ಸ್ಯಾಮ್‌ಸಂಗ್‌ನಿಂದ ಹೊಸ ಕ್ರೆಡಿಟ್‌ ಕಾರ್ಡ್‌ ಬಿಡುಗಡೆ! ಸಿಗಲಿದೆ ಭರ್ಜರಿ ಕ್ಯಾಶ್‌ಬ್ಯಾಕ್‌!

|

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ಭಾರತೀಯ ಗ್ರಾಹಕರಿಗಾಗಿ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಿದೆ. ಆಕ್ಸಿಸ್ ಬ್ಯಾಂಕ್ ಮತ್ತು ವೀಸಾ ಜೊತೆಗಿನ ಪಾಲುದಾರಿಕೆ ಮೂಲಕ ಈ ಕ್ರೆಡಿಟ್‌ ಕಾರ್ಡ್‌ ಅನ್ನು ಬಿಡುಗಡೆ ಮಾಡಿದೆ. ಈ ಕಾರ್ಡ್‌ ಮೂಲಕ ಸ್ಯಾಮ್‌ಸಂಗ್‌ ಕಂಪೆನಿಯ ಪ್ರಾಡಕ್ಟ್‌ಗಳನ್ನು ಖರೀದಿಸುವವರಿಗೆ ವಿಶೇಷ ಕ್ಯಾಶ್‌ ಬ್ಯಾಕ್‌ ಆಫರ್‌ ಲಭ್ಯವಾಗಲಿದೆ ಎಂದು ಕಂಪೆನಿ ಹೆಳಿದೆ. ಅದರಲ್ಲೂ ಸ್ಯಾಮ್‌ಸಂಗ್ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ಮೇಲೆ ವರ್ಷದಲ್ಲಿ 10% ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಹೊಸ ಕ್ರೆಡಿಟ್‌ ಕಾರ್ಡ್‌ ಪರಿಚಯಿಸಿದೆ. ಇದರ ಮೂಲಕ ಗ್ರಾಹಕರಿಗೆ ಆಕರ್ಷಕ ಕ್ಯಾಶ್‌ಬ್ಯಾಕ್‌ ಆಫರ್‌ ನೀಡುವ ಭರವಸೆ ನೀಡಿದೆ. ಆದರೆ ಈ ಕ್ಯಾಶ್‌ಬ್ಯಾಕ್ ಅಸ್ತಿತ್ವದಲ್ಲಿರುವ ಆಫರ್‌ಗಳ ಮೇಲೆ ಅನ್ವಯವಾಗಲಿದೆ. ಜೊತೆಗೆ ಗ್ರಾಹಕರು ಪ್ರತಿ ಬಾರಿ ಸ್ಯಾಮ್‌ಸಂಗ್‌ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಪಡೆಯುವುದಕ್ಕೆ ಈ ಕಾರ್ಡ್‌ ಬಳಸಿದರೆ ವಿಶೇಷ ರಿವಾರ್ಡ್‌ಗಳನ್ನು ಕೂಡ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಕಂಪೆನಿಯ ಹೊಸ ಕ್ರೆಡಿಟ್‌ ಕಾರ್ಡ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ತನ್ನ ಬಳಕೆದಾರರಿಗೆ ಕ್ರೆಡಿಟ್‌ ಕಾರ್ಡ್‌ ಅನ್ನು ಪರಿಚಯಿಸಿದೆ. ಇದಕ್ಕಾಗಿ ಆಕ್ಸಿಸ್ ಬ್ಯಾಂಕ್ ಮತ್ತು ವಿಸಾ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಹೇಳಿದೆ. ಇನ್ನು ಸ್ಯಾಮ್‌ಸಂಗ್‌ ಆಕ್ಸಿಸ್‌ ಕ್ರೆಡಿಟ್ ಕಾರ್ಡ್ ಅನ್ನು ಸ್ಯಾಮ್‌ಸಂಗ್ ಪ್ರಾಡಕ್ಟ್‌ಗಳನ್ನು ಖರೀದಿಸುವಾಗ ಬಳಸಬಹುದಾಗಿದೆ. ಹೀಗೆ ಕ್ರೆಡಿಟ್‌ ಕಾರ್ಡ್‌ ಮೂಲಕ ಸ್ಯಾಮ್‌ಸಂಗ್‌ ಸೇವೆಗಳನ್ನು ಪಡೆದುಕೊಂಡರೆ ವಿಶೇಷ ರಿವಾರ್ಡ್‌ಗಳನ್ನು ನೀಡಲು ವಿನ್ಯಾಸಗಳಿಸಲಾಗಿದೆ.

ಗ್ರಾಹಕರು

ಇದರಲ್ಲಿ ಗ್ರಾಹಕರು ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ಟೆಲಿವಿಷನ್‌ಗಳನ್ನು ಖರೀದಿಸಿದರೆ 10% ಕ್ಯಾಶ್‌ಬ್ಯಾಕ್ ದೊರೆಯಲಿದೆ. ಇನ್ನು ಈ 10% ಕ್ಯಾಶ್‌ಬ್ಯಾಕ್ ಆನ್‌ಲೈನ್‌ನಲ್ಲಿ ಸ್ಯಾಮ್‌ಸಂಗ್‌.ಕಾಮ್‌, ಸ್ಯಾಮ್‌ಸಂಗ್‌ ಶಾಪ್‌, ಸ್ಯಾಮ್‌ಸಂಗ್‌ನ ಅಧಿಕೃತ ಸರ್ವಿಸ್‌ ಸೆಂಟರ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಅನ್ವಯಿಸಲಿದೆ. ಆಫ್‌ಲೈನ್‌ನಲ್ಲಿ ಪೈನ್ ಲ್ಯಾಬ್ಸ್ ಮತ್ತು ಬೆನೌ ಪಾವತಿ ಇಂಟರ್‌ಫೇಸ್‌ಗಳ ಮೂಲಕ ಮಾರಾಟ ಮಾಡುವ ಚಾನೆಲ್‌ಗಳಿಗೆ ಅನ್ವಯಿಸುತ್ತದೆ.

ಸ್ಯಾಮ್‌ಸಂಗ್

ಇದಲ್ಲದೆ ಸ್ಯಾಮ್‌ಸಂಗ್ ಇಂಡಿಯಾ ಮತ್ತು ಆಕ್ಸಿಸ್ ಬ್ಯಾಂಕ್ ಎರಡೂ ಬಿಗ್‌ಬಾಸ್ಕೆಟ್, ಮೈಂತ್ರಾ, ಟಾಟಾ 1mg, ಅರ್ಬನ್ ಕಂಪನಿ ಮತ್ತು ಝೊಮಾಟೊ ಸೇರಿದಂತೆ ಕೆಲವು ಪ್ರಮುಖ ಪಾಲುದಾರ ವ್ಯಾಪಾರಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿವೆ. ಇನ್ನು ಈ ಕ್ರೆಡಿಟ್ ಕಾರ್ಡ್ ಎರಡು ರೂಪಾಂತರಗಳಲ್ಲಿ ಬರುತ್ತದೆ. ಇದರಲ್ಲಿ ವೀಸಾ ಸಿಗ್ನೇಚರ್ ಮತ್ತು ವೀಸಾ ಇನ್ಫೈನೈಟ್ ಆಯ್ಕೆಯನ್ನು ಕಾಣಬಹುದು.

ವಾರ್ಷಿಕವಾಗಿ

ಇನ್ನು ವೀಸಾ ಸಿಗ್ನೇಚರ್ ರೂಪಾಂತರ ಕಾರ್ಡುದಾರರು ವಾರ್ಷಿಕವಾಗಿ 10,000ರೂ. ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದು. ಇದರ ಮಾಸಿಕ ಕ್ಯಾಶ್‌ಬ್ಯಾಕ್‌ ಮಿತಿ 2,500ರೂ.ಆಗಿದೆ. ವೀಸಾ ಇನ್ಫೈನೈಟ್‌ ಕಾರ್ಡುದಾರರು ವಾರ್ಷಿಕವಾಗಿ 20,000ರೂ. ವರೆಗೆ ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರ ಮಾಸಿಕ ಕ್ಯಾಶ್‌ಬ್ಯಾಕ್‌ ಮಿತಿ 5,000ರೂ. ಹೊಂದಿದೆ. ಅಂದರೆ ಕಾರ್ಡ್‌ದಾರರು ಸ್ಯಾಮ್‌ಸಂಗ್ ಖರೀದಿಗಳಲ್ಲಿ 10% ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.

ಕ್ರೆಡಿಟ್‌

ಇದರಲ್ಲಿ ಸಿಗ್ನೇಚರ್ ವೇರಿಯಂಟ್‌ ಕ್ರೆಡಿಟ್‌ ಕಾರ್ಡ್‌ ವಾರ್ಷಿಕ ಶುಲ್ಕವು 500ರೂ. ಆಗಿದೆ. ಇದಲ್ಲದೆ ಕಾರ್ಡ್‌ದಾರರು ತಮ್ಮ ಕಾರ್ಡ್‌ನಲ್ಲಿ ಮೊದಲ 3 ವಹಿವಾಟುಗಳನ್ನು ಪೂರ್ಣಗೊಳಿಸಿದಾಗ ಪಾಯಿಂಟ್‌ಗಳನ್ನು ಗಳಿಸುತ್ತಾರೆ ಎಂದು ಹೇಳಲಾಗಿದೆ. ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವೆಬ್‌ಸೈಟ್: www.samsung.com/in/samsung-card ಮೂಲಕ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಸ್ಯಾಮ್‌ಸಂಗ್‌ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
Samsung launches credit card in India:details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X