ಹಳೆಯ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ರೂಪ ಕೊಟ್ಟ ಸ್ಯಾಮ್‌ಸಂಗ್‌! ಹೀಗೂ ಉಪಯೋಗಿಸಬಹುದಾ?

|

ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿದ ನಂತರ ಹಳೆಯ ಸ್ಮಾರ್ಟ್‌ಫೋನ್‌ ಮೂಲೆ ಸೇರುವುದು ಸಾಮಾನ್ಯವಾಗಿದೆ. ಆದರೆ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹಳೆಯ ಸ್ಮಾರ್ಟ್‌ಫೋನ್‌ಗಳು ಮೂಲೆ ಸೇರದಂತೆ ಮಾಡುವುದಕ್ಕಾಗಿ ಹೊಸದೊಂದು ಉಪಯುಕ್ತ ದಾರಿ ಕಂಡುಕೊಂಡಿದೆ. ಸ್ಯಾಮ್‌ಸಂಗ್‌ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ವೈಧ್ಯಕೀಯ ವಲಯದಲ್ಲಿ ಉಪಯುಕ್ತ ಸಾಧನವಾಗಿ ಬಳಸುವುದಕ್ಕೆ ಅನುಕೂಲ ಮಾಡಿಕೊಟ್ಟಿದೆ. ಇದಕ್ಕಾಗಿ ಗ್ಯಾಲಕ್ಸಿ ಅಪ್‌ಸೈಕ್ಲಿಂಗ್‌ ಪ್ರೋಗ್ರಾಂ ಅನ್ನು ನಡೆಸುತ್ತಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹಳೆ ಸ್ಮಾರ್ಟ್‌ಫೋನ್‌ಗಳ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಗುರಿಯನ್ನು ಹೊಂದಿದೆ. ಅಂದರೆ ಸ್ಯಾಮ್‌ಸಂಗ್‌ ಹಳೆ ಫೋನ್‌ಗಳನ್ನು ಕಣ್ಣಿನ ಆರೋಗ್ಯದ ಪರೀಕ್ಷೆಗಳನ್ನು ಬಳಸುವುದಕ್ಕೆ ಸೂಕ್ತವಾಗುವಂತೆ ಮಾರ್ಪಾಡು ಮಾಡುತ್ತಿದೆ. ಹಳೆಯ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಕಣ್ಣಿನ ಪರೀಕ್ಷೆ ಮಾಡುವಾ ಹ್ಯಾಂಡ್‌ಹೆಲ್ಡ್ ಫಂಡಸ್ ಕ್ಯಾಮೆರಾವನ್ನು ಚಲಾಯಿಸಲು ಬಳಸಲಾಗುತ್ತಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅಪ್‌ಸೈಕ್ಲಿಂಗ್‌ ಪ್ರೋಗ್ರಾಂ ಕಾರ್ಯಕ್ರಮದ ಉದ್ದೇಶ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಂಪೆನಿ

ಸ್ಯಾಮ್‌ಸಂಗ್‌ ಕಂಪೆನಿ ಗ್ಯಾಲಕ್ಸಿ ಅಪ್‌ಸೈಕ್ಲಿಂಗ್‌ ಪ್ರೋಗ್ರಾಂ ನಡೆಸುತ್ತಿದೆ. ಇದರಲ್ಲಿ ಹಳೆಯ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳನ್ನು ಉಪಯುಕ್ತ ಡಿವೈಸ್‌ಗಳಾಗಿ ಮರುಬಳಕೆ ಮಾಡುವುದಕ್ಕೆ ಸೂಕ್ತವಾಗಂತೆ ಮಾರ್ಪಾಡು ಮಾಡ್ತಿದೆ. ಅದರಂತೆ ಗ್ಯಾಲಕ್ಸಿ ಹಳೆ ಸ್ಮಾರ್ಟ್‌ಫೋನ್‌ಗಳನ್ನು ಇಂದು ಮಧುಮೇಹ ರೆಟಿನೋಪತಿ, ಗ್ಲುಕೋಮಾ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಸ್ಟೇಟಸ್‌ಗಳನ್ನ ರೋಗಿಗಳಲ್ಲಿ ಗುರುತಿಸಲು ಬಳಸಲಾಗ್ತಿದೆ.

ಗ್ಯಾಲಕ್ಸಿ

2017 ರಲ್ಲಿ ಪ್ರಾರಂಭವಾದ ಗ್ಯಾಲಕ್ಸಿ ಅಪ್‌ಸೈಕ್ಲಿಂಗ್ ಪ್ರೋಗ್ರಾಂ ಭಾರತ ಸೇರಿದಂತೆ ಆರು ದೇಶಗಳಲ್ಲಿ ಲಭ್ಯವಿದೆ. ಇದರಲ್ಲಿ ವಿಶ್ವದ ಟಾಪ್ ಸ್ಮಾರ್ಟ್‌ಫೋನ್ ತಯಾರಕರು ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ದಿ ಪ್ರಿವೆನ್ಶನ್ ಆಫ್ ಬ್ಲೈಂಡ್‌ನೆಸ್ (IAPB), ಕೊರಿಯಾದಲ್ಲಿ ಯೋನ್‌ಸೇ ಯುನಿವರ್ಸಿಟಿ ಹೆಲ್ತ್ ಸಿಸ್ಟಮ್ (YUHS) ಮತ್ತು ಗ್ಯಾಲಕ್ಸಿ ಅಪ್‌ಸೈಕ್ಲಿಂಗ್ ಪ್ರೋಗ್ರಾಂಗಾಗಿ ಲ್ಯಾಬ್‌ಎಸ್‌ಡಿ ಜೊತೆ ಪಾಲುದಾರಿಕೆ ಹೊಂದಿದ್ದಾರೆ. ಸ್ಯಾಮ್‌ಸಂಗ್‌ನ ಪಾಲುದಾರರು ಹ್ಯಾಂಡ್‌ಹೆಲ್ಡ್ ಲೆನ್ಸ್ ಅನ್ನು ಒದಗಿಸುತ್ತಾರೆ. ಆದರೆ ಸ್ಯಾಮ್‌ಸಂಗ್ ತನ್ನ ಹಳೆಯ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಇಂಟರ್‌ಬಿಲ್ಟ್‌ ಸಾಫ್ಟ್‌ವೇರ್‌ನೊಂದಿಗೆ ನೀಡುತ್ತದೆ.

ಸ್ಯಾಮ್‌ಸಂಗ್‌ನ

ಇನ್ನು ಸ್ಯಾಮ್‌ಸಂಗ್‌ನ R&D ಬೆಂಗಳೂರು ಫಂಡಸ್ ಇಮೇಜ್ ಕ್ಯಾಪ್ಚರ್ ಮೆಕಾನಿಸಂ ಮತ್ತು ಕ್ಯಾಮೆರಾಕ್ಕಾಗಿ AI-ಆಧಾರಿತ ಅಲ್ಗಾರಿದಮ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದೆ. ಇದರಿಂದ ಕಣ್ಣಿನ ಪರೀಕ್ಷೆ ಮಾಡುವಾಗ ವರ್ಧಿತ ಫಂಡಸ್‌ ರೋಗನಿರ್ಣಯ ಮಾಡುವಲ್ಲಿ ಸ್ಮಾರ್ಟ್‌ಫೋನಿನ ಕ್ಯಾಮೆರಾ ಲೆನ್ಸ್‌ ಉಪಯುಕ್ತವಾಗಲಿದೆ. ಫೋನ್‌ನಿಂದ ಸೆರೆಹಿಡಿಯಲಾದ ಡೇಟಾ ನಂತರ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಸಿಂಕ್ ಆಗುತ್ತದೆ. ಇದರ ಮೂಲಕ ರೋಗಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆಯೇ ಅನ್ನೊದನ್ನ ತಿಳಿಯಲು ಸಾಧ್ಯವಾಗಲಿದೆ.

ಸ್ಯಾಮ್‌ಸಂಗ್‌

ಸದ್ಯ ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ, ಉತ್ತರ ಪ್ರದೇಶದ ಸೀತಾಪುರ ಕಣ್ಣಿನ ಆಸ್ಪತ್ರೆ, ಪುದುಚೇರಿಯ ಅರವಿಂದ್ ಕಣ್ಣಿನ ಆಸ್ಪತ್ರೆ, ರಾಜಸ್ಥಾನದ ಜೋಧ್‌ಪುರದ ಗುರುಹಸ್ತಿ ಚಿಕಿತ್ಸಾಲಯ ಮತ್ತು ನವದೆಹಲಿಯ ಡಾ.ಶ್ರಾಫ್ಸ್ ಚಾರಿಟಿ ಕಣ್ಣಿನ ಆಸ್ಪತ್ರೆಯ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಆಸ್ಪತ್ರೆಗಳಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ ಸೆಕೆಂಡ್ ಹ್ಯಾಂಡ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ 200 ಯುನಿಟ್‌ಗಳನ್ನು ಅಪ್‌ಸೈಕಲ್ ಮಾಡಲಾಗಿದೆ. ಇವುಗಳ ಮೂಲಕ ಐಲೈಕ್ ಫಂಡಸ್ ಕ್ಯಾಮೆರಾಗಳನ್ನು ವಿತರಿಸಿಸಿದೆ.

ಸ್ಮಾರ್ಟ್‌ಫೋನ್‌ಗಳಿಂದ

ಹಳೆಯ ಸ್ಮಾರ್ಟ್‌ಫೋನ್‌ಗಳಿಂದ ಫಂಡಸ್ ಚಿತ್ರಗಳನ್ನು ತೆಗೆಯುವುದು ಎಂದರೆ ರೋಗಿಗಳನ್ನು ಸ್ಕೇಲ್‌ನಲ್ಲಿ ಸ್ಕ್ಯಾನ್ ಮಾಡಬಹುದಾಗಿದೆ. ಇದರಿಂದ ಸ್ಕ್ಯಾನಿಂಗ್‌ ವೆಚ್ಚವನ್ನು ಉಳಸಿಬಹುದು. ಯಾಕೆಂದರೆ ಈ ಫೋನ್‌ಗಳಲ್ಲಿ ತೆಗೆದ ಫೋಟೋ ಹಿರಿಯ ಆಪ್ಟೋಮೆಟ್ರಿಸ್ಟ್‌ಗೆ ಹೋಗುತ್ತದೆ, ಒಂದು ಚಿತ್ರವು ವೈದ್ಯರಿಗೆ ಹೋಗುತ್ತದೆ ಇದನ್ನು ವಿಶ್ಲೇಷಣೆ ಮಾಡುವ ಮೂಲಕ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ ಎಂದು ವರದಿಯಾಗಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ಮತ್ತು ಗುಣಮಟ್ಟದ ಕಣ್ಣಿನ ಆರೈಕೆಗೆ ಸೂಕ್ತವಾಗಿದೆ ಎಂದು ಹೇಳಲಾಗಿದೆ. ಆದರೆ ಇದನ್ನು ಬಳಸುವುದು ಹೇಗೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

Best Mobiles in India

English summary
Samsung is using old smartphones in a smart way to help rural India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X