ನೆಕ್ ಬ್ಯಾಂಡ್ ಶೈಲಿಯ ಸ್ಯಾಮ್‌ಸಂಗ್ ಲೆವೆಲ್ U2 ಹೆಡ್‌ಫೋನ್ ಲಾಂಚ್!
ಸ್ಮಾರ್ಟ್‌ಫೋನ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆ ತನ್ನ ಗುಣಮಟ್ಟದ ಹೆಡ್‌ಫೋನ್‌ಗಳಿಗೂ ಹೆಸರುವಾಸಿಯಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಅನೇಕ ಹೆಡ್‌ಫೋನ್‌ಗಳನ್ನ ಸ್ಯಾಮ್‌ಸಂಗ್ ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ಸ್ಯಾಮ್‌ಸಂಗ್ ಲೆವೆಲ್ U2 ನೆಕ್‌ಬ್ಯಾಂಡ್ ಶೈಲಿಯ ವಾಯರ್‌ಲೆಸ್ ಹೆಡ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಹೆಡ್‌ಫೋನ್‌ಗಳು ಸಿಂಗಲ್ ಚಾರ್ಜ್‌ನಲ್ಲಿ 500 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆ ತನ್ನ ಹೊಸ ಸ್ಯಾಮ್‌ಸಂಗ್ ಲೆವೆಲ್ U2 ನೆಕ್‌ಬ್ಯಾಂಡ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಹೆಡ್‌ಫೋನ್ 12mm ಆಡಿಯೊ ಡ್ರೈವರ್ ಅನ್ನು ಹೊಂದಿದ್ದು, IPX 2-ರೇಟೆಡ್ ಬಿಲ್ಡ್ ವಾಟರ್ ರೆಸಿಸ್ಟೆನ್ಸ್ ಅನ್ನು ಸಹ ಒದಗಿಸಿದೆ. ಜೊತೆಗೆ ಇದರಲ್ಲಿ ಅತ್ಯುತ್ತಮ ಸೌಂಡ್ ಪ್ರೊಡಕ್ಷನ್‌ಗಾಗಿ ಸ್ಯಾಮ್‌ಸಂಗ್‌ನ ಸ್ವಾಮ್ಯದ ಸ್ಕೇಲೆಬಲ್ ಕೋಡೆಕ್ ತಂತ್ರಜ್ಞಾನವನ್ನು ನೀಡಲಾಗಿದೆ. ಇನ್ನುಳಿದಂತೆ ಈ ಹೆಡ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್ ಲೆವೆಲ್ U2 ಹೆಡ್‌ಫೋನ್ 12mm ಆಡಿಯೋ ಡ್ರೈವರ್ ಅನ್ನು ಹೊಂದಿದೆ. ಇದು 32 ಓಮ್‌ಗಳ ಪ್ರತಿರೋಧ ಮತ್ತು 20,000Hz ಫ್ರಿಕ್ವೆನ್ಸಿ ರೆಸ್ಪಾನ್ಸ್ ಅನ್ನು ಹೊಂದಿರುತ್ತದೆ. ಇನ್ನು ಈ ಹೆಡ್‌ಫೋನ್ಸ್ ಬ್ಲೂಟೂತ್ 5.0 ಕನೆಕ್ಟಿವಿಟಿ ಜೊತೆಗೆ ಎರಡು ಮೈಕ್ರೊಫೋನ್‌ಗಳೊಂದಿಗೆ ಬರಲಿದೆ. ಇದಲ್ಲದೆ, ಎಎಸಿ, ಎಸ್‌ಬಿಸಿ ಮತ್ತು ಸ್ಕೇಲೆಬಲ್ ಕೊಡೆಕ್‌ಗೆ ಬೆಂಬಲವನ್ನು ಸಹ ಒಳಗೊಂಡಿದೆ. ಇದಲ್ಲದೆ ಈ ಹೆಡ್‌ಫೋನ್ ನೆಕ್‌ಬ್ಯಾಂಡ್ ವಿನ್ಯಾಸವನ್ನು ಒದಗಿಸಿದ್ದು, ಲೆವೆಲ್ U2 ಹೆಡ್‌ಫೋನ್‌ಗಳನ್ನು ನಿಮ್ಮ ಕುತ್ತಿಗೆಗೆ ಹಿತಕರವಾಗಿ ಕುಳಿತುಕೊಳ್ಳಲು ಅನುವು ಮಾಡಿಕೊಡುತ್ತದೆ.

ಇನ್ನು ಈ ಹೆಡ್‌ಫೋನ್ ಸಂಪರ್ಕಿತ ಫೋನ್ ಅನ್ನು ತೆಗೆದುಕೊಳ್ಳದೆ ಬಳಕೆದಾರರಿಗೆ ಕರೆಗಳನ್ನು ಸ್ವೀಕರಿಸಲು, ಮ್ಯೂಟ್ ಮಾಡಲು ಮತ್ತು ತಿರಸ್ಕರಿಸಲು ಅವಕಾಶವನ್ನು ನೀಡಲಿದೆ. ಇನ್ನು ಈ ಹೆಡ್‌ಫೋನ್‌ಗಳು ಇಂಟರ್‌ಬಿಲ್ಟ್ ಬ್ಯಾಟರಿಯನ್ನು ಸಹ ಒಳಗೊಂಡಿದ್ದು, ಇದು 500 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ, 18 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಅಥವಾ ಸಿಂಗಲ್ ಚಾರ್ಜ್‌ನಲ್ಲಿ 13 ಗಂಟೆಗಳ ಟಾಕ್‌ಟೈಮ್ ಅನ್ನು ನೀಡುತ್ತದೆ. ಇದಲ್ಲದೆ, ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಸಹ ಹೊಂದಿದೆ.

ಸದ್ಯ ಭಾರತದಲ್ಲಿ ಬಿಡುಗಡೆ ಆಗಿರುವ ಸ್ಯಾಮ್‌ಸಂಗ್ ಲೆವೆಲ್ U2 ಬೆಲೆ 1,999. ರೂ ಆಗಿದೆ. ಇನ್ನು ಈ ಹೆಡ್‌ಫೋನ್‌ಗಳು ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಜೊತೆಗೆ ಈ ಹೆಡ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಪ್ರತ್ಯೇಕವಾಗಿ ಖರೀದಿಸಬಹುದಾಗಿದೆ.


Click it and Unblock the Notifications








