ಸ್ಯಾಮ್‌ಸಂಗ್‌ನಿಂದ ಹೊಸ ಗೇಮಿಂಗ್‌ ಮಾನಿಟರ್‌ ಬಿಡುಗಡೆ! ಬೆಲೆ ಎಷ್ಟು?

|

ಇಂದಿನ ಜಮಾನದಲ್ಲಿ ಗೇಮಿಂಗ್‌ ಮಾನಿಟರ್‌ಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಹಲವು ಟೆಕ್‌ ಕಂಪೆನಿಗಳು ಕೂಡ ವಿಭಿನ್ನ ಶ್ರೇಣಿಯ ಗೇಮಿಂಗ್‌ ಮಾನಿಟರ್‌ಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಹೊಸ ಸ್ಯಾಮ್‌ಸಂಗ್‌ ಗೇಮಿಂಗ್‌ ಮಾನಿಟರ್‌ ಅನ್ನು ಪರಿಚಯಿಸಿದೆ. ಇದನ್ನು ಸ್ಯಾಮ್‌ಸಂಗ್‌ ಒಡೆಸ್ಸಿ ಆರ್ಕ್ 1000R ಕರ್ವ್ಡ್ ಗೇಮಿಂಗ್ ಮಾನಿಟರ್ ಎಂದು ಹೆಸರಿಸಲಾಗಿದೆ. ಇದು 165Hz ರಿಫ್ರೆಶ್ ರೇಟ್‌ ಬೆಂಬಲಿಸುವ 55 ಇಂಚಿನ 4K ಡಿಸ್‌ಪ್ಲೇಯನ್ನು ಹೊಂದಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ತನ್ನ ಒಡಿಸ್ಸಿ ಮಾನಿಟರ್‌ ಸರಣಿಯಲ್ಲಿ ಹೊಸ ಗೇಮಿಂಗ್‌ ಮಾನಿಟರ್ ಪರಿಚಯಿಸಿದೆ. ಇದು 60W ಔಟ್‌ಪುಟ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲಿಸುವ ನಾಲ್ಕು ಸ್ಪೀಕರ್‌ಗಳನ್ನು ಒಳಗೊಂಡಿದೆ. ಜೊತೆಗೆ ಈ ಮಾನಿಟರ್‌ ಹೈಟ್ ಅಡ್ಜಸ್ಟಬಲ್ ಸ್ಟ್ಯಾಂಡ್ ಹೊಂದಿದ್ದು, ಕಾಕ್‌ಪಿಟ್ ಮೋಡ್ ಮೂಲಕ ಡಿಸ್‌ಪ್ಲೇಯನ್ನು ತಿರುಗಿಸಲು ಬಳಸಬಹುದಾಗಿದೆ. ಹಾಗಾದ್ರೆ ಈ ಹೊಸ ಗೇಮಿಂಗ್‌ ಮಾನಿಟರ್‌ ವಿಶೇಷತೆ ಏನು? ಇದರ ಬೆಲೆ ಎಷ್ಟಿದೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಒಡಿಸ್ಸಿ ಆರ್ಕ್‌ ಕರ್ವ್ಡ್ ಮಾನಿಟರ್ 55 ಇಂಚಿನ 1000R ಕರ್ವ್ಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 2,160 x 3,840 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 165Hz ರಿಫ್ರೆಶ್ ರೇಟ್ ಮತ್ತು 16:9 ರಚನೆಯ ಅನುಪಾತವನ್ನು ಪಡೆದಿದೆ. ಇದು ಸ್ಯಾಮ್‌ಸಂಗ್‌ನ ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ ಅಲ್ಟ್ರಾದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಕ್ವಾಂಟಮ್ ಮಿನಿ ಎಲ್‌ಇಡಿ ಬ್ಯಾಕ್‌ಲೈಟಿಂಗ್ ಅನ್ನು ಒಳಗೊಂಡಿದೆ.

ಮಾನಿಟರ್

ಇನ್ನು ಈ ಮಾನಿಟರ್ AMD ಫ್ರೀಸಿಂಕ್ ಪ್ರೀಮಿಯಂ ಪ್ರೊ ಅನ್ನು ಬೆಂಬಲಿಸಲಿದೆ. ಇದರಿಂದ ಗೇಮರುಗಳಿಗಾಗಿ ವೇರಿಯಬಲ್ ರಿಫ್ರೆಶ್ ರೇಟ್‌ಗಳ ಬೆಂಬಲವನ್ನು ನೀಡಲಿದೆ. ಜೊತೆಗೆ ಆರ್ಕ್ ಡಯಲ್ ಕಂಟ್ರೋಲರ್‌ ಮೂಲಕ ಬಳಕೆದಾರರು ಸ್ಕ್ರೀನ್‌ ಗಾತ್ರವನ್ನು 27-ಇಂಚಿನ ಡಿಸ್‌ಪ್ಲೇಗೆ ಬದಲಾಯಿಸಬಹುದಾಗಿದೆ. ಇದಲ್ಲದೆ ಸ್ಕ್ರೀನ್‌ನ ಅನುಪಾತವನ್ನು 16:9, 21:9 ಮತ್ತು 32:9 ರ ನಡುವೆ ಸೆಟ್‌ ಮಾಡುವುದಕ್ಕೆ ಅವಕಾಶವನ್ನು ಕೂಡ ನೀಡಲಾಗಿದೆ ಎಂದು ಸ್ಯಾಮ್‌ಸಂಗ್‌ ಕಂಪೆನಿ ಹೇಳಿಕೊಂಡಿದೆ.

ಗೇಮಿಂಗ್‌

ಇದಲ್ಲದೆ ಈ ಗೇಮಿಂಗ್‌ ಮಾನಿಟರ್‌ನಲ್ಲಿ ಕಾಕ್‌ಪಿಟ್‌ ಮೋಡ್‌ ನೀಡಲಿದೆ. ಇದರ ಮೂಲಕ ಬಳಕೆದಾರರು HAS ನೊಂದಿಗೆ ಡಿಸ್‌ಪ್ಲೇಯನ್ನು ತಿರುಗಿಸುವುದಕ್ಕೆ ಸಾಧ್ಯವಾಗಲಿದೆ. ಮಾನಿಟರ್‌ನ ಡಿಸ್‌ಪ್ಲೇಯನ್ನು ಓರೆಯಾಗಿಸಬಹುದು ಮತ್ತು ಪಿವೋಟ್ ಕೂಡ ಮಾಡಬಹುದು. ಈ ಮಾನಿಟರ್‌ನಲ್ಲಿ ಮಲ್ಟಿ ವ್ಯೂ ಪಂಕ್ಷನ್‌ ಅನ್ನು ಒಂದೇ ಸಮಯದಲ್ಲಿ ವೀಕ್ಷಿಸುವುದಕ್ಕೆ ಅವಕಾಶ ಕೂಡ ಲಭ್ಯವಾಗಲಿದೆ.

ಮಾನಿಟರ್‌

ಈ ಗೇಮಿಂಗ್‌ ಮಾನಿಟರ್‌ ಒಟ್ಟು ನಾಲ್ಕು ಸ್ಪೀಕರ್‌ಗಳು ಮತ್ತು ಎರಡು ವೂಫರ್‌ಗಳನ್ನು ಹೊಂದಿದೆ. ಇವುಗಳು ಒಟ್ಟು 60W ಔಟ್‌ಪುಟ್ ಅನ್ನು ನೀಡುತ್ತದೆ. ಈ ಸ್ಪೀಕರ್‌ಗಳು ಡಾಲ್ಬಿ ಅಟ್ಮಾಸ್ ಆಡಿಯೊವನ್ನು ಹೊಂದಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ನಾಲ್ಕು HDMI 2.1 ಪೋರ್ಟ್‌ಗಳು ಮತ್ತು ಈಥರ್ನೆಟ್ ಪೋರ್ಟ್ ಅನ್ನು ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಸ್ಯಾಮ್‌ಸಂಗ್ 55-ಇಂಚಿನ ಒಡಿಸ್ಸಿ ಆರ್ಕ್ ಕರ್ವ್ಡ್ ಮಾನಿಟರ್ 2,19,999ರೂ. ಬೆಲೆಯನ್ನು ಹೊಂದಿದೆ. ಇದನ್ನು ಸ್ಯಾಮ್‌ಸಂಗ್‌ ಕಂಪನಿಯ ಅಧಿಕೃತ ಆನ್‌ಲೈನ್ ಸ್ಟೋರ್ ಸ್ಯಾಮ್‌ಸಂಗ್ ಶಾಪ್ ಮೂಲಕ ಕಪ್ಪು ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ಆಫರ್‌ ಏನಿದೆ?

ಆಫರ್‌ ಏನಿದೆ?

ಅಕ್ಟೋಬರ್ 9 ರೊಳಗೆ ಈ ಮಾನಿಟರ್‌ ಅನ್ನು ಖರೀದಿಸುವ ಗ್ರಾಹಕರಿಗೆ 10,000ರೂ. ತ್ವರಿತ ಕಾರ್ಟ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ 2TB ಪೋರ್ಟಬಲ್ SSD T7 ಶೀಲ್ಡ್ USB 3.2 ಸಾಲಿಡ್‌ ಸ್ಟೇಟ್‌ ಡ್ರೈವ್ ಅನ್ನು ಅಕ್ಟೋಬರ್ 10 ಮತ್ತು ಅಕ್ಟೋಬರ್ 31 ರ ನಡುವೆ ಆರ್ಡರ್ ಮಾಡಿದರೆ ಗ್ರಾಹಕರಿಗೆ 10,000ರೂ. ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Samsung Odyssey Ark 55-Inch Curved Gaming Monitor Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X