫೋಲ್ಡಬಲ್‌ ಫೋನ್‌ ಬೆಲೆ ಕಡಿಮೆ ಮಾಡಲು ಸ್ಯಾಮ್‌ಸಂಗ್‌ನಿಂದ ಹೊಸ ಪ್ಲಾನ್‌!

|

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಗುಡ್‌ ನ್ಯೂಸ್‌ ನೀಡಿದೆ. ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ವಿಶೇಷವಾಗಿ ದುಬಾರಿಬೆಲೆಯನ್ನು ಹೊಂದಿವೆ. ಆದರೆ ಸ್ಯಾಮ್‌ಸಂಗ್‌ ಕಂಪೆನಿ ಮುಂಬರುವ ಫೋಲ್ಡಬಲ್‌ ಫೋನ್‌ಗಳ ಬೆಲೆಯನ್ನು ಕಡಿಮೆ ಮಾಡಲು ಪ್ಲಾನ್‌ ಮಾಡಿದೆ. ಇದಕ್ಕಾಗಿ ಫೋಲ್ಡಬಲ್‌ ಫೋನ್‌ಗಳಲ್ಲಿ ATL ಕಂಪೆನಿಯ ಬ್ಯಾಟರಿಗಳನ್ನು ಬಳಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಚೀನೀ ಬ್ಯಾಟರಿ ತಯಾರಕ ಆಂಪೆರೆಕ್ಸ್ ಟೆಕ್ನಾಲಜಿ ಲಿಮಿಟೆಡ್ (ATL) ಕಂಪೆನಿಯ ಬ್ಯಾಟರಿ ಬಳಸುವುದನ್ನು ಪರಿಶೀಲಿಸುತ್ತಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಕಂಪೆನಿ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲಿರುವ ಫೋಲ್ಡಬಲ್‌ಫೋನ್‌ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಈ ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆ ಮಾಡಬೇಕಾದರೆ ATL ಕಂಪೆನಿಯ ಬ್ಯಾಟರಿ ಬಳಸುವುದಕ್ಕೆ ಮುಂದಾಗಿದೆ. ಟೆಕ್‌ ವಲಯದ ವರದಿಯ ಪ್ರಕಾರ, ಸ್ಮಾರ್ಟ್‌ಫೋನ್‌ಗಳ ತಯಾರಿಕೆಯ ವೆಚ್ಚದಲ್ಲಿ ಬ್ಯಾಟರಿಗಳು ಸುಮಾರು 5% ಹೊಂದಿವೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ತನ್ನ ಗ್ಯಾಲಕ್ಸಿ ಫೋಲ್ಡಬಲ್‌ ಫೋನ್‌ಗಳಲ್ಲಿ ATL ಬ್ಯಾಟರಿ ಬಳಸಲಿದೆ.

ಫೋಲ್ಡಬಲ್‌

ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಳದಲ್ಲಿ ಬ್ಯಾಟರಿಗಳ ಪಾತ್ರ ಮಹತ್ವದ್ದಾಗಿದೆ. ಏಕೆಂದರೆ ಫೋಲ್ಡಬಲ್‌ ಫೋನ್‌ಗಳಿಗೆ ಹೆಚ್ಚಿನ ದಕ್ಷತೆಯ ಬ್ಯಾಟರಿಯ ಅವಶ್ಯಕತೆಯಿದೆ. ಇದಕ್ಕಾಗಿ ಪ್ರಮುಖ ಕಂಪೆನಿಯ ಬ್ಯಾಟರಿಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಇದರಿಂದ ಆ ಫೋನಿನ ಬೆಲೆ ಕೂಡ ದುಭಾರಿಯಾಗಿದೆ. ಸದ್ಯ ಇದೀಗ ಚೀನಾದ ಬ್ಯಾಟರಿ ತಯಾರಕರು ಗ್ಯಾಲಕ್ಸಿ A ಮತ್ತು M ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಬ್ಯಾಟರಿಗಳನ್ನು ಪೂರೈಸುತ್ತಿದ್ದಾರೆ. ಅದರಂತೆ ATL ಕಂಪೆನಿಯ ಬ್ಯಾಟರಿಗಳು ಕೂಡ ಸ್ಯಾಮ್‌ಸಂಗ್‌ ಫೋಲ್ಡಬಲ್‌ ಫೋನ್‌ ಸೇರಲಿವೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಕಂಪೆನಿ ಇಲ್ಲಿಯವರೆಗೆ ತನ್ನ ಗ್ಯಾಲಕ್ಸಿ Z ಫ್ಲಿಪ್ ಮತ್ತು ಗ್ಯಾಲಕ್ಸಿ Z ಫೋಲ್ಡ್ ಸರಣಿಯ ಫೋನ್‌ಗಳಲ್ಲಿ ಸ್ಯಾಮ್‌ಸಂಗ್‌ SDI ಬ್ಯಾಟರಿಯನ್ನು ಹೊಂದಿದೆ. ಸದ್ಯ ಸ್ಯಾಮ್‌ಸಂಗ್‌ ಕಂಪೆನಿಯ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ದುಭಾರಿ ಬೆಲೆ ಹೊಂದಿವೆ. ಇವುಗಳು ಇನ್ನು ಕೂಡ ಮಧ್ಯಮ ವರ್ಗದ ಜನರ ಕೈಗೆಟಕುತ್ತಿಲ್ಲ. ಫೋಲ್ಡಬಲ್‌ ಫೋನ್‌ಗಳು ಕೂಡ ಮಧ್ಯಮ ವರ್ಗದ ಜನರ ಕೈಗೆಟುಕವ ಬೆಲೆಗೆ ದೊರಕುವಂತೆ ಮಾಡಲು ATL ಬ್ಯಾಟರಿ ಬಳಸಲು ಸ್ಯಾಮ್‌ಸಂಗ್‌ ಮುಂದಾಗಿದೆ.

