ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಸರಣಿ ಲ್ಯಾಪ್‌ಟಾಪ್‌ ಬಿಡುಗಡೆ! ಬೆಲೆ ಎಷ್ಟು?

|

ದಕ್ಷಿಣ ಕೋರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌ ವಲಯದಲ್ಲಿಯೂ ಕೂಡ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಹೊಸದಾಗಿ ಗ್ಯಾಲಕ್ಸಿ ಬುಕ್‌ 2 ಸರಣಿಯ ಲ್ಯಾಪ್‌ಟಾಪ್‌ಗಳನ್ನು ಘೋಷಿಸಿದೆ. ಇವುಗಳಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2, ಗ್ಯಾಲಕ್ಸಿ ಬುಕ್‌ 2 ಪ್ರೊ, ಗ್ಯಾಲಕ್ಸಿ ಬುಕ್‌ 2 ಪ್ರೊ 360 ಮತ್ತು ಗ್ಯಾಲಕ್ಸಿ ಬುಕ್‌ 2 ಬಿಸಿನೆಸ್ ಪ್ರಮುಖವಾಗಿ ಗುರುತಿಸಿಕೊಂಡಿದೆ. ಈ ಲ್ಯಾಪ್‌ಟಾಪ್‌ಗಳು 12 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಗ್ಯಾಲಕ್ಸಿ ಬುಕ್‌ 2 ಸರಣಿ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ಗಳ ಜೊತೆಗೆ ಸ್ಯಾಮ್‌ಸಂಗ್ ಬಜೆಟ್ ಗ್ಯಾಲಕ್ಸಿ ಬುಕ್ ಗೋ ಲ್ಯಾಪ್‌ಟಾಪ್ ಅನ್ನು ಕೂಡ ಅನಾವರಣಗೊಳಿಸಿದೆ. ಇನ್ನು ಈ ಎಲ್ಲಾ ಡಿವೈಸ್‌ಗಳು ವಿಂಡೋಸ್‌ 11 OS ನಲ್ಲಿ ರನ್‌ ಆಗಲಿವೆ. ಇನ್ನುಳಿದಂತೆ ವಿವಿಧ ಮಾದರಿಯ ಡಿಸ್‌ಪ್ಲೇ ವಿನ್ಯಾಸದಲ್ಲಿ ಲಬ್ಯವಾಗಲಿವೆ. ಹಾಗಾದ್ರೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಸರಣಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಸರಣಿ

ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಗ್ಯಾಲಕ್ಸಿ ಬುಕ್‌ 2 ಪ್ರೊ 360 ಮತ್ತು ಗ್ಯಾಲಕ್ಸಿ ಬುಕ್‌ 2ಪ್ರೊ ಲ್ಯಾಪ್‌ಟಾಪ್‌ಗಳು 13.3 ಇಂಚಿನ ಮತ್ತು 15.6 ಇಂಚಿನ ಡಿಸ್‌ಪ್ಲೇ ಆಯ್ಕೆಯಲ್ಲಿ ಬರಲಿವೆ. ಇದರಲ್ಲಿ ಗ್ಯಾಲಕ್ಸಿ ಬುಕ್‌ 2 360 ಲ್ಯಾಪ್‌ಟಾಪ್‌ 13.3 ಇಂಚಿನ ಡಿಸ್‌ಪ್ಲೇ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಈ ಲ್ಯಾಪ್‌ಟಾಪ್‌ಗಳು ವಿಂಡೋಸ್ 11 ಮತ್ತು 12 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್‌ ಬಲವನ್ನು ಹೊಂದಿವೆ. ಇನ್ನು ಗ್ಯಾಲಕ್ಸಿ ಬುಕ್‌ 2 ಲ್ಯಾಪ್‌ಟಾಪ್‌ 21 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದ್ದು, ಫೈಲ್‌ಗಳನ್ನು ವರ್ಗಾಯಿಸಲು ಬಳಕೆದಾರರಿಗೆ ಸುಲಭವಾಗುವಂತೆ ಸ್ಮಾರ್ಟ್‌ ಸ್ವಿಚ್‌ ಫೀಚರ್ಸ್‌ ಅನ್ನು ಕೂಡ ಸೇರಿಸಿದೆ. ಇದಲ್ಲದೆ ಈ ಎರಡು ಲ್ಯಾಪ್‌ಟಾಪ್‌ಗಳು 1080p ವೆಬ್‌ಕ್ಯಾಮ್ ಅನ್ನು ಹೊಂದಿದ್ದು, ವೀಡಿಯೋ ಕರೆಗಳಿಗಾಗಿ ವೈಡ್‌ ಆಂಗಲ್‌ ವ್ಯೂ ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ಗಳು ಕೃತಕ ಬುದ್ಧಿಮತ್ತೆ-ಬೆಂಬಲಿತ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಹೊಂದಿದ್ದು, ಇದು ಆಂಬಿಯೆಂಟ್‌ ನಾಯ್ಸ್‌ ಕಡಿತಗೊಳಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಗ್ಯಾಲಕ್ಸಿ ಬುಕ್‌ 2 ಸರಣಿಯು AKG-ಟ್ಯೂನ್ ಮಾಡಿದ ಆಡಿಯೊ ವ್ಯವಸ್ಥೆಯನ್ನು ಸಹ ಪ್ಯಾಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಬ್ಯುಸಿನೆಸ್‌ ಮತ್ತು ಗ್ಯಾಲಕ್ಸಿ ಬುಕ್‌ ಗೋ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಬ್ಯುಸಿನೆಸ್‌ ಮತ್ತು ಗ್ಯಾಲಕ್ಸಿ ಬುಕ್‌ ಗೋ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಬ್ಯುಸಿನೆಸ್‌ ಲ್ಯಾಪ್‌ಟಾಪ್ 14 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಟ್ಯಾಂಪರ್ ಅಲರ್ಟ್ ಫೀಚರ್ಸ್‌ ಅನ್ನು ಹೊಂದಿದ್ದು, ಸೈಬರ್ ಬೆದರಿಕೆಗಳಿಂದ ಡಿವೈಸ್‌ ಅನ್ನು ಸೆಕ್ಯುರ್‌ ಮಾಡಲಿದೆ ಎನ್ನಲಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಹೊಸ 12ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್‌ ಬಲವನ್ನು ಹೊಂದಿದ್ದು, ವಿಂಡೋಸ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಗ್ಯಾಲಕ್ಸಿ ಬುಕ್‌ ಗೋ ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇ ಗಾತ್ರದಲ್ಲಿ ಸ್ಲಿಮ್ ಬೆಜೆಲ್‌ಗಳೊಂದಿಗೆ ಲಭ್ಯವಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7c Gen 2 ಪ್ರೊಸೆಸರ್‌ ಹೊಂದಿದ್ದು, ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಪ್ರೊ 360 ಲ್ಯಾಪ್‌ಟಾಪ್‌ ಭಾರತದಲ್ಲಿ 1,15,990ರೂ.ಬೆಲೆ ಹೊಂದಿದೆ. ಇನ್ನು ಗ್ಯಾಲಕ್ಸಿ ಬುಕ್‌ 2 ಪ್ರೊ ಲ್ಯಾಪ್‌ಟಾಪ್‌ ಬೆಲೆ 1,06,990 ರೂ. ಆಗಿದೆ. ಹಾಗೆಯೇ ಗ್ಯಾಲಕ್ಸಿ ಬುಕ್‌ 2 360 ಲ್ಯಾಪ್‌ಟಾಪ್‌ 99,990ರೂ.ಬೆಲೆಗೆ ಮಾರಾಟವಾಗಲಿದ್ದು, ಗ್ಯಾಲಕ್ಸಿ ಬುಕ್‌ 2 65,990ರೂ.ಬೆಲೆಯಲ್ಲಿ ಬರಲಿದೆ. ಗ್ಯಾಲಕ್ಸಿ ಬುಕ್‌ 2 ಬ್ಯುಸಿನೆಸ್‌ ಲ್ಯಾಪ್‌ಟಾಪ್‌ ಭಾರತದಲ್ಲಿ 1,04,990ರೂ.ಗಳಿಂದ ಪ್ರಾರಂಭವಾಗುತ್ತದೆ. ಇನ್ನು ಗ್ಯಾಲಕ್ಸಿ ಬುಕ್‌ ಗೋ ಲ್ಯಾಪ್‌ಟಾಪ್‌ 38,990ರೂ.ಬೆಲೆಯಲ್ಲಿ ದೊರೆಯಲಿದೆ. ಈ ಲ್ಯಾಪ್‌ಟಾಪ್‌ಗಳನ್ನು ಆಸಕ್ತ ಖರೀದಿದಾರರು ಸ್ಯಾಮ್‌ಸಂಗ್‌ನ ಅಧಿಕೃತ ಸೈಟ್ ಮೂಲಕ ಹೊಸ ಲ್ಯಾಪ್‌ಟಾಪ್‌ಗಳನ್ನು ಮುಂಗಡವಾಗಿ ಬುಕ್ ಮಾಡಬಹುದು.

Best Mobiles in India

English summary
The company also launched Galaxy Book Go laptop that falls under the Rs 40,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X