ಸ್ಯಾಮ್ ಸಂಗ್ ನಿಂದ QLED ಟಿವಿಗಳಿಗಾಗಿ ಹೊಸ ಆಪ್

By Lekhaka
|

ಕೋರಿಯಾ ಮೂಲದ ಸ್ಯಾಮ್ ಸಂಗ್ ಕಂಪನಿಯೂ ಸ್ಮಾರ್ಟ್ ಫೋನ್ ಹಾಗೂ ಟಿವಿ ತಯಾರಿಕೆಯಲ್ಲಿ ಮುಂಚುಣಿಯಲ್ಲಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ತನ್ನ QLED ಟಿವಿಗಳಿಗಾಗಿ ಸೀ ಕಲರ್ಸ್ ಎನ್ನುವ ಆಪ್ ವೊಂದನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ ಎನ್ನಲಾಗಿದೆ.

ಸ್ಯಾಮ್ ಸಂಗ್ ನಿಂದ QLED ಟಿವಿಗಳಿಗಾಗಿ ಹೊಸ ಆಪ್


ಸ್ಯಾಮ್ ಸಂಗ್ ಇತ್ತೀಚಿನ ದಿನಗಳಲ್ಲಿ ಉತ್ತಮ ಡಿಸ್ ಪ್ಲೇಗಳನ್ನು ನಿರ್ಮಿಸಲು ಮುಂದಾಗಿದ್ದು, ಇದೇ ಮಾದರಿಯಲ್ಲಿ ಹೊಸ ದಾಗಿ ಬಿಡುಗಡೆ ಮಾಡಿರುವ ಈ ಆಪ್ ಬಳಕೆದಾರರಿಗೆ ಕಲರ್ಸ್ ವಿಷನ್ ಡಿಫಿಷನ್ಷಿಯನ್ನು ಅರಿತು ಕೊಳ್ಳಲು ಸಹಾಯ ಮಾಡಲಿದೆ. ಇದರಿಂದಾಗಿ ಗ್ರಾಹಕರು ಉತ್ತಮವಾದ ಪಿಚ್ಚರ್ ಕ್ವಾಲಿಟಿ ಪಡೆಯಬಹುದಾಗಿದೆ.

ಈ ಆಪ್ ಸಹಾಯದಿಂದಾಗಿ ಯಾವ ಬಣ್ಣದಲ್ಲಿ ಉತ್ತಮವಾಗಿ ಟಿವಿ ಕಾಣಿಸಲಿದೆ ಎಂಬುದನ್ನು ಅರಿಯಬಹುದಾಗಿದೆ. ಇದು ವೈಯಕ್ತಿಕವಾಗಿ ಟಿವಿ ನೋಡುವ ವಿಧಾನವನ್ನ ಬದಲಾಯಿಸಲಿದೆ ಎನ್ನುವುದು ಸ್ಯಾಮ್ ಸಂಗ್ ಅಭಿಪ್ರಾಯವಾಗಿದೆ. ಇದರಿಂದ ಡಿಸ್ ಪ್ಲೇ ಗುಣಮಟ್ಟವು ಉತ್ತಮವಾಗಲಿದೆ ಎನ್ನಲಾಗಿದೆ.

ಸದ್ಯ ಈ ಆಪ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಹಾಗೂ ಗ್ಯಾಲೆಕ್ಸಿ ಆಪ್ ಸ್ಟೋರಿನಲ್ಲಿ ಲಭ್ಯವಿದ್ದು, ಈ ಆಪ್ ಅನ್ನು ಸ್ಯಾಮ್ ಸಂಗ್ ಬಳಕೆದಾರರು ಗ್ಯಾಲೆಕ್ಸಿ S6 ಮೇಲ್ಪಟ್ಟ ಸ್ಮಾರ್ಟ್ ಫೋನ ಗಳಲ್ಲಿ ಹಾಗೂ QLED ಟಿವಿಗಳಲ್ಲಿ ಬಳಕೆ ಮಾಡಿಕೊಳ್ಳಲಿದ್ದು, ಇದರಿಂದಾಗಿ ಟಿವಿ ಡಿಸ್ ಪ್ಲೇ ಆಟೋ ಮೆಟಿಕ್ ಬದಲಾಗಲಿದೆ.

ಎಮ್-ಟೆಕ್ ಲಾಂಚ್ ಮಾಡಿದೆ ನೂತನ ಅಗ್ಗದ ಸ್ಮಾರ್ಟ್ಫೋನ್ ಇರೋಸ್, ಬೆಲೆ ರೂ 4299!ಎಮ್-ಟೆಕ್ ಲಾಂಚ್ ಮಾಡಿದೆ ನೂತನ ಅಗ್ಗದ ಸ್ಮಾರ್ಟ್ಫೋನ್ ಇರೋಸ್, ಬೆಲೆ ರೂ 4299!

ಸ್ಯಾಮ್ ಸಂಗ್ ಲಾಂಚ್ ಮಾಡಿರುವ ಈ ಡಿಸ್ ಪ್ಲೇ ಆಪ್ ಹಲವು ಮಂದಿಗೆ ಸಹಾಯಕವಾಗಲಿದ್ದು, ಇದರಿಂದಾಗಿ ಟಿವಿ ನೋಡುವ ವಿಧಾನವು ಬದಲಾಗಲಿದೆ ಎನ್ನಲಾಗಿದೆ. ಇದರಿಂದಾಗಿ ಗ್ರಾಹಕರು ಉತ್ತಮ ಚಿತ್ರಗಳನ್ನು ವಿಕ್ಷೀಸಬಹುದಾಗಿದೆ.

Best Mobiles in India

Read more about:
English summary
The company has also partnered with Professor Klara Wenzel who heads up the Department of Mechatronics.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X