ಸ್ಯಾಮ್‌ಸಂಗ್‌

ಇನ್ನು ಸ್ಯಾಮ್‌ಸಂಗ್‌ ಕಂಪೆನಿ ತನ್ನ ಮುಂದಿನ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಗ್ಯಾಲಕ್ಸಿ Z ಫೋಲ್ಡ್‌ 4 ಅನ್ನು ಆಗಸ್ಟ್ 2022 ರಲ್ಲಿ ಅನಾವರಣಗೊಳಿಸುವ ಸಾಧ್ಯತೆಯಿದೆ. ಈ ಫೋಲ್ಡಬಲ್‌ ಫೋನ್‌ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ. ಇನ್ನು ಈ ಫೋನ್‌ 7.56 ಇಂಚಿನ ಮೇನ್‌ ಡಿಸ್‌ಪ್ಲೇ ಮತ್ತು 6.19 ಇಂಚಿನ ಕವರ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಈ ಫೋನ್‌ S ಪೆನ್ ಸ್ಟೈಲಸ್‌ಗಾಗಿ ಸ್ಲಾಟ್ ಅನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ. ಇದರ ಗ್ಲಾಸ್‌ ಸಾಕಷ್ಟು ಥಿಕ್‌ನೆಸ್‌ ಹೊಂದಿರಬಹುದು ಎಂದು ಆನ್‌ಲೈನ್‌ನಲ್ಲಿ ಮಾಹಿತಿ ಸೋರಿಕೆಯಾಗಿದೆ.

ಸ್ಯಾಮ್‌ಸಂಗ್

ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಅನ್ನು ಅಂಡರ್-ಡಿಸ್‌ಪ್ಲೇಯೊಂದಿಗೆ ಪರಿಚಯಿಸುವ ಸಾಧ್ಯತೆಯಿದೆ. ಈ ಫೋನ್‌ ಧೂಳು- ವಾಟರ್‌ಪ್ರೂಫ್‌ಗಾಗಿ ಹೊಸ ವಿನ್ಯಾಸದಲ್ಲಿ ಬರಲಿದೆ. ಇದರ ಕ್ಯಾಮೆರಾ ವಿಶೇಷತೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಆದರೆ ಇದು Z ಫೋಲ್ಡ್ 3 ನಲ್ಲಿರುವಂತೆ 12MP 2x ಜೂಮ್ ಕ್ಯಾಮೆರಾ ಒಳಗೊಂಡಿರುವ ನಿರೀಕ್ಷೆಯಿದೆ. ಹಾಗೆಯೇ ಅಪ್ಡೇಟ್‌ ಕ್ಯಾಮೆರಾ ವರ್ಷನ್‌ ಒಳಗೊಂಡಿರಲಿದೆ ಎಂದು ಕೂಡ ಊಹಿಸಲಾಗಿದೆ. ಅಲ್ಲದೆ ಈ ಫೋನ್‌ನ ಬಹುತೇಖ ಫೀಚರ್ಸ್‌ ಗ್ಯಾಲಕ್ಸಿ Z ಫೋಲ್ಡ್ 3 ಮಾದರಿಯಲ್ಲಿಯೇ ಇರಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Best Mobiles in India

English summary
Samsung is planning to a reduce the prices of the upcoming foldable phones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X