ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 5 ಅನಾವರಣ!..ಒರಟು ಕೆಲಸಗಳಿಗೆ ಸೂಕ್ತ!

|

ದಕ್ಷಿಣ ಕೋರಿಯಾದ ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್‌ ಸಂಸ್ಥೆ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಇದೀಗ ತನ್ನ ಹೊಸ ಗ್ಯಾಲಕ್ಸಿ ಎಕ್ಸ್‌ಕವರ್ 5 ಅನ್ನು ಅನಾವರಣಗೊಳಿಸಿದೆ. ಇದು ಒರಟಾದ ಸ್ಮಾರ್ಟ್‌ಫೋನ್ ಆಗಿದ್ದು, ಈ ತಿಂಗಳ ಕೊನೆಯಲ್ಲಿ ಲಭ್ಯವಾಗಲಿದೆ. ಇದರ ಬೆಲೆ GBP330 (ಅಂದಾಜು, 500 33,500)ಇರಲಿದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ನೀರು ಮತ್ತು ದೂಳಿನ ಕಣಗಳಿಂದ ರಕ್ಷಣೆಗಾಗಿ ಐಪಿ 68 ರೇಟಿಂಗ್‌ ಅನ್ನು ಸಹ ಹೊಂದಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ ಎಕ್ಸ್‌ಕವರ್ 5 ಅನ್ನು ಪರಿಚಯಿಸಿದೆ. ಇದು ಬಳಕೆದಾರರ ಬೇಡಿಕೆಯ ಕಾರ್ಯಗಳನ್ನು ನಿರ್ವಹಿಸಲು ವಿವಿಧ ಫೀಚರ್ಸ್‌ಗಳನ್ನು ಹೊಂದಿದೆ ಎಂದು ಸಂಸ್ಥೆ ಹೇಳಿದೆ. ಇದು ಡ್ಯಾಮೇಜ್‌ ಅನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಒರಟಾದ ಸ್ಮಾರ್ಟ್‌ಫೋನ್‌ ಇದಾಗಿದೆ. ಜೊತೆಗೆ 1.5 ಮೀಟರ್ ವರೆಗೆ ಹನಿಗಳನ್ನು ತಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಕ್ಸ್‌ಕವರ್ 5 ಸ್ಮಾರ್ಟ್‌ಫೋನ್ 720x1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 5.3 ಇಂಚಿನ ಹೆಚ್‌ಡಿ ಪ್ಲಸ್‌ TFT ಡಿಸ್‌ಪ್ಲೇಯನ್ನು ಹೊಂದಿದೆ. ಇದು 64.4% ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತವನ್ನು ಹೊಂದಿದೆ. ಜೊತೆಗೆ ನೀರು ಮತ್ತು ಧೂಳಿನ ಕಣಗಳಿಂದ ರಕ್ಷಣೆ ಪಡೆಯಲು ಐಪಿ 68 ರೇಟಿಂಗ್ ಅನ್ನು ಸಹ ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದು ಎಕ್ಸಿನೋಸ್ 850 ಆಕ್ಟಾ-ಕೋರ್ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಸಹ ಹೊಂದಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್‌ಕವರ್ 5 ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, 16 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ 3,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಹಾಟ್‌ಸ್ಪಾಟ್‌, ಬ್ಲೂಟೂತ್‌ 5.0, USB ಟೈಪ್‌ C 2.0 ಅನ್ನು ಬೆಂಬಲಿಸಲಿದೆ. ಜೊತೆಗೆ ಇದು ಇತರ ಒರಟಾದ ಸ್ಯಾಮ್‌ಸಂಗ್ ಫೋನ್‌ಗಳಂತೆಯೇ, ಗ್ಲೋವ್-ಟಚ್ ಫೀಚರ್ಸ್‌ನೊಂದಿಗೆ ಇದು ಕೈಗವಸುಗಳನ್ನು ಧರಿಸುವಾಗ ಬಳಕೆದಾರರಿಗೆ ಫೋನ್ ಬಳಸಲು ಅನುವು ಮಾಡಿಕೊಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಗ್ಯಾಲಕ್ಸಿ ಎಕ್ಸ್‌ಕವರ್ 5 ಈ ತಿಂಗಳ ಕೊನೆಯಲ್ಲಿ ಲಭ್ಯವಾಗಲಿದ್ದು, ಇದರ ಬೆಲೆ GBP 330 (ಅಂದಾಜು, 500 33,500) ಆಗಿದೆ. ಇನ್ನು ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Best Mobiles in India

English summary
Samsung on Thursday announced the launch of Galaxy XCover 5. The rugged smartphone will be available later this month.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X