Samsung Galaxy Book 3 series : ಭಾರತದಲ್ಲಿ ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್‌ ಸರಣಿ ಬಿಡುಗಡೆ! ಬೆಲೆ ಎಷ್ಟು?

|

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸರಣಿಯನ್ನು ಅನಾವರಣಗೊಳಿಸಿ ಸಂಚಲನ ಸೃಷ್ಟಿಸಿರುವ ಸ್ಯಾಮ್‌ಸಂಗ್‌ ಇದೀಗ ತನ್ನ ಹೊಸ ಲ್ಯಾಪ್‌ಟಾಪ್‌ ಸರಣಿಯನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ತನ್ನ ಹೊಸ ಗ್ಯಾಲಕ್ಸಿ ಬುಕ್‌ 3 ಸರಣಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಇನ್ನು ಗ್ಯಾಲಕ್ಸಿ ಬುಕ್‌ 3 ಸರಣಿಯಲ್ಲಿ ಗ್ಯಾಲಕ್ಸಿ ಬುಕ್‌ 3 ಅಲ್ಟ್ರಾ, ಗ್ಯಾಲಕ್ಸಿ ಬುಕ್‌3 ಪ್ರೊ ಮತ್ತು ಗ್ಯಾಲಕ್ಸಿ ಬುಕ್‌ 3 ಪ್ರೊ 360 ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಲಾಗಿದೆ. ಇನ್ನು ಈ ಸರಣಿಯ ಲ್ಯಾಪ್‌ಟಾಪ್‌ಗಳು ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿವೆ.

ಭಾರತದಲ್ಲಿ ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್‌ ಸರಣಿ ಬಿಡುಗಡೆ! ಬೆಲೆ ಎಷ್ಟು?

ಹೌದು, ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಬುಕ್‌ 3 ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇನ್ನು ಈ ಲ್ಯಾಪ್‌ಟಾಪ್‌ಗಳು 13 ನೇ ತಲೆಮಾರಿನ ಇಂಟೆಲ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಇದರಲ್ಲಿ ಗ್ಯಾಲಕ್ಸಿ ಬುಕ್‌ 3 ಅಲ್ಟ್ರಾ ಡ್ಯುಯಲ್‌ ಮೈಕ್ರೋಫೋನ್‌ಗಳೊಂದಿಗೆ ಫುಲ್‌ ಹೆಚ್‌ಡಿ ವೆಬ್‌ಕ್ಯಾಮ್‌ ಅನ್ನು ಒಳಗೊಂಡಿದೆ. ಇದಲ್ಲದೆ ಆಡಿಯೋಗಾಗಿ ಡಾಲ್ಬಿ ಅಟ್ಮೋಸ್‌ ಬೆಂಬಲಿಸುವ AKG ಕ್ವಾಡ್ ಸ್ಪೀಕರ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 ಅಲ್ಟ್ರಾ ಫೀಚರ್ಸ್‌ ಹೇಗಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 ಅಲ್ಟ್ರಾ ಲ್ಯಾಪ್‌ಟಾಪ್‌ 16 ಇಂಚಿನ 3K ಡೈನಾಮಿಕ್‌ ಅಮೋಲೆಡ್‌ 2X ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,880x1,800ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ ಅಡಾಪ್ಟಿವ್ 120Hz ರಿಫ್ರೆಶ್ ರೇಟ್‌ ಮತ್ತು 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇನ್ನು ಈ ಲ್ಯಾಪ್‌ಟಾಪ್‌ 13ನೇ Gen ಇಂಟೆಲ್ ಕೋರ್ i9 ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ವಿಂಡೋಸ್‌ 11 ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಎನ್‌ವಿಡಿಯಾ ಜಿಫೋರ್ಸ್‌ RTX 4070 ಲ್ಯಾಪ್‌ಟಾಪ್‌ GPU ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ 76Whr ಸಾಮರ್ಥ್ಯದ ಬ್ಯಾಟರಿಯನ್ನು ಬೆಂಬಲಿಸಲಿದೆ.

ಭಾರತದಲ್ಲಿ ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್‌ ಸರಣಿ ಬಿಡುಗಡೆ! ಬೆಲೆ ಎಷ್ಟು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 ಪ್ರೊ 360
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 ಪ್ರೊ 360 ಲ್ಯಾಪ್‌ಟಾಪ್‌ 16 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದ್ದು, 400 ನೀಟ್ಸ್‌ ಬ್ರೈಟ್‌ನೆಸ್‌ ನೀಡಲಿದೆ. ಇದು 13ನೇ Gen ಇಂಟೆಲ್ ಕೋರ್ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್‌ ಐರಿಸ್‌ Xe ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ಲ್ಯಾಪ್‌ಟಾಪ್‌ 65W ವೇಗದ ಚಾರ್ಜಿಂಗ್ ಬೆಂಬಲಿಸುವ 76Whr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 ಪ್ರೊ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 3 ಪ್ರೊ ಲ್ಯಾಪ್‌ಟಾಪ್‌ 14 ಇಂಚಿನ ಮತ್ತು 16 ಇಂಚಿನ ಡಿಸ್‌ಪ್ಲೇ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಡಿಸ್‌ಪ್ಲೇ 120Hz ವರೆಗಿನ ರಿಫ್ರೆಶ್‌ ರೇಟ್‌ ಮತ್ತು 400 ನೀಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಈ ಲ್ಯಾಪ್‌ಟಾಪ್‌ 13ನೇ ತಲೆಮಾರಿನ ಇಂಟೆಲ್ ಕೋರ್ i7 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿವೆ. ಹಾಗೆಯೇ 32GB LPDDR5 RAM ಮತ್ತು 1TB SSD ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ ಫುಲ್‌ ಹೆಚ್‌ಡಿ ವೆಬ್‌ಕ್ಯಾಮ್ ಅನ್ನು ಹೊಂದಿದ್ದು, ಎಕೆಜಿ ಕ್ವಾಡ್ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 65W ವೇಗದ ಚಾರ್ಜಿಂಗ್‌ ಬೆಂಬಲಿಸುವ 76Whr ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್‌ ಸರಣಿ ಬಿಡುಗಡೆ! ಬೆಲೆ ಎಷ್ಟು?

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಈ ಲ್ಯಾಪ್‌ಟಾಪ್‌ ಸರಣಿಯ ಬೆಲೆ ಈಗಾಗಲೇ ಬಹಿರಂಗವಾಗಿದೆ. ಅದರಂತೆ ಗ್ಯಾಲಕ್ಸಿ ಬುಕ್‌ 3 ಅಲ್ಟ್ರಾ ಲ್ಯಾಪ್‌ಟಾಪ್‌ ಬೆಲೆ 2,81,990ರೂ.ಆಗಿದೆ. ಇದು ಇದೇ ಫೆಬ್ರವರಿ 14 ರಿಂದ ಪ್ರಿ ಬುಕ್ಕಿಂಗ್‌ ಆರ್ಡರ್‌ಗೆ ಲಭ್ಯವಾಗಲಿದೆ. ಇನ್ನು ಗ್ಯಾಲಕ್ಸಿ ಬುಕ್‌ 3 ಪ್ರೊ 360 ಲ್ಯಾಪ್‌ಟಾಪ್‌ ಭಾರತದಲ್ಲಿ 1,09,990ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಗ್ಯಾಲಕ್ಸಿ ಬುಕ್‌ 3 ಪ್ರೊ ಲ್ಯಾಪ್‌ಟಾಪ್‌ ಭಾರತದಲ್ಲಿ 1,31,990 ರೂ.ಬೆಲೆಯಿಂದ ಪ್ರಾರಂಭವಾಗಲಿದೆ.

Best Mobiles in India

English summary
The latest laptop lineup from Samsung includes new Galaxy Book 3 Ultra, Galaxy Book 3 Pro 360 and Galaxy Book 3 Pro models.know more details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X