ಬಜೆಟ್‌ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಬಿಗ್‌ ಶಾಕ್‌ ನೀಡಿದ ಸ್ಯಾಮ್‌ಸಂಗ್‌!

|

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಪ್ರಮುಖ ಬ್ರಾಂಡ್‌ಗಳಲ್ಲಿ ಒಂದಾಗಿದೆ. ತನ್ನ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಮನಗೆದ್ದಿದೆ. ಸದ್ಯ ಇದೀಗ ಬಜೆಟ್‌ ಬೆಲೆಯಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಬಿಗ್ ಶಾಕ್‌ ನೀಡಿದೆ. ಮುಂದಿನ ವರ್ಷದಿಂದ ಭಾರತದಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಸೇಲ್‌ ಮಾಡುವುದನ್ನು ನಿಲ್ಲಿಸಲು ಮುಂದಾಗಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಮುಂದಿನ ವರ್ಷದಿಂದ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಮಾಡುವುದಿಲ್ಲ ಎಂದು ವರದಿಯಾಗಿದೆ. ಈ ವರ್ಷಾಂತ್ಯದ ವೇಳೆಗೆ ತನ್ನ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ಸ್ಟಾಕ್‌ ಅನ್ನು ಸೇಲ್‌ ಮಾಡಲಿದೆ. ಬಜೆಟ್‌ ಸ್ಮಾರ್ಟ್‌ಫೋನ್‌ಗಳ ಕೊನೆಯ ಬ್ಯಾಚ್ ಅನ್ನು ಸ್ಯಾಮ್‌ಸಂಗ್‌ನ ಒಪ್ಪಂದದ ಪಾಲುದಾರ ಡಿಕ್ಸನ್ ಈ ಡಿಸೆಂಬರ್‌ನಲ್ಲಿ ತಯಾರಿಸುತ್ತಾರೆ. ನಂತರ ಸ್ಯಾಮ್‌ಸಂಗ್‌ ಕಂಪನಿಯು ಹೆಚ್ಚಾಗಿ 15,000ರೂ. ಕ್ಕಿಂತ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸಲು ಗಮನಹರಿಸುತ್ತದೆ ಎಂದು ವರದಿಯಾಗಿದೆ.

ಸ್ಯಾಮ್‌ಸಂಗ್

ಪ್ರಸ್ತುತ ಭಾರತ ಸರ್ಕಾರದ ಪ್ರೊಡಕ್ಷನ್‌-ಲಿಂಕ್ಡ್‌ ಇನ್‌ಸೆಂಟಿವ್‌ (PLI) ಯೋಜನೆಗೆ ಕೊಡುಗೆ ನೀಡುವ ಪ್ರಮುಖ ಎಂಎನ್‌ಸಿ ಕಂಪನಿಗಳಲ್ಲಿ ಸ್ಯಾಮ್‌ಸಂಗ್ ಒಂದಾಗಿದೆ. ಈ ಪ್ಲಾನ್‌ನಲ್ಲಿ ತಯಾರಕರು ಸ್ಥಳೀಯ ಉತ್ಪಾದನೆಗಾಗಿ ಸರ್ಕಾರದಿಂದ sops ಪಡೆಯಲು ಅವಕಾಶವಿದೆ. ಆದರೆ ಈ ಫೋನ್‌ಗಳು 15,000ರೂ. ಫ್ಯಾಕ್ಟರಿ ಬೆಲೆಯನ್ನು ಹೊಂದಿರಬೇಕಾಗುತ್ತದೆ. ಇದರಿಂದ ಸ್ಯಾಮ್‌ಸಂಗ್ ಕಂಪೆನಿ 20,000ರೂ. ಅಥವಾ ಅದಕ್ಕಿಂತ ಹೆಚ್ಚಿನ ಮಾರುಕಟ್ಟೆಯತ್ತ ಗಮನಹರಿಸಲು ಕಾರಣವಾಗಿರಬಹುದು.

 ಸ್ಯಾಮ್‌ಸಂಗ್‌

ಇದರಿಂದ ಸ್ಯಾಮ್‌ಸಂಗ್‌ನ ಉತ್ಪಾದನಾ ಪಾಲುದಾರರಾದ ಡಿಕ್ಸನ್ ಕಡಿಮೆ ಬೆಲೆಯ ಫೋನ್‌ಗಳನ್ನು ತಯಾರಿಸುವುದನ್ನು ಸ್ಟಾಪ್‌ ಮಾಡಲಿದೆ. ಆದರೆ ಈ ವರ್ಷದ ಅಂತ್ಯದ ವೇಳೆಗೆ ಕೇವಲ ಫೀಚರ್ ಫೋನ್‌ಗಳ ಪ್ರೊಡಕ್ಷನ್‌ ಸ್ಟಾಪ್‌ ಆಗಲಿದೆಯಾ, ಇಲ್ಲವೇ ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳನ್ನು ಕ್ರಮೇಣ ಉತ್ಪಾದನಾ ಮಾರ್ಗಗಳಿಂದ ಸ್ಥಗಿತಗೊಳಿಸಲಾಗುತ್ತದೆಯೇ ಅನ್ನೊದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ವರ್ಷದ ಅಂತ್ಯದ ವೇಳೆಗೆ ಫೀಚರ್ ಫೋನ್ ವ್ಯವಹಾರದಿಂದ ನಿರ್ಗಮಿಸಲಿದ್ದಾರೆ ಎಂದು ವರದಿಯಾಗಿದೆ.

ಭಾರತದಲ್ಲಿ ಫೀಚರ್ ಫೋನ್ ಮಾರುಕಟ್ಟೆ

ಭಾರತದಲ್ಲಿ ಫೀಚರ್ ಫೋನ್ ಮಾರುಕಟ್ಟೆ

ಭಾರತದ ಫೀಚರ್ ಫೋನ್ ಮಾರುಕಟ್ಟೆ 2022 ರ ಮೊದಲ ತ್ರೈಮಾಸಿಕದಲ್ಲಿ, ವರ್ಷದಿಂದ ವರ್ಷಕ್ಕೆ 39% ರಷ್ಟು ಕುಸಿತವನ್ನು ಕಂಡಿದೆ. ಅಲ್ಲದೆ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದ ಸ್ಯಾಮ್‌ಸಂಗ್, ಮಾರ್ಚ್ ಅಂತ್ಯದ ವೇಳೆಗೆ ಕೇವಲ 12% ಮಾರುಕಟ್ಟೆ ಪಾಲನ್ನು ಹೊಂದುವುದರೊಂದಿಗೆ 3 ನೇ ಸ್ಥಾನಕ್ಕೆ ಕುಸಿದಿದೆ. ಇದೆಲ್ಲದರ ಪರಿಣಾಮವಾಗಿಯೂ ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಫೀಚರ್‌ ಫೋನ್‌ಗಳನ್ನು ಪರಿಚಯಿಸದಿರಲು ಪ್ಲಾನ್‌ ಮಾಡಿದೆ. ಇದೇ ಸಮಯದಲ್ಲಿ ಮಾರುಕಟ್ಟೆಯಲ್ಲಿ 21% ಪಾಲನ್ನು ಐಟೆಲ್‌ ಕಂಪೆನಿ ಪಡೆದುಕೊಂಡಿರುವುದು ಗಮನಾರ್ಹವಾಗಿದೆ. ಇದೆಲ್ಲವನ್ನು ಗಮನಿಸಿರುವ ಸ್ಯಾಮ್‌ಸಂಗ್‌ ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್‌ ಗಳ ಕಡೆಗೆ ಹೆಚ್ಚಿನ ಗಮನ ನೀಡಲು ಮುಂದಾಗಿದೆ.

ಸ್ಮಾರ್ಟ್‌ಫೋನ್‌

ಭಾರತದಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಪರಿಚಯಿಸುವುದನ್ನು ಸ್ಟಾಪ್‌ ಮಾಡುವುದರಿಂದ ಬಜೆಟ್‌ ಬೆಲೆಯಲ್ಲಿ ಫೋನ್‌ ಖರೀದಿಸಲು ಬಯಸುವವರಿಗೆ ನಿರಾಸೆಯಾಗುವುದು ಖಂಡಿತ. ಆದರೆ ಸ್ಯಾಮ್‌ಸಂಗ್ ಕಂಪೆನಿ ಭಾರತದಲ್ಲಿ ತನ್ನ ಮಧ್ಯಮ ಶ್ರೇಣಿಯ ಮತ್ತು ಉನ್ನತ ಶ್ರೇಣಿಯ ಕೊಡುಗೆಗಳ ಮೇಲೆ ಕೇಂದ್ರೀಕರಿಸಲಿದೆ. ಭವಿಷ್ಯದಲ್ಲಿ ಭಾರತದಲ್ಲಿ 5G ಕೂಡ ಲಭ್ಯವಾಗುವುದರಿಂದ ಮಧ್ಯಮ ಶ್ರೇಣಿಯ ಫೋನ್‌ಗಳ ಕಡೆಗೆ ಹೆಚ್ಚಿನ ಗಮನ ನೀಡಲಿದೆ. ಸದ್ಯ ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ ನೀಡುವ ಅಗ್ರ ಬ್ರಾಂಡ್‌ಗಳಲ್ಲಿ ಸ್ಯಾಮ್‌ಸಂಗ್‌ ಕೂಡ ಒಂದಾಗಿದೆ. ಇದು ಶೀಯೋಮಿ ಬ್ರ್ಯಾಂಡ್‌ ಜೊತೆಗೆ ಪೈಪೋಟಿ ನಡೆಸುತ್ತಿದ್ದು, ತನ್ನ ನಂಬರ್‌ ಒನ್‌ ಸ್ಥಾನವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್‌ ಹೆಜ್ಜೆ ಇಟ್ಟಿದೆ.

Best Mobiles in India

English summary
Samsung might soon stop launching budget phones under Rs. 15,000 in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